ಜಮುನಾ ತನ್ನ ವೈವಾಹಿಕ ಸಂಬಂಧ ಉಳಿಸಿಕೊಳ್ಳಲು ಇತ್ತೀಚೆಗೆ ಕೌನ್ಸೆಲರ್‌ಗಳನ್ನು ಭೇಟಿ ಆಗಲು ಸಾಕಷ್ಟು ಸಮಯ ಕಳೆಯುತ್ತಿದ್ದಾಳೆ. ಇದರ ಹಿಂದೆ ಸಾಧಾರಣ ಆದರೆ ಜಟಿಲ ಕಾರಣವೊಂದಿದೆ. ಜಮುನಾ ಹಾಗೂ ಆಕೆಯ ಪತಿ ಮನೋಹರ್ ನಡುವಿನ ಸೆಕ್ಸ್ ಲೈಫ್‌ನಲ್ಲಿ ಅನೇಕ ಅಡೆತಡೆಗಳಿದ್ದವು. ಇಚ್ಛೆ ಅನಿಚ್ಛೆ ಪ್ರಕಟಪಡಿಸುವಲ್ಲಿನ ವೈಫಲ್ಯದಿಂದ ಶುರುವಾದ ತೊಂದರೆ ನಿರಾಶೆ ಮತ್ತು ಕೊರಗುವಿಕೆಯಲ್ಲಿ ಬದಲಾಗಿದ್ದವು.

ಅವರ ನಡುವೆ ಅಂಥದ್ದೇನಾಯಿತು? ಸೆಕ್ಸ್ ನಂತಹ ಮನರಂಜನಾತ್ಮಕ ಸಂಗತಿ ಅವರಿಗೆ ಉಸಿರುಗಟ್ಟುವಂತಹ ಸ್ಥಿತಿಯನ್ನೇಕೆ ತಂದಿತು? ಸೆಕ್ಸ್ ಎನ್ನುವುದು ಗಂಡ ಹೆಂಡತಿಯ ಸಂಬಂಧಕ್ಕೆ ಮತ್ತಷ್ಟು ನಿಕಟತೆ ತರುತ್ತದೆ. ಅದರಲ್ಲಿ ಸುರಕ್ಷತೆಯ ಅನುಭೂತಿ, ಸೂಕ್ಷ್ಮ ಅನುಭೂತಿಗಳು, ಪರಸ್ಪರ ಹೊಂದಾಣಿಕೆ, ಪ್ರೇಮದ ಗಾಢತೆ ಇವೆಲ್ಲ ಇರಬೇಕು. ಅದು ನಿರಂತರ ಸಮಾಗಮದ ಖುಷಿಗೆ ಮತ್ತು ಲವಲವಿಕೆಯ ಜೀವನಕ್ಕೆ ಅತ್ಯವಶ್ಯ. ಒಳ್ಳೆಯ ಸೆಕ್ಸ್ ಜೀವನಕ್ಕೆ ಮತ್ತು ಗಾಢ ಸಂಬಂಧದ ಅನುಭೂತಿಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ.

ಇಬ್ಬರೂ ರೊಟೀನ್‌ ರೀತಿಯಲ್ಲಿ ಸೆಕ್ಸ್ ನ್ನು ನಿಭಾಯಿಸುತ್ತ ಹೋದರೆ, ಅದು ಕೇವಲ ಸೆಕ್ಸ್ ಲೈಫ್‌ನ್ನಷ್ಟೇ ಬೇಸರದಾಯಕಗೊಳಿಸುವುದಿಲ್ಲ, ಸಂಬಂಧ ಹಾಳುಗೆಡಹಲು ಕೂಡ ಕಾರಣವಾಗಬಹುದು. ನಗರವೇ ಆಗಿರಬಹುದು, ಹಳ್ಳಿಯೇ ಇರಬಹುದು. ಭಾರತೀಯ ಮತ್ತು ಇಸ್ಲಾಮಿಕ್‌ ಸಮಾಜದಲ್ಲಿ ಸ್ತ್ರೀಯರಿಗೆ ಸೆಕ್ಸ್ ಬಗ್ಗೆ ಚರ್ಚೆ ಮಾಡುವುದಾಗಲಿ, ಅದರ ಬಗ್ಗೆ ಅಭಿಪ್ರಾಯ ಸೂಚಿಸುವುದನ್ನು ಕೀಳು ಮಾನಸಿಕತೆ ಎಂದು ಬಿಂಬಿಸಲಾಗುತ್ತದೆ. ಸ್ತ್ರೀಯರು ತಮ್ಮ ಸಂಗಾತಿಯ ಜೊತೆಗೆ ಸೆಕ್ಸ್ ಬಗ್ಗೆ ತಮ್ಮ ಇಚ್ಛೆಗಳನ್ನು ಮುಕ್ತವಾಗಿ ಹೇಳಲು ಇಚ್ಛೆಪಡುವುದನ್ನು ಸುಸಂಸ್ಕೃತ ಎಂದು ಹೇಳಲಾಗುವುದಿಲ್ಲ. ಮಹಾನಗರದ ಬಿಂದಾಸ್‌ ಹುಡುಗಿಯರನ್ನು ಹೊರತುಪಡಿಸಿ ಉಳಿದವರೆಲ್ಲರೂ ಸೆಕ್ಸ್ ನ್ನು ಪತಿ ಸೇವೆಯ ಒಂದು ಪ್ರಮುಖ ಭಾಗ ಎಂದು ಹೇಳುತ್ತಾರೆ. ತಮ್ಮ ಇಚ್ಛೆ ಅನಿಚ್ಛೆಗಳನ್ನು ಗಂಡನಿಗೆ ಹೇಳುವುದನ್ನು ಅಗತ್ಯ ಎಂದು ಭಾವಿಸುವುದಿಲ್ಲ.

ಭೇದಭಾವ ಏಕೆ?

ಈ ಬಗ್ಗೆ ಸ್ವಲ್ಪ ಆಳವಾಗಿ ಯೋಚಿಸುವುದಾದರೆ, ಸೆಕ್ಸ್ ನ ಅಭಿಲಾಷೆ ಮತ್ತು ಸಾಮರ್ಥ್ಯವನ್ನು ಮಾನವ ಜೀವನದ ಪ್ರಧಾನ ಸಂಗತಿಯೆಂದು ತಿಳಿಯಲಾಗುತ್ತದೆ. ಸೆಕ್ಸ್ ಲೈಫ್‌ನ್ನು ನಿಯಂತ್ರಿತಗೊಳಿಸುವಲ್ಲಿ ಜೀವವೈಜ್ಞಾನಿಕ, ನೈತಿಕ, ಸಾಂಸ್ಕೃತಿಕ, ಕಾನೂನಾತ್ಮಕ, ಧಾರ್ಮಿಕ ಹಾಗೂ ವಿಭಿನ್ನ ದೃಷ್ಟಿಕೋನಗಳು ಕಾರಣವಾಗಿರುತ್ತವೆ. ಅಂದರೆ ಸೆಕ್ಸ್ ಲೈಫ್‌ ಮತ್ತು ಅದರ ಅಭಿವ್ಯಕ್ತಿಯ ಮೇಲೆ ಈ ಎಲ್ಲ ಸಂಗತಿಗಳ ಪ್ರಭಾವವಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ವ್ಯಕ್ತಿಯೊಬ್ಬನ ಸೆಕ್ಸ್ ಜೀವನದ ಮಹತ್ವದ ಬಗ್ಗೆ ಒತ್ತು ಕೊಡುತ್ತ ಅದರ ಬಗ್ಗೆ ಸಕಾರಾತ್ಮಕ ಮತ್ತು ಆದರದ ದೃಷ್ಟಿಕೋನ ಅನುಸರಿಸುವ ಬಗ್ಗೆ ಹೇಳಿಕೊಂಡಿದೆ. ಸಂಗಾತಿಯ ಜೊತೆಗೆ ಸೆಕ್ಸ್ ಸಂಬಂಧ ಯಾವುದೇ ಭೇದಭಾವರಹಿತ, ಹಿಂಸೆರಹಿತ, ದೈಹಿಕ, ಮಾನಸಿಕ ಶೋಷಣೆಯಿಂದ ಕೂಡಿರಬಾರದು. ಭಾವನಾತ್ಮಕ ಸಮತೋಲನದಿಂದ ಕೂಡಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ನಮ್ಮ ದೇಶದಲ್ಲಿ ಮಹಿಳೆಯರ ಸೆಕ್ಸ್ ಗೆ ಸಂಬಂಧಪಟ್ಟಂತೆ ಬಲಾತ್ಕಾರ, ಮಾನಸಿಕ ಶೋಷಣೆ, ಕೌಟುಂಬಿಕ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಸೆಕ್ಸ್ ಗೆ ಸಂಬಂಧಪಟ್ಟ ಹಕ್ಕು ಮತ್ತು ಸೆಕ್ಸ್ ಬಗ್ಗೆ ಮಹಿಳೆಯ ಮುಕ್ತ ಅಭಿಪ್ರಾಯ ಸ್ವೀಕಾರ್ಯವೇ? ಎನ್ನುವ ಪ್ರಶ್ನೆ ಕೂಡ ಇಲ್ಲಿ ಉದ್ಭವಿಸುತ್ತದೆ. ಒಂದು ವೇಳೆ ಜಾಗೃತಿ ಉಂಟಾದಲ್ಲಿ ಮತ್ತು ಸ್ತ್ರೀಯರು ಕೂಡ ಈ ನಿಟ್ಟಿನಲ್ಲಿ ತಮ್ಮ ಭಾವನೆಗಳಿಗೆ ಪರಿಪೂರ್ಣ ಮಹತ್ವ ಕೊಟ್ಟರೆ ಹಾಗೂ ಸಂಗಾತಿ ಎಂಬಂತೆ ಮುಕ್ತ ಮಾತುಕತೆ ನಡೆಸಿದರೆ ಅದರಿಂದಾಗುವ ಅನುಕೂಲಗಳು ಹಲವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ