ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಮದುವೆ ಹಾಗೂ ಮದುವೆಯ ಫೋಟೋಗ್ರಾಫ್ಸ್ ನ್ನೇ ತೆಗೆದುಕೊಳ್ಳಿ, ಕಾಲಕ್ಕನುಗುಣವಾಗಿ ಅದರಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿವೆ. ನೀವು ನಿಮ್ಮ ತಾಯಿತಂದೆಯ ಮದುವೆಯ ಫೋಟೋಗಳನ್ನು ನೋಡಿರಬಹುದು. ಅವುಗಳಲ್ಲಿ ಬಹಳಷ್ಟು ಕಡಿಮೆ ಫೋಟೋಗಳಲ್ಲಿ ಅವರು ನೇರವಾಗಿ ಕ್ಯಾಮೆರಾ ಕಡೆ ನೋಡುತ್ತಿರಬಹುದು. ಉಳಿದಂತೆ ಬಹಳಷ್ಟು ಫೋಟೋಗಳಲ್ಲಿ ಅವರ ಕಣ್ಣುಗಳು ಕೆಳಗೆ ಅಥವಾ ಅತ್ತಿತ್ತ ನೋಡುತ್ತಿರುವುದು ಕಂಡುಬರುತ್ತದೆ. ಆ ಒಂದು ಕಾಲವೇ ಬೇರೆ. ಕಾಲ ಬದಲಾದಂತೆ ವೆಡ್ಡಿಂಗ್‌ ಫೋಟೋಗ್ರಫಿಯ ವಿಧಾನ ಹಾಗೂ ಟ್ರೆಂಡ್‌ ಕೂಡ ಬದಲಾಗಿದೆ. ಈಗ ಮದುವೆಯ ಬಂಧನದಲ್ಲಿ ಬಂಧಿಯಾಗುವ ಜೋಡಿಗಳು ಕ್ಯಾಮೆರಾ ಕಣ್ಣಿಂದ ಕಣ್ಣು ತಿರುಗಿಸಲಾರರು.

ಒಂದಕ್ಕಿಂತ ಒಂದು ಫೋಟೋಗಳನ್ನು ಅವರು ಕ್ಲಿಕ್ಕಿಸಿಕೊಳ್ಳುತ್ತಾರೆ.

ಇಂದಿನ ಜೋಡಿಗಳಿಗೆ ಏನೋ ಹೊಸದು ಬೇಕು. ಬೇರೆಯವರಿಗಿಂತ ವಿಭಿನ್ನವಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಲೈಕ್‌ಗಳನ್ನು ಪಡೆದುಕೊಳ್ಳುವಂತಹ ಫೋಟೋಗಳನ್ನು ಅವರು ಬಯಸುತ್ತಾರೆ. ಫೋಟೋಗಳು ಕೇವಲ ನೆನಪಲ್ಲಿ ಉಳಿಯಲಷ್ಟೇ ಅಲ್ಲ, ಅವುಗಳ ಮೂಲಕ ತಮ್ಮ ವಿಶೇಷತೆಗಳನ್ನು ತೋರಿಸಿಕೊಳ್ಳುವುದೂ ಆಗಿರುತ್ತದೆ.

ನೆನಪುಗಳೇ ಹಾಗೇ ನವ ವಧು ವರರಷ್ಟೇ ಅಲ್ಲ, ಅವರ ಕುಟುಂಬದವರು ಕೂಡ ಬಯಸುವುದೇನೆಂದರೆ, ಎಲ್ಲರ ಫೋಟೋಗಳನ್ನು ತೆಗೆದುಕೊಳ್ಳುವಂತೆ ಆಗಬೇಕು ಹಾಗೂ ಅವನ್ನು ಸ್ಮರಣಾರ್ಹವಾಗಿ ಇಡಲು ಸಾಧ್ಯವಾಗಬೇಕು. ಆದಾಗ್ಯೂ ಎಲ್ಲರ ನಡುವೆ ವಧು ವರರೇ ಹೆಚ್ಚು ಫೋಕಸ್‌ ಆಗುತ್ತಾರೆ. ಅದರ ಕಾರಣ ಅರಿತುಕೊಳ್ಳುವುದು ಕಷ್ಟವಲ್ಲ. ಏಕೆಂದರೆ ಮದುವೆಯೆನ್ನುವುದು ಒಬ್ಬರ ಜೀವನದ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿರುತ್ತದೆ. ಆ ಒಂದು ದಿನಕ್ಕಾಗಿ ನೀವು ಯಾವಾಗಿನಿಂದ, ಏನೇನು ಕನಸು ಕಂಡಿರುತ್ತೀರೊ, ಅದರ ಬಗ್ಗೆ ಹೇಳಲು ಕಷ್ಟ. ಇಂತಹದರಲ್ಲಿ, ಹತ್ತು ಹಲವು ವಿಧಿಗಳ ನಡುವೆ ಆ ಒಂದು ಸುಂದರ ದಿನ ಹೇಗೆ ಕಳೆದುಹೋಗುತ್ತೋ ಗೊತ್ತೇ ಆಗುವುದಿಲ್ಲ.

ಪ್ರಸ್ತುತ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸೆಮಿ ಕಪಲ್ಸ್ ತಮ್ಮ ಮದುವೆ ದಿನದಂದು ಫೋಟೋಗ್ರಾಫರ್ಸ್‌ಗಳ ಸೇವೆ ಪಡೆಯುತ್ತಾರೆ. ಅವರು ಇಂತಹದೊಂದು ಬೃಹತ್‌ ಸಮಾರಂಭವನ್ನು ರೋಚಕ, ಸೃಜನಾತ್ಮಕವಾಗಿಸಲು ವಿಡಿಯೋ ಮತ್ತು ಫೋಟೋಸ್‌ ಸೆರೆಹಿಡಿಯುತ್ತಾರೆ.

ಇಂದಿನ ಆಧುನಿಕ ಜೋಡಿಗಳು ಕೇವಲ ಲೇಟೆಸ್ಟ್ ಟ್ರೆಂಡ್‌ನಷ್ಟೇ ಅನುಸರಿಸುವುದಿಲ್ಲ. ತಮ್ಮ ಮದುವೆಗಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ವಿಶೇಷತೆಯನ್ನು ಬಿಂಬಿಸಲು ಹ್ಯಾಶ್‌ ಟ್ಯಾಗ್‌ನ್ನು ಬಳಸುತ್ತಾರೆ. ಏಕೆಂದರೆ ತಮ್ಮ ಮದುವೆಯ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಯಬೇಕು ಎನ್ನುವುದು ಅವರ ಅಭಿಲಾಷೆಯಾಗಿರುತ್ತದೆ.

ಈಗ ಮದುವೆ ಹಾಗೂ ಔಟ್‌ ಡೋರ್‌ ಸೆಲೆಬ್ರೇಶನ್‌ನಲ್ಲಿ ಡ್ರೋನ್‌ಗಳ ಬಳಕೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ತಂತ್ರಜ್ಞಾನದ ಕೊಡುಗೆಯೇ ಹೌದು. ಈ ತಂತ್ರಜ್ಞಾನದಿಂದ ಫೋಟೋ ಹಾಗೂ ವಿಡಿಯೋಗಳ ಗುಣಮಟ್ಟ ಬಹಳ ಅದ್ಭುತವಾಗಿರುತ್ತದೆ. ಇಷ್ಟೊಂದು ತಂತ್ರಜ್ಞಾನಗಳು ಹಾಗೂ ಸೋಶಿಯಲ್ ಮೀಡಿಯಾದ ಉಪಸ್ಥಿತಿಯಿಂದ ಬಹಳಷ್ಟು ಬದಲಾವಣೆಯಾಗಿದೆ.

pre-wedding

ಕ್ಯಾಂಡಿಡ್ಫೋಟೋಗ್ರಫಿ

ಫೋಟೋಗ್ರಫಿಯ ಪ್ರಹಸನ ಇಲ್ಲಿಗೇ ನಿಲ್ಲುವುದಿಲ್ಲ. ಇದಕ್ಕಾಗಿ ಅವರು ಬಹಳಷ್ಟು ಪರ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ಜೋಡಿಗಳು ಕ್ಯಾಂಡಿಡ್‌ ಫೋಟೋಗ್ರಫಿ ಆಯ್ಕೆ ಮಾಡಿಕೊಂಡರೆ, ಮತ್ತೆ ಕೆಲವು ಜೋಡಿಗಳು ಪೋಸ್ಡ್ ಫೋಟೋಗ್ರಫಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂದಹಾಗೆ ಪೋಸ್ಡ್ ಫೋಟೋಗ್ರಫಿ ನೋಡಲು ಬಹಳ ಸುಂದರ ಹಾಗೂ ಪ್ರೀತಿಪಾತ್ರ ಎನಿಸುವುದಿಲ್ಲ. ಆದರೆ ಯಾವುದೇ ಒಂದು ಜೋಡಿ ತಮ್ಮ ಮದುವೆಗಾಗಿ ಕೇವಲ ಪೋಸ್ಡ್ ಫೋಟೋವೊಂದನ್ನೇ ಆಯ್ಕೆ ಮಾಡುವುದಿಲ್ಲ. ಏಕೆಂದರೆ ಪೋಸ್ಡ್ ಫೋಟೋದಲ್ಲಿ ಒಂದೇ ರೀತಿಯ ಹಾವಭಾವ ಹಾಗೂ ನಗು ಕಂಡುಬರುತ್ತದೆ. ಇದೇ ಕಾರಣದಿಂದ ಹೊಸ ಫೋಟೋಗ್ರಫಿ ವಿಧಾನದಲ್ಲಿ ಹೆಚ್ಚೆಚ್ಚು ನ್ಯಾಚುರಲ್ ಆಗಿ ತೋರಿಸುತ್ತಾರೆ.

ಇದರ ಸಿದ್ಧತೆಗೆಂದು ಹೆಚ್ಚಿನ ಫೋಟೋಗ್ರಾಫರ್‌ಗಳು ಡಿಜಿಟಲ್ ಫೋಟೋಗ್ರಫಿಯನ್ನು ಮೈಗೂಡಿಸಿಕೊಂಡಿದ್ದಾರೆ. ಈಗ ಅವರು ಫೋಟೋಗ್ರಫಿಗಾಗಿ ಎಚ್‌.ಡಿ. ಅಂದರೆ ಹೈ ಡೆಫ್ನೇಶನ್‌ ಡಿ.ಎಸ್‌.ಎಲ್.ಆರ್‌ ಮತ್ತು ಎಸ್‌.ಡಿ. ಮಾರ್ಕ್‌ನಂತಹ ಕ್ಯಾಮೆರಾಗಳನ್ನು ಬಳಸುತ್ತಾರೆ.

ಇಂತಹ ಹೈ ಕ್ವಾಲಿಟಿ ಕ್ಯಾಮೆರಾಗಳಿಂದ ಫೋಟೋಗ್ರಫಿ ಮಾಡಿಸುವುದರ ಲಾಭ ಏನೆಂದರೆ, ಫೋಟೋ ಹಾಗೂ ವೀಡಿಯೋಗಳ ಗುಣಮಟ್ಟ ಅತ್ಯಂತ ಉಚ್ಚಮಟ್ಟದ್ದಾಗಿರುತ್ತದೆ.

ಇಂದಿನ ದಿನಗಳಲ್ಲಿ ವೆಡ್ಡಿಂಗ್‌ ಫೋಟೋಗ್ರಫಿಯನ್ನು 3 ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲನೆಯದು, ಮದುವೆಗೂ ಮುಂಚಿನ ಫೋಟೋಗ್ರಫಿ, ಅದನ್ನು ಪ್ರಿವೆಡ್ಡಿಂಗ್‌ ಫೋಟೋಗ್ರಫಿ ಎಂದು ಹೇಳುತ್ತಾರೆ. ಎರಡನೆಯದು ಮದುವೆ ದಿನದ್ದು. ಮೂರನೆಯದ್ದು ಮದುವೆಯ ನಂತರದ್ದು. ಪೋಸ್ಟ್ ವೆಡ್ಡಿಂಗ್‌ ಫೋಟೋಗ್ರಫಿ. ಇಷ್ಟೆಲ್ಲ ಫೋಟೋಗಳನ್ನು ನೋಡಿದಾಗ, ಒಂದು ವಿಷಯವಂತೂ ವಾಸ್ತವ ಎನಿಸುತ್ತದೆ, ಇಲ್ಲಿನ ಪ್ರತಿಯೊಂದು ಫೋಟೋಗಳು ಏನೋ ಹೇಳುತ್ತಿವೆ ಎಂದೆನಿಸುತ್ತವೆ.

ಮದುವೆಯ ಸುಂದರ ನೆನಪುಗಳನ್ನು ಪ್ರತಿಯೊಬ್ಬರು ಕಾಯ್ದಿಟ್ಟುಕೊಳ್ಳಲು ಇಷ್ಟಪಡುತ್ತಾರೆ. ಈಗ ಕೇವಲ ಮದುವೆ ಅಷ್ಟೇ ಅಲ್ಲ, ಮದುವೆ ಮುಂಚಿನ ಹಾಗೂ ಮದುವೆಯ ನಂತರದ ಕ್ಷಣಗಳನ್ನು ಕೂಡ ಕಾಯ್ದಿಡಲಾಗುತ್ತದೆ. ಸಿನಿಮಾ ಸಂಸ್ಕೃತಿಯಿಂದ ಪ್ರಭಾವಿತರಾದ ಜನರು, ಸಿನಿಮಾ ಹೀರೊ, ಹೀರೊಯಿನ್‌ಗಳು ಮಾಡುವ ಪ್ರೀಪೋಸ್ಟ್ ವೆಡ್ಡಿಂಗ್‌ ಫೋಟೋ ಶೂಟ್‌ ಈಗ ಕೇವಲ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿಲ್ಲ. ಚಿಕ್ಕಪುಟ್ಟ ಪಟ್ಟಣಗಳ ತನಕ ವ್ಯಾಪಿಸಿದೆ.

ಪ್ರೀ ವೆಡ್ಡಿಂಗ್ಫೋಟೋಗ್ರಫಿ

2-3 ವರ್ಷಗಳ ಹಿಂದೆ ಇದರ ಕ್ರೇಜ್‌ ಅಷ್ಟಾಗಿ ಇರಲಿಲ್ಲ. ಆದರೆ ಈಗ ಪ್ರತಿಯೊಬ್ಬರು ಇದರ ಆರಾಧಕರಾಗಿದ್ದಾರೆ. ಪ್ರೀ ವೆಡ್ಡಿಂಗ್‌ನ ವಿಶೇಷತೆಯೇನೆಂದರೆ, ವಧು ವರರು ಪರಸ್ಪರ ತಮ್ಮನ್ನು ತಾವು ಅರಿತುಕೊಳ್ಳಲು ಸಾಧ್ಯವಾಗಿದೆ.

ನಾವು ಫೋಟೋಗ್ರಫಿಯ ಗುಣಮಟ್ಟದ ಬಗ್ಗೆ ಹೇಳಬೇಕೆಂದರೆ, ಒಂದು ಅತ್ಯುತ್ತಮ ಫೋಟೋಗ್ರಫಿ ಯಾವಾಗ ಸಾಧ್ಯವೆಂದರೆ, ವೆಡ್ಡಿಂಗ್‌ ಶೂಟ್‌ನ್ನು ಒಬ್ಬನೇ ಫೋಟೋಗ್ರಾಫರ್‌ನಿಂದ ಮಾಡಿಸಬೇಕು. ಏಕೆಂದರೆ, ಅದರಿಂದ ಫೋಟೋಗ್ರಾಫರ್‌ನ ಜೊತೆಗೆ ಟ್ಯೂನಿಂಗ್‌ ಸರಿಯಾಗಿರುತ್ತದೆ.

ಪ್ರೀವೆಡ್ಡಿಂಗ್‌ ಶೂಟ್‌ನ ಲೋಕೇಶನ್‌ ಗ್ರಾಹಕರ ಆಯ್ಕೆಯ ಮೇಲೆ ಅವಲಂಬಿಸಿರುತ್ತದೆ. ಒಬ್ಬರಿಗೆ ಬೆಟ್ಟ ಗುಡ್ಡಗಳು ಇಷ್ಟವಾದರೆ, ಮತ್ತೆ ಕೆಲವರಿಗೆ ಬೀಟ್‌ಗಳು, ಕೋಟೆ ಪ್ರದೇಶಗಳು ಇಷ್ಟವಾಗುತ್ತವೆ. ನಮ್ಮ ರಾಜ್ಯದ ಸುಂದರ ತಾಣಗಳ ಹೊರತಾಗಿ ಗೋವಾ, ಕೇರಳಕ್ಕೂ ಹೋಗಿ ಪ್ರೀವೆಡ್ಡಿಂಗ್‌ ಶೂಟ್‌ ಮಾಡಿಸುವವರು ಇದ್ದಾರೆ. ಅದರ ಬಜೆಟ್‌ 1 ಲಕ್ಷದಿಂದ 5 ಲಕ್ಷದವರೆಗೂ ಇರುತ್ತದೆ.

ಕೆಲವರು ಸ್ಥಳೀಯ ಮಟ್ಟದಲ್ಲಿಯೇ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಲು ಇಷ್ಟಪಡುತ್ತಾರೆ. ಫೋಟೋಗ್ರಾಫರ್‌ಗಳು ಔಟ್‌ ಡೋರ್ ಲೊಕೇಶನ್‌ಗಳ ಹೆಸರಿನಲ್ಲಿ ಪಾರ್ಕ್‌ಗಳು, ಪಾರಂಪರಿಕ ತಾಣಗಳಿಗೂ ಕರೆದುಕೊಂಡು ಹೋಗುತ್ತಾರೆ. ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಕೆಲವೊಂದು ಪಾರಂಪರಿಕ ಪ್ರವಾಸಿ ತಾಣಗಳಲ್ಲಿ ಫೋಟೋಗ್ರಫಿಗೆ ನಿರ್ಬಂಧ ಇರುತ್ತದೆ. ಅಲ್ಲಿ ಫೋಟೋ ಶೂಟ್‌ ಮಾಡುವ ಮುಂಚೆಯೇ ಅದನ್ನು ಗಮನಿಸಿ. ಇಲ್ಲದಿದ್ದರೆ ಫೋಟೋಗ್ರಾಫರ್‌ನ ತಪ್ಪಿನಿಂದ ನೀವು ಕಾಯ್ದೆ ಉಲ್ಲಂಘನೆಯ ಶಿಕ್ಷೆಗೆ ಗುರಿಯಾಗಬಾರದು.

ಕೆಲವೊಂದು ಕಡೆ ಸೆಟ್‌ ಹಾಕಿರುವ ಸ್ಥಳದಲ್ಲಿ ಪ್ರೀ ವೆಡ್ಡಿಂಗ್‌ ಶೂಟಿಂಗ್‌ಗೆ ಅನುಮತಿ ಇರುತ್ತದೆ. ಅಂಥವಲ್ಲಿ ಫೋಟೋಗ್ರಫಿಯ ವಿಶಿಷ್ಟ ಅನುಭವವನ್ನು ಪಡೆದುಕೊಳ್ಳಬಹುದು. ಅಲ್ಲಿ ಯಾವುದೇ ಚಿಂತೆಯಿಲ್ಲದೆ ಫೋಟೋಗ್ರಫಿ ಮಾಡಿಸಬಹುದು. ಅಲ್ಲಿ ಕಾಸ್ಟ್ಯೂಮ್ ಗಳ ವ್ಯವಸ್ಥೆ ಕೂಡ ಇರುತ್ತದೆ.

ಪೋಸ್ಟ್ ವೆಡ್ಡಿಂಗ್ಫೋಟೋಗ್ರಫಿ

ಸಂಬಂಧ ನಿರ್ಧಾರವಾದಾಗಿನಿಂದ ಹಿಡಿದು, ಮದುವೆಯಾಗುವ ತನಕ ವೆಡ್ಡಿಂಗ್‌ ಶೂಟ್‌ ಮಾಡಲಾಗುತ್ತದೆ. ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್‌ನ್ನು ಮದುವೆಯ ತಕ್ಷಣ ಮಾಡಲಾಗುತ್ತದೆ. ಪ್ರೀ ವೆಡ್ಡಿಂಗ್‌ನ ಹಾಗೂ ಪೋಸ್ಟ್ ಶೂಟ್‌ ಬಗೆಗೂ ಹೆಚ್ಚು ಆಸಕ್ತಿ ತೋರಿಸಲಾಗುತ್ತದೆ. ಈ ಫೋಟೋ ಶೂಟ್‌ನ್ನು ದಂಪತಿಗಳು ಹನಿಮೂನ್‌ ಸಂದರ್ಭದಲ್ಲಿ ಮಾಡುತ್ತಿದ್ದಾರೆ. ಯಾವ ದಂಪತಿಗಳು ಮದುವೆಯಾದ ತಕ್ಷಣ ಹನಿಮೂನ್‌ಗೆ ತೆರಳುವುದಿಲ್ಲವೇ, ಅವರು ನಗರದ ಆಸುಪಾಸಿನ ಲೊಕೇಶನ್‌ಗಳಲ್ಲಿ ಫೋಟೋ ಶೂಟ್ ಮಾಡುತ್ತಾರೆ. ಸಾಮಾನ್ಯವಾಗಿ ಇಂತಹ ಫೋಟೋ ಶೂಟ್‌ನ್ನು ಕೈಮೇಲಿನ ಮೆಹಂದಿಯ ರಂಗು ಅಳಿಸಿ ಹೋಗುವ ಮುಂಚೆಯೇ ಮಾಡಿಸುತ್ತಿರುವುದು ವಿಶೇಷವಾಗಿದೆ.

ಈಗ ನಾರ್ಮಲ್ ಫೋಟೋ ಶೂಟ್‌ ಬದಲಿಗೆ ಹೈ ಟೆಕ್ನಾಲಜಿಯ ನೆರವಿನಿಂದ ಫೋಟೋ ಶೂಟ್‌ ಮಾಡಿಸುತ್ತಿದ್ದಾರೆ. ಅದರಲ್ಲಿ ಡ್ರೋನ್‌ ಕ್ಯಾಮೆರಾ ಬಳಸಲಾಗುತ್ತದೆ.

ಪೋಸ್ಟ್ ವೆಡ್ಡಿಂಗ್ಶೂಟ್

ಮದುವೆ ಶೂಟ್‌ನ ಕೊನೆಯ ಹಂತವಾಗಿರುತ್ತದೆ. ಅದರಲ್ಲಿ ದಂಪತಿಗಳು ಸಾಕಷ್ಟು ರೊಮ್ಯಾಂಟಿಕ್‌ ಪೋಸ್‌ನಲ್ಲಿ ಶೂಟ್‌ ಮಾಡುವುದು ಕಂಡುಬರುತ್ತದೆ. ಬಹಳಷ್ಟು ದಂಪತಿಗಳು ಥೀಮ್ ಗೆ ಅನುಸಾರವಾಗಿ ಫೋಟೋ ಶೂಟ್‌ ಮಾಡಲು ಇಷ್ಟಪಡುತ್ತಾರೆ.

ಪ್ರತಿನಿಧಿ

 

और कहानियां पढ़ने के लिए क्लिक करें...