ಹೂಡಿಕೆಯ ಯಾವ ವಿಧಾನಗಳನ್ನು ಆಧರಿಸಿ ನೀವು ನಿಮ್ಮ ಹಾಗೂ ಕುಟುಂಬದ ಭವಿಷ್ಯ ಸುರಕ್ಷಿತ ಆಗಿಸಿಕೊಳ್ಳಬಹುದು ಎಂದು ಅಗತ್ಯ ತಿಳಿಯಿರಿ…….!
ಭಾರತೀಯ ಮಧ್ಯಮ ವರ್ಗವನ್ನು ಉತ್ತಮ ಉಳಿತಾಯಕಾರರ ರೂಪದಲ್ಲಿ ಗುರುತಿಸಲಾಗುತ್ತದೆ. ವಿಭಿನ್ನ ಸಮೀಕ್ಷೆಗಳ ಪ್ರಕಾರ, ಅವರು ತಮ್ಮ ಆದಾಯದ 25% ಹಣ ಉಳಿತಾಯ ಮಾಡುತ್ತಾರೆ. ಇಲ್ಲಿ ಏಳು ಮುಖ್ಯ ಪ್ರಶ್ನೆ ಎಂದರೆ ಈ ವರ್ಗ ತಮ್ಮ ಉಳಿತಾಯವನ್ನು ಸ್ಮಾರ್ಟ್ ರೀತಿಯಲ್ಲಿ ಹೂಡಿಕೆ ಮಾಡುತ್ತಿದ್ದಾರಾ? ಹೆಚ್ಚಿನ ಭಾರತೀಯರು ಲಾಕರ್ ಯಾ ಬ್ಯಾಂಕುಗಳಲ್ಲಿ ಹಣ, ಒಡವೆ ಇರಿಸುವುದನ್ನೇ ಬಯಸುತ್ತಾರೆ. ಹೀಗೆ ಲಾಕರ್ ನಲ್ಲಿ ಸುರಕ್ಷಿತವಾಗಿಡುವ ಬದಲು, ಬೇರೆ ಯಾವ ವಿಧಾನಗಳಿಂದ ಈ ಹಣ ಮತ್ತೂ ಹೆಚ್ಚಿನ ಮೊತ್ತವಾಗಿ ಬೆಳೆಯಲು ಸಾಧ್ಯ?
ಕಾಲ ಕಳೆದಂತೆ ನಗದು ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಉದಾ: 10 ವರ್ಷಕ್ಕೆ ಮೊದಲು 1000 ರೂ.ಗಿದ್ದ ಮೌಲ್ಯ ಈಗಿನ ಕಾಲದ 1000 ರೂ.ಗಿಂತ ಖಂಡಿತಾ ಹೆಚ್ಚು. ಹೀಗಾಗಿ ನಗದು ಹಣವನ್ನು ಸುರಕ್ಷತೆಯ ಹೆಸರಲ್ಲಿ ಲಾಕರ್ ನಲ್ಲಿ ಇಡುವ ಬದಲು, ಇದರ ಸೂಕ್ತ ಹೂಡಿಕೆ (ಇನ್ ವೆಸ್ಟ್ ಮೆಂಟ್) ಮಾಡುವುದೇ ಲಾಭಕರ! ಆಗ ಮಾತ್ರ ನಾವು ಹಣದುಬ್ಬರ ತಡೆಗಟ್ಟಲು ಸಾಧ್ಯ. ಇದರ ಹೊರತಾಗಿಯೂ ಅಧಿಕಾಂಶ ಹೂಡಿಕೆದಾರರು ಈ ಹಣದುಬ್ಬರದ ಕಡೆ ಗಮನ ಕೊಡುವುದೇ ಇಲ್ಲ. ಮನೋವಿಜ್ಞಾನಿಗಳು ಇದನ್ನೇ ಧನದ ವ್ಯಾಮೋಹ ಎನ್ನುತ್ತಾರೆ.
ಹಣದುಬ್ಬರದಲ್ಲಿ 5% ಹೆಚ್ಚಳ ಆಗಿದೆ ಎಂದರೆ, ನಮ್ಮ ಸಂಬಳದಲ್ಲಿ 5%ನ ಹೆಚ್ಚಳ ಪ್ರಭಾವ ರೂಪದಲ್ಲಿ, ನಮ್ಮ ಬಳಿ ಇರುವ ಹಣದಲ್ಲಿ ಒಂದು `ಕಡಿತ’ ಎಂದೇ ಅರ್ಥ. ಇದರ ಹೊರತಾಗಿ ಸಾಮಾನ್ಯವಾಗಿ ಜನ ಈ ಸನ್ನಿವೇಶದಲ್ಲಿ 1 ವರ್ಷದಲ್ಲಿ 1% ವೇತನ ಕಡಿತ ಬಯಸುತ್ತಾರೆ, ಅದೂ ಹಣದುಬ್ಬರ ಸೊನ್ನೆ ಆದಾಗ. ಹೀಗಾಗಿ ನಿಮ್ಮ ಹೂಡಿಕೆಯ ಯಶಸ್ಸನ್ನು, ಹಣದುಬ್ಬರದ ನಂತರ ನೀವು ಎಷ್ಟು ಹಣ ನಿಮ್ಮ ಬಳಿ ಇರಿಸಿಕೊಳ್ಳಲು ಸಾಧ್ಯ ಎಂಬುದರ ಬದಲಾಗಿ, ನಿಮ್ಮ ಹೂಡಿಕೆಯಿಂದ ಎಷ್ಟು ಲಾಭವಾಗುತ್ತಿದೆ, ಎಂದು ತಿಳಿಯುವುದೇ ಸರಿ.
ಹೂಡಿಕೆಯ ಆರಂಭ
ಷೇರು ಮಾರುಕಟ್ಟೆಯಲ್ಲಿ ಹೆಜ್ಜೆ ಇರಿಸುವ ಮುನ್ನಾ, ಅದರ ಪ್ರಾಥಮಿಕ ವಿಷಯಗಳನ್ನು ಒಂದಿಷ್ಟು ತಿಳಿಯಿರಿ. ಇದಕ್ಕಾಗಿ ನೀವು ಯೂಟ್ಯೂಬ್ ವಿಡಿಯೋ ಅಥವಾ ಹಣಕಾಸಿನ ಕುರಿತ ವಿಶೇಷ ಪುಸ್ತಕ ಪರಿಶೀಲಿಸಿ. ಷೇರು ಮಾರುಕಟ್ಟೆಯನ್ನು ಟೆಕ್ನಿಕಲಿ ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ, ನಿಮಗೆ ಈ ಸ್ಟಾಕ್ ಷೇರ್ಸ್ ನಲ್ಲಿ ಉತ್ತಮ ನಿರ್ಣಯ ಕೈಗೊಂಡು ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಹೊಸ ಹೊಸ ಆರ್ಥಿಕ ಉತ್ಪಾದನೆಗಳ ತಜ್ಞರು ಹೂಡಿಕೆ ಕುರಿತು ಬರೆದಿರುವ ಪುಸ್ತಕಗಳನ್ನು ಪರಿಶೀಲಿಸಿ. ಆರ್ಥಿಕ ಸಮಾಚಾರದ ಕುರಿತು ಸಾಮಾನ್ಯ ಜಾಗೃತಿ ಸಹ, ಸ್ಮಾರ್ಟ್ ವಿಧಾನದಿಂದ ಹೂಡಿಕೆ ಮಾಡಲು ಒಂದು ಮುಖ್ಯ ದಾರಿಯಾಗಿದೆ.
ಮುಂದಿನ ಹೆಜ್ಜೆ ಎಂದರೆ, ಬೇಗ ಹೂಡಿಕೆ ಆರಂಭಿಸುವುದು. ಇದು ನಿಶ್ಚಿತ ರೂಪದಲ್ಲಿ ಹಣ ಉಳಿತಾಯ ಮಾಡುತ್ತದೆ. ನೀವು ಎಂದೂ ಈ ನಿಟ್ಟಿನಲ್ಲಿ ಹೂಡಿಕೆಯೇ ಮಾಡದೆ, ಎಷ್ಟೋ ವಯಸ್ಸು ದಾಟಿದಿ ಎನಿಸಿದರೂ, ಎಂದೆಂದೂ ಹೂಡಿಕೆ ಮಾಡದೆ ಇರುವುದಕ್ಕಿಂತ ಯಾವಾಗಲೋ ಒಮ್ಮೆ ಆರಂಭಿಸುವುದೇ ಲೇಸು. ಆರಂಭದ ಹೂಡಿಕೆ ಹೇಗಿರಬೇಕು ಎಂದರೆ, ನಿಮ್ಮ ಹಣವನ್ನು ಅಗತ್ಯದ ಕಾರ್ಪಸ್ ಫಂಡ್ ನಲ್ಲಿ ವಿಕಾಸ ಹೊಂದಲು ಧಾರಾಳ ಸಮಯಾವಕಾಶ ಸಿಗುವಂತಿರಬೇಕು. ತೀರಾ ಅಗತ್ಯದ ಸಮಯದಲ್ಲಿ ನೀವು ಈ ಹಣ ಹಿಂಪಡೆಯುಂತೆ, ರಿಟೈರ್ ಆಗುವ ಕಾಲಕ್ಕೆ ಇದರಿಂದ ಹೆಚ್ಚು ಸಹಾಯ ಆಗುವಂತಿರಬೇಕು.
ಮುಂದಿನ ಲಾಭಗಳಿಗಾಗಿ ಸ್ಮಾರ್ಟ್ ಹೂಡಿಕೆಯಲ್ಲೂ ಕಂಟಿನ್ಯೂಯಿಟಿ ಇರಲಿ. ವರ್ಷಕ್ಕೆ ಒಮ್ಮೆ ಅಥವಾ ಸಣ್ಣಪುಟ್ಟ ರೂಪದಲ್ಲಿ ಹೂಡಿಕೆ ಬೇಡ, ಏಕೆಂದರೆ ಇದು ಹೆಚ್ಚು ಹಣ ನೀಡದು. ನಿಮ್ಮ ಹಣ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಹಾಗೂ ಶಿಸ್ತುಬದ್ಧ ರೀತಿಯಲ್ಲಿ ಹೂಡಿಕೆ ಮಾಡಲು, ಪ್ರತಿ ತಿಂಗಳೂ ಒಂದು ನಿಶ್ಚಿತ ಮೊತ್ತವನ್ನು ಬೇರೆಯಾಗಿಡಿ. ಈ ಶಿಸ್ತನ್ನು ಪಾಲಿಸಲು, ವ್ಯವಸ್ಥಿತ ಹೂಡಿಕೆ ಯೋಜನೆ (SIP ಸಿಸ್ಟಮ್ಯಾಟಿಕ್ ಇನ್ ವೆಸ್ಟ್ ಮೆಂಟ್ ಪ್ಲಾನ್) ಹಾಗೂ ಆಟೋಪೇಮೆಂಟ್ ಉತ್ತಮ ಅವಕಾಶಗಳಾಗಿವೆ. ಇದರಿಂದ ಪ್ರತಿ ತಿಂಗಳೂ ನೀವು ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಚಾಚೂ ತಪ್ಪದೆ ಇದಕ್ಕೆ ಕಟ್ಟುಂತಾಗಬೇಕು.
ಮುಂದೇನೂ ಮಾಡಬೇಕು?
ನೀವು SIP ಮೂಲಕ ಎಲ್ಲಿ ಹೂಡಿಕೆ ಮಾಡಬಹುದು? ಇದರ ಸಾಮಾನ್ಯ ನಿಯಮ ಎಂದರೆ ವಿವಿಧ ಪೋರ್ಟ್ ಪೋಲಿಯೋ ಮಾಡಿಕೊಳ್ಳುವುದು. ಹಿಂದಿಯ ಹಳೆಯ ಗಾದೆಯೊಂದರ ಪ್ರಕಾರ, ಎಲ್ಲಾ ಮೊಟ್ಟೆಗಳನ್ನೂ ಒಂದೇ ಮಂಕರಿಯಲ್ಲಿ ಇಡಬಾರದಂತೆ! ಇದನ್ನೇ ವೈವಿಧ್ಯತೆ ಎನ್ನುವುದು. ಇದೇ ರೀತಿ ನಿಮ್ಮ ಎಲ್ಲಾ ಒಟ್ಟು ಹಣವನ್ನೂ ಒಂದೇ ಯೋಜನೆಯಡಿ ಇನ್ ವೆಸ್ಟ್ ಮಾಡಬೇಡಿ. ಹೀಗಾಗಿ ವಿವಿಧ ಪೋರ್ಟ್ ಪೋಲಿಯೋಗಳಲ್ಲಿ ನಿಮ್ಮ ಹಣವನ್ನು ಲಾಭ ಬರುವಂತೆ ತೊಡಗಿಸಿ.
ಹೀಗಾಗಿ ಇಲ್ಲಿ ನೀಡುವ ಸಲಹೆ ಎಂದರೆ, ನೀವು ನಿಮ್ಮ ಹೂಡಿಕೆಯನ್ನು ಬೇರೆ ಬೇರೆ ಅಸೆಟ್ ಕ್ಲಾಸ್ ಗಳಲ್ಲಿ ತೊಡಗಿಸಿಕೊಳ್ಳಿ. SIP ಮಾಧ್ಯಮದಿಂದ ಹೂಡಿಕೆ ಮಾಡುವುದರಿಂದ, ನಿಮ್ಮ ಹೂಡಿಕೆಯ ದೃಷ್ಟಿಕೋನದಲ್ಲಿ ಚುರುಕಾದ ಶಿಸ್ತನ್ನು ತರುತ್ತದೆ. ಹಳೆಯ ಉತ್ತಮ ಹೂಡಿಕೆದಾರರು ಹೇಳುವುದೆಂದರೆ, ನೀವು ದಿನೇದಿನೇ ನಡೆಯುವ ಆರ್ಥಿಕ ಗತಿ ವಿಧನಾಗಳನ್ನು ಒಂದು ಸರಳ ಸೂತ್ರದಿಂದ (ಆದಾಯ + ಉಳಿತಾಯ ಖರ್ಚು) ಮುನ್ನಡೆಸಬೇಕು.
ನೀವು ಪ್ರತಿ ತಿಂಗಳೂ 30 ಸಾವಿರ ರೂ. ಗಳಿಸುತ್ತೀರಿ ಎಂದಿಟ್ಟುಕೊಳ್ಳಿ. ನೀವು ಒಂದು ನಿಶ್ಚಿತ ಬಜೆಟ್ ಒಳಗೆ ನಿಮ್ಮ ಖರ್ಚನ್ನು ನಿಯಂತ್ರಿಸಲು ಆಗದಿದ್ದರೆ, ತಿಂಗಳ ಕೊನೆಯಲ್ಲಿ ಉಳಿತಾಯಕ್ಕೆಂದು ನಯಾ ಪೈಸೆಯೂ ಇರದೆ, ಹೆಚ್ಚಿನ ಖರ್ಚಿಗಾಗಿ ಸಾಲ ಮಾಡಬೇಕಾದೀತು. ಆದರೆ ನೀವು SIP ಮೂಲಕ ಹೂಡಿಕೆ ಮಾಡುವುದಾದರೆ, ನೀವು ಒಂದು ಶಿಸ್ತುಬದ್ಧ ಹೂಡಿಕೆಯ ವ್ಯವಸ್ಥೆಯನ್ನು ಪರಿಪಾಲಿಸಲು ಬದ್ಧರಾಗುತ್ತೀರಿ. ನಿಮ್ಮ ಖರ್ಚು ವೆಚ್ಚದ ಸರಿಯಾದ ವಿವರಗಳು ನಿಮಗೆ ಗೊತ್ತಿದ್ದಲ್ಲಿ, ಬಜೆಟ್ ಗೆ ತಕ್ಕಂತೆ ಖರ್ಚು ಮಾಡುವ ಅಭ್ಯಾಸ ನಿಮ್ಮದಾಗುತ್ತದೆ. ಅದರ ಪ್ರಕಾರ ಮೊದಲು ಉಳಿತಾಯ ಮಾಡಿ, ನಂತರ ಖರ್ಚು ಮಾಡುತ್ತೀರಿ.
ನೀವು ನಿಮ್ಮ ಆರ್ಥಿಕ ಗತಿವಿಧಾನಗಳನ್ನು ಇದರ ಇತಿಮಿತಿಗೆ ಬರುವಂತೆ ಕಂಟ್ರೋಲ್ ಮಾಡಿ. ಅಂದ್ರೆ ಮೊದಲು ಉಳಿತಾಯ…. ನಂತರ ಖರ್ಚು! ಆಗ ನಿಮಗೆ ಯಾವುದೇ ಆರ್ಥಿಕ ತೊಂದರೆ ಆಗುವುದಿಲ್ಲ. ಏಕೆಂದರೆ ನೀವು ಒಂದು ಶಿಸ್ತುಬದ್ಧ ಹೂಡಿಕೆ ದೃಷ್ಟಿಕೋನವನ್ನು ಪಾಲಿಸುತ್ತಿದ್ದೀರಿ. ನಿಮ್ಮ ಹೂಡಿಕೆಯ ದೃಷ್ಟಿಕೋನದಲ್ಲಿ ಕಂಟಿನ್ಯೂಯಿಟಿ ಇರಿಸಿಕೊಳ್ಳುವುದರಿಂದ, ನಿಮಗೆ ನಿಮ್ಮ ಆರ್ಥಿಕ ಉದ್ದೇಶ ಮತ್ತು ಗುರಿ ತಲುಪಲು ಸಹಾಯವಾಗುತ್ತದೆ.
SIP ಏಕೆ ಬೇಕು?
ಇದೆಲ್ಲ ಗಣಿತದ ಸೂತ್ರದಡಿ ಬರುತ್ತದೆ. ಚಕ್ರಬಡ್ಡಿಯ ಶಕ್ತಿ ನಮಗೆ ಗಣಿತದಿಂದ ದೊರಕಿರುವ ಸರ್ಮೋತ್ತಮ ಕೊಡುಗೆ ಆಗಿದೆ. ಸಮಯ ಅನ್ನೋದು ಒಬ್ಬ ಹೂಡಿಕೆದಾರರ ಬಳಿ ಲಭ್ಯವಿರುವ ಎಲ್ಲಕ್ಕೂ ದೊಡ್ಡ ಸಂಪತ್ತು. ಇದನ್ನು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುವುದು ಜಾಣತನ ಎನಿಸುತ್ತದೆ. ಉದಾ: 5 ಸಾವಿರದ ಹೂಡಿಕೆ ಪ್ರತಿ ತಿಂಗಳೂ ಸತತ 10 ವರ್ಷಗಳಿಗೆ 12% ರಿಟರರ್ನ್ಸ್ ನಂತೆ ಮಾಡಿಕೊಂಡರೆ, 11.50 ಲಕ್ಷ ರೂ.ಗಳ ದೊಡ್ಡ ಮೊತ್ತ ನಿಮ್ಮ ಕೈ ಸೇರುತ್ತದೆ!
ಅತಿ ಕಡಿಮೆ ಅವಧಿಯಲ್ಲಿ ಅತ್ಯಧಿಕ ರಿಟರ್ನ್ಸ್ ಬರಲಿ, ಎಂಬ ದುರಾಸೆ ಬೇಡ! ಸ್ಮಾರ್ಟ್ ಹೂಡಿಕೆ ಅಂದ್ರೆ ಕನಿಷ್ಠ ಅಪಾಯ ಹಾಗೂ ಲಾಂಗ್ ಟರ್ಮ್ ಗಾಗಿ ಮಾಡಲಾಗುವ ಹೂಡಿಕೆ, ಎಲ್ಲಕ್ಕಿಂತ ಉತ್ತಮ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ರಿಸ್ಕ್ ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಎಲ್ಲಾ ಹೂಡಿಕೆಗಳಲ್ಲೂ ಸ್ವಲ್ಪ ಮಟ್ಟದ ರಿಸ್ಕ್ ಇದ್ದೇ ಇರುತ್ತದೆ. ಇದು ಹೂಡಿಕೆಯ ಒಂದು ಅನಿವಾರ್ಯ ಭಾಗ. ಯಾರು ಎಷ್ಟು ರಿಸ್ಕ್ ತೆಗೆದುಕೊಳ್ಳಲು ಸಿದ್ಧರೋ, ಈ ಮೂಲಕ ತಿಳಿಯುತ್ತದೆ. ನಿಮ್ಮ ಆರ್ಥಿಕ ಗುರಿ ನಿರ್ಧರಿಸುವಾಗ, ರಿಸ್ಕ್ ಫ್ಯಾಕ್ಟರ್ಸ್ ಮರೆಯದಿರಿ. ನೀವು ಸೈರಿಸಿಕೊಳ್ಳಬಹುದಾದಷ್ಟು ಆರ್ಥಿಕ ನಷ್ಟದ ಬಗ್ಗೆಯೂ ಇಲ್ಲಿ ಯೋಚಿಸಬೇಕು. ಕೆಲವು ಸಾವಿರದ ಹಾನಿ ಓಕೆ, ಆದರೆ ಲಕ್ಷಗಳಲ್ಲಲ್ಲ! ಮಾರುಕಟ್ಟೆಯ ಏರುಪೇರನ್ನು ಸಹಿಸುವುದೂ ಅಷ್ಟೇ ಮುಖ್ಯ. ಇಂಥ ರಿಸ್ಕ್ ಬೇಡವೇ ಬೇಡ ಎನಿಸಿದರೆ, ಡಿಬೆಂಚರ್ ಬಾಂಡ್ ಗಳಲ್ಲಿ ಹೂಡಿಕೆಗೆ ತೊಡಗಿರಿ.
ಗುಂಪುಗಳ ಗದ್ದಲ ಬೇಡ
“ಕ್ರಿಪ್ಟೋಕರೆನ್ಸಿ ಬಹಳ ಒಳ್ಳೆಯದು. ನನ್ನ ಒಬ್ಬ ಫ್ರೆಂಡ್ ಅದರಿಂದ ಬಹಳ ದುಡ್ಡು ಗಳಿಸಿದ್ದಾರೆ,” ಇತ್ಯಾದಿಗಳ ಸಲಹೆಗೆ ಮರುಳಾಗಬೇಡಿ. ಬೆಂಜಮಿನ್ ಗ್ರಾಹಂ ತನ್ನ `ದಿ ಇಂಟೆಲಿಜೆಂಟ್ ಇನ್ವೆಸ್ಟರ್’ ಕೃತಿಯಲ್ಲಿ ಹೇಳಿರುವಂತೆ, `ಎಷ್ಟೋ ಸಲ ಅತಿ ಬುದ್ಧಿವಂತ ಹೂಡಿಕೆದಾರರು ಸಹ ಷೇರು ಮಾರುಕಟ್ಟೆ ಎಂಬ ಗುಂಪಿನ ಗದ್ದಲದಲ್ಲಿ ಕಳೆದುಹೋಗದಿರಲು, ಏಮಾರದಿರಲು ಸಾಕಷ್ಟು ಸಹನೆಯಿಂದ ಕೆಲಸ ಮಾಡಬೇಕಾಗುತ್ತದೆ,’ ಎಂಬುದರ ಕಡೆ ಸದಾ ನಿಮ್ಮ ಗಮನವಿರಲಿ.
ಆರ್ಥಿಕ ಹೂಡಿಕೆಗಳಲ್ಲಿ ತೊಡಗುವಾಗ, ಉಳಿದವರು ಈಗಾಗಲೇ ತೊಡಗಿಸಿಕೊಂಡಿರುವ ಷೇರು ಮಾರುಕಟ್ಟೆ ಮೇಲೆ ಹೂಡುವುದು ಸುಲಭ ಎನಿಸುತ್ತದೆ, ಆದರೆ ಸದಾಕಾಲ ಇದು ನಿಮಗೆ ಸರಿ ದಾರಿ ಎನಿಸದು. ಆರ್ಥಿಕ ಗುರಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಬಹಳ ಬದಲಾಗುತ್ತಾ ಇರುತ್ತವೆ. ಅದು ನಿಮ್ಮ ರಿಸ್ಕ್ ಟಾಲರೆನ್ಸ್, ಹಣದ ಕುರಿತು ನಿಮ್ಮ ವಿಚಾರ, ನಿಮ್ಮ ಪರಿವಾರದ ಅಗತ್ಯಗಳನ್ನೂ ಅವಲಂಬಿಸಿವೆ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ, ಅವರ ಆಲೋಚನಾ ಧಾಟಿ ಬೇರೆಯೇ ಆಗಿರುತ್ತದೆ. ಎಲ್ಲರ ದೃಷ್ಟಿಕೋನ ಒಂದೇ ಆಗಿರಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಬಯಸುವಂಥ, ಹಿಂಬಾಲಿಸುವಂಥ ಹಾಟ್ ಟಿಪ್ಸ್ ಅನುಸರಿಸಿ, ಅದರಿಂದ ಗರಿಷ್ಠ ಲಾಭ ಪಡೆಯಿರಿ.
`ತಾಳಿದವನು ಬಾಳಿಯಾನು’ ಎಂಬಂತೆ ಆರ್ಥಿಕ ಪ್ರಗತಿಗಾಗಿ ಷೇರು ಮಾರುಕಟ್ಟೆ ಅನುಸರಿಸುವವರು ಹೆಚ್ಚಿನ ಸಹನೆಯಿಂದ, ಸ್ಮಾರ್ಟ್ ಆಗಿ ಕಾರ್ಯ ಸಾಧಿಸಬೇಕು. ಬಹುತೇಕ ಹೂಡಿಕೆದಾರರು ಆ ಕ್ಷಣಕ್ಕೆ ಲಾಭ ಬಂದರೆ ಸಾಕು ಎಂದು ಹಾತೊರೆಯುತ್ತಾರೆ. ಆದರೆ ಈ ತರಹದ ಅವಸರದಲ್ಲಿ, ಮಹತ್ವಪೂರ್ಣ ಆರ್ಥಿಕ ಹಾನಿ ತಪ್ಪದು. ಇದರ ಬದಲು ಹೂಡಿಕೆದಾರರು ದೀರ್ಘಾವಧಿ ನಂತರ ತಮಗೆ ಲಾಭ ಬರಲಿ ಎಂದು ಕಾಯುವುದೇ ಸರಿ. ಏಕೆಂದರೆ ಕಾದಷ್ಟೂ ನಿಮಗೇ ಲಾಭ ಜಾಸ್ತಿ!
ಹೂಡಿಕೆಯನ್ನು ನಿಯಮಿತವಾಗಿ ಗಮನಿಸಿ
ಹೂಡಿಕೆಗಳಲ್ಲಿ ಬಹಳಷ್ಟು ಅಧಿಕ ಪೋಷಣೆಗಳು ಶಾಮೀಲಾಗಿರುತ್ತವೆ. ಈ ಕಾರಣದಿಂದಲೇ ನೀವು ನಿಮ್ಮ ಲಾಭಾಂಶಗಳ ಕಡೆ ಸದಾ ಒಂದು ಕಣ್ಣಿಟ್ಟಿರಬೇಕು. ಉಪಲಬ್ಧತೆಯನ್ನು ಟ್ರ್ಯಾಕ್ ಮಾಡುವುದು ಹಾಗೂ ಅದರ ವಿಶ್ಲೇಷಣೆ ಮಾಡುವುದಕ್ಕಾಗಿ ನಿಮ್ಮ ಬಳಿ ಸ್ಪ್ರೆಡ್ ಶೀಟ್ಸ್ ಮಾಡಿಕೊಳ್ಳುವುದಕ್ಕಾಗಿ ಫ್ರೀ ಲಭ್ಯವಿರುವ ಟೂಲ್ ಇದೆ ತಾನೇ ಎಂದು ನಿಮ್ಮ ಸಿಸ್ಟಮ್ ಗಮನಿಸಿಕೊಳ್ಳಿ. ಇಲ್ಲಿ ನಿಮ್ಮ ಎಲ್ಲಾ ಹೂಡಿಕೆಗಳ ವಿವರಗಳೂ ನಮೂದಿಸಲ್ಪಡುತ್ತವೆ. ಮಾಸಿಕ ಖರ್ಚಿನ ರಿಪೋರ್ಟ್ ಮಾಡಿಕೊಳ್ಳುವುದರಿಂದ, ಉಳಿತಾಯದ ರಣನೀತಿ ಹೆಚ್ಚಿಸುವ ಹಾಗೂ ಅದನ್ನು ಇನ್ನಷ್ಟು ಸುಧಾರಿಸುವುದಕ್ಕೆ ಪ್ರಯತ್ನಗಳನ್ನೂ ಮಾಡಬಹುದು. ಇದು ನಿಮ್ಮ ಉತ್ತಮ ಆರ್ಥಿಕ ಭವಿಷ್ಯಕ್ಕಾಗಿ, ಒಂದು ಸಶಕ್ತ ಸ್ಮಾರ್ಟ್ ಹೂಡಿಕೆಯಾಗಿ ನೆರವಾಗುತ್ತದೆ.
– ಡಾ. ಸುಧೀರ್ ಕೆ.
ಸ್ಮಾರ್ಟ್ ಹೂಡಿಕೆ ಎಂದರೇನು?
ಇದು ನಿಮ್ಮ ಉತ್ತಮ ಭವಿಷ್ಯತ್ತಿಗಾಗಿ ನೀವು ಹೂಡುವ ಹಣವಾಗಿದ್ದು, ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ. ಸದಾ ಗದ್ದಲ ಗೌಜು ತುಂಬಿರುವ ಷೇರು ಮಾರುಕಟ್ಟೆಯ ನಡುವೆ ಹೋಗಿ, ಎಲ್ಲಿ ಹೂಡಿಕೆ ಮಾಡಿ, ಹೇಗೆ ಲಾಭ ಪಡೆಯುವುದೆಂದು ಹಿಂಜರಿಯುವವರಿಗೆ ಇದು ಬಲು ಸಹಾಯಕ. ಅದು ಈ ರೀತಿ ನಿಮಗೆ ಉಪಕಾರಿ.
ನಿಮ್ಮ ಆದಾಯ ಹೆಚ್ಚಿಸಲು ಪೂರಕ.
ಆರ್ಥಿಕ ಸುರಕ್ಷತೆ ಒದಗಿಸಬಲ್ಲವು.
ಸುರಕ್ಷಿತವಾಗಿ ಹಣ ಗಳಿಸಲು ಸಹಾಯಕ.
ನೀವು ಹಣ ತೊಡಗಿಸಿಕೊಳ್ಳುವ ಮುನ್ನ ಇವುಗಳತ್ತ ಒಮ್ಮೆ ಕಣ್ಣುಹಾಯಿಸಿ :
ನೀವು ವಿವಾಹಿತರೋ/ಅವಿವಾಹಿತರೋ? ನಿಮ್ಮ ಸಂಗಾತಿ ಗಳಿಸುತ್ತಾರೆಯೇ? ಎಷ್ಟು?
ನಿಮಗೆ ಮಕ್ಕಳಿದ್ದಾರೆಯೇ? ಇಲ್ಲ ಎಂದರೆ ಮುಂದೆ ಮಕ್ಕಳನ್ನು ಬಯಸುತ್ತೀರಾ? ಇವರಿಗೆ ಉನ್ನತ ಶಿಕ್ಷಣಕ್ಕಾಗಿ, ಮುಂಜಿ, ಮದುವೆಯ ಶುಭ ಸಮಾರಂಭಗಳಿಗೆ ಯಾವಾಗ ಹಣ ಬೇಕಾದೀತು?
ನಿಮಗೆ ಪಿತ್ರಾರ್ಜಿತ ಆಸ್ತಿ ಬರಬೇಕಿದೆಯೇ? ನೀವು ತಾಯಿತಂದೆಯರನ್ನು ನಿಮ್ಮ ಬಳಿ ಇಟ್ಟುಕೊಳ್ಳುವಿರಾ ಅಥವಾ ವೃದ್ಧಾಶ್ರಮ ಸೇರಿಸಲು ಇದರಿಂದ ಹಣ ಬೇಕೇ?
ನಿಮ್ಮ ನೌಕರಿ ಸುರಕ್ಷಿತವೇ? ನೀವು ಸ್ವಾವಲಂಬಿಗಳಾಗಿ ಕಂಪನಿ ನಡೆಸುತ್ತಿದ್ದೀರಾ? ಅದು ನಿಮ್ಮ ಎದುರಾಳಿಗಳನ್ನು ಗೆದ್ದು ಮುನ್ನುಗ್ಗುತ್ತಿದೆಯೇ? ಕಂಪನಿ ಎಂದೂ ನಷ್ಟಕ್ಕೆ ಈಡಾಗಿಲ್ಲ ತಾನೇ?
ನಿಮ್ಮ ಜೀವನ ನಡೆಸಲು ಈ ಸಂಪಾದನೆ ಒಂದೇ ಮಾರ್ಗವೇ? ಈ ನಗದು ಆಧರಿಸಿ ಬದುಕಿದ್ದೀರಾ? ಹೌದು ಎಂದಾದರೆ ನಿಮ್ಮ ಬಳಿ ಸ್ಟಾಕ್‌ಗೆ ಬದಲಾಗಿ ಬಾಂಡ್ ನಲ್ಲಿ ಹೆಚ್ಚು ಹಣ ಇರಬೇಕಾದುದು ಅನಿವಾರ್ಯ.
ನೀವು ಈ ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ಕಳೆದುಕೊಂಡರೆ, ತಡೆದುಕೊಳ್ಳಬಲ್ಲಿರಿ?