ಪ್ರೀತಿ ಒಂದು ಸುಂದರ ಅನುಭವ. ಅದನ್ನು ಶಬ್ದಗಳಲ್ಲಿ ಪ್ರಸ್ತುತಪಡಿಸುವುದು ಅಸಾಧ್ಯ. ಆದರೆ ಯುವಜನರಲ್ಲಿ ಏರಿದ ಪ್ರೀತಿಯ ಅಮಲು ಮದುವೆಯ ಬಳಿಕ ಇಳಿಯತೊಡಗುತ್ತದೆ. ಕೈಯಲ್ಲಿ ಕೈ ಹಾಕಿಕೊಂಡು ಪ್ರೀತಿಯೇ ನನ್ನ ಉಸಿರು ಎನ್ನುತ್ತಾರೆ. ಅಷ್ಟೇ ಬೇಗನೇ ಉಸಿರು ನಿಲ್ಲಿಸುವ ಬಗ್ಗೆ ಮಾತನ್ನಾಡುತ್ತಾರೆ.

ಮದುವೆಯ ಬಳಿಕ ಸಂಬಂಧಕ್ಕೆ ಕಾನೂನು ಮಾನ್ಯತೆ ದೊರೆಯುತ್ತದೆ. ಸಾಮಾಜಿಕ ಮಾನ್ಯತೆ ದೊರೆತ ಬಳಿಕ ನವಜೋಡಿಗೆ ಪರಸ್ಪರರ ಬಗ್ಗೆ ಆಸಕ್ತಿ ಹಾಗೂ ಅಭಿಲಾಷೆಗಳು ಹೆಚ್ಚುತ್ತವೆ. ಈಗ ಅವರು ಪರಸ್ಪರರಲ್ಲಿ ತಮ್ಮದೇ ಆದ ರೀತಿಯಲ್ಲಿ ಬದಲಾವಣೆಯನ್ನು ಬಯಸುತ್ತಾರೆ.

ಬ್ರಿಟಿಷ್‌ ರಿಚರ್ಸ್‌ ಏಜೆನ್ಸಿ `ಜಿಂಜರ್‌' ವಿವಾಹಿತ ದಂಪತಿಗಳ ಬಗ್ಗೆ ಒಂದು ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯಲ್ಲಿ ಹಲವು ರೋಚಕ ಆದರೆ ಅಚ್ಚರಿ ಹುಟ್ಟಿಸುವ ಸಂಗತಿಗಳು ಬೆಳಕಿಗೆ ಬಂದವು.

ರಿಲೇಶನ್‌ಶಿಪ್‌ ಎಕ್ಸ್ ಪರ್ಟ್‌ ಮತ್ತು ಸೈಕಾಲಜಿಸ್ಟ್ ಡೋನಾ ಡಾಬರ್‌ಸನ್‌ ಹೀಗೆ ಹೇಳುತ್ತಾರೆ, ``ಈ ಸಮೀಕ್ಷೆಯಲ್ಲಿ ಕಂಡುಬಂದ ಪ್ರಕಾರ, ನವಜೋಡಿಗೆ ಪರಸ್ಪರರ ಪ್ರೀತಿಯ ಅವಶ್ಯಕತೆ ಎಷ್ಟೊಂದು ಇದೆ ಎಂದು ಅರಿವಾಗುತ್ತದೆ. ಸ್ತ್ರೀಯರಿಗೆ ಹೋಲಿಸಿದಲ್ಲಿ ಪುರುಷರಲ್ಲಿ ತಮ್ಮ ಸಂಗಾತಿಯಿಂದ ಪ್ರೀತಿಯ ಅಧಿಕ ಅಪೇಕ್ಷೆ ಇರುತ್ತದೆ. ಅದೇ ರೀತಿ ಹೆಂಡತಿಯ ಅಪೇಕ್ಷೆ ತನ್ನ ಗಂಡ ಮೊದಲಿನ ದುಶ್ಚಟಗಳನ್ನೆಲ್ಲ ಬಿಡಬೇಕು ಎಂಬುದಾಗಿರುತ್ತದೆ. ಮಾತುಕತೆಯಲ್ಲಿ ತನ್ನ ಮನಸ್ಸು ನೋಯಿಸಬಾರದು ಹಾಗೂ ತನ್ನ ಮಾತುಗಳನ್ನು ಗಮನವಿಟ್ಟು ಆಲಿಸಬೇಕು, ತನ್ನನ್ನು ಹೊಗಳುತ್ತಿರಬೇಕು ಎಂಬುದು ಕೂಡ ಅವಳ ಅಪೇಕ್ಷೆಗಳಾಗಿರುತ್ತವೆ.''

ಪತ್ನಿ ತನ್ನನ್ನು ಹೆಚ್ಚೆಚ್ಚು ಪ್ರೀತಿಸಬೇಕು. ಬೇರೆಯವರಿಗಿಂತ ತನ್ನ ಹೆಂಡತಿ ಹೆಚ್ಚು ಗ್ಲಾಮರಸ್‌ ಆಗಿ ಕಾಣಬೇಕು ಎಂಬ ಅಪೇಕ್ಷೆ ಕೂಡ ಗಂಡನಿಗಿರುತ್ತದೆ. ತನ್ನ ಹೆಂಡತಿ ದಣಿದು ಸುಸ್ತಾದವಳಂತೆ ಕಂಡುಬರಬಾರದು. ಸದಾ, ಸ್ಮಾರ್ಟ್‌ ಆಗಿ ಕಂಡುಬರಬೇಕು ಎಂದು ಪತಿ ಅಪೇಕ್ಷಿಸುತ್ತಾನೆ. ಮದುವೆಯ ಬಳಿಕ ಗಂಡಹೆಂಡತಿ ಬಹಳಷ್ಟು ಬದಲಾವಣೆ ಬಯಸುತ್ತಾರೆ. ಈ ಬದಲಾವಣೆ ಏನಾದರೂ ಕಂಡುಬರದೇ ಇದ್ದರೆ ಅವರಲ್ಲಿ ನಿರಾಶೆ ಆವರಿಸುತ್ತದೆ. ಅದೇ ಮುಂದೆ ಅವರಲ್ಲಿ ಅತೃಪ್ತಿಯನ್ನು ಉಂಟುಮಾಡುತ್ತದೆ.

ಬದಲಾವಣೆಯ ದೂರು

ಒಂದೆಡೆ ಹೊಸದಾಗಿ ಮದುವೆಯಾದ ಬಳಿಕ ಗಂಡ ಹೆಂಡತಿ ಪರಸ್ಪರರಲ್ಲಿ ಬದಲಾವಣೆ ಕಾಣಲು ಬಯಸುತ್ತಾರೆ. ಮತ್ತೊಂದೆಡೆ, ಮದುವೆಯಾದ ಬಳಿಕ ಗಂಡ ಹೆಂಡತಿ ಹೀಗೂ ಹೇಳುತ್ತಾರೆ, ``ನೀನು ಮೊದಲು ಹೀಗಿರಲಿಲ್ಲ, ಮದುವೆಯ ಬಳಿಕ ಬಹಳ ಬದಲಾಗಿಬಿಟ್ಟೆ.''

ಮದುವೆಯ ಬಳಿಕ ಗಂಡಹೆಂಡತಿ ಸದಾ ಜೊತೆಗೆ ಇರುವುದರಿಂದ, ಅವರು ಬಹಳಷ್ಟು ಪರಸ್ಪರರ ಬಗ್ಗೆ ಹೊಸ ಹೊಸ ಸಂಗತಿಗಳನ್ನು  ತಿಳಿದುಕೊಳ್ಳುತ್ತಾರೆ. ಮದುವೆಗೂ ಮುನ್ನ ಈ ಸಂಗತಿಗಳು ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ. ಉದಾಹರಣೆಗೆ ಸಂಗಾತಿ ಹೆಚ್ಚು ಸಮಯದ ತನಕ ಮಲಗಿಕೊಂಡಿರುವುದು, ಕೆಲಸ ಮುಂದೂಡುವುದು, ಹೆಚ್ಚು ಹೊತ್ತಿನ ತನಕ ಸ್ನಾನದ ಮನೆಯಲ್ಲಿ ಇರುವುದು, ತನ್ನ ಕೋಣೆಯಲ್ಲಿ ಯಾವುದೇ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಹರವಿಕೊಂಡಿರುವುದು ಮುಂತಾದವು.

ಎಷ್ಟೋ ಜನರು ಮದುವೆಗೂ ಮುಂಚೆ ಸಂಗಾತಿಯನ್ನು ಮೆಚ್ಚಿಸಲು ಕೆಲಸ ಮಾಡುತ್ತಿರುವುದನ್ನು ತೋರಿಸುತ್ತಾರೆ.  ಆದರೆ ಅದು ಅವರ ಅಭ್ಯಾಸದಲ್ಲಿ ಸೇರ್ಪಡೆ ಆಗಿರುವುದಿಲ್ಲ. ಮದುವೆಯ ಬಳಿಕ ಅವರ ವಾಸ್ತವ ದರ್ಶನ ಆದಾಗ ಸಂಗಾತಿ ಬದಲಾಗಿರುವಂತೆ ಕಂಡುಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ