ಎಷ್ಟೋ ಸಲ ನಾವು ಜೀವನದಲ್ಲಿ ದೊರೆಯಬಹುದಾದಷ್ಟು ಸಂತೋಷವನ್ನು ಅನುಭವಿಸಲಾಗುವುದಿಲ್ಲ. ಜೀವನ ನೀಡುವ  ಉತ್ತಮವಾದ ಕೊಡುಗೆಯನ್ನು ನಾವು ಪಡೆದುಕೊಳ್ಳುವುದಿಲ್ಲ. ಇದಕ್ಕೆ ನಾವೇ ಜವಾಬ್ದಾರರು. ನಾವು ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಂಡರೆ ನಮ್ಮ ಬಾಳು ಖಂಡಿತವಾಗಿ ಹೆಚ್ಚು ಮನೋಹರವಾಗುವುದು. ಅಂತಹ ಅಂಶಗಳನ್ನು ತಿಳಿಯೋಣ ಬನ್ನಿ :

ಹದಿಹರೆಯದ ಮಕ್ಕಳೊಂದಿಗೆ 18 ವರ್ಷದಂತೆ ಮಾತನಾಡಿ ಹೆಲ್ತ್ ಕೇರ್‌ ಒಂದರ ಡೈರೆಕ್ಟರ್‌ ಆಗಿರುವ ಡಾ. ಗೋಪಾಲಕೃಷ್ಣ ಹೀಗೆ ಹೇಳುತ್ತಾರೆ, ``ಮಕ್ಕಳು 17-18 ವರ್ಷದವರಾದಾಗ ಅವರೊಂದಿಗೆ ನಿಮ್ಮ ವ್ಯವಹಾರ ತಾಯಿಯಂತಿರದೆ ಒಬ್ಬ ಅಕ್ಕನಂತಿರಲಿ. ಆಗ ವಯಸ್ಸಿನ ಅಂತರ ಗೋಚರಿಸುವುದಿಲ್ಲ. ಅವರು ತಮ್ಮ ಮನಸ್ಸಿನೊಳಗಿನ ಮಾತನ್ನು ಯಾವುದೇ ಅಳುಕಿಲ್ಲದೆ ನಿಮ್ಮೊಡನೆ ಹಂಚಿಕೊಳ್ಳುತ್ತಾರೆ. ನಿಮ್ಮ ಬಗೆಗಿನ ಗೌರವ ಮಾತ್ರ ಉಳಿದಿರಲಿ. ಹದಿಹರೆಯದ ವಯಸ್ಸು ಬಹಳ ಸೂಕ್ಷ್ಮವಾದುದು. ಮಕ್ಕಳು ಯೌವನಕ್ಕೆ ಕಾಲಿಡುತ್ತಿರುತ್ತಾರೆ. ಅವರಲ್ಲಿ ಉತ್ಸಾಹ ತುಂಬಿರುತ್ತದೆ. ಆದರೆ ಜೀವನದ ಬಗೆಗಿನ ಅವರ ಯೋಚನಾಧಾಟಿ ಪಕ್ವವಾಗಿರುವುದಿಲ್ಲ. ಕೆಲವು ಸಲ ಅವರು ಇಡುವ ಹೆಜ್ಜೆಯಿಂದ ಗಂಭೀರ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಮಕ್ಕಳ ಮೇಲೆ ನಿಮ್ಮ ಭಾವನೆಗಳನ್ನೇ ಹೇರದೆ ಅವರ ದೃಷ್ಟಿಕೋನವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅವರಿಗೆ ನಿಮ್ಮ ಸಾಂಗತ್ಯ ಮತ್ತು ಸಂರಕ್ಷಣೆಯ ಅವಶ್ಯಕತೆ ಇದೆ ನಿಜ. ಆದರೆ ಅವರು ವಿಕಸಿತರಾಗಲು ಅವಕಾಶ ಮಾಡಿಕೊಡಿ. ಅವರು ತಮ್ಮದೇ ಆದ ರೀತಿಯಲ್ಲಿ ಆಲೋಚಿಸಲು ಮತ್ತು ಕೆಲಸ ಮಾಡಲು ಬಿಡಿ. ಆದರೆ ಅವರಿಗೆ ತಪ್ಪು ಸರಿಗಳ ವ್ಯತ್ಯಾಸ ಅರ್ಥ ಮಾಡಿಸಿಕೊಡಿ.

18 ವಯಸ್ಸಿನ ಮಾನಸಿಕತೆ ನಿಮಗಿರಲಿ

ಡಾ. ಆನಂದ್‌ ಹೇಳುತ್ತಾರೆ, ``ದೊಡ್ಡವರಾದಾಗ ನಾವು ಸಾಮಾನ್ಯವಾಗಿ ಜೀವನಲ್ಲಿ ರೂಪಿತವಾಗಿರುವ ನಿಯಮಗಳನ್ನು ಅನುಸರಿಸತೊಡಗುತ್ತೇವೆ. ಹೀಗಾಗಿ ನಮ್ಮ ರಚನಾತ್ಮಕ ಕೌಶಲ್ಯ ಮರೆಯಾಗುತ್ತದೆ. ನಾವು ನೆನಪಿಡಬೇಕಾದ ವಿಷಯವೆಂದರೆ ನಮ್ಮೆಲ್ಲರಲ್ಲೂ ಮಕ್ಕಳಂತಹ ಮನಸ್ಸು ಹುದುಗಿದೆ ಮತ್ತು ಅದು ತನಗೆ ಬೇಕಾದಂತೆ ನಡೆದುಕೊಳ್ಳಲು ಬಯಸುತ್ತದೆ. ಹೊಸ ಹೊಸ ರೀತಿಗಳಿಂದ ಕೆಲಸ ಮಾಡಲು ಇಷ್ಟಪಡುತ್ತದೆ. ನೀವು ಯಾವ ವಯಸ್ಸಿನವರೇ ಆಗಿರಲಿ, ಈ ಮಾನಸಿಕತೆಯನ್ನು ಕಾಪಾಡಿಕೊಳ್ಳಿ. ಆಗ ಮಾತ್ರ ನಿಮ್ಮಲ್ಲಿ ಹಿಂದಿನ ಉತ್ಸಾಹ ಉಳಿದು, ನೀವು ಒಂದು ಉತ್ತಮವಾದ ಜೀವನ ನಡೆಸಬಲ್ಲಿರಿ.''

ಮನಸ್ಸು, ಬುದ್ಧಿ ದೃಢವಾಗಿರಲಿ

ನೀವು 25 ವರ್ಷ ವಯಸ್ಸಿನವರಾಗಿರಿ ಅಥವಾ 55, ನಿಮ್ಮ ಮನಸ್ಸು ಮತ್ತು ಬುದ್ಧಿ ಆರೋಗ್ಯವಾಗಿರಲಿ. ಬುದ್ಧಿ ಚುರುಕಾಗಿರಿಸಲು ನಿಯಮಿತವಾಗಿ ಮೆಂಟಲ್ ಎಕ್ಸರ್ ಸೈಜ್‌ ಮಾಡುತ್ತಿರಿ. ಹೊಸ ಪದ, ಹೊಸ ಮಾತುಗಳನ್ನು ಕಲಿಯಿರಿ. ಹೊಸದನ್ನು ಕಲಿಯಬೇಕೆಂಬ ಹುಮ್ಮಸ್ಸು ಇರಲಿ. ಒವೊಮ್ಮೆ ಕೆಲಸದಿಂದ ಬ್ರೇಕ್‌ ಪಡೆದು ಮನೆಯವರೊಂದಿಗೆ ಹೊರಗೆ ಸುತ್ತಾಡಿ ಬನ್ನಿ. ಸಕಾರಾತ್ಮಕವಾಗಿ ಯೋಚಿಸುತ್ತಿರಿ. ನಗು ಮುಖದಿಂದಿರಿ ಮತ್ತು ಎಲ್ಲರೊಂದಿಗೆ ಸೋಶಿಯಲ್ ಆಗಿರಿ. ನಿಮ್ಮ ಫಿಸಿಕಲ್ ಆಕ್ಟಿವಿಟೀಸ್‌ ಚೆನ್ನಾಗಿರಲಿ.

ಸಮಯದ ಉತ್ತಮ ಬಳಕೆ

ದಿನದ 24 ಗಂಟೆಗಳಲ್ಲಿ ನಾವು ಸಾಮಾನ್ಯವಾಗಿ 7-8 ಗಂಟೆಗಳನ್ನು ನಿದ್ರೆಯಲ್ಲಿ ಕಳೆಯುತ್ತೇವೆ. ಉಳಿದ ಸಮಯವನ್ನು ಉತ್ತಮವಾಗಿ ಬಳಸಲು ಈ ಕೆಲವು ಚಿಕ್ಕಪುಟ್ಟ ವಿಷಯಗಳ ಬಗ್ಗೆ ಗಮನಹರಿಸಬೇಕಾಗುತ್ತದೆ:

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ