ಕಲೆಗಾರ ಎಲ್ಲಿದ್ದರೂ ಯಾವುದಾದರು ಒಂದು ರಚನಾತ್ಮಕ ಕೆಲಸ ಮಾಡೇ ಮಾಡುತ್ತಾನೆ. ಕಾಡಿನ ಮರಗಳಿಂದ ಕೆಳಗೆ ಬೀಳುವ ಎಲೆಗಳು ಮತ್ತು ಹಣ್ಣುಗಳಿಂದ ಮೊದಲು ಯಾವ ಉಪಯೋಗ ಇರಲಿಲ್ಲ. ಆದರೆ ಈಗ ಗುಡ್ಡಗಾಡಿನ ಪ್ರದೇಶಗಳಲ್ಲಿ ಇರುವವರು ಈ ಎಲೆಗಳನ್ನೂ, ಹಣ್ಣುಗಳನ್ನೂ ಉಪಯೋಗಿಸಿ ಮರದ ಹೂ ಮತ್ತು ಹೂಕುಂಡ ತಯಾರಿಸಿ ಮನೆಯ ಅಲಂಕಾರಕ್ಕೆ ಉಪಯೋಗಿಸಲು ಆರಂಭಿಸಿದ್ದಾರೆ. ಪರಿಸರದ ಬಗ್ಗೆ ಜಾಗೃತರಾಗಿರುವವರು ಈ ಮರದ ಹೂಗಳನ್ನು ಪ್ಲ್ಯಾಸ್ಟಿಕ್‌ ಹೂಗಳಿಗಿಂತ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಹೆಚ್ಚುತ್ತಿರುವ ಮರದ ಹೂಗಳ ಬೇಡಿಕೆ ಗುಡ್ಡಗಾಡಿನ ಜನರ ಉದ್ಯೋಗಕ್ಕೆ ಹೊಸ ದಾರಿಯಾಗಿದೆ. ಕಾಡಿನಲ್ಲಿ ಬಿದ್ದಿರುವ ವ್ಯರ್ಥ ಎಲೆಗಳು ಮತ್ತು ಹಣ್ಣುಗಳು ಈಗ ಲಾಭದ ವ್ಯಾಪಾರವಾಗಿಬಿಟ್ಟಿದೆ.

ಮಣಿಪುರದ ಅಬ್ರಹಾಂ ಪ್ರೇಮಿಲಾ ಹೀಗೆ ಹೇಳುತ್ತಾರೆ, ``ಮರದ ಅಲಂಕೃತ ಹೂಗಳು ಮತ್ತು ಹೂಕುಂಡ ತಯಾರಿಕೆ ಬಗ್ಗೆ ಕಲಿಸಲು ಯಾವುದೇ ಶಾಲೆ ಇಲ್ಲ. ನಮ್ಮ ಸುತ್ತಮುತ್ತಲಿನ ಜನ ಇದನ್ನು ತಯಾರಿಸುತ್ತಾರೆ. ಅವರು ತಯಾರಿಸುವುದನ್ನು ನೋಡುತ್ತಾ, ಅವರೊಂದಿಗೆ ಕೆಲಸ ಮಾಡುತ್ತಾ ನಾವು ಈ ಕೆಲಸ ಕಲಿತೆವು. ಗ್ರಾಮೀಣಾಭಿೃದ್ಧಿ ವಿಭಾಗ ದೇಶದ ವಿವಿಧ ಭಾಗಗಳಲ್ಲಿನ ಕರಕುಶಲ ಕಲೆಗಳಿಗೆ ಪ್ರೋತ್ಸಾಹ ನೀಡಲು ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಆಗ ನಮಗೂ ಅಲ್ಲಿ ನಮ್ಮ ವುಡನ್‌ಫ್ಲವರ್‌ ಮಾರುವ ಅವಕಾಶ ಸಿಗುತ್ತದೆ.'

'ಪ್ರೇಮಿಲಾ ತಂಗಿ, ತಮ್ಮಂದಿರೊಂದಿಗೆ ಕೂಡಿ ವುಡನ್‌ ಫ್ಲವರ್‌ ತಯಾರಿಸುತ್ತಾರೆ.

ಮರದ ಎಲೆಗಳ ಉಪಯೋಗ ವುಡನ್‌ ಫ್ಲವರ್‌ ತಯಾರಿಸಲು ಹೆಚ್ಚಾಗಿ ಮರದಿಂದ ಒಣಗಿ ಕೆಳಗೆ ಬಿದ್ದ ಎಲೆಗಳನ್ನು ಉಪಯೋಗಿಸಲಾಗುತ್ತದೆ.

wf-1

``ಅರಳಿ ಮತ್ತು ತೇಗದ ಮರದ ಎಲೆಗಳಲ್ಲಿ ಸಿಗುವ ನೂಲುಗಳು ಗಟ್ಟಿಯಾಗಿರುತ್ತವೆ. ಆದ್ದರಿಂದ ಈ ಎಲೆಗಳನ್ನು ನೀರಿನಲ್ಲಿ ಹಾಕಿ ಕೊಳೆಯುವಂತೆ ಮಾಡಲಾಗುತ್ತದೆ. ಎಲೆಗಳ ಹಸಿರು ಭಾಗ ಸಂಪೂರ್ಣವಾಗಿ ಕೊಳೆತ ನಂತರ ಅವನ್ನು ಬಹಳ ಎಚ್ಚರಿಕೆಯಿಂದ ಸ್ವಚ್ಛಗೊಳಿಸಲಾಗುತ್ತದೆ.

``ಸ್ವಚ್ಛವಾದ ನಂತರ ಎಲೆಗಳಲ್ಲಿ ಬರೀ ನೂಲು ಮಾತ್ರ ಉಳಿದಿರುತ್ತದೆ. ಆಗ ಈ ಎಲೆಗಳನ್ನು ಒಣಗಿಸಲು ಇಡಲಾಗುತ್ತದೆ. ಒಣಗಿದ ನಂತರ ಅವಕ್ಕೆ ಬಿಳಿ ಬಣ್ಣ ಇರುತ್ತವೆ. ಆಗ ಅದಕ್ಕೆ ಇಷ್ಟ ಬಂದ ಬಣ್ಣ ಹಾಕಬಹುದು. ಅವನ್ನು ಮಡಚಿ ತೆಳುವಾದ ಕಡ್ಡಿಗೆ ಅಂಟಿಸುತ್ತಾರೆ. ಎಲೆಗಳನ್ನು ಅಂಟಿಸುವ ಮೊದಲು ಕಡ್ಡಿಗೆ ಪೇಂಟ್‌ ಮಾಡಿ ಸುಂದರಗೊಳಿಸುತ್ತಾರೆ. 1 ಕಡ್ಡಿ ಪ್ರತಿ ಹೂವಿನ ಲೆಕ್ಕದಲ್ಲಿ 10-20 ರೂ.ಗೆ ಮಾರಾಟವಾಗುತ್ತದೆ.

``ವುಡನ್‌ ಫ್ಲವರ್‌ನ್ನು ಬಹಳ ಇಷ್ಟ ಪಡಲಾಗುತ್ತಿದೆ. ವಿದೇಶಗಳಲ್ಲೂ ಇವನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಿದೆ. ಅವರು ಇಲ್ಲಿಗೆ ಸುತ್ತಾಡಲು ಬಂದಾಗ ಈ ವುಡನ್‌ ಫ್ಲವರ್‌ಗಳನ್ನು ಅಗತ್ಯವಾಗಿ ಖರೀದಿಸುತ್ತಾರೆ. ಪ್ರವಾಸೋದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಿ ಈ ಕಲೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದರೆ ಗುಡ್ಡಗಾಡಿನ ಜನಾಂಗದವರಿಗೆ ಧನಾರ್ಜನೆಗೆ ಸಹಾಯವಾಗುತ್ತದೆ,'' ಎಂದು ಪ್ರೇಮಿಲಾ ಹೇಳುತ್ತಾರೆ.

ವುಡನ್‌ ಫ್ಲವರ್‌ ತಯಾರಿಸುವ ಮೇಘಮಾ ಹೀಗೆ ಹೇಳುತ್ತಾರೆ, ``ವುಡನ್‌ ಫ್ಲವರ್‌ಗೆ ಬಿದಿರಿನ ಫ್ಲವರ್‌ ಪಾಟ್‌ ಕೂಡ ಸಿಗುತ್ತದೆ. ಇದನ್ನು ತಯಾರಿಸಲು ಬೆಟ್ಟಗಳಲ್ಲಿ ಸಿಗುವ ಬಿದಿರನ್ನು ಉಪಯೋಗಿಸುತ್ತಾರೆ. ಬಿದಿರನ್ನು ವುಡನ್‌ ಪೇಂಟ್‌ನಿಂದ ಪಾಲಿಶ್‌ ಮಾಡಿ ಆಕರ್ಷಕಗೊಳಿಸಲಾಗುತ್ತದೆ. ಮೆಕ್ಕೆ ಜೋಳದ ಎಲೆಗಳನ್ನೂ ಅಲಂಕಾರಕ್ಕೆ ಬಳಸಬಹುದು. ಅದಕ್ಕಾಗಿ ಅವನ್ನು ಕೊಳೆಸಿ ಸ್ವಚ್ಛಗೊಳಿಸಲಾಗುತ್ತದೆ. ನಂತರ ಅದಕ್ಕೆ ಇಷ್ಟಬಂದ ಬಣ್ಣ ಹಾಕಲಾಗುತ್ತದೆ. ಇದಲ್ಲದೆ, ಸೂರ್ಯಕಾಂತಿ ಹೂಗಳ ಮಧ್ಯದ ಭಾಗ ಅಲಂಕಾರದ ಕೆಲಸಕ್ಕೆ ಬರುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ