ಸುರೇಶನ ಮನೆಯಲ್ಲಿ ಕಳೆದ 5 ವರ್ಷಗಳಿಂದ ಗೆದ್ದಲು ಹುಳುವಿನ ಸಮಸ್ಯೆ ಇತ್ತು. ಅವನ ಹೆಂಡತಿ ಸೀಮಾ ಚಳಿಗಾಲ ಬರುವ ಮುಂಚೆ ಉಣ್ಣೆಯ ಬಟ್ಟೆಗಳನ್ನು ಕಪಾಟಿನಿಂದ ತೆಗೆಯಲು ಹೋದಾಗ ಗೆದ್ದಲು ಹುಳುಗಳು ಅವನ್ನೆಲ್ಲ ಮನಬಂದಂತೆ ತಿಂದುಹಾಕಿದ್ದವು.
ಸೀಮಾ ಗೆದ್ದಲು ಹುಳುಗಳ ಸಮಸ್ಯೆ ನಿವಾರಿಸಲು ಸೀಮೆಎಣ್ಣೆ ಸಿಂಪಡಿಸಿದಳು. ಆದರೂ ಗೆದ್ದಲಿನ ಸಮಸ್ಯೆ ನಿವಾರಣೆಯಾಗಲಿಲ್ಲ. ಆ ಬಳಿಕ ಪೆಸ್ಟ್ ಕಂಟ್ರೋಲ್ ಮಾಡಿದಾಗಲೇ ಗೆದ್ದಲು ಹುಳುವಿನ ಸಮಸ್ಯೆ ಬಗೆಹರಿಯಿತು.
ಇಂತಹದೇ ಸಮಸ್ಯೆ ಹಲವು ಮನೆಗಳಲ್ಲಿ ಉಂಟಾಗುತ್ತದೆ. ಆದರೆ ಬಹಳಷ್ಟು ಜನರಿಗೆ ಗೆದ್ದಲು ಹಿಡಿದಿರುವ ಕಲ್ಪನೆಯೇ ಬಾರದು. ಹೀಗಾಗಿ ಅಮೂಲ್ಯ ಫರ್ನೀಚರ್‌ಗಳು ಹಾಳಾಗುತ್ತವೆ. ಈ ಕುರಿತಂತೆ ಪಿಡಿಲೈಟ್ ಇಂಡಸ್ಟ್ರೀಸ್ ಲಿ.ನ ಫೆವಿಕಾಲ್ ಡಿವಿಜನ್ನಿನ ಮುಖ್ಯಸ್ಥ ವಿಶಾಲ್ ಈ ಕುರಿತಂತೆ ಹೀಗೆ ಹೇಳುತ್ತಾರೆ, ಗೆದ್ದಲು ಹುಳುವಿನ ಅಸ್ತಿತ್ವ 250 ಮಿಲಿಯನ್ ವರ್ಷಗಳಷ್ಟು ಹಳೆಯದು. ಇದು ಒಣ ಗಿಡಮರಗಳನ್ನು ತನ್ನ ಆಹಾರವಾಗಿ ಬಳಸಿಕೊಳ್ಳುತ್ತದೆ.
ಹೆಚ್ಚು ಹಾನಿಕಾರಕ ಗೆದ್ದಲನ್ನು 3 ಭಾಗಗಳಲ್ಲಿ ವಿಂಗಡಿಸಬಹುದು. ಡ್ಯಾಂಪ್‌ಡ್ ಗೆದ್ದಲು, ಡ್ರೈಡ್ ಗೆದ್ದಲು ಹಾಗೂ ಭೂಮಿಗತ ಗೆದ್ದಲು. ಈ ಮೂರೂ ಪ್ರಕಾರದ ಗೆದ್ದಲು ಹುಳುಗಳಲ್ಲಿ ಭೂಮಿಗತ ಗೆದ್ದಲು ಹುಳು ಅತಿಹೆಚ್ಚು ಹಾನಿಯನ್ನುಂಟು ಮಾಡುವಂಥದ್ದಾಗಿರುತ್ತವೆ. ಅದು ಒಂದು ಮನೆಯ ಮರವನ್ನು ಮೂರು ತಿಂಗಳಲ್ಲಿಯೇ ಮುಗಿಸಿಬಿಡುತ್ತದೆ. ಭೂಮಿಯೊಳಗೇ ಮನೆ ಮಾಡಿಕೊಂಡಿರುವ ಅದು ಸುರಂಗದ ಮುಖಾಂತರ ಆಹಾರ ಹುಡುಕುತ್ತಿರುತ್ತದೆ. ಆಹಾರ ಇದೆಯೆಂದು ಗೊತ್ತಾದ ತಕ್ಷಣ ಅದು ಹೊರಬಂದು ಭಾರಿ ಹಾನಿಯನ್ನುಂಟು ಮಾಡುತ್ತದೆ.
ಗೆದ್ದಲು ಬಿಸಿ, ತೇವಯುಕ್ತ ಹಾಗೂ ಕತ್ತಲಿನ ವಾತಾವರಣದಲ್ಲಿ ವಾಸಿಸುತ್ತದೆ. ಮಳೆಗಾಲದ ದಿನಗಳಲ್ಲಿ ನೀವು ಇದನ್ನು ಕಿಟಕಿಯ ಆಸುಪಾಸು ಕಾಣಬಹುದು. ಇದು ಸಂಘಟಿತ ರೀತಿಯಲ್ಲಿ ಬೇರೆ ಬೇರೆ ಜಾಗಗಳ ಮೇಲೆ ಆಕ್ರಮಣ ಮಾಡುತ್ತದೆ.
ಕೆಳಕಂಡ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವ ಮೂಲಕ ಗೆದ್ದಲಿನ ಸಮಸ್ಯೆಯಿಂದ ಮುಕ್ತರಾಗಬಹುದು :
ಯಾವುದೇ ಪೈಪ್‌ನಲ್ಲಿ ಉಂಟಾಗುವ ಲೀಕೇಜ್‌ನ್ನು ತಕ್ಷಣವೇ ಸರಿಪಡಿಸಿ. ಏಕೆಂದರೆ ಆ ಜಾಗದ ತೇವವನ್ನು ಸರಿಪಡಿಸಲು ಸಾಧ್ಯವಾಗಬೇಕು.
ಚರಂಡಿಯ ನಿಯಮಿತ ಸ್ವಚ್ಛತೆ ಹಾಗೂ ಅದರ ಮೇಲ್ವಿಚಾರಣೆಯಿಂದ ನೀರನ್ನು ಮನೆಯ ಅಡಿಪಾಯದಿಂದ ದೂರ ಇಡಲು ಸಹಾಯವಾಗುತ್ತದೆ.
ಮನೆ ಮೇಲ್ಛಾವಣಿ ಮೇಲೆ ನೀರು ಜಮೆಗೊಳ್ಳದಂತೆ ಎಚ್ಚರ ವಹಿಸಿ.
ಮನೆಯ ಒಳಭಾಗದಲ್ಲಿ ಕಾಗದ ಹಾಗೂ ಕಟ್ಟಿಗೆ ತುಂಡುಗಳು ಜಮೆಗೊಳ್ಳದಂತೆ ನೋಡಿಕೊಳ್ಳಿ.
ಗೆದ್ದಲಿಗೆ ಅತ್ಯಂತ ಸೂಕ್ತ ಜಾಗವೆಂದರೆ, ಗೋಡೆಗೆ ತಗುಲಿಸಿ ಇಟ್ಟಿರುವ ಫರ್ನೀಚರ್, ಅದರ ಆಸುಪಾಸಿನಲ್ಲಿ ನೀವು ದಿನ ಸ್ವಚ್ಛಗೊಳಿಸದೇ ಇದ್ದರೆ, ಅದಕ್ಕೆ ಇನ್ನಷ್ಟು ಅನುಕೂಲ. ಗೋಡೆಯ ಆಸುಪಾಸು ಕಪಾಟು, ಕ್ಯಾಬಿನೆಟ್, ಬಾಗಿಲುಗಳ ವುಡನ್ ಫ್ರೇಮ್ಸ್ ಕಪಾಟಿನ ಕೆಳಭಾಗ ಮುಂತಾದವು. ಈ ಸ್ಥಳಗಳಲ್ಲಿನ ಗೆದ್ದಲನ್ನು ಕೊನೆಗೊಳಿಸಲು ಪರಿಣಾಮಕಾರಿ ದ್ರಾವಣ `ಟರ್ಮಿನೇಟರ್'ನ ಬಳಕೆ ಸೂಕ್ತವಾದುದಾಗಿರುತ್ತದೆ. ಅದು ಪರಿಸರ ಸ್ನೇಹಿಯೂ ಆಗಿರುತ್ತದೆ.
ನೀವು ಮಡ್ ಟನ್‌ನಲ್ಲಿ ಉಂಟಾದ ರಂಧ್ರ ಅಥವಾ ಗೋಡೆಯ ಬಿರುಕನ್ನು ಟರ್ಮಿನೇಟರ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಸೂಕ್ತ. ಅದು ಗೆದ್ದಲಿನ ಆಕ್ರಮಣದಿಂದ ರಕ್ಷಿಸುತ್ತದೆ.