ಈ ಸಲ ಹೊಸ ವರ್ಷದಲ್ಲಿ ಫ್ಯಾಷನ್ ದೃಷ್ಟಿಯಿಂದ ಯಾವುದೆಲ್ಲ ಇನ್, ಯಾವುದು ಔಟ್ ಎಂದು ವಿವರವಾಗಿ ತಿಳಿಯೋಣವೇ....?
ಹೊಸ ವರ್ಷದ ಆಗಮನದಿಂದ ಜನ ಏನಾದರೂ ಹೊಸತನ್ನು ಮಾಡೋಣ ಎಂದು ಆಶಿಸುತ್ತಾರೆ. ಹೊಸ ವರ್ಷಕ್ಕಾಗಿ ಹೊಸ ಸಂಕಲ್ಪ, ಮನೆಗೆ ಹೊಸ ಗೃಹಾಲಂಕಾರ, ಹೊಸ ಹೊಸ ಮೇಕಪ್, ಹೇರ್ ಸ್ಟೈಲ್, ರೆಸಿಪೀಸ್ ಇತ್ಯಾದಿ. ಆದರೆ ಇವೆಲ್ಲವುಗಳಲ್ಲಿ ಅತಿ ಮುಖ್ಯವಾಗುವುದು ಎಂದರೆ, ನೀವು 2026ರ ಫ್ಯಾಷನ್ ಗಾಗಿ ರೆಡಿ ಆಗುವುದು. ಹೊಸ ವರ್ಷದ ದೃಷ್ಟಿಯಿಂದ ನಿಮ್ಮ ವಾರ್ಡ್ ರೋಬ್ ಅಪ್ ಡೇಟ್ ಆಗಬೇಕಿದೆ.
ಆಗ ಮಾತ್ರವೇ 2026ರ ಸ್ವಾಗತಕ್ಕೆ ಸರಿಯಾದ ದಾರಿ. ಪ್ರತಿ ವರ್ಷ ಮೇಕಪ್ ಹಾಗೂ ಡ್ರೆಸ್ ಗಳ ಬೇರೆ ಬೇರೆ ಟ್ರೆಂಡ್ಸ್ ಜನರಿಗೆ ಬಹಳ ಪ್ರಿಯವೆನಿಸುತ್ತದೆ. ಒಮ್ಮೆ ಮಾನೋಟೋನಸ್ ಲುಕ್ಸ್ ಆದರೆ, ಮತ್ತೊಮ್ಮೆ ಅನಿಮಲ್ ಪ್ರಿಂಟ್ ಹಾಗೂ ಓವರ್ ಸೈಸ್ ಡ್ರೆಸ್ ಫ್ಯಾಷನ್ ನಲ್ಲಿವೆ.
ಸಸ್ಟೇನೆಬಲ್ ಫ್ಯಾಷನ್ : ಪರಿಸರದ ಕುರಿತಾಗಿ ಹೆಚ್ಚುತ್ತಿರುವ ಕಾಳಜಿಯಿಂದಾಗಿ 2026ರಲ್ಲಿ ಸಸ್ಟೇನೆಬಲ್ ಇಕೋಫ್ರೆಂಡ್ಲಿ ಡ್ರೆಸೆಸ್ ನ ಟ್ರೆಂಡ್ ಹೆಚ್ಚಾಗಿರುತ್ತದೆ. ರೀಸೈಕಲ್ಡ್ ಮೆಟೀರಿಯಲ್ ನಿಂದ ತಯಾರಾದ ಔಟ್ ಫಿಟ್ಸ್ ಆರ್ಗ್ಯಾನಿಕ್ ಫ್ಯಾಬ್ರಿಕ್ಸ್ ಅಂದ್ರೆ ಕಾಟನ್, ಬ್ಯಾಂಬೂ, ಲೋಟಸ್ ಫೈಬರ್ ನಿಂದ ರೂಪುಗೊಂಡ ಡ್ರೆಸೆಸ್ ನಿಮ್ಮ ವಾರ್ಡ್ ರೋಬ್ ನಲ್ಲಿ ಅಗತ್ಯವಾಗಿ ಇರಲೇಬೇಕು.
ರಿಚ್ ಟೆಕ್ಸ್ ಚರ್ ನ್ಯೂಟ್ರಲ್ ಟೋನ್ : ವೆಲ್ವೆಟ್, ಸಿಲ್ಕ್ ಹಾಗೂ ಸ್ಯಾಟಿನ್ ನಂಥ ರಿಚ್ ಟೆಕ್ಸ್ ಚರ್ ಜೊತೆ ನ್ಯೂಟ್ರಲ್ ಅರ್ದೀ ಟೋನ್ ನ ಕಾಂಬಿನೇಶನ್ ಫ್ಯಾಷನ್ ನಲ್ಲಿ ಚಿರಕಾಲ ಉಳಿಯಲಿದೆ. ಈ ಲುಕ್ ಪ್ರತಿ ಸಂದರ್ಭಕ್ಕೂ ಕ್ಲಾಸಿ ಎಲಿಗೆಂಟ್ ಆಗಲಿವೆ.
2026ರಲ್ಲಿ ಸ್ಯೂಡೇ ಫ್ಯಾಬ್ರಿಕ್ ನ ಮಾಯಾಜಾಲ : 2026ರ ಫ್ಯಾಷನ್ ಟ್ರೆಂಡ್ಸ್ ನಲ್ಲಿ ಮಿಂಚಲಿರುವ ರಾಲ್ಫ್ ವಾರೇನ್ ನಂಥ ಎಲ್ಲಾ ಪ್ರಸಿದ್ಧ ದೊಡ್ಡ ಫ್ಯಾಷನ್ ಡಿಸೈನರ್ಸ್ ಗಳ ಶೋನಲ್ಲಿ ಸ್ಯೂಡೇ ಫ್ಯಾಬ್ರಿಕ್ ಸಾಕಷ್ಟು ಚಾಲ್ತಿಯಲ್ಲಿರುವುದು ಕಂಡುಬರುತ್ತದೆ. ಇದರಿಂದ ಒಂದಂತೂ ಸ್ಪಷ್ಟ, ಪ್ರಾಡಕ್ಟ್ ಬ್ಯಾಗ್, ಬೂಟ್, ಜ್ಯಾಕೆಟ್, ಓವರ್ ಆಲ್ ಯಾವುದೇ ಇರಲಿ, ಈ ಫ್ಯಾಬ್ರಿಕ್ ಎಲ್ಲೆಡೆ ಮಿಂಚಲಿದೆ. ಫ್ಯಾಷನ್ ಶೋ ಡಿಸೈನರ್ಸ್ ಸಂಗ್ರಹದಲ್ಲಿ ಬೊಹಿಮಿಯಂ ಸ್ಟೈಲ್ ನ ಸೊಫಿಸ್ಟೆಕೇಟೆಡ್ ವರ್ಶನ್ ಸಹ ಅಷ್ಟೇ ಜನಪ್ರಿಯಗೊಳ್ಳಲಿದೆ. ಇದರ ಪ್ರಮುಖ ಆಕರ್ಷಣೆ ಎಂದರೆ ಸ್ಯೂಡೇ ಫ್ರಾಬ್ರಿಕ್.
ಯೆಲೋ ಶೇಡ್ಸ್ ನ ಚಮತ್ಕಾರ : 2026ರಲ್ಲಿ ಹಳದಿ ಬಣ್ಣದ ವಿಭಿನ್ನ ಶೇಡ್ಸ್ ಆದ ಕ್ರೀಮೀ ವೆನಿಲಾ ಯೆಲ್ಲೋ ಹಾಗೂ ಬೋಲ್ಡ್ ಸ್ಯಾಫ್ರನ್ ಯೆಲ್ಲೋ ಟ್ರೆಂಡ್ ನಲ್ಲಿ ಇರುತ್ತವೆ. ಈ ಬಣ್ಣಗಳು ನಿಮ್ಮ ವಾರ್ಡ್ ರೋಬ್ ನಲ್ಲಿ ಹೊಸದಾಗಿ ಮಿಂಚಲಿವೆ.
ಮಿನಿ ಸ್ಕರ್ಟ್ ಗೆ ಬದಲಾಗಿ ಕೊಳ್ಳಲಿರುವಿರಿ ಹಾಟ್ ಪ್ಯಾಂಟ್ಸ್ : ಮಿನಿ ಸ್ಕರ್ಟ್ ನ್ನು ತುಸು ಸೈಡಿಗಿರಿಸಿ, ಈ ಹೊಸ ವರ್ಷದಲ್ಲಿ ಹಾಟ್ ಪ್ಯಾಂಟ್ಸ್, ಕೊಳ್ಳಿರಿ, ಇದುವೇ ಹೊಸ ಫ್ಯಾಷನ್ ಟ್ರೆಂಡ್! ಇದನ್ನು ಹಾಗೇ ಸಿಂಪಲ್ ಆಗಿ ಯಾ ಸ್ಟಾಕಿಂಗ್ಸ್ ಜೊತೆ ಸ್ಟೈಲಾಗಿ ಧರಿಸಬಹುದು. ಈ ವರ್ಷ ಕೇವಲ ಕಾಟನ್ ಮಾತ್ರವಲ್ಲದೆ, ನಿಟೆಡ್, ಸೀಕ್ವೆನ್ಸ್, ಡೆನಿಮ್ ಹಾಗೂ ಲೆದರ್ ಫ್ಯಾಬ್ರಿಕ್ಸ್ ನಲ್ಲಿ ಹಾಟ್ ಪ್ಯಾಂಟ್ಸ್ ನ್ನೂ ಫ್ಲಾಂಟ್ ಮಾಡಬಹುದು. ನಂತರ ಇದನ್ನು ನೀವು ಪಾರ್ಟಿ ಬ್ಲೌಸ್ ಜೊತೆ ಯಾ ಕಾರ್ಡಿಗನ್ ಜೊತೆ ಸ್ಟೈಲಾಗಿ ಧರಿಸಬಹುದು. 2026ರಲ್ಲಿ ಈ ಹಾಟ್ ಪ್ಯಾಂಟ್ಸ್, ಜೆನ್ Z ನವರ ಮೊದಲ ಆಯ್ಕೆ ಆಗಲಿದೆ!





