ಪುರುಷರಲ್ಲೂ ಬೇಬಿ ಬ್ಲೂಸ್

ಮಗುವಿಗೆ ಜನ್ಮವಿತ್ತ ನಂತರ ಮಹಿಳೆಯರಲ್ಲಿ ಒಂದು ಬಗೆಯ ಆತಂಕ, ಚಿಂತೆ, ಕಳವಳ ಮತ್ತು ಒತ್ತಡ ಉಂಟಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆಯಷ್ಟೆ. ಇದನ್ನು ಪೋಸ್ಟ್ ಪಾರ್ಟಮ್ ಡಿಪ್ರೆಶನ್‌ ಎಂದು ಹೇಳಲಾಗುತ್ತದೆ. ಆದರೆ ಮನೋವಿಜ್ಞಾನಿಗಳು ಮತ್ತು ಸಮಾಜಶಾಸ್ತ್ರಜ್ಞರ ಪ್ರಕಾರ, ತಂದೆಯಾದ ಬಳಿಕ ಅನೇಕ ಪುರುಷರು ಸಹ ಪ್ಯಾನಿಕ್‌ ಅಟ್ಯಾಕ್‌ ಮತ್ತು ಡಿಪ್ರೆಶನ್‌ಗೆ ಗುರಿಯಾಗುತ್ತಾರೆ.

ಪೀಡಿಯಾಟ್ರಿಕ್ಸ್ ಜರ್ನಲ್‌ನ ಒಂದು ಅಧ್ಯಯನದ ಮೂಲಕ ತಿಳಿದುಬಂದಿರುವುದೆಂದರೆ, ಸುಮಾರು 25 ವರ್ಷ ವಯಸ್ಸಿನಲ್ಲಿ ತಂದೆಯಾಗುವ ಪುರುಷರಲ್ಲಿ ಮಗು ಹುಟ್ಟಿದ ನಂತರ ಡಿಪ್ರೆಶನ್‌ ಉಂಟಾಗುವ ಸಾಧ್ಯತೆ ಶೇ.68ರಷ್ಟಿರುತ್ತದೆ. ಅಧ್ಯಯನದ ಮುಖ್ಯಸ್ಥ ಡಾ. ಕ್ರೆಗ್‌ ಗಾರ್‌ಫೀಲ್ಡ್ ಹೇಳುತ್ತಾರೆ, ``ಮಗುವಿನ ಜನನದ ನಂತರ ಮಹಿಳೆಯರಂತೆ ಪುರುಷರಿಗೂ ಭಾವನಾತ್ಮಕ ಆಸರೆಯ ಅಗತ್ಯವಿರುತ್ತದೆ. ಆದರೆ ಅವರ ಅವಶ್ಯಕತೆಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ.''

ಬೇಸರ ಮತ್ತು ನಿರುತ್ಸಾಹ

2 ಮಕ್ಕಳ ತಂದೆಯಾಗಿರುವ ರೋಹನ್‌ ಶೆಟ್ಟಿ ತಂದೆಯಾದ ಬಳಿಕ ತಮ್ಮ ಜೀವನದಲ್ಲಿ ಆದ ಬದಲಾವಣೆಗಳಿಂದ ಬಹಳ ತೊಂದರೆಗೀಡಾದರು, ಅವರು ಭಾವನಾತ್ಮಕ ಅಲ್ಲೋಲ ಕಲ್ಲೋಲಗಳನ್ನು ಎದುರಿಸಬೇಕಾಯಿತು. ಈ ಕಠಿಣ ಸಂದರ್ಭಗಳಿಂದ ಪಾರಾದ ನಂತರ ಅವರು ತಮ್ಮ ಅನುಭವಗಳನ್ನು ಹೊರಗೆಡವಿದರು ಮತ್ತು ಅವುಗಳ ಬಗ್ಗೆ `ವಿಸ್ಡಮ್ ಫ್ರಮ್ ಡ್ಯಾಡೀಸ್‌' ಎಂಬ ಪುಸ್ತಕವನ್ನು ಬರೆದರು.

ಶೆಟ್ಟಿ ಹೇಳುತ್ತಾರೆ, ``ಬಹಳಷ್ಟು ಯುವಕರು ತಂದೆಯಾದ ನಂತರ ಡಿಪ್ರೆಶನ್‌ ಮತ್ತು ಆತಂಕಕ್ಕೆ ಸಿಲುಕುತ್ತಾರೆ. ಹೆಚ್ಚಿನ ಆರ್ಥಿಕ ಹೊಣೆಗಾರಿಕೆ, ವೈವಾಹಿಕ ಜೀವನದ ಮೇಲೆ ಉಂಟಾಗುವ ಪ್ರಭಾವ, ಸೆಕ್ಸ್ ಕೊರತೆ, ಇತರೆ ಜವಾಬ್ದಾರಿಗಳು, ರಾತ್ರಿಯ ವೇಳೆ ಮಗುವಿನ ಗಲಾಟೆಯಿಂದಾಗಿ ನಿದ್ರಿಸಲಾಗದಿರುವುದು, ಮುಂತಾದ ಕಾರಣಗಳಿಂದಾಗಿ ಅವರು ಚಿಂತೆಗೀಡಾಗುತ್ತಾರೆ.''

`ಜರ್ನಲ್ ಆಫ್‌ ದ ಅಮೆರಿಕನ್‌ ಮೆಡಿಕಲ್ ಅಸೋಸಿಯೇಷನ್‌'ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, 3 ರಿಂದ 6 ತಿಂಗಳ ಮಗುವಿನ ತಂದೆಯಲ್ಲಿ ಹೆಚ್ಚು ಡಿಪ್ರೆಶನ್‌ ಕಂಡುಬರುತ್ತದೆ. ಮಗುವಿನ ಆಗಮನದ ನಂತರ ಅವರಿಗೆ ತಮ್ಮ ಪ್ರಾಮುಖ್ಯತೆ ಕಡಿಮೆಯಾಗಿರುವುದು ಕಂಡುಬರುತ್ತದೆ. ಏಕೆಂದರೆ ಪತ್ನಿಯ ಆಸಕ್ತಿಯೆಲ್ಲ ಮಗುವಿನ ಕಡೆಗಿದ್ದು, ಪತಿಯ ಕಡೆ ಗಮನವಿರುವುದಿಲ್ಲ. ಪತಿ ರಾತ್ರಿ ಪೂರ್ತಿ ಸರಿಯಾಗಿ ನಿದ್ರೆ ಮಾಡದಿರುವುದು, ಆಯಾಸ, ಬೇಸರ ಮತ್ತು ನಿರುತ್ಸಾಹದ ಬಗ್ಗೆ ದೂರುತ್ತಾನೆ.

ಲೈಫ್ಸ್ಟೈಲ್ ಬದಲಾವಣೆ

ಫೋರ್ಟಿಸ್‌ ಆಸ್ಪತ್ರೆಯ ಮನೋತಜ್ಞ ಸಂಜಯ್‌ ಪಾಟೀಲ್ ‌ಹೇಳುತ್ತಾರೆ, ``ಈಗ ಚಿಕ್ಕ ಕುಟುಂಬದ ಕಾಲ. ಮಕ್ಕಳನ್ನು ನೋಡಿಕೊಳ್ಳಲು ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ ಯಾರೂ ಇರುವುದಿಲ್ಲ. ಮಗುವಿಗೆ ಅನಾರೋಗ್ಯವಾದಾಗ ಡಾಕ್ಟರ್‌ ಬಳಿ ಕರೆದೊಯ್ಯಲು ಪತಿಪತ್ನಿಯರ ಮೇಲೇ  ಹೆಚ್ಚಿನ ಜವಾಬ್ದಾರಿ ಬೀಳುತ್ತದೆ. ಇದರಿಂದ ಅವರ ಸ್ವಾಂತಂತ್ರ್ಯ, ಮನರಂಜನೆ ಎಲ್ಲ ಕುಂಠಿತವಾಗುತ್ತದೆ. ಇದ್ದಕ್ಕಿದ್ದಂತೆ ಎದುರಾಗುವ ಈ ಒತ್ತಡದಿಂದ ಯುವ ದಂಪತಿ ಗಾಬರಿಯಾಗುತ್ತಾರೆ ಮತ್ತು ಭಾವನಾತ್ಮಕವಾಗಿ ಚಿಂತೆಗೀಡಾಗುತ್ತಾರೆ.

``ಒಬ್ಬ ಪುರುಷ ಪ್ರಥಮ ಬಾರಿಗೆ ತಂದೆಯಾದಾಗ, ಅವನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಇದು ಹೇಗೆಂದರೆ ಒಂದೆರಡು ವರ್ಷದ ಹಿಂದೆಯಷ್ಟೇ ಒಂದು ಹೆಣ್ಣು ಪತ್ನಿಯ ರೂಪದಲ್ಲಿ ಅವನನ್ನು ಆಶ್ರಯಿಸಿ ಬಂದಿರುತ್ತಾಳೆ. ಮತ್ತೆ ಈಗ ಮಗುವೊಂದು ಅವನ ಬಾಳಿನಲ್ಲಿ ಕಾಲಿರಿಸಿದಾಗ, ಹೆಚ್ಚಿನ ಜವಾಬ್ದಾರಿ ಮತ್ತು ಖರ್ಚಿನಿಂದಾಗಿ ಅವನಿಗೆ ಚಿಂತೆಯಾಗುವುದು ಸಹಜವೇ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ