ನಮ್ಮ ಸನಾತನ ಧರ್ಮದಲ್ಲಿ ಹಬ್ಬಗಳನ್ನು ರೂಢಿಗೆ ತಂದಿರುವುದು ದೇವರುಗಳನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ, ಇಡೀ ಕುಟುಂಬ, ಬಂಧು-ಮಿತ್ರರು ಮತ್ತು ಇಡೀ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ  ಆರ್ಥಿಕ ಸಧೃಢತೆಯನ್ನು ಕಾಪಾಡುವುದೇ ಆಗಿದೆ.

ಒಂದು ಹಬ್ಬದ ಮೂಲಕ,  ಹೂವು, ಹಣ್ಣು, ಆಹಾರಗಳನ್ನು ಬೆಳೆಯುವ ರೈತರಿಗೆ, ಅದನ್ನು ಕೊಂಡು ಮಾರುವ ವ್ಯಾಪಾರಿಗಳಿಗೆ ಆರ್ಥಿಕ ಲಾಭವನ್ನು ತಂದು ಕೊಟ್ಟರೆ, ಇನ್ನು ಹಬ್ಬದ ಸಮಯದಲ್ಲಿ ಊರಿಂದ ಊರಿಗೆ ಹೋಗುವ ಸಲುವಾಗಿ ಸಾರಿಗೆ ವ್ಯವಸ್ಥೆಯವರಿಗೆ, ಬಟ್ಟೆಗಳು, ಉಡುಗೆ ತೊಡುಗೆ, ಚಿನ್ನಾಭರಣದಿಂದ ಹೆಣ್ಣುಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳಿಗೂ ಬೇಡಿಕೆ ಇರುತ್ತದೆ. ಅದೇ ಸಮಯದಲ್ಲಿ ಪೂಜೆಯನ್ನು ಮಾಡಿಸುವ ಪುರೋಹಿತರಿಗೂ ಎಲ್ಲಿಲ್ಲದ ಬೇಡಿಕೆ ಹೀಗೆ ನಮ್ಮ ಹಬ್ಬಗಳು ಜಾತಿಯ ತಾರತಮ್ಯವಿಲ್ಲದೇ ಇಡೀ ಸಮಾಜ ವಿವಿಧ ಸ್ಥರಗಳ ಜನರಿಗೆ ನೆಮ್ಮದಿಯನ್ನು ತಂದು ಕೊಡುತದೆ.

ಇನ್ನು ಗೌರಿ  ಮತ್ತು ಗಣೇಶನ ಹಬ್ಬ ಎಂದರಂತೂ ಉಳಿದೆಲ್ಲಾ ಹಬ್ಬಗಳಿಗಿಂತಲೂ ಬಹುತೇಕ ಎಲ್ಲರ ಮನೆಗಳಲ್ಲಿಯೂ ಇಲ್ಲವೇ  ಅಯಾಯಾ ರಸ್ತೆ, ಸ್ಥಳೀಯ ಬಡಾವಣೆಗಳಲ್ಲಿ ಇಲ್ಲವೇ ದೇವಸ್ಥಾನಗಳಲ್ಲಿ ಸಾರ್ವಜನಿಕವಾಗಿ ಶ್ರದ್ಧಾ ಭಕ್ತಿಯೊಂದಿಗೆ ಬಹಳ ಅದ್ದೂರಿಯಾಗಿಯೂ ಆಚರಿಸಲ್ಪಡುತ್ತದೆ.  ನಮ್ಮ ಮನೆಯಲ್ಲಿಯೂ  ಈ ರೀತಿಯ ಸಂಭ್ರಮಕ್ಕೇನೂ ಕೊರತೆ ಇರಲಿಲ್ಲ. ಗೌರಿ ಹಬ್ಬಕ್ಕೆ ಎರಡು ವಾರಗಳ ಮುಂಚೆಯೇ ಅಟ್ಟದಲ್ಲಿ ಎತ್ತಿಟ್ಟಿದ್ದ ಬಾಗಿಣದ ಮೊರಗಳನ್ನು ತೆಗೆದು ಚೆನ್ನಾಗಿರುವ ಮೊರಗಳ ಜೊತೆ  ಅಗತ್ಯವಿದ್ದ ಹೊಸಾ ಮೊರಗಳನ್ನು ಖರೀದಿ ಮಾಡಿ  ಅದನ್ನು ಶುದ್ಧೀಕರಿಸಿ,  ಚೆನ್ನಾಗಿ ಕಾಣುವ ಸಲುವಾಗಿ ಬಣ್ಣ ಬಣ್ಣದ ಅಲಂಕಾರಿಕ ಕಾಗದಗಳನ್ನು ಅಂಟಿಸುವ ಮೂಲಕ ಆರಂಭವಾಗುತ್ತಿತ್ತು.  ನಂತರ ಬಾಗಿಣದಲ್ಲಿ ಇಡುವ ಬೇಳೆ ಕಾಳುಗಳು, ಬೆಲ್ಲ, ತೆಂಗಿನಕಾಯಿಗಳನ್ನು ಶುದ್ಧೀಕರಿಸಿ ಮಂಚೆಲ್ಲಾ ಕಾಗದ ಪಟ್ಟಣಗಳಲ್ಲಿ ಇಡುತ್ತಿದ್ದರು. ಕಾಲ ಬದಲಾದಂತೆ ಪ್ಲಾಸ್ಟಿಕ್ ಕವರುಗಳನ್ನು ಬಳಸುವ ರೂಢಿಯಲ್ಲಿದೆ.  ಇದರ ಜೊತೆ ಜೊತೆಯಲ್ಲಿಯೇ ಹತ್ತಿಯಿಂದ ಚೆಂದನೆಯ 16, 24, 32, 48  ಗೌರೀ ಎಳೆಗಳ ಗೆಜ್ಜೆ ವಸ್ತ್ರ ಗಣೇಶನಿಗೆ ವಿಶೇಷವಾದ ಗೆಜ್ಜೆವಸ್ತಗಳನ್ನು  ಸಿದ್ಧ ಪಡಿಸಿಕೊಳ್ಳುವಷ್ಟರಲ್ಲಿ ಹಬ್ಬಕ್ಕೆ ಕೇವಲ ಎರಡೇ ದಿನ ಬಾಯಿ ಇರುತ್ತಿತ್ತು.

ಹಬ್ಬದ ಹಿಂದಿನ ದಿನ ಬೆಳೆಗ್ಗೆಯೇ ಮಾರುಕಟ್ಟೆಯಿಂದ ಕನಕಾಂಬರ, ಮಲ್ಲಿಗೆ, ಕಾಕಡ, ಸುಗಂಧರಾಜ, ವಿವಿಧ ಬಣ್ಣದ ಸೇವಂತಿ ಹೂವುಗಳು, ಡೇರೇ ಹೂವು,  ಕಣಗಲೆ ಹೀಗೆ ವಿವಿಧ ಬಿಡಿ ಹೂವುಗಳ ಜೊತೆ ಮಂಚಿಪತ್ರೆ, ಬಿಲ್ವಪತ್ರೆ, ಮರುಗ, ಧವನ ಮುಂತಾದ ಬಗೆ ಬಗೆಯ ಪತ್ರೆಗಳನ್ನು ಕೊಂಡು  ತಂದು  ಅವುಗಳು ಬಾಡದೇ ಇರುವಂತೆ (ಅಗೆಲ್ಲಾ ಫ್ರಿಡ್ಜ್ ಇರಲಿಲ್ಲ) ಒದ್ದೆ ಬಟ್ಟೆಗಳಲ್ಲಿ ಎತ್ತಿಟ್ಟು  ಮಧ್ಯಾಹ್ನದ ಹೊತ್ತಿಗೆ  ಮನೆಯವರೆನೆಲ್ಲಾ ಒಟ್ಟುಗೂಡಿಸಿ ಹೂವು ಕಟ್ಟುವಾಗ ಇಡೀ ಮನೆಯೇ ಹೂವುಗಳ ಸುವಾಸನೆಯಿಂದ ಘಂ ಎನ್ನುತಿದ್ದ ಘಮಲನ್ನು ವರ್ಣಿಸುವುದಕ್ಕಿಂತಲೂ ಅನುಭವಿದರೇ ಚೆಂದ. ವಿವಿಧ ಹೂವುಗಳ ಜೊತೆ ಪತ್ರೆಗಳನ್ನು ಜೋಡಿಸಿ  ನಮ್ಮಮ್ಮ ಚಕಚಕನೆ ಹೂವಿನ ಹಾರವನ್ನು ಕಟ್ಟುವುದನ್ನು ನೋಡುವುದಕ್ಕೇ ಪರಮಾನಂದವಾಗುತ್ತಿತ್ತು.

ಅಂದಿನ ಕಾಲಕ್ಕೆ ನಮ್ಮೂರು ಬಹುಶಃ ಬಹಳ ಕುಗ್ರಾಮವಾಗಿದ್ದ ಕಾರಣವೋ ಇಲ್ಲವೇ,  ಇಡೀ ಊರಿನವರೆಲ್ಲಾ ಒಂದೇ ಮನೆಯಲ್ಲಿ ಸೇರಿಕೊಂಡು ಸಡಗರ ಸಂಭ್ರಮಗಳಿಂದ ಗೌರೀ ಹಬ್ಬವನ್ನು ಅಚರಿಸಲಿ ಎಂದೋ ನಮ್ಮ ಮನೆಯಲ್ಲಿ ಗೌರಿಯನ್ನು ಕೂಡಿಸುವ ಸಂಪ್ರದಾರವಿರಲಿಲ್ಲ. ನಮ್ಮದೇನಿದ್ದರೂ ಇಟ್ಟ ಮನೆಯಲ್ಲಿ ಗೌರೀ ಪೂಜೆಯನ್ನು ಮಾಡಬೇಕಿತ್ತು. ಹಾಗಾಗಿ ನಮ್ಮ ಮನೆಯ ಹತ್ತಿರದಲ್ಲಿ ಯಾರ ಮನೆಯಲ್ಲಿ ಗೌರೀ ಪೂಜೆ ಮಾಡುತ್ತಾರೋ ಅವರ ಮನೆಗೆ ಹಿಂದಿನ ದಿನ ಸೂರ್ಯ ಮುಳುಗುವ ಮುಂಚೆಯೇ ಪೂಜಾಸಾಮಗ್ರಿಗಳ ಜೊತೆಗೆ ಮೊರದ ಜೊತೆಯನ್ನು ಇಟ್ಟು ಮಾರನೇ ದಿನ ಎಷ್ತು ಹೊತ್ತಿಗೆ ಪೂಜೆ ಆರಂಭಿಸುತ್ತಾರೆ ಎಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ಗೌರೀ ಹಬ್ಬದ ದಿನ  ಅವರ ಮನೆಗೆ ಹೋಗಿ ಪೂಜೆ ಮಾಡಿಕೊಂಡು ಬರುವುದು ನಮ್ಮ ಮನೆಯಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದ್ದ ಸಂಪ್ರದಾಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ