ನಮ್ಮ ಬೀದಿಯಲ್ಲೇ ವಾಸವಾಗಿರುವ ಕವಿತಾ ಕಳೆದ ಒಂದು ವಾರದಿಂದ ಗಡಿಬಿಡಿಯಲ್ಲಿರುವಂತೆ ಕಾಣುತ್ತಿತ್ತು. ದಿನ ಅಂಗಡಿಯ ಕಡೆ ಹೋಗುತ್ತಿದ್ದಳು. ದಿನನಿತ್ಯ ಸಾಯಂಕಾಲದ ವಾಕಿಂಗ್‌ಗೆ ಸಹ ಪಾರ್ಕ್‌ನತ್ತ ಬರುತ್ತಿರಲಿಲ್ಲ. ಕಡೆಗೆ ನಾನು ಪಾರ್ಕ್‌ನಲ್ಲಿ ಆಡುತ್ತಿದ್ದ ಅವಳ ಮಗಳು ಕಾವ್ಯಾಳನ್ನು ಕರೆದು ಕೇಳಿದೆ, ``ನಿಮ್ಮ ಮಮ್ಮಿ ವಾಕಿಂಗ್‌ಗೆ ಬರುತ್ತಿಲ್ಲವಲ್ಲ. ಯಾಕೆ?''

``ಆಂಟಿ, ನಮ್ಮ ಡ್ಯಾಡಿಯ ಊರಿನಿಂದ ಅಜ್ಜಿ, ತಾತ ನಮ್ಮ ಮನೆಗೆ ಬರುತ್ತಿದ್ದಾರೆ. ಅದಕ್ಕೇ ಮಮ್ಮಿಗೆ ವಾಕಿಂಗ್‌ಗೆ ಬರೋದಕ್ಕೆ ಆಗುತ್ತಿಲ್ಲ,'' ಎಂದು ಕಾವ್ಯಾ ಹೇಳಿದಳು.

ತಂದೆಯ ಊರು ಪರಕೀಯವೆಂಬಂತೆ ಕಾವ್ಯಾಳಿಗೆ ಅನ್ನಿಸಿದುದನ್ನು ಕೇಳಿ ಮನಸ್ಸಿಗೆ ಖೇದವಾಯಿತು. ಮರುದಿನ ಸಾಯಂಕಾಲ ಕವಿತಾಳ ಪತಿ ರವೀಶ್‌ ತಮ್ಮ ತಾಯಿ ತಂದೆಯೊಡನೆ ಬಂದುದನ್ನು ನೋಡಿದೆ. ಬಹುಶಃ ಅವರನ್ನು ರೈಲ್ವೇ ಸ್ಟೇಷನ್‌ನಿಂದ ಕರೆತಂದಿರಬಹುದು ಎಂದುಕೊಂಡೆ. ಅದಾದ ಮೇಲೆ ಒಂದು ವಾರವಾದರೂ ಕವಿತಾಳ ಮುಖ ಕಾಣಿಸಲಿಲ್ಲ. ಕೆಲಸಕ್ಕೂ ರಜೆ ಹಾಕಿದ್ದಳು.

ಒಂದು ಸಾಯಂಕಾಲ ಅವಳನ್ನೂ, ಅವಳ ಅತ್ತೆ ಮಾವಂದಿರನ್ನೂ ಭೇಟಿ ಮಾಡೋಣವೆಂದು ನಾನೇ ಅವಳ ಮನೆಗೆ ಹೋದೆ. ಅತ್ತೆ ಮಾವ ಡ್ರಾಯಿಂಗ್‌ ರೂಮಿನಲ್ಲಿ ಕುಳಿತಿದ್ದರು. ಕವಿತಾ ಅಡುಗೆಮನೆಯ ಒಳಗೂ ಹೊರಗೂ ಓಡಾಡುತ್ತಿದ್ದಳು.

ಭೇದಭಾವ ಬೇಡ

ನಾನು ಆ ಹಿರಿಯರನ್ನು ಮಾತನಾಡಿಸಿದೆ. ``ನಾವು ಬಂದದ್ದರಿಂದ ಕವಿತಾಳಿಗೆ ಕೆಲಸ ಹೆಚ್ಚಾಗಿದೆ. ಬೆಳಗಿನಿಂದ ರಾತ್ರಿಯವರೆಗೂ ಕೆಲಸ ಮಾಡುತ್ತಲೇ ಇರುತ್ತಾಳೆ,'' ಅವಳ ಮಾವ ಹೇಳಿದರು.

``ಹೌದು. ನನಗೆ ಯಾವ ಕೆಲಸ ಮಾಡೋದಕ್ಕೂ ಬಿಡೋದಿಲ್ಲ. ಒಳ್ಳೆ ನೆಂಟರ ಹಾಗೆ ಇರಿಸಿದ್ದಾಳೆ,'' ಎಂದರು ಅವಳ ಅತ್ತೆ.

ತಾವು ಬಂದಿರುವುದರಿಂದ ಸೊಸೆಯ ಆಫೀಸ್‌ ಕೆಲಸಕ್ಕೂ ತೊಂದರೆಯಾಗಿರುವುದು ಆ ಹಿರಿಯರಿಗೆ ಬೇಸರವಾಗಿತ್ತು. ಆದ್ದರಿಂದ ಅವರು ಬೇಗನೆ ಊರಿಗೆ ಹಿಂದಿರುಗುವ ಯೋಚನೆಯಲ್ಲಿದ್ದರು. ನಾನು ಹೊರಟಾಗ ಕವಿತಾ ನನ್ನನ್ನು ಕಳುಹಿಸಲು ಹೊರಗೆ ಬಂದಳು. ಗೇಟಿನ ಬಳಿ ಸ್ವಲ್ಪ ಹೊತ್ತು ಮಾತನಾಡುತ್ತಾ ನಿಂತೆ. ಆಗ ನಾನು, ``ನಿಮ್ಮ ಅತ್ತೆ ಮಾವಂದಿರನ್ನು ನೆಂಟರ ಹಾಗೆ ಟ್ರೀಟ್‌ ಮಾಡುತ್ತಾ ಇದ್ದೀಯಲ್ಲ..... ಅವರೇನೂ ಕೈಲಾಗದವರಲ್ಲ,'' ಎಂದು ಕೇಳಿದೆ.

``ಇಲ್ಲಪ್ಪ ಅವರ ಕೈಲಿ ಏನೂ ಮಾಡಿಸೋದಿಲ್ಲ. ನನ್ನ ಪತಿ ಕೂಡ ಅವರು ಆರಾಮವಾಗಿ ಇರಲಿ ಅಂತಲೇ ಇಷ್ಟಪಡುತ್ತಾರೆ. ನನ್ನ ತಂಗಿ ಮನೆಗೆ ಅವಳ ಅತ್ತೆ ಮಾವ ಬಂದಾಗ, ಏನೋ ಒಂದು ಕೆಲಸ ಹೇಳಿದಳು ಅಂತ ಅದೇ ಒಂದು ದೊಡ್ಡ ಗಲಾಟೆ ಆಗಿಬಿಟ್ಟಿತ್ತು. ಅದಕ್ಕೆ ನಾನೇ ಒದ್ದಾಡುತ್ತಾ ಇದ್ದೇನೆ,'' ಎನ್ನುತ್ತಾ ಕವಿತಾ ಹಣೆಯ ಮೇಲಿನ ಬೆವರನ್ನು ಒರೆಸಿಕೊಂಡಳು.

ಅತ್ತೆ ಮಾವ ಮನೆಗೆ ಬಂದಿರುವುದು ಇವಳಿಗೆ ಒಂದು ಹೊರೆಯಾಗಿದೆಯಲ್ಲ ಎಂದು ಮನಸ್ಸಿಗೆ ಬೇಸರವಾಯಿತು. ಅವರಾದರೋ ಇದೂ ತಮ್ಮ ಮನೆ ಎಂದು ಭಾವಿಸಿ, ಮಗ ಸೊಸೆಯ ಜೊತೆಗಿರಲು ಬಂದಿದ್ದಾರೆ. ಆದರೆ ಇವರು ಅವರ ಜೊತೆ ಆತಿಥೇಯರಂತೆ ವರ್ತಿಸುತ್ತಿದ್ದಾರೆ.

ಮತ್ತೊಂದು ಚಿತ್ರಣ

ನನ್ನ ಚಿಕ್ಕಮ್ಮನಿಗೆ ಮಂಡಿನೋವು ಕಾಡುತ್ತಿತ್ತು. ಬರುಬರುತ್ತಾ ದಿನನಿತ್ಯದ ಕೆಲಸ ಮಾಡುವುದೂ ಕಷ್ಟವಾಗತೊಡಗಿತು. ಆಗ ಅವರು ಚಿಕ್ಕಪ್ಪನ ಜೊತೆ ತಮ್ಮ ಮಗನ ಮನೆಯಲ್ಲಿರಲು ಹೋದರು. ಆದರೆ ತಿಂಗಳು ತುಂಬುವ ಮೊದಲೇ ಹಿಂದಿರುಗಬೇಕಾಯಿತು. ಮಗನ ಮನೆ ಮೂರನೆಯ ಮಹಡಿಯಲ್ಲಿದ್ದುದರಿಂದ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಅವರಿಗೆ ಬಲು ಕಷ್ಟಕರವಾಯಿತು. ಜೊತೆಗೆ ಅವರಿಂದ ನಿರೀಕ್ಷಿಸಲ್ಪಟ್ಟ ಮನೆಯ ಕೆಲಸ ಕಾರ್ಯಗಳನ್ನು ಮಾಡಲು ಅವರು ಅಸಮರ್ಥರಾಗಿದ್ದರು. ಮುಂದುವರಿದ ದೇಶಗಳಲ್ಲಿ  ಮಕ್ಕಳಿಂದ ದೂರವಿದ್ದರೂ ಸಹ ವೃದ್ಧರು ಒಳ್ಳೆಯ ಬದುಕನ್ನು ನಡೆಸುವಂತೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತದೆ. ನಮ್ಮ ದೇಶದಲ್ಲಿ ಇದಕ್ಕೆ ವಿರುದ್ಧವಾಗಿ ತಂದೆ ತಾಯಂದಿರೇ ಸಾಕಷ್ಟು ದಿನಗಳವರೆಗೆ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಮಕ್ಕಳು ಚೆನ್ನಾಗಿ ಸೆಟಲ್ ಆಗಲಿ ಎಂದು ಆಶಿಸುತ್ತಾರೆ. ಮಕ್ಕಳು ತಾವು ಸೆಟಲ್ ಆದ ನಂತರ ತಮ್ಮದೇ ಮನೆ ಸಂಸಾರವನ್ನು ನೆಲೆಗೊಳಿಸುತ್ತಾರೆ. ಆಗ ತಾಯಿ ತಂದೆಯರನ್ನು ಹೊರಗಿನವರಂತೆ ಕಾಣುತ್ತಾರೆ. ಮಗ ಸೊಸೆ ಅಥವಾ ಮಗಳು ಅಳಿಯ ಇರುವ ತಾಯಿ ತಂದೆಯರ ಬರುವಿಕೆಯನ್ನು ಸಹಜವಾಗಿ ಸ್ವೀಕರಿಸಲಾರರೇ? ಅವರ ಜೀವನಶೈಲಿ ಬೇರೆಯಾಗಿರಬಹುದು. ಆದರೆ ಅವರನ್ನು ಗೌರವದಿಂದ ಜೊತೆಯಲ್ಲಿ ಇರಿಸಿಕೊಳ್ಳಲು ಆಗುವುದಿಲ್ಲವೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ