ನವ ದಂಪತಿಗಳಂತೂ ತಮ್ಮ ಆರಾಮ, ಸುಖಾಸೀನ ಸ್ಥಿತಿ, ರೊಮಾನ್ಸ್, ಪ್ರೇಮಾಲಾಪಕ್ಕೆ ಸದಾ ಬೆಡ್‌ರೂಮಿಗೇ ಅಂಟಿಕೊಳ್ಳುತ್ತಾರೆ.  ಬೆಡ್‌ರೂಮಿನ ಶಕ್ತಿಯ ಪ್ರಭಾವ ಅವರ ಸಂಬಂಧ, ಮಾನಸಿಕತೆಯನ್ನೂ ಅವಲಂಬಿಸಿದೆ.

ಎಕ್ಸ್ ಪರ್ಟ್ಸ್ ಸಲಹೆಯಂತೆ, ಪತಿಪತ್ನಿ ತಮ್ಮ ಜೀನವನ್ನು ಪ್ರೇಮಮಯಗೊಳಿಸಲು ಬಯಸಿದರೆ ಅದರ ಆರಂಭವನ್ನು ತಮ್ಮ ಬೆಡ್‌ರೂಮಿನಿಂದಲೇ ಮಾಡಬೇಕು. ಬೆಡ್‌ರೂಮನ್ನು ಸದಾ ಪರ್ಫೆಕ್ಟ್ ಆಗಿಡಿ. ಇದರಿಂದ ನಿಮ್ಮ ಸೆಕ್ಸ್ ಲೈಫ್‌ ಸದಾ ರೊಮ್ಯಾಂಟಿಕ್‌ ಆಗಿರುತ್ತದೆ.

ಬೆಡ್‌ರೂಮ್ ಅಲಂಕಾರಕ್ಕೆ ಟಿಪ್ಸ್ :  ಪ್ರೇಮ ನಿವೇದನೆಗೆ ಬೆಳಕು ಪೂರಕ, ಇದರ ಪಾತ್ರ ಹಿರಿದು. ಆದ್ದರಿಂದ ಬೆಡ್‌ರೂಮಿನಲ್ಲಿ ತೆಳು ಗುಲಾಬಿ, ಸ್ಕೈಬ್ಲೂ ಕಲರ್‌ ಬಳಸಿಕೊಳ್ಳಿ. ಕೊಠಡಿಯಲ್ಲಿ ಲೈಟ್‌ ಡೈರೆಕ್ಟ್ ಆಗಿ ಅಲ್ಲ, ಇನ್‌ಡೈರೆಕ್ಟ್ ಆಗಿ ಬೀಳಬೇಕು. ಲ್ಯಾಂಪ್‌ ಶೇಡ್‌ ಯಾ ಕಾರ್ನರ್‌ ಲೈಟ್‌ ಇದ್ದರೆ ಇನ್ನೂ ಉತ್ತಮ. ಇದರಿಂದ ಬೆಡ್‌ರೂಂ ರೊಮಾನ್ಸ್ ಮಜಾ ಇನ್ನಷ್ಟು ಹೆಚ್ಚುತ್ತದೆ.

ಹಣ್ಣುಗಳಿರಲಿ : ದ್ರಾಕ್ಷಿ, ಸ್ಟ್ರಾಬೆರಿ, ಸೇಬು, ಬಾಳೆಹಣ್ಣು, ಚೆರ್ರಿ, ಸಪೋಟಾಗಳ ಸುವಾಸನೆ ರೋಮಾಂಚನವನ್ನು ಹೆಚ್ಚಿಸುತ್ತದೆ.  ಇದರಿಂದ ಪ್ರೇಮದ ಲಹರಿ ತಂತಾನೇ ಹೆಚ್ಚುತ್ತದೆ.

ಬೆಡ್‌ ರೂಂ ರೊಮ್ಯಾಂಟಿಕ್‌ ಆಗಿರಲಿ : ಪತಿ ಪತ್ನಿಯರ ಆಂತರಿಕ ಸಂಬಂಧದಲ್ಲಿ ಪ್ರೇಮ ತುಂಬಿರಲಿ ಎಂಬುದಕ್ಕಾಗಿ ಅವರು ಒಮ್ಮೆ ತಂಪಾದ ಗಿರಿಧಾಮಗಳಿಗೆ ಹೋದರೆ, ಒಮ್ಮೆ ಸಾಗರತೀರ ಅಥವಾ ಮುದ ನೀಡುವ ಸ್ವಿಮಿಂಗ್‌ ಪೂಲ್‌ವುಳ್ಳ ಹೋಟೆಲ್‌ಆರಿಸಿಕೊಳ್ಳುತ್ತಾರೆ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಮಹತ್ವವಿದೆ, ಸೌಂದರ್ಯವಿದೆ. ಆದರೆ ಇದೇ ಸೌಂದರ್ಯವನ್ನು ವಿಭಿನ್ನತೆಯನ್ನು ನಿಮ್ಮ ಬೆಡ್‌ರೂಮಿನಲ್ಲಿ ಬೆರೆಸಿಕೊಳ್ಳಿ. ಏಕತಾನತೆಯ ಬದಲಾವಣೆಗಾಗಿ ಪತಿ ಪತ್ನಿ ತಮ್ಮ ರೊಮ್ಯಾಂಟಿಕ್‌ ಲೈಫ್‌ಗೆ ಒಂದು ಡೆಸ್ಟಿನೇಶನ್‌ ಪಾಯಿಂಟ್‌ ನೀಡಬಹುದು. ಕೋಣೆಯ ಮೂಲೆಯೊಂದನ್ನು ಕೃತಕ ಕಾರಂಜಿ, ವರ್ಣರಂಜಿತ ಹೂಗಳು, ತೈಲಚಿತ್ರ ಇತ್ಯಾದಿಗಳಿಂದ ಅಲಂಕರಿಸಿ. ಜೊತೆಗೆ ನಿಮ್ಮ ಬೆಡ್‌ರೂಮಿನ ಅಲ್ಮೇರಾ, ಸೋಫಾ, ಟೇಬಲ್ ಇತ್ಯಾದಿ ಸಹ ಆಗಾಗ ಬದಲಿಸುತ್ತಿರಿ. ಆಗ ಬೆಡ್‌ರೂಂ ಆಕರ್ಷಕ ಎನಿಸುತ್ತದೆ.

ಬೆಡ್‌ ರೂಂ ಸುಸಜ್ಜಿತಾಗಿರಲಿ : ಬೆಡ್‌ರೂಂ ಸದಾ ಉತ್ತಮ ರೀತಿಯಲ್ಲಿ ಡೆಕೋರೇಟೆಡ್‌ ಆಗಿರಬೇಕು. ಅದರ ಇಂಟೀರಿಯರರ್ಸ್‌ನಿಮ್ಮನ್ನು ಮತ್ತೆ ಮತ್ತೆ ಅದೇ ಕೋಣೆಗೆ ಹೋಗುವಂತೆ ಒತ್ತಾಯಿಸುವಂತಿರಬೇಕು. ತೆಳು ಪರದೆ ಪಾರದರ್ಶಕವಾಗಿದ್ದು, ಕಿಟಕಿ ಮೂಲಕ ನೀಲಾಕಾಶ ಕಾಣುವಂತಿರಬೇಕು. ಇದರಲ್ಲಿ ಬಗೆಬಗೆಯ ಇನ್‌ಡೋರ್‌ ಪ್ಲಾಂಟ್ಸ್ ಇರಲಿ, ಹೂಬಳ್ಳಿಗಳಿರಲಿ. ಗಿಡಗಳಿಗೆ ಲಘು ಬಿಸಿಲು ತಾಗುವಂತಿರಲಿ. ಆಗ ನಿಮ್ಮ ಮೂಡ್‌ ಹೆಚ್ಚು ರೊಮ್ಯಾಂಟಿಕ್‌ ಆಗಿರುತ್ತದೆ.

ಫೋಟೋ :  ಬೆಡ್‌ರೂಮಿನಲ್ಲಿ ರೊಮ್ಯಾಂಟಿಕ್‌ ಫೋಟೋ ಇರಲಿ. ಲವಿಂಗ್‌ ಬರ್ಡ್‌, ಜೋಡಿ ಹಂಸ, ಡ್ಯಾನ್ಸಿಂಗ್‌ ಸ್ವಾನ್ಸ್, ರೆಡ್‌ರೋಸ್‌ ಇತ್ಯಾದಿ ಇರಲಿ. ಇವನ್ನು ನೋಡಿ ಪ್ರೇಮಲಹರಿ ಉಕ್ಕಿ ಹರಿಯುವಂತಿರಬೇಕು.

ಬೆಡ್‌: ನಿಮ್ಮ ಮೂಡ್‌ನ್ನು ಸರಿಯಾಗಿ ಇರಿಸಲು ಹಾಸಿಗೆ ಕೂಡ ಮುಖ್ಯವಾದುದು. ಹೀಗಾಗಿ ಹಾಸಿಗೆ ಒರಟಾಗಿ ಒತ್ತುವಂತಿರ ಬಾರದು. ದಿಂಬುಗಳು ಮೃದುವಾಗಿದ್ದು, ಅದರ ಮೇಲೆ ಲವ್ ಮಾರ್ಕ್‌ ಇರುವ ಕವರ್‌ ಇರಬೇಕು. ಬೆಡ್‌ಶೀಟ್‌ ಬಣ್ಣ ಪ್ರೇಮಾನುರಾಗ ಹೆಚ್ಚಿಸುವಂತಿರಬೇಕು.

ಸುವಾಸನೆ : ಬೆಡ್‌ರೂಮಿನ ಸುವಾಸನೆ ನಮ್ಮ ಅಂತರಂಗದ ಭಾವನೆಗಳನ್ನು ಹಿತವಾಗಿ ಮೀಟುವಂತಿರಬೇಕು. ರೊಮಾನ್ಸ್ ಹೆಚ್ಚಿಸಲು ಹಲವು ಬಗೆಯ ಪರ್ಫ್ಯೂಮ್ ಬಳಸಬಹುದು. ಲ್ಯಾವೆಂಡರ್‌, ಮಲ್ಲಿಗೆ, ಸಂಪಿಗೆ, ಕೇದಗೆ, ಬ್ರೂಟ್‌, ಒನ್‌ಮ್ಯಾನ್‌ ಶೋ, ಲೇಡಿ ಲವ್.... ಇತ್ಯಾದಿ ಬಗೆ ಬಗೆಯ ಸುವಾಸನೆ ನಿಮ್ಮ ಮೂಡ್‌ ಬೆಳಗಿಸುತ್ತವೆ. ಬೆಡ್‌ರೂಮಿನಲ್ಲಿ ಬ್ಯೂಟಿಫುಲ್ ಬೊಕೆ ಇರಲಿ. ಆ್ಯರೋಮಾ ಕ್ಯಾಂಡಲ್ ಹಚ್ಚಿಡಿ. ಇದು ಬೆಡ್‌ರೂಮಿನಲ್ಲಿ ತೆಳು ಬೆಳಕು ಸೂಸುವುದಲ್ಲದೆ, ಇದರ ಉರಿಯುವಿಕೆಯಿಂದ ಮಂದ ಸುವಾಸನೆಯೂ ಹರಡುತ್ತಿರುತ್ತದೆ. ಇದು ಸಹಜವಾಗಿ ರೊಮಾನ್ಸ್ ಹೆಚ್ಚಿಸಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ