ಟೀನೇಜರ್ಸ್‌, ಶಾಪಿಂಗ್‌ ಬಗ್ಗೆ ಕ್ರೇಝಿ ಆಗಿರುತ್ತಾರೆ. ಈ ವಯಸ್ಸಿನಲ್ಲಿ ಅವರಿಗೆ ಹೊಸ ಹೊಸ ಸ್ಟೈಲಿಶ್‌ ಬಟ್ಟೆಗಳನ್ನು ಧರಿಸಲು ಆಸೆಯಾಗುತ್ತದೆ. ಆದರೆ ತಮಗೆ ಯಾವುದು ಒಪ್ಪುತ್ತದೆ. ಯಾವುದನ್ನು ಧರಿಸಬೇಕು, ಯಾವುದನ್ನು ಧರಿಸಬಾರದು ಎಂದು ತಿಳಿದಿರುವುದಿಲ್ಲ. ಅವರು ಆಗಾಗ್ಗೆ ಸಿನಿಮಾಗಳಲ್ಲಿ ಹೀರೋ ಹೀರೋಯಿನ್‌ಗಳ ಬಟ್ಟೆಗಳನ್ನು ನೋಡಿ ಅಥವಾ ತಮ್ಮ ಫ್ರೆಂಡ್ಸ್ ಗಳ ಉಡುಪುಗಳನ್ನು ಕಂಡು ಅಂತಹುದೇ ಉಡುಪುಗಳನ್ನು ಕೊಳ್ಳಲು ಉತ್ಸುಕರಾಗುತ್ತರೆ. ಹೀಗಿರುವಾಗ ನೀವು ಅವರೊಂದಿಗೆ ಶಾಪಿಂಗ್‌ಗೆ ಹೋಗಿ ಮತ್ತು ಅವರ ಪರ್ಸನಾಲಿಟಿಗೆ ತಕ್ಕಂತೆ ಶಾಪಿಂಗ್‌ ಮಾಡಿ. ಅದರಿಂದ ಅವರು ಕುರೂಪವಾಗಿ ಕಾಣದೆ ಫ್ಯಾಷನೆಬಲ್ ಮತ್ತು ಸ್ಮಾರ್ಟ್‌ ಆಗಿ ಕಾಣುತ್ತಾರೆ.

ಬನ್ನಿ, ಟೀನೇಜರ್‌ ಶಾಪಿಂಗ್‌ ಹೇಗಿರಬೇಕೆಂದು ತಿಳಿಯೋಣ :

ಸಿನಿಮಾ ಉಡುಪುಗಳನ್ನು ಕೊಡಿಸಬೇಡಿ : ಅನೇಕ ಬಾರಿ ತಾಯಂದಿರು ಸ್ವತಃ ಯಾವುದೋ ಹೀರೋಯಿನ್‌ ಧರಿಸಿದ್ದ ಡ್ರೆಸ್‌ನಂತಹದೇ ಡ್ರೆಸ್‌ ಧರಿಸಲು ಇಚ್ಛಿಸುತ್ತಾರೆ. ಜೊತೆಗೆ ತಮ್ಮ ಮಕ್ಕಳಿಗೂ ಅಂತಹುದೇ ವಿಲಕ್ಷಣ, ಗ್ಲಾಮರಸ್‌ ಡ್ರೆಸ್‌ ತೊಡಿಸುತ್ತಾರೆ. ನಿಧಾನವಾಗಿ ಅದರ ಪ್ರಭಾವ ಮಕ್ಕಳ ಮೇಲೆ ಬೀಳುತ್ತದೆ. ಮುಂದೆ ಅವರು ಸಿನಿಮಾಗಳನ್ನು ನೋಡಿ ಬಟ್ಟೆ ಹೊಲಿಸಿಕೊಳ್ಳುತ್ತಾರೆ. ಆಗ ತಾಯಂದಿರಿಗೆ ಅದು ಸರಿಹೋಗುವುದಿಲ್ಲ. ಆದ್ದರಿಂದ ಮುಂದೆ ನೀವು ಪಶ್ಚಾತ್ತಾಪ ಪಡುವಂತಹ ಕೆಲಸ ಮಾಡಬೇಡಿ.

ಬಹಳ ಟೈಟ್ಬಟ್ಟೆ ಕೊಡಿಸಬೇಡಿ : ಬೆಳೆಯುವ ಮಕ್ಕಳ ಬಟ್ಟೆಗಳು ಬಹಳ ಬೇಗನೆ ಚಿಕ್ಕದಾಗುತ್ತವೆ. ಆದರೂ ಅಮ್ಮಂದಿರು ಅನೇಕ ಬಾರಿ ಮಕ್ಕಳಿಗೆ ಟೈಟ್‌ ಫಿಟಿಂಗ್‌ ಈಗ ಫ್ಯಾಷನ್‌ ಎಂದು ಯೋಚಿಸಿ ಬಿಗಿಯಾದ ಬಟ್ಟೆಗಳನ್ನು ಕೊಡಿಸುತ್ತಾರೆ. ಹಾಗೆ ಮಾಡುವಾಗ ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಟೈಟ್‌ ಬಟ್ಟೆಗಳಿಂದ ಶರೀರದ ಮೇಲೆ ರಾಶೆಸ್‌, ಉಸಿರಾಟಕ್ಕೆ ಅಡ್ಡಿ, ವಾಕರಿಕೆಯಂತಹ ಅನೇಕ ಸಮಸ್ಯೆಗಳು ಉಂಟಾಗುತ್ತವೆ.

ಸ್ಲೋಗನ್ಟೀಶರ್ಟ್ಖರೀದಿಸಿದಾಗ : ಮಾರುಕಟ್ಟೆಯಲ್ಲಿ ಸಿಗುವ ಬಹಳಷ್ಟು ಟೀಶರ್ಟ್‌ಗಳ ಮೇಲೆ ಅನೇಕ ರೀತಿಯ ಕೆಟ್ಟ ಮೆಸೇಜ್‌ಗಳು ಮುದ್ರಿತವಾಗಿರುತ್ತವೆ. ಜನ ಏನೂ ಯೋಚಿಸದೆ ಅವನ್ನು ಖರೀದಿಸಿಬಿಡುತ್ತಾರೆ. ಅದು ಸರಿಯಲ್ಲ. ಯಾವಾಗಲೂ ನಿಮ್ಮ ಮಕ್ಕಳ ಟೀಶರ್ಟ್‌ಗಳನ್ನು ಚೆನ್ನಾಗಿ ಯೋಚಿಸಿ ಖರೀದಿಸಿ. ಇಲ್ಲದಿದ್ದರೆ ಆ ಕೆಟ್ಟ ವಿಷಯಗಳನ್ನು ಸರಿಯೆಂದುಕೊಳ್ಳುತ್ತಾರೆ. ಮೆಸೇಜ್‌ನ್ನು ಅರ್ಥ ಮಾಡಿಕೊಳ್ಳದೆ ಟೀಶರ್ಟ್‌ಗಳನ್ನು ಖರೀದಿಸುತ್ತಾರೆ. ಅದನ್ನು ಕಂಡು ಅವರ ಫ್ರೆಂಡ್ಸ್ ಸರ್ಕಲ್‌ನಲ್ಲಿ ಚುಡಾಯಿಸುತ್ತಾರೆ. ಅದಕ್ಕೆ ಜವಾಬ್ದಾರಿ ನಿಮ್ಮ ಮಕ್ಕಳಲ್ಲ, ಬದಲಿಗೆ ನೀವೇ ಆಗಿರುತ್ತೀರಿ.

ಫಿಗರ್ಗೆ ತಕ್ಕಂತೆ ಬಟ್ಟೆ ಕೊಡಿಸಿ : ನಿಮ್ಮ ಮಗ ಅಥವಾ ಮಗಳು ಹೆಚ್ಚು ಆರೋಗ್ಯವಂತರಾಗಿದ್ದು ದಪ್ಪಗಿದ್ದರೆ ಅವರಿಗೆ ಕೊಂಚ ಸಡಿಲವಾದ ಬಟ್ಟೆಗಳನ್ನು ಕೊಡಿಸಬೇಕು. ಆಗ ಕೆಟ್ಟದಾಗಿ ಕಾಣುವ ಬೊಜ್ಜು ಕಾಣುವುದಿಲ್ಲ. ಒಂದು ವೇಳೆ ಮಗಳ ಫಿಗರ್ ಚೆನ್ನಾಗಿದ್ದರೆ ಅದಕ್ಕೆ ತಕ್ಕಂತೆ ಕೊಂಚ ಫಿಟಿಂಗ್‌ ಇರುವ ಅಥವಾ ಕಟ್‌ ಸ್ಲೀವ್ಸ್ ಇತ್ಯಾದಿ ಬಟ್ಟೆ ಕೊಡಿಸಬಹುದು.

ಹೈಹೀಲ್ಸ್ ಬೇಡ : ಟೀನೇಜ್‌ ಹುಡುಗಿಯರು ಹಿರಿಯರನ್ನು ನೋಡಿ ತಾವು ಹೈಹೀಲ್ಸ್ ಧರಿಸುತ್ತೇವೆಂದು ಹಠ ಹಿಡಿಯುತ್ತಾರೆ. ನಿಮ್ಮ ಮಗಳೂ ಹಾಗೇ ಹಠ ಹಿಡಿದರೆ ಅವಳಿಗೆ ಹೈಹೀಲ್ಸ್ ಧರಿಸಲು ಅವಕಾಶ ನೀಡಬೇಡಿ. ಏಕೆಂದರೆ ಅದರಿಂದ ಹಿಮ್ಮಡಿ ಹಾಗೂ ಸೊಂಟಕ್ಕೆ ಸಂಬಂಧಿಸಿದ ಹಲವಾರು ತೊಂದರೆಗಳು ಆವರಿಸುತ್ತವೆ. ನಿಮ್ಮ ಕರ್ತವ್ಯವೇನೆಂದರೆ ಮುಂದೆ ನಿಮಗೇ ತೊಂದರೆ ಅನುಭವಿಸಬೇಕಾಗುವೆತೆ ಫ್ಯಾಷನೆಬಲ್ ಆಗಬೇಡಿ. ಹೈಹೀಲ್‌ನಿಂದಾಗಿ ಶರೀರದ ಒತ್ತಡ ಸತತವಾಗಿ ಪಾದಗಳ ಮೇಲೆ ಬೀಳುತ್ತಿದ್ದರೆ ಉಗುರುಗಳ ಬಗ್ಗೆಯೂ ಚಿಂತೆಯಾಗುತ್ತದೆ. ಉಗುರುಗಳು ಕಠಿಣವಾಗಿ ದಪ್ಪಗಾಗುತ್ತವೆ. ಅವುಗಳಲ್ಲಿ ದುರ್ವಾಸನೆ ಬರುವ ಫಂಗಸ್‌ ಇರುವುದರಿಂದ ಅಪಾಯಕಾರಿಯಾಗಿದೆ. ಆದರೆ ಪಾರ್ಟಿ ಇತ್ಯಾದಿಗಳಲ್ಲಿ ಧರಿಸಲು ಫ್ಲ್ಯಾಟ್‌ಫಾರಂ ಹೀಲ್ ಮತ್ತು ಡೇಲಿವೇರ್‌ಗಾಗಿ ಫ್ಲ್ಯಾಟ್‌ ಸ್ಲಿಪರ್‌ ಅಥವಾ ಶೂಸ್‌ ಇತ್ಯಾದಿ ಕೊಡಿಸಿ. ಅದರಿಂದ ಅವರ ಕಾಲುಗಳು ಸರಿಯಾಗಿರುತ್ತವೆ. ಈಗ ಫ್ಲ್ಯಾಟ್‌ ಚಪ್ಪಲಿಗಳಲ್ಲೂ ಸಾಕಷ್ಟು ವೆರೈಟಿಗಳಿದ್ದು ಅವನ್ನು ಧರಿಸಿದಾಗ ಸ್ಟೈಲಿಶ್‌ ಆಗಿ ಕಾಣಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ