ಹಬ್ಬದ ದಿನಗಳಲ್ಲಿ ಮನೆಯನ್ನು ಪರಿಪೂರ್ಣವಾಗಿ ಅಲಂಕರಿಸಲು, ಸುವಾಸನಾಮಯಗೊಳಿಸಲು ನಾವು ಪರಿಪೂರ್ಣ ಪ್ರಯತ್ನ ಮಾಡುತ್ತೇವೆ. ಹೀಗೂ ಮನೆಯನ್ನು ಸುವಾಸನಾಮಯಗೊಳಿಸಿ!

ಮನೆಗಾಗಿ ಫ್ರ್ಯಾಗ್ರೆನ್ಸ್ ಲ್ಯಾವೆಂಡರ್‌, ಲೆಮನ್‌, ಕ್ಲೋ‌ವ್ ಮುಂತಾದವನ್ನು ತೆಗೆದುಕೊಳ್ಳುವುದು ಸೂಕ್ತ. ಅದರಿಂದ ದುರ್ಗಂಧ ಸುಲಭವಾಗಿ ನಿವಾರಿಸುತ್ತದೆ.

ಸುಗಂಧಯುಕ್ತ ಅಗರಬತ್ತಿಗಳು, ಪಾಟ್‌ಪೂರಿ, ಸ್ಪ್ರೇ ಮುಂತಾದವುಗಳನ್ನು ಕೋಣೆಯಲ್ಲಿಯೇ ಬಳಸಿ. ಇವನ್ನು ಅಡುಗೆಮನೆಯಲ್ಲಿ ಬಳಸಬೇಡಿ.

ಮನೆಯ ಕೆಟಲ್‌ನಲ್ಲಿ ಕೆಲವು ಮಸಾಲೆಗಳು ಅಂದರೆ ಲವಂಗ, ಏಲಕ್ಕಿ ಅಥವಾ ದಾಲ್ಚಿನ್ನಿಯನ್ನು ಹರಡಿ. ಇದರಿಂದ ಮನೆಯಲ್ಲಿ ಬಹಳ ಹೊತ್ತಿನ ತನಕ ಸುವಾಸನೆ ಪಸರಿಸಿರುತ್ತದೆ.

ಎಸೆನ್ಶಿಯಲ್ ಆಯಿಲ್‌ನ್ನು 1 ಕಪ್‌ ನೀರಿನಲ್ಲಿ ಮಿಶ್ರಣಗೊಳಿಸಿ, ಏರ್‌ಫ್ರೆಶ್‌ನರ್‌ ರೀತಿಯಲ್ಲಿ  ಉಪಯೋಗಿಸಬಹುದು.

ಮೂಡ್‌ಗೆ ತಕ್ಕಂತೆ

ಸಿಟ್ರಸ್‌ : ರಿಫ್ರೆಶ್‌ ಮೂಡ್‌ಗಾಗಿ ಸಿಟ್ರಸ್‌ ಫ್ರ್ಯಾಗ್ರೆನ್ಸ್ ಆಯ್ಕೆ ಮಾಡಿಕೊಳ್ಳಿ. ಫ್ರೂಟ್‌ ಫ್ರ್ಯಾಗ್ರೆನ್ಸ್ ಸ್ಛೂರ್ತಿ ಹೆಚ್ಚಿಸುವುದರ ಜೊತೆ ಜೊತೆಗೆ, ತಾಜಾತನದ ಅನುಭವವನ್ನು ನೀಡುತ್ತದೆ.

ಲ್ಯಾವೆಂಡರ್& ಕುಕುಂಬರ್‌ : ರಿಲ್ಯಾಕ್ಸೇಶನ್‌ಗೆ ಲ್ಯಾವೆಂಡರ್‌ ಮತ್ತು ಕುಕುಂಬರ್‌ನ ಸುವಾಸನೆ ಬಹಳ ಒಳ್ಳೆಯದು. ಲ್ಯಾವೆಂಡರ್‌ನ ಸುವಾಸನೆ ಒತ್ತಡವನ್ನು ನಿವಾರಿಸಿ ತನುಮನವನ್ನು ಶಾಂತಗೊಳಿಸುತ್ತದೆ. ಲ್ಯಾವೆಂಡರ್‌ನಲ್ಲಿ ಆಯಿಲ್‌, ಸ್ಪ್ರೇ ಮತ್ತು ಹಲವು ಬಗೆಯ ಕ್ಯಾಂಡಲ್ಸ್ ಕೂಡ ಲಭ್ಯ.

ಫ್ಲೇರ್‌ : ಈ ಸುವಾಸನೆ ಮೂಡ್‌ನ್ನು ರೊಮ್ಯಾಂಟಿಕ್‌ಗೊಳಿಸುತ್ತದೆ. ಇದನ್ನು ಸಾಮಾನ್ಯವಾಗಿ ಬೆಡ್‌ರೂಮಿಗೆ ಆಯ್ಕೆ ಮಾಡಲಾಗುತ್ತದೆ. ಹಬ್ಬಗಳ ಸಂದರ್ಭದಲ್ಲೂ ಈ ಸುವಾಸನೆ ವಾತಾವರಣವನ್ನು ಮೋಹಕಗೊಳಿಸುತ್ತದೆ.

- ಶೀಲಾ ಜೈನ್‌

ಕ್ಯಾಂಡಲ್ ವಾರ್ಮರ್ಸ್‌ : ಕ್ಯಾಂಡಲ್ ವಾರ್ಮರ್‌ನಿಂದ ಮೇಣ ಪರಿಪೂರ್ಣ ಬಿಸಿಯಾಗುತ್ತದೆ ಹಾಗೂ ಅದರಿಂದ ಮಂದ ಸುವಾಸನೆ ಹೊರಹೊಮ್ಮತೊಡಗುತ್ತದೆ. ಅದರಿಂದ ಇಡೀ ಮನೆ ಪರಿಮಳ ಸೂಸುತ್ತದೆ. ಮೇಣದ ಬತ್ತಿಯನ್ನು ಉರಿಸದೆಯೇ ಇಡೀ ಮನೆ ಸುಗಂಧಮಯವಾಗುತ್ತದೆ.

ಮನೆಯಲ್ಲೇ ತಯಾರಿಸಿ ಪಾಟ್‌ಪೂರಿ : ಮನೆಯಲ್ಲಿಯೇ ಪಾಟ್‌ಪೂರಿ ತಯಾರಿಸಿಕೊಳ್ಳಲು ನಿಮ್ಮ ಇಷ್ಟದ ಯಾವುದಾದರೂ ಹೂವಿನ ಪಕಳೆಗಳನ್ನು ನೀರಲ್ಲಿ ಹಾಕಿ ಕುದಿಸಿಕೊಳ್ಳಿ. ಹೀಗೆ ಮಾಡುವುದರಿಂದ ಇಡೀ ಮನೆಯಲ್ಲಿ ಪರಿಮಳ ಸೂಸುತ್ತದೆ. ಹೂಗಳ ಹೊರತಾಗಿ ಕಿತ್ತಳೆ ಸಿಪ್ಪೆ, ದಾಲ್ಚಿನ್ನಿಯ ತುಂಡುಗಳು, ಲವಂಗ ಇವನ್ನು ಬಳಸಿ ಮನೆಯನ್ನು ಸುವಾಸನೆಯಿಂದ ಭರ್ತಿ ಮಾಡಬಹುದು.

ರೀಡ್‌ ಡಿಪ್ಯಸರ್‌ : ಈ ಸುವಾಸನೆ ಕೋಣೆಯ ವಾತಾವರಣದಲ್ಲಿ ಹೇಗೆ ಬೆರೆಯುತ್ತದೆಂದರೆ, ಕೆಲವು ಗಂಟೆಗಳ ಬಳಿಕ ಮನೆ ಪರಿಮಳ ಯುಕ್ತವಾಗಿರುತ್ತದೆ. ಅದನ್ನು ಮೇಲಿಂದ ಮೇಲೆ ಉರಿಸುವ ಅಗತ್ಯವಿಲ್ಲ. ಪರಿಮಳ ಕಡಿಮೆಯಾದರೂ ಹಲವು ಗಂಟೆಗಳ ತನಕ ಅದರ ಪರಿಣಾಮ ಗೊತ್ತಾಗುತ್ತದೆ. ಅದರಲ್ಲಿ ಸಿಂಥೆಟಿಕ್‌ ಮತ್ತು ನ್ಯಾಚುರಲ್ ಎರಡೂ ಬಗೆಯ ಆಯಿಲ್‌ನ್ನು ಬಳಸಬಹುದು. ರೀಡ್‌ ಡಿಪ್ಯಸರ್‌ನಲ್ಲಿ ನಿಮಗೆ ಬಾಟಲ್, ಕಂಟೇನರ್‌, ಸೆಂಟೆಡ್‌ ಆಯಿಲ್ ಹಾಗೂ ರೀಡ್ಸ್ ದೊರೆಯುತ್ತದೆ. ಬಾಟಲ್ ಅಥವಾ ಕಂಟೇನರ್‌ನಲ್ಲಿ ಆಯಿಲ್‌ ಭರ್ತಿ ಮಾಡಲಾಗುತ್ತದೆ. ಬಳಿಕ ಅದರಲ್ಲಿ ಒಂದು ರೀಡ್‌ ಸ್ಟಿಕ್‌ ಹಾಕಲಾಗುತ್ತದೆ. ಇಡೀ ಮನೆ ಸುವಾಸನಾಭರಿತಾಗುತ್ತದೆ.

ಆ್ಯರೋಮಾ ಕ್ಯಾಂಡಲ್ : ನಿಮಗೆ ಸುವಾಸನೆ ಇಷ್ಟವಾಗಿದ್ದು, ನಿಮ್ಮ ಕೋಣೆ ಇಡೀ ದಿನ ಸುವಾಸನೆ ಬೀರುತ್ತಿರಬೇಕೆಂದು ಬಯಸುವಿರಾದರೆ, ನೀವು ಆ್ಯರೋಮಾ ಕ್ಯಾಂಡಲ್ ಬಳಸಿ. ಆದರೆ ಅಗ್ಗದ ಮತ್ತು ಕೆಮಿಕಲ್‌ಯುಕ್ತ ಆ್ಯರೋಮಾ ಕ್ಯಾಂಡಲ್‌ಗಳಿಂದ ದೂರ ಇರಿ. ಇದರ ಹೊರತಾಗಿ ಸೋಯಾ ವ್ಯಾಕ್ಸ್ ನಿಂದ ತಯಾರಾದ ಆ್ಯರೋಮಾ ಕ್ಯಾಂಡಲ್ ಖರೀದಿಸಿ. ಈ ಕ್ಯಾಂಡಲ್‌ಗಳು ಹಲವು ಬಗೆಯ ಪರಿಮಳಗಳಲ್ಲಿ ದೊರೆಯುತ್ತದೆ. ಒಂದು ಸ್ಟಿಕ್‌ 6 ಗಂಟೆ ಪರಿಮಳ ಸೂಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ