ಪ್ರೀತಿಯಲ್ಲಿ ನೀವು ಮೈಮರೆತರೆ, ಮುಂದೆ ಅದೇ ಪ್ರೀತಿ ನಿಮ್ಮ ಪಾಲಿಗೆ ಇಲ್ಲವಾಗಿ ಹೋದರೆ, ಆಗ ನೀವು ಏನು ಮಾಡಬೇಕು, ಏನು ಮಾಡಬಾರದು…….?
ಪ್ರೀತಿ ಒಂದು ಸುಂದರ ಅನುಭೂತಿ. ಪ್ರೀತಿಗಿಂತ ಯಾವುದೂ ಸುಂದರವಲ್ಲ. ಆದರೆ ಹಠಪೂರ್ವಕ ಅಥವಾ ಅದನ್ನೇ ಗ್ರಾಂಟೆಡ್ ಎಂದು ಭಾವಿಸಿ ಪ್ರೀತಿಸಿದರೆ ಅದು ನಿರರ್ಥಕ. ಪ್ರೀತಿಯನ್ನು ಪ್ರೀತಿಯ ದೃಷ್ಟಿಯಿಂದಲೇ ಮಾಡಿದರೆ ಸರಿ. ಎಷ್ಟೋ ಸಲ ವ್ಯಕ್ತಿ ಪ್ರೀತಿಯನ್ನು ತಿಳಿದುಕೊಳ್ಳುವುದಿಲ್ಲ. ಪ್ರೀತಿ ಆಕಸ್ಮಿಕವಾಗಿ ಹುಟ್ಟುತ್ತದೆ. ಅದರಲ್ಲಿ ಫ್ಯಾಕ್ಟರ್, ಕ್ರಾಫ್ಟ್, ಕ್ರೀಡೆ ಮುಂತಾದ ಯಾವುದೂ ಮಹತ್ವ ಪಡೆದುಕೊಳ್ಳುವುದಿಲ್ಲ.
ಪ್ರೀತಿ ಒತ್ತಡಕ್ಕೆ ಕಾರಣವಾಗಬಹುದು
ಪ್ರೀತಿ ಒಬ್ಬರಿಗೆ ಔಷಧಿ ರೀತಿಯ ಕೆಲಸ ಮಾಡಿದರೆ, ಇನ್ನೊಬ್ಬರಿಗೆ ಅಸೂಯೆ, ದ್ವೇಷಕ್ಕೂ ಕಾರಣವಾಗಬಹುದು. ಪ್ರತಿಯೊಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಪ್ರೀತಿಯನ್ನು ಕಂಡುಕೊಳ್ಳುತ್ತಾನೆ. ಪ್ರೀತಿ ಕುರುಡಾಗಿರುತ್ತದೆ, ಆದರೆ ಅದು ಎಷ್ಟರಮಟ್ಟಿಗೆ ಎನ್ನುವುದು ಆ ಬಳಿಕವೇ ಗೊತ್ತಾಗುತ್ತೆ. ಆ ಕಾರಣದಿಂದಲೇ `ಫಾಲ್ ಇನ್ ಲವ್’ ಎಂದು ಕರೆಯಲಾಗುತ್ತದೆ.
ಅಂದರೆ ನೀವು ಪ್ರೀತಿಯಲ್ಲಿ ಬಿದ್ದುಬಿಡುತ್ತೀರಿ ಎಂದರ್ಥ. ಬಿದ್ದು ಬಿಡುವುದೆಂದರೆ ನೀವು ನಿಮ್ಮ ಐಡೆಂಟಿಟಿ ಹಾಗೂ ಎಲ್ಲವನ್ನು ಮರೆತುಬಿಡುತ್ತೀರಿ. ಅದರೊಳಗೆ ನಿಮ್ಮನ್ನು ನೀವು ಮರೆತು ಬೇರೊಬ್ಬರ ತಲೆಯನ್ನು ಏರಿ ಕುಳಿತುಕೊಳ್ಳುತ್ತೀರಿ. ಹಾಗಾಗಿ ಪ್ರೀತಿಯಲ್ಲಿ ಬಹಳಷ್ಟು ಜನ ಹುಚ್ಚರಂತಾಗಿಬಿಡುತ್ತಾರೆ. ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಯಾವ ರೀತಿಯ ವ್ಯಕ್ತಿತ್ವದ ವ್ಯಕ್ತಿ ಪ್ರೀತಿ ಮಾಡಿದ್ದಾನೆ ಎನ್ನುವುದರ ಮೇಲೆ ಅದು ಅವಲಂಬಿಸಿದೆ. ಎಮೋಶನಲಿ ಅನ್ ಸ್ಟೇಬಲ್ ಪರ್ಸನಾಲಿಟಿಗೆ ಪ್ರೀತಿ ಸದಾ `ಡಿಪೆಂಡೆಂಟ್ ಫೀಚರ್’ ಆಗಿರುತ್ತದೆ. ಆ ವ್ಯಕ್ತಿಯ ಯೋಚನೆ ಏನಾಗಿರುತ್ತದೆಂದರೆ, ತನ್ನ ಬಗ್ಗೆ ಆಸಕ್ತಿ ವಹಿಸುವ ವ್ಯಕ್ತಿ ತನ್ನ ಬಗ್ಗೆ ಗಮನಹರಿಸಬಹುದು. ತನ್ನನ್ನು ಪ್ರೀತಿಸಬಹುದು, ತನ್ನನ್ನು ಸಂಭಾಳಿಸಬಹುದು ಎಂದು. ಈ ತೆರನಾದ ವ್ಯಕ್ತಿಗಳು ಮಾನಸಿಕವಾಗಿ ಬಹಳ ದುರ್ಬಲರಾಗಿರುತ್ತಾರೆ. ಅವರು ಬಹು ಬೇಗ ಖುಷಿಗೊಳ್ಳುತ್ತಾರೆ, ಅದೇ ರೀತಿ ಅಷ್ಟೇ ಬೇಗ ಖಿನ್ನತೆಗೂ ತುತ್ತಾಗುತ್ತಾರೆ.
ಪ್ರೀತಿಯಲ್ಲಿ 3 ಫ್ಯಾಕ್ಟರ್ ಗಳು ಅತ್ಯಂತ ಉನ್ನತ ಮಟ್ಟದಲ್ಲಿರುತ್ತವೆ. ಮೊದಲನೆಯದು ತ್ಯಾಗ, ಎರಡನೆಯದು ಕಂಫರ್ಟಬೆಲಿಟಿ ಹಾಗೂ ಮೂರನೆಯದು ನೋವು. ಇನ್ನೊಬ್ಬ ವ್ಯಕ್ತಿ ನಿಮ್ಮನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದಾನೆ, ಆ ವ್ಯಕ್ತಿ ನಿಮ್ಮನ್ನು ಯಾವ ಮಟ್ಟದಲ್ಲಿ ನೋಡಲು ಇಷ್ಟಪಡುತ್ತಾನೆ, ನಿಮ್ಮಿಂದ ಏನನ್ನು ಬಯಸುತ್ತಾನೆ ಎನ್ನುವುದನ್ನು ಕೂಡ ಗಮನಿಸಬೇಕು.
ಹಾರ್ಮೋನುಗಳ ಪ್ರಭಾವ
ಪ್ರೀತಿಯ ಹಲವು ಬಗೆಯ ಹಾರ್ಮೋನುಗಳು ಹೊರಹೊಮ್ಮುತ್ತವೆ. ಅದರ ಪ್ರಭಾವ ನಮ್ಮ ವ್ಯಕ್ತಿತ್ವದ ಮೇಲೆ ಉಂಟಾಗುತ್ತದೆ. ಪ್ರೀತಿಯಿಂದ ವ್ಯಕ್ತಿಯೊಬ್ಬನಿಗೆ ಒಂದು ರೀತಿಯ ಕಿಕ್ ದೊರಕುತ್ತದೆ. ಎದುರುಗಿನ ವ್ಯಕ್ತಿ ನಿಮಗಿಷ್ಟವಾಗುವ ರೀತಿಯಲ್ಲಿ ಪ್ರೀತಿಭರಿತ ಮಾತುಗಳನ್ನು ಆಡತೊಡಗಿದಾಗ ನೀವು ಖುಷಿಗೊಳ್ಳುತ್ತೀರಿ. ಪ್ರೀತಿಯ ಕನೆಕ್ಷನ್ ಒಂದು ರೀತಿಯಲ್ಲಿ ಎಂಜೈಮ್ ಗಳೊಂದಿಗೆ ಇರುತ್ತದೆ. ಅದು ನಿಮ್ಮನ್ನು ಖುಷಿ ಹಾಗೂ ದುಃಖ ಎರಡೂ ರೀತಿಯಲ್ಲಿ ಇಡಬಲ್ಲದು. ಇದರಲ್ಲಿ ನಿಮಗೆ ಖುಷಿ ದೊರಕುತ್ತದಾದರೆ, ಡೊಪಾಮೈನ್ ಹಾರ್ಮೋನ್ ಗುಪ್ತಗಾಮಿನಿಯಾಗಿರುತ್ತದೆ. ಅದರಿಂದಾಗಿ ನೀವು ವೇಟ್ ಗೇನ್ ಮಾಡಿಕೊಳ್ಳುತ್ತೀರಿ ಹಾಗೂ ಪ್ರೀತಿಯಲ್ಲಿ ಫಿಟ್ ಕೂಡ ಆಗುತ್ತೀರಿ. ಏಕೆಂದರೆ ನಿಮಗೆ ಎದುರಿಗಿನ ವ್ಯಕ್ತಿಯನ್ನು ಖುಷಿಯಿಂದ ಇಡಬೇಕಾಗಿಯೂ ಬರುತ್ತದೆ. ಪ್ರೀತಿಯಲ್ಲಿ ಹಲವು ಬಗೆಯ ಪರ್ಸನಾಲಿಟಿ ಚಾಲೆಂಜ್ ಗಳಿರುತ್ತವೆ.
ಅಸುರಕ್ಷತೆಯ ಭಾವನೆ
ಪ್ರೀತಿಯಲ್ಲಿ ಅಸುರಕ್ಷತೆಯ ಭಾವನೆ ಸದಾ ಕಾಡುತ್ತಿರುತ್ತದೆ. ನೀವು ಎದುರಿಗಿನ ವ್ಯಕ್ತಿಯ ಮೇಲೆ ಸದಾ ಕಣ್ಣಿಟ್ಟಿರುತ್ತೀರಿ. ಆತ ಬೇರೆ ಯಾರನ್ನೂ ನೋಡುತ್ತಿಲ್ಲ ತಾನೇ, ಯಾರೊಂದಿಗಾದರೂ ಸಂಭಾಷಣೆ ನಡೆಸುತ್ತಿಲ್ಲ ತಾನೇ ಎಂದು ಗಮನಿಸುತ್ತಿರುತ್ತೀರಿ. ಬೇರೆ ವ್ಯಕ್ತಿ ನನ್ನ ಪ್ರೀತಿಯನ್ನು ಕಿತ್ತುಕೊಳ್ಳಲಿಕ್ಕಿಲ್ಲ ತಾನೇ ಎಂಬಂತಹ ಮಾತುಗಳು ನಿಮ್ಮ ಮನಸ್ಸಿನಲ್ಲಿ ಸದಾ ಓಡುತ್ತಿರುತ್ತವೆ. ಪ್ರೀತಿಯಲ್ಲಿ ನಾವು ಬಹಳ ವಿಶೇಷವಾಗಿ ಬಿಡುತ್ತೇವೆ. ನಮ್ಮದೆಲ್ಲವನ್ನು ಮರೆತುಬಿಡುತ್ತೇವೆ. ನಮ್ಮ ಇಡೀ ಗಮನ ಒಬ್ಬನೇ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿ ಬಿಡುತ್ತದೆ. ಇದರಿಂದ ನಮ್ಮ ಕೆಲಸ, ನಮ್ಮ ಶೆಡ್ಯೂಲ್ ಎಲ್ಲವೂ ಪ್ರಭಾವಿತಗೊಳ್ಳುತ್ತವೆ.
ಅವಲಂಬನೆ
ನೀವು ಪರಿಪೂರ್ಣವಾಗಿ ಯಾರೊಬ್ಬರ ಮೇಲೆ ಅವಲಂಬಿತರಾಗುತ್ತೀರೊ, ಆಗ ನೀವು ನಿಮ್ಮ ಪರ್ಸನಾಲಿಟಿಯನ್ನು ಕಳೆದುಕೊಂಡು ಬಿಡುತ್ತೀರಿ, ಬೇರೊಬ್ಬರ ವ್ಯಕ್ತಿತ್ವ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಆ ವ್ಯಕ್ತಿಯನ್ನು ಖುಷಿಯಿಂದಿಡಲು ನೀವು ಆ ವ್ಯಕ್ತಿಗೆ ಅನುರೂಪವಾದ ಮಾತುಗಳನ್ನು ಆಡುತ್ತೀರಿ. ಆ ವ್ಯಕ್ತಿ ಹೇಳಿದಂತಹ ಬಟ್ಟೆ ಧರಿಸುತ್ತೀರಿ. ಬೇರೊಬ್ಬರ ಜೊತೆ ಆ ವ್ಯಕ್ತಿಯ ಕುರಿತಾಗಿಯೇ ಮಾತನಾಡುತ್ತೀರಿ. ಇಡೀ ದಿನ ಆ ವ್ಯಕ್ತಿಯ ನೆನಪಲ್ಲಿಯೇ ಕಳೆದು ಹೋಗಿಬಿಡುತ್ತೀರಿ. ದಿನವಿಡೀ ಆ ವ್ಯಕ್ತಿಯ ಜೊತೆ ಸಂಪರ್ಕದಲ್ಲಿರಲು ಪ್ರಯತ್ನ ನಡೆಸುವಿರಿ. ಆ ವ್ಯಕ್ತಿ ನಿಮ್ಮನ್ನು ಉಪಯೋಗಿಸಿಕೊಳ್ಳಲು ಆರಂಭಿಸುತ್ತಾನೆ. ಆ ವ್ಯಕ್ತಿಗಾಗಿ ನೀವು `ಫಾರ್ ಗ್ರಾಂಟೆಡ್’ ಆಗಿಬಿಡುತ್ತೀರಿ. ಮಾನಸಿಕವಾಗಿ ನೀವು `ಡ್ರೇನ್ಡ್ ಔಟ್’ ಆಗಿಬಿಡುತ್ತೀರಿ. ನಿಮ್ಮ ಜೀವನದಲ್ಲಿ ಭಾರಿ ಬದಲಾವಣೆ ಉಂಟಾಗುತ್ತದೆ. ಒಬ್ಬ ವ್ಯಕ್ತಿ ನಿಮ್ಮ ವ್ಯವಸ್ಥೆಯ ಮೇಲೆಯೇ ದಾಳಿ ಮಾಡಿಬಿಡುತ್ತಾನೆ.
ಪ್ರೀತಿಯ ನಶೆ ಇಳಿದಾಗ
ಪ್ರೀತಿಯ ನಶೆ ಇಳಿದಾಗ ನಮ್ಮ ಕಣ್ಣಿಗೆ ಪಟ್ಟಿ ಕಟ್ಟಲ್ಪಟ್ಟಿತ್ತು, ನಾವು ಪ್ರೀತಿಯಲ್ಲಿ ಕುರುಡರಾಗಿದ್ದೆವು ಎಂದು ಹೇಳುತ್ತೇವೆ. ವಾಸ್ತವದ ಅರಿವಾದಾಗ ನಮಗೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಡಬಲ್ ಡೇಟಿಂಗ್ ಮಾಡುವ ವ್ಯಕ್ತಿಯ ಜೊತೆ ಸಂಪರ್ಕ ಇಟ್ಟುಕೊಂಡಿದ್ದು ತಪ್ಪು ಎಂದು ಅನಿಸತೊಡಗುತ್ತದೆ. ಸಾಮಾನ್ಯವಾಗಿ ಹುಡುಗಿಯರು ಸ್ಮಾರ್ಟ್ ನೆಸ್ ಹಾಗೂ ಹಣ ನೋಡಿ ಮರುಳಾಗಿ ಬಿಡುತ್ತಾರೆ. ಪ್ರೀತಿ ಅತ್ಯಂತ ಮಿಸ್ ಅಂಡರ್ ಸ್ಟಾಂಡ್ ಶಬ್ದ. ಪ್ರೀತಿಯಲ್ಲಿ ನಿಮಗೆಂದೂ 100% ರಿಟರ್ನ್ ಸಿಗುವುದಿಲ್ಲ. ನೀವು ಆ ವ್ಯಕ್ತಿಯನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತೀರೊ, ಆ ವ್ಯಕ್ತಿ ನಿಮ್ಮ ಬಗ್ಗೆ ಅಷ್ಟು ಕಾಳಜಿ ವಹಿಸುವುದಿಲ್ಲ, ಏಕೆ ಎಂದು ನಿಮಗೆ ಕಾಡುತ್ತಿರುತ್ತದೆ. ಅದರ ಬಗ್ಗೆ ನಿಮ್ಮನ್ನು ಕಿಂಚಿತ್ತೂ ಕೇಳುವುದಿಲ್ಲ. ನೀವು ಆತನಿಗಾಗಿ ತಂದೆ, ತಾಯಿ, ಸ್ನೇಹಿತರು ಅಷ್ಟೇ ಏಕೆ ಜವಾಬ್ದಾರಿಗಳನ್ನು ಕೂಡ ಮರೆತುಬಿಡುತ್ತೀರಿ. ಆದರೆ ಆತ ನಿಮ್ಮನ್ನೇ ಮರೆತು ಬಿಡುವು ಸ್ಥಿತಿಯಲ್ಲಿದ್ದಾನೆ.
ಪ್ರೀತಿಯಲ್ಲಿ ಧರ್ಮ ಬೆರೆತು ಇತ್ತೀಚೆಗೆ ಮರ್ಯಾದಾ ಹತ್ಯೆಯಂತಹ ಘಟನೆಗಳು ನಡೆಯುತ್ತಿವೆ. ಆತ್ಮಹತ್ಯೆ ಘಟನೆಗಳು ನಡೆಯುತ್ತಿವೆ. ಫೇಸ್ ಬುಕ್ ಹಾಗೂ ವಾಟ್ಸ್ ಆ್ಯಪ್ ಲೈನ್ ನಲ್ಲಿಯೇ ಲೈವ್ ಆಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಎಷ್ಟೋ ಸಲ ಬೇರೊಬ್ಬ ಧರ್ಮದ ವ್ಯಕ್ತಿ ಇನ್ನೊಂದು ಧರ್ಮದ ಹುಡುಗಿಯನ್ನು ತನ್ನ ಪ್ರೇಮಜಾಲದಲ್ಲಿ ಬೀಳಿಸಿಕೊಂಡು ಆಕೆಯನ್ನು ತನ್ನ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಲು ಒತ್ತಡ ಹೇರುತ್ತಾನೆ. ಎಷ್ಟೋ ಸಲ ದ್ವೇಷ ಸಾಧಿಸಲು ಸಹ ಪ್ರೀತಿ ಮಾಡುವವರು ಇದ್ದಾರೆ. ಇಂತಹ ಪ್ರಕರಣಗಳಲ್ಲಿ ಆ್ಯಸಿಡ್ ದಾಳಿ ಅಥವಾ ಕೊಲೆಯಂತಹ ಘಟನೆಗಳು ನಡೆದದ್ದನ್ನು ನಾವು ಗಮನಿಸಿದ್ದೇವೆ.
ಏಕಮುಖ ಪ್ರೀತಿಯಲ್ಲಿ ಸೈಕೋ ಲವರ್ಸ್ ಹುಟ್ಟಿಕೊಳ್ಳುತ್ತಾರೆ. ಇಂತಹದರಲ್ಲೂ ಹಲ್ಲೆ ಅಥವಾ ಆ್ಯಸಿಡ್ ಪ್ರಕರಣಗಳು ನಡೆಯುತ್ತಿರುತ್ತವೆ. ಸಂಗಾತಿಯೊಂದಿಗೆ ಸೇರಿಕೊಂಡು ಹಳೆಯ ಪ್ರೇಮಿಯನ್ನು ಮುಗಿಸುವ ವಿವಾಹಬಾಹಿರ ಪ್ರಕರಣದ ಘಟನೆಗಳು ನಡೆಯುತ್ತಿರುತ್ತವೆ.
ಹೇಗೆ ರಕ್ಷಿಸಿಕೊಳ್ಳುವುದು?
ಯಾವುದೇ ಒಬ್ಬ ವ್ಯಕ್ತಿಯನ್ನು ಅವನೇ ಎಲ್ಲ ಎಂದು ಭಾವಿಸಿ ನಿಮ್ಮ ಸಂಪೂರ್ಣ ಸಮಯ ಕೊಡಬೇಡಿ. ಒಂದು ಮಿತಿಯಲ್ಲಿದ್ದುಕೊಂಡು ಯಾರನ್ನಾದರೂ ಪ್ರೀತಿಸಿ.
ಯಾರೊಬ್ಬರಿಗಾಗಿ ನಿಮ್ಮ ಐಡೆಂಟಿಟಿಯನ್ನು ಕೊನೆಗೊಳಿಸಬೇಡಿ. ನಿಮ್ಮ ಪಡಿಯಚ್ಚು ನಿಮ್ಮದೇ ಆಗಿರಬೇಕೆ ಹೊರತು, ಬೇರೆಯರದ್ದು ಆಗಿರಬಾರದು.
ನಿಮ್ಮ ಇಷ್ಟದ ಕೆಲಸವನ್ನು ಸದಾ ಮಾಡುತ್ತಿರಿ. ಏಕೆಂದರೆ ನಿಮ್ಮ ಜೀವದಿಂದ ಯಾರಾದರೂ ಹೊರಟುಹೋದರೆ ನನ್ನ ಬಳಿ ಈಗ ಮಾಡಲು ಒಂದು ಕೆಲಸವಾದರೂ ಇದೆಯಲ್ಲ ಎಂದು ನೀವು ಅದರಲ್ಲಿ ಮಗ್ನರಾಗಬೇಕು.
– ಸ್ಮಿತಾ ರಾವ್
ಕಾನೂನು ಏನು ಹೇಳುತ್ತದೆ?
ರಿಸ್ಟ್ರಿಕ್ಷನ್ ಆರ್ಡರ್ : ಯಾವುದೊ ಒಬ್ಬ ವ್ಯಕ್ತಿ ನಿಮ್ಮನ್ನು ಪ್ರೀತಿ ಮಾಡುವ ನಾಟಕ ಆಡುತ್ತಿದ್ದಾನೆ. ಆದರೆ ಆತನ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ. ಆತ ನಿಮ್ಮ ಹಿಂದೆ ಬಿದ್ದು ಪೀಡಿಸುತ್ತಿದ್ದರೆ, ಆ ವ್ಯಕ್ತಿಯ ವಿರುದ್ಧ ರಿಸ್ಟ್ರಿಕ್ಷನ್ ಆರ್ಡರ್ ತರಬಹುದು. ಆ ಆರ್ಡರಿನನ್ವಯ 100 ಮೀಟರ್‌ಆಸುಪಾಸಿನಲ್ಲಿ ಆತ ಕಾಣಿಸಿಕೊಳ್ಳುವ ಹಾಗಿಲ್ಲ. ಇದರ ಹೊರತಾಗಿ ನೀವು ಬೇರೆ ಕೆಲವು ಕಾನೂನುಗಳನ್ನು ಅನ್ವಯಿಸುವಂತೆ ಮಾಡಬಹುದು :
ಸೆಕ್ಷನ್ 509 : ಯಾರಾದರೂ ಮಾತುಗಳಿಂದ ಅಥವಾ ಹಾವಭಾವದ ಮುಖಾಂತರ ನಿಮಗೆ ತೊಂದರೆ ಕೊಡುತ್ತಿದ್ದರೆ ಈ ಕಾನೂನಿನ ನೆರವು ಪಡೆಯಬಹುದು.
ಸೆಕ್ಷನ್ 506 : ನಿಮಗೆ ಯಾರಾದರೂ ಜೀವ ಬೆದರಿಕೆ ಹಾಕುತ್ತಿದ್ದರೆ, ಅತ್ಯಾಚಾರದ ಬೆದರಿಕೆ ಹಾಕುತ್ತಿದ್ದರೆ ಐಪಿಸಿ ಸೆಕ್ಷನ್ 506 ಅನ್ವಯಿಸಬಹುದು.
ಸೆಕ್ಷನ್ 376 : ಅತ್ಯಾಚಾರದ ಸಂದರ್ಭದಲ್ಲಿ ಈ ಸೆಕ್ಷನ್ ಅನ್ವಯಿಸುತ್ತದೆ.
ಸೆಕ್ಷನ್ 354 : ಸೆಕ್ಶುಯಲ್ ಹರಾಸ್ ಮೆಂಟ್ ಹಾಗೂ ಸ್ಟಾಕಿಂಗ್ ಮುಂತಾದ ಕೇಸ್ ಗಳಲ್ಲಿ 354ನೇ ಪ್ರಕರಣ ಅನ್ವಯಿಸಬಹುದು.
ಸೆಕ್ಷನ್ 302 : ಕೊಲೆ ಆರೋಪಿಗಳ ಮೇಲೆ ಈ ಸೆಕ್ಷನ್ ನಡಿ ಪ್ರಕರಣ ದಾಖಲಿಸಲಾಗುತ್ತದೆ.
ಸೆಕ್ಷನ್ 366 : ಮದುವೆಗಾಗಿ ಒತ್ತಾಯಿಸುವ ಉದ್ದೇಶದಿಂದ ಅಪಹರಣ ಮಾಡಿದಾಗ ಈ 366ನೇ ಸೆಕ್ಷನ್‌ಅನ್ವಯಿಸಲಾಗುತ್ತದೆ.
ಸೆಕ್ಷನ್ 326 : ಆ್ಯಸಿಡ್ ದಾಳಿಗಳಂತಹ ಪ್ರಕರಣಗಳಲ್ಲಿ ಈ ಸೆಕ್ಷನ್ ನಡಿ ಪ್ರಕರಣ ಹಾಕಲಾಗುತ್ತದೆ.