ಹಬ್ಬ, ಜಾತ್ರೆ, ಉತ್ಸವ ಅಥವಾ ವಿಶಿಷ್ಟ ಸಂದರ್ಭದಲ್ಲಿ ಜನರು ಸುಣ್ಣ ಬಳಿದು, ಇಲ್ಲಿ ಡಿಸ್ಟೆಂಪರ್ ಹಚ್ಚಿ ಸಂತೋಷಪಡುತ್ತಿದ್ದರು. ಆದರೆ ಕಾಲ ಬದಲಾದಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧನಗಳಿಂದ ನೀವು ಮನೆಯ ಗೋಡೆಗಳಿಗಷ್ಟೇ ಅಲ್ಲ, ಬರಲಿರುವ ಹಬ್ಬವನ್ನು ಮತ್ತಷ್ಟು ಹರ್ಷದಾಯಕಗೊಳಿಸಬಹದು.
ಮನೆಯ ಗೋಡೆಗಳು ಸುಂದರವಾಗಿದ್ದರೆ, ಇಡೀ ಮನೆಯೇ ಶೋಭಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ಕೋಣೆ ನಿಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ. ಅದರ ಗೋಡೆಗಳು ನಿಮ್ಮ ಅಭಿರುಚಿಯನ್ನು ಬಿಂಬಿಸುತ್ತದೆ. ಬರಲಿರುವ ಹಬ್ಬಕ್ಕಾಗಿ ಗೋಡೆಗಳಿಗೆ ಹೊಸ ರೀತಿಯ ಮೆರುಗು ನೀಡಿ.
ವಾಲ್ ಟ್ರೀಟ್ ಮೆಂಟ್
ಪ್ರತಿಯೊಂದು ಕೋಣೆಯ ಗುರುತು ಅಲ್ಲಿ ನಡೆಯುವ ಕೆಲಸ ಕಾರ್ಯಗಳ ಪ್ರಕಾರ ಬದಲಾಗುತ್ತಿರುತ್ತದೆ. ಹೀಗಾಗಿ ಅದಕ್ಕೆ ಒಂದು ವಿಶಿಷ್ಟ ಲುಕ್ ನ ಅವಶ್ಯಕತೆ ಇರುತ್ತದೆ. ವಾಲ್ ಟ್ರೀಟ್ ಮೆಂಟ್ ವಿಭಿನ್ನ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಯತನಕ ಸಹಜವಾಗಿ ಬೆರೆಯುವಂತೆ ಮಾಡುತ್ತದೆ. ಅದೂ ಕೂಡ ಬಣ್ಣಗಳನ್ನು ಸಾಧಾರಣ ಪರಿವರ್ತನೆ ಮಾಡುವುದರ ಮೂಲಕ ವಿಭಿನ್ನ ಪ್ರಕಾರದ ಲಾಲ್ ಟ್ರೀಟ್ ಮೆಂಟ್ ದಂತಿ ಸ್ಟೋನ್, ಟೈಲ್ಸ್, ಟೆಕ್ಸ್ ಚರ್ಡ್ ಪೇಂಟ್, ಪ್ಲಾಸ್ಟರ್ ಆಪ್ ಪ್ಯಾರಿಸ್, ಪ್ಯಾನೆಲಿಂಗ್ ಮತ್ತು ಕ್ಲೌಡಿಂಗ್ ಗೋಡೆಗಳ ಜೊತೆಗೆ ಕೋಣೆಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಕೊಡುತ್ತವೆ. ಟ್ರೀಟ್ ಮೆಂಟ್ ಒಂದೇ ತೆರನಾಗಿರಬೇಕು ಅಥವಾ ಏಕಕಾಲಕ್ಕೆ ಹಲವು ಮಿಶ್ರಣ. ಇದು ವೈಯಕ್ತಿಕ ಆಸಕ್ತಿಯನ್ನು ಅವಲಂಬಿಸಿರುತ್ತದೆ.
ಮನೆಯ ಕಾಂತಿ ಹೆಚ್ಚಿಸುವ ಪೇಂಟ್
ಮನೆಗೆ ಬಣ್ಣ ಮಾಡಿಸುವುದು ಪ್ರತಿಯೊಬ್ಬರ ಮೆಚ್ಚಿನ ಹವ್ಯಾಸ. ಹೀಗಾಗಿ ಇದರ ಬೇಡಿಕೆ ಸದಾ ಇದ್ದೇ ಇರುತ್ತದೆ. ಬಣ್ಣದಲ್ಲಿ ಅಂಟಿಕೊಳ್ಳುವ ಸಾಮರ್ಥ್ಯವಿರುತ್ತದೆ. ಈ ಕಾರಣದಿಂದ ಹೆಚ್ಚಾಗಿ ಇದನ್ನೇ ಬಳಸಲಾಗುತ್ತದೆ. ಉದಾಹರಣೆಗೆ : ಸಿಮೆಂಟ್ ಪ್ಲ್ಯಾಸ್ಟರ್, ಸ್ಯಾಂಡ್ ಸ್ಟೋನ್ ಪ್ಲೈಡ್ ಗಳ ಮೇಲೆ ಬಳಸಲಾಗುತ್ತದೆ. ಪೇಂಟ್ ಹಲವು ವೈವಿದ್ಯಮಯ ಬಣ್ಣಗಳಲ್ಲಿ ಲಭಿಸುತ್ತದೆ ಹಾಗೂ ಇದರ ಮುಖಾಂತರ ಹಲವು ಟೆಕ್ಸ್ ಚರ್ ಗಳನ್ನು ನಿರ್ಮಿಸಬಹುದಾಗಿದೆ. ಪೇಂಟ್ ಆ್ಯಂಟಿ ಫಂಗಸ್ ಆಗಿರುತ್ತದೆ ಹಾಗೂ ಬೆಂಕಿ ಇದರ ಮೇಲೆ ತಡವಾಗಿ ಆವರಿಸಿಕೊಳ್ಳುತ್ತದೆ.
ಟೆಕ್ಸ್ ಚರ್ ಪೇಂಟ್ ನ ಹೆಚ್ಚುವರಿ
ಇಂಟೀರಿಯರ್ ಹಾಗೂ ಎಕ್ಸ್ ಟೀರಿಯರ್ ಎರಡರ ಬಳಕೆಗೂ ಬರುವ ಟೆಕ್ಸ್ ಚರ್ ಪೇಂಟ್ ನ ಲಭ್ಯತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಬೆಳವಣಿಗೆಯಾಗಿದೆ. ಪಾರಂಪರಿಕ ಸ್ಟಫ್ ಪೇಂಟ್ ನಿಂದ ಹಿಡಿದು ಆಧುನಿಕ ವೈವಿಧ್ಯತೆಯ ಸುರಕ್ಷಾತ್ಮಕ ಕೋಟಿಂಗ್ ಜೊತೆಗೆ ಬರುತ್ತದೆ. ಈ ಕಾರಣದಿಂದಾಗಿ ಗೋಡೆಯ ಮೇಲೆ ಧೂಳಿನ ಕಣಗಳು ಕುಳಿತುಕೊಳ್ಳುವುದಿಲ್ಲ ಮತ್ತು ಡ್ಯೂರೆಬಲ್ ಫಿನಿಶ್ ನ್ನು ಕೂಡ ಒದಗಿಸುತ್ತವೆ. ಟೆಕ್ಸ್ ಚರ್ ಪೇಂಟ್ ನ್ನು ಆಯ್ದುಕೊಳ್ಳುವಾಗ ಎಚ್ಚರ ವಹಿಸಬೇಕಾದ ಒಂದು ಸಂಗತಿಯೆಂದರೆ, ಅದು ಹೆಚ್ಚು ಗ್ರ್ಯಾನ್ಯೂಲ್ಸ್ ಆಗಿರದಂತೆ ನೋಡಿಕೊಳ್ಳಿ. ಏಕೆಂದರೆ ಅದರಲ್ಲಿ ಧೂಳು ಜಮೆಗೊಳ್ಳುತ್ತದೆ. ಅದನ್ನು ಸ್ವಚ್ಛಗೊಳಿಸುವುದು ಕಠಿಣ. ಅದರ ಕೊರತೆ ಏನೆಂದರೆ ಯಾವಾಗಲಾದರೊಮ್ಮೆ ರಿಪೇರಿ ಮಾಡಬೇಕಾದ ಪರಿಸ್ಥಿತಿ ಬಂದಾಗ ಈ ಪೇಂಟ್ ಗಳ ಸರಿಯಾದ ಶೇಡ್ ದೊರೆಯುವುದು ಕಷ್ಟಕರವಾಗುತ್ತದೆ.
ದೇಶಿ ಲುಕ್ಸ್ ಗಾಗಿ’
ಪ್ಯಾನೆಲಿಂಗ್ ಒಂದು ಆಕರ್ಷಕ ಟ್ರೀಟ್ ಮೆಂಟ್. ಏಕೆಂದರೆ ಅದು ಅಲಂಕಾರದಲ್ಲಿ ಮತ್ತಷ್ಟು ಆಕರ್ಷಣೆ ತರುತ್ತದೆ ಹಾಗೂ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ. ಇದರ ನಿರ್ವಹಣೆ ಕಷ್ಟಕರವಲ್ಲ. ವಿದ್ಯುತ್ ಸ್ವಿಚ್ ಬೋರ್ಡ್ ಗಳನ್ನು ಮುಚ್ಚಿಡಲು ಇದೊಂದು ಅತ್ಯುತ್ತಮ ಪರದೆ, ಫ್ಯಾಬ್ರಿಕ್, ಬೀನೀವ್, ಫ್ಯಾಮಿನೇಟ್, ಜ್ಯೂಟ್, ಕ್ರೇನ್ ವಾಸ್, ಸ್ಟ್ರಾಮೆಕ್ ಮುಂತಾದವುಗಳಿಂದ ಇದನ್ನು ಸಿದ್ಧಪಡಿಸಲಾಗುತ್ತದೆ. ಪ್ಯಾನೆಲಿಂಗ್ ಗಾಗಿ ಇದು ಉಪಯುಕ್ತ ಫ್ಯಾಬ್ರಿಕ್ ಆಗಿದ್ದು, ಇದರಿಂದ ದೇಶಿ ಲುಕ್ ದೊರೆಯುತ್ತದೆ. ಇದೇ ಭಾರತೀಯರ ಪ್ರಥಮ ಪ್ರಾಶಸ್ತ್ಯವಾಗಿರುತ್ತದೆ.
ಮೆಟಲ್ ಕ್ಲ್ಯಾಡಿಂಗ್ ನ ವಿಶಿಷ್ಟ ಮೆರುಗು
ಸುಂದರ ಹಾಗೂ ಹೆಚ್ಚು ದಿನಗಳ ಕಾಲ ಉಳಿಯುವ ಗೋಡೆಗಳಿಗೆ ಕ್ಲ್ಯಾಡಿಂಗ್ ಉತ್ತಮ ಪರ್ಯಾಯವಾಗಿದೆ. ಕ್ಲ್ಯಾಡಿಂಗ್ ನ್ನು ಗ್ಲಾಸ್, ಅಲ್ಯುಮಿನಿಯಂ, ಟೈಲ್ಸ್ ಮುಂತಾದವುಗಳಿಂದ ಮಾಡಲಾಗುತ್ತದೆ. ತಮ್ಮ ಮನೆಗೆ ವಿಶಿಷ್ಟ ಲುಕ್ ನೀಡಲು ಅಲಂಕಾರಿಕ ಮೆಟಲ್ ಕ್ಲ್ಯಾಡಿಂಗ್ ಕೂಡ ಮಾಡಬಹುದು. ಒಂದು ವೇಳೆ ಕ್ರಿಯೇಟಿವ್ ರೀತಿಯಲ್ಲಿ ಬಳಸಿದರೆ, ಇದರಿಂದ ಛಾವಣಿ ಹಾಗೂ ಗೋಡೆಗಳಿಗೆ ಅರಮನೆಯ ಭವ್ಯತೆ ಬರುತ್ತದೆ. ಇದು ಅಂತಾರಾಷ್ಟ್ರೀಯ ಜೀವನಶೈಲಿಯೂ ಹೌದು.
ಸ್ಟೋನ್ ಪರಿಣಾಮಕಾರಿ
ಸ್ಟೋನ್ ನೈಸರ್ಗಿಕ ಲುಕ್ ಒದಗಿಸುತ್ತದೆ. ಸ್ಥಳೀಯವಾಗಿ ಲಭ್ಯವಾಗುವ ರೆಡ್ ಸ್ಯಾಂಡ್ ಸ್ಟೋನ್, ಫೈನ್ ಚಿಸಿ ಮತ್ತು ರಫ್ ಡ್ಯಾಸ್ ಗೋಡೆಗಳಲ್ಲಿ ಸುಲಭವಾಗಿ ಅಳವಡಿಸಬಹುದು. ಇನ್ನು ಹೆಚ್ಚಾಗಿ ಆರ್ಕಿಟೆಕ್ಟ್ ಗಳು ಔದ್ಯಮಿಕ ಕಟ್ಟಡಗಳನ್ನು ನಿರ್ಮಿಸುವಾಗ ಬಳಸುತ್ತಾರೆ.
ಹಾಗಾದರೆ ತಡವೇಕೆ?
ನೀವು ನಿಮ್ಮ ಮನೆಯ ಗೋಡೆಗಳಿಗೆ ವಿಶಿಷ್ಟ ರಂಗು ನೀಡಿ ಹಾಗೂ ಮನೆಗೆ ಬರುವ ಅತಿಥಿಗಳು ನಿಮ್ಮನ್ನು ಹೊಗಳದಿದ್ದರೆ ಕೇಳಿ.
– ಸುಭದ್ರಾ ರಾವ್