ಇತ್ತೀಚೆಗೆ ಕೆಲಸದ ನಿಮಿತ್ತ ಮನೆಯಿಂದ ದೂರವಿರಬೇಕಾದ ಕಾರಣದಿಂದ ಗಂಡಸು ಅಥವಾ ಹೆಂಗಸಾಗಿರಲಿ, ಯಾರ ಬಳಿಯೂ ಕಿಚನ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಾ ತಮ್ಮ ಅಡುಗೆ ತಯಾರಿಸಲು ಪುರಸತ್ತು ಇರುವುದಿಲ್ಲ. ಜೊತೆಗೆ ಈಗಂತೂ ಕುಟುಂಬದ ಎಲ್ಲ ಸದಸ್ಯರೂ ಹೆಚ್ಚು ಹೆಲ್ತ್ ಕಾನ್ಶಿಯಸ್‌ ಆಗುತ್ತಿದ್ದಾರೆ. ಹೀಗಾಗಿ ಈಗಿನ ಅತಿ ಅಗತ್ಯವೆಂದರೆ ಟೈಂ ಸೇವ್‌ ಮಾಡುತ್ತಾ, ಹೆಲ್ದಿ ರೆಸಿಪಿ ತಯಾರಿಸುವಿಕೆ. ಇದಕ್ಕಾಗಿ ಕೆಳಗಿನ ಕಿಚನ್‌ ಕುಕ್‌ವೇರ್‌ ಐಟಮ್ಸ್ ರೇಂಜ್‌ ಗಮನಿಸಿ :

ಇಂಡಕ್ಷನ್

ನೋಡಲು ಅತ್ಯಾಕರ್ಷಕ ಆಗಿರುವುದರ ಜೊತೆ ಜೊತೆಗೆ ಇದರಲ್ಲಿ ಅಡುಗೆ ಮಾಡುವುದು ಬಲು ಸುಲಭ. ಕಿಚನ್‌ನಲ್ಲಿ ಅಡುಗೆ ಮಾಡುವಾಗ ಎದುರಾಗುವ ಸಮಸ್ಯೆಗಳು ಇದನ್ನು ಬಳಸುವಾಗ ಖಂಡಿತಾ ಇರುವುದಿಲ್ಲ. ಇದನ್ನು ಕಿಚನ್‌ ಅಲ್ಲದೆ  ಬೇರೆ ಎಲ್ಲಿ ಬೇಕಾದರೂ ಇರಿಸಿಕೊಂಡು ಅಡುಗೆ ಮಾಡಿಕೊಳ್ಳಬಹುದು. ಇದರ ಮೇಲೆ ಇರಿಸಲಾದ ಪಾತ್ರೆಗಳಿಂದ ಇಂಡಕ್ಷನ್‌ ಕಾರಣ ಬೇಗ ಬೇಗ ಒಳಗಿನ ಆಹಾರ ಸಾಮಗ್ರಿಗಳನ್ನು ಬೇಯಿಸುತ್ತದೆ. ಪಾತ್ರೆ ಮುಟ್ಟಿದರೆ ಬಿಸಿ ಆಗುವುದಿಲ್ಲ, ಅದನ್ನು ಹಿಡಿದುಕೊಂಡೇ ಅಡುಗೆ ಮಾಡಬಹುದು. ಇದರಲ್ಲಿ ನೇರ ಅನ್ನ, ದಾಲ್‌, ಪಲ್ಯ, ಗ್ರೇವಿ ಏನು ಬೇಕಾದರೂ ತಯಾರಿಸಬಹುದು. ಕೆಲವೇ ನಿಮಿಷಗಳಲ್ಲಿ ಅಡುಗೆ ರೆಡಿ! ಅತಿಥಿಗಳು ಯಾವಾಗ ಬೇಕಾದರೂ ಬರಲಿ, ನೋ ಟೆನ್ಶನ್‌!

ಸ್ಯಾಂಡ್‌ವಿಚ್‌ ಟೋಸ್ಟರ್‌

ಗ್ಯಾಸ್‌ಗೆ ಬದಲಾಗಿ ಟೋಸ್ಟರ್‌ನಲ್ಲಿ ಸ್ಯಾಂಡ್‌ವಿಚ್‌ ತಯಾರಿಸುವುದು ಸುಲಭ. ಅಷ್ಟು ಮಾತ್ರವಲ್ಲ, ರುಚಿಯ ದೃಷ್ಟಿಯಿಂದಲೂ ಎಷ್ಟೋ ಮೇಲು! ಏಕೆಂದರೆ ಇದರಲ್ಲಿ ಹೆಚ್ಚು ಕ್ರಿಸ್ಪಿನೆಸ್‌ ಮೂಡುತ್ತೆ ಹಾಗೂ ಮತ್ತೆ ಮತ್ತೆ ತಿರುವಿ ಹಾಕಬೇಕಾದ ಪ್ರವೇಯವಿಲ್ಲ. ಅಜ್ಜಿ-ತಾತಾ, ಅಪ್ಪ-ಅಮ್ಮ, ಮಕ್ಕಳೆಲ್ಲರೂ ಇದನ್ನು ತೃಪ್ತಿಯಿಂದ ಸವಿಯುತ್ತಾರೆ.

ಬ್ಲ್ಯಾಕ್‌ ಅಲ್ಯುಮಿನಿಯಂ ತವಾ

ದೋಸೆ, ಪ್ಯಾನ್‌ಕೇಕ್‌, ಚಪಾತಿ ಏನೇ ತಯಾರಿಸುವುದಿರಲಿ, ನಾರ್ಮಲ್ ತವಾ ಬಳಸಿದರೆ ಹೆಚ್ಚು ಸಮಯ ಬೇಕು. ಜೊತೆಗೆ ಅದು ಬೇಗ ಸೀಯುವ ರಿಸ್ಕ್ ಇದ್ದೇ ಇರುತ್ತದೆ. ಹೀಗಾಗಿ ನೀವು ಬ್ಲ್ಯಾಕ್‌ ಅಲ್ಯೂಮಿನಿಯಂ ತವಾದಲ್ಲಿ ಇದನ್ನು ತಯಾರಿಸಿದರೆ ಸೊಗಸಾಗಿರುತ್ತದೆ. ಇದಕ್ಕಾಗಿ ನೀವು ಎಣ್ಣೆ ಬಳಸುವ ಅಗತ್ಯ ಇಲ್ಲ. ಅಂದ್ರೆ ಪರ್ಫೆಕ್ಟ್ ಹೆಲ್ದಿ!

ಬೇಬಿ ಕಡಾಹಿ ಇಂಡಕ್ಷನ್

ಇದನ್ನು ನೀವು ಬಹು ವಿಧದಲ್ಲಿ ಬಳಸಿಕೊಳ್ಳಬಹುದು. ಇದು ಪಲ್ಯ, ಗ್ರೇವಿ ತಯಾರಿಸಲು ಮಾತ್ರವಲ್ಲದೆ, ಒಗ್ಗರಣೆ ಕೊಡಲು, ಮ್ಯಾಗಿ, ಉಪ್ಪಿಟ್ಟು, ಡೀಪ್‌ ಫ್ರೈ ಮಾಡಲಿಕ್ಕೂ ಬಳಸಬಹುದು. ಇದು ಭಾರವಿಲ್ಲದೆ ಹಗುರವಾದ ಕಾರಣ ಇದನ್ನು ಹ್ಯಾಂಡಲ್ ಮಾಡುವುದೂ ಸುಲಭ. ಸಣ್ಣ ಗಾತ್ರದ ಕಾರಣ ಕ್ಯಾರಿ ಮಾಡಲಿಕ್ಕೂ ಅನುಕೂಲಕರ. ಹೀಗಾಗಿ ಈ ಎಲ್ಲಾ ಕುಕ್‌ವೇರ್‌ ಐಟಮ್ ಗಳನ್ನು ಬಳಸುತ್ತಾ ಕಡಿಮೆ ಸಮಯದಲ್ಲಿ, ಆರಾಮವಾಗಿ ಕುಕಿಂಗ್‌ ಮಾಡಬಹುದು. ಇದರಲ್ಲಿ ತಯಾರಿಸಿದ ಅಡುಗೆ ಆರೋಗ್ಯಕ್ಕೆ ಹಿತಕಾರಿ.

- ಬಿ. ಪಾರ್ವತಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ