*ಬಂದಿದ್ದೇವೆ ಅಂದ ಮೇಲೆ ಹೋಗಿಯೇ ಹೋಗುತ್ತೇವೆ, ಎನ್ನುವುದೂ ನಿಶ್ಚಯವೇ*

ಇಬ್ಬರಲ್ಲಿ ಯಾರಾದರೂ ಒಬ್ಬರು ಮೊದಲು ಹೋಗಬೇಕು...

ಅದು ಗಂಡನಿಗೂ (ಅವನಿಗೂ) ಗೊತ್ತು, ಹೆಂಡತಿಗೂ (ಅವಳಿಗೂ) ಗೊತ್ತು..!

ಗಂಡನಿಗೆ ತನ್ನ ಹೆಂಡತಿಯ ಕಾಳಜಿ, ಅವಳು ಎಂದಿಗೂ ಬ್ಯಾಂಕಿಗೆ ಹೋಗಲಿಲ್ಲ,

ಅಂಚೆ ಕಚೇರಿಗೂ ಇಲ್ಲ,

ನಿಗಮಕ್ಕೂ ಇಲ್ಲ,

ಯಾವುದೇ ಬಿಲ್ಲು ಪಾವತಿಗೆ ಇಲ್ಲ,

ವಿಮಾ ಕಚೇರಿಗೂ ಇಲ್ಲ ...

ಆನ್‌ಲೈನ್ ಬ್ಯಾಂಕಿಂಗ್ ಬರುವುದಿಲ್ಲ ....

ಇದೆಲ್ಲಾ ಅವಳಿಗೆ ಹೇಗೆ ಸಾಧ್ಯವಾದೀತು?

ಹೆಂಡತಿಗೋ ಗಂಡನ ಚಿಂತೆ...

ಬೆಳಿಗ್ಗೆ ಎದ್ದಾಕ್ಷಣ ಅವನಿಗೆ ಶುಂಠಿ ಏಲಕ್ಕಿ ಚಹಾ ಬೇಕು,

ಒಳ್ಳೆಯ ಬಿಸ್ಕತ್ತಿನ ಜೊತೆ ..

ಅದು ಇಲ್ಲದೆ ಬೆಳಗಿನ ನಡೆದಾಟ ಸಾಧ್ಯವಿಲ್ಲ... ಹಿಂತಿರುಗಲು ಬಿಸಿ ಉಪಹಾರ,

ಅವರಿಗೆ ಅವರ ಬಟ್ಟೆಗಳೂ ಬೇಗ ಸಿಗುವುದಿಲ್ಲ...!

ಮಧ್ಯಾಹ್ನದ ಊಟ, ವಿಶ್ರಾಂತಿ

ಸಂಜೆಯ ಪ್ರತ್ಯೇಕ ಮೆನು

ಎಲ್ಲವೂ ಕ್ರಮದಲ್ಲಿರಬೇಕು...

ನಾನಿಲ್ಲದೆ ಹೋದಾಗ ಇದನೆಲ್ಲ ಅವರು ಹೇಗೆ ನಿಭಾಯಿಸಿಯಾರು ...?

ಒಂದು ದಿನ ಅವನು ಅವಳನ್ನು ಬ್ಯಾಂಕಿಗೆ ಕರೆದೊಯ್ದ,

ಅವಳಿಂದಲೇ ಎಟಿಎಂನಿಂದ ಹಣ ತೆಗೆಸಿದ,

ಮದುವೆಯ ದಿನಾಂಕದ ಪಿನ್ ಹಾಕಿಸಿದ

ಸ್ನೇಹಿತರಿಗೆ ಹೇಳಿದ, ನಾನು ಇಲ್ಲದಿದ್ದರೆ ಸ್ವಲ್ಪ ...

ಹೆಂಡತಿಯೂ ಕಾಯಿಲೆಯ ಸುಳ್ಳು ನೆಪದಲ್ಲಿ ಮಲಗಿದಳು,

ಪತಿಯಿಂದ ತಿಂಡಿ, ಚಾ ಮಾಡಿಸಿದಳು.

ತುಂಬಾ ಚೆನ್ನಾಗಿ ಆಗಿದೆ ..

couple 1

ಮೆಚ್ಚುಗೆಯ ತೋರಿದಳು ...!!!

ಈಗ ಪತಿ ಪತ್ನಿಯನ್ನು ಎಲ್ಲ ಕಡೆ ಕರೆದೊಯ್ದ,

ಅಡುಗೆ ಗ್ಯಾಸ್ ಕಾದಿರಿಸುವುದು, ನೋಂದಣಿ,

ಬಿಲ್ಲುಗಳ ಪಾವತಿ,

ಎಲ್ಲವನು ತಿಳಿ ಹೇಳಿದ.

ಪತ್ನಿಯಿಂದ ಅನ್ನ, ಸಾರು, ಸಾಂಬಾರು, ಖಿಚಡಿ

ಮಾಡಲು ಕಲಿಯಲು ತೊಡಗಿದ ...

ಈಗ ಗಂಡನಿಗೆ ಸ್ವಲ್ಪ ಸಮಾಧಾನ, ಹೆಂಡತಿಗೂ.

ಕಾಲನಿಗೆ ಹೇಳಿದರು,

ಈಗ ಬಾ ನೀನು, ಬಾ ನೀನು

ಈಗ ನನಗೆ ನಿಶ್ಚಿಂತೆ, ಸಂತೋಷ ...!!

ಸಾಯಲು ನಾನು ಸಿದ್ಧ, ಹೇ ಸಾವೇ ನಿನಗೆ ಸ್ವಾಗತ...!!

xxxx

*ಸ್ನೇಹಿತರೇ, ಜೀವನದ ಆರಂಭದ ಹಾಗೆ, ಜೀವನದ ಅಂತ್ಯಕ್ಕೂ ಸಾಕಷ್ಟು ಸಿದ್ಧತೆ ಬೇಕು*.

couple

*ಇದಿಲ್ಲದಿದ್ದರೆ #ಜೀವನ ಸಂಗಾತಿಗೆ ತುಂಬಾ ತೊಂದರೆ. ಯಾಕೆಂದರೆ ಯಾರ ಸರದಿ ಮೊದಲೋ ...??* *ಯಾರಿಗೂ ತಿಳಿಯದು.*

# ವೃದ್ಧಾಪ್ಯಕ್ಕೆ ಒಳ್ಳೆಯ ಹೆಸರಿದೆ,

ಯಾರೋ ಹೇಳುತ್ತಾರೆ "ಸನ್ಯಾಸ ಆಶ್ರಮ",

ಇನ್ನಾರೋ "#ವಾನಪ್ರಸ್ಥಾಶ್ರಮ" ಎನ್ನುತ್ತಾರೆ,

*ಆದರೆ ನಾನು "ಆನಂದಾಶ್ರಮ" ಅನ್ನುತ್ತೇನೆ...!!*

*#ವೃದ್ಧಾಪ್ಯದಲ್ಲಿ ನಾವು ಹೇಗಿರಬೇಕು*?

*ನೀವು ಮನೆಯಲ್ಲಿದ್ದರೆ, ಒಂದು "ಆಶ್ರಮ"ದಂತೆ..*

*ನೀವು ಆಶ್ರಮದಲ್ಲಿದ್ದರೆ, "ಮನೆ"ಯಲ್ಲಿದ್ದಂತೆ...*

ಎಲ್ಲಿಯೂ ಗೊಂದಲ ಮಾಡಿಕೊಳ್ಳದಿರಿ.

ಹಳೆಯ ನೆನಪುಗಳನ್ನು ಮೆಲುಕು ಹಾಕಬೇಡಿ.

"ನಮ್ಮ ಕಾಲದಲ್ಲಿ..." ಎಂದು ಹೇಳಬೇಡಿ.

ಅವಮಾನವಾದರೆ ತೋರಿಸಬೇಡಿ.

ಮಾತು ಉದ್ದಕ್ಕೆ ಎಳೆಯದಿರಿ,

ಸಂತೋಷವನ್ನು ಕಾಪಾಡಿ...

ಎಲ್ಲರೊಂದಿಗೆ ಸ್ನೇಹದಿಂದಿರಿ...

ಕೋಪ ಮತ್ತು ದುರಾಸೆಯನ್ನು ದೂರ ಓಡಿಸಿ,

ಯಾವಾಗಲೂ ಆನಂದ ಅನುಭವಿಸಿ.

ವೃದ್ಧಾಪ್ಯವೂ ಒಳ್ಳೆಯದೇ ...

ಕನ್ನಡಕದಿಂದ ಚೆನ್ನಾಗಿ ಕಾಣಿಸುತ್ತದೆ,

ಹೊಸ ಹಲ್ಲುಗಳಿಂದ ಸುಲಭದಲ್ಲಿ ಅಗಿಯಬಹುದು,

ಶ್ರವಣ ಸಾಧನದಿಂದ ಚೆನ್ನಾಗಿ ಕೇಳಿಸುತ್ತದೆ...

ಉದ್ಯಾನಕ್ಕೆ ಹೋಗಿ ಮತ್ತು ಮತ್ತೆ ಹಿಂತಿರುಗಿ,

ದೇವಸ್ಥಾನಕ್ಕೆ ಹೋಗಿ, ಭಜನೆ ಮಾಡಿ.

ಟಿವಿ ನೋಡಿ, ಒಳ್ಳೆಯ ಧಾರಾವಾಹಿ ನೋಡಿ...

ಮಕ್ಕಳೆದುರು ಸುಮ್ಮನಿರಿ, ಮೊಮ್ಮಕ್ಕಳೊಡನೆ ಆಟವಾಡಿ,

ಹೆಂಡತಿ ಜೊತೆ ಹುಸಿ ಜಗಳವಾಡಿ,

ಸ್ನೇಹಿತರನ್ನು ಕರೆದು ಮಾತನಾಡುತ್ತಲೇ ಇರಿ,

ಮನಸ್ಸಾದರೆ ತಿರುಗಾಟಕ್ಕೆ ಹೋಗಿ,

ಹೆಂಡತಿಯ ವಸ್ತುಗಳನ್ನು

ಎತ್ತಿ ಇಡುತ್ತಿರಿ.

ಹಾಡಬೇಕೆನ್ನಿಸಿದರೆ ಹಾಡಿ,

ಒಬ್ಬರೇ ಇದ್ದಾಗ ನೃತ್ಯ ಮಾಡಿ,

ಯಾರಾದರೂ ನೋಡಿದರೆ, ವ್ಯಾಯಾಮವೆನ್ನಿ.

*ಆಯಾಸವಾದರೆ ಕುಳಿತುಕೊಳ್ಳಿ...*

*ಬೇಸರವಾದರೆ ಮಲಗಿ*

ಮನೆಯಲ್ಲಿ ಒಂಟಿಯಾದರೆ ....

ಅಡುಗೆ ಮನೆಗೆ ಹೋಗಿ ಬೆಣ್ಣೆ ಸ್ವಚ್ಛ ಮಾಡಿ,

ಮಕ್ಕಳ ಉಪಾಹಾರದ ರುಚಿ ನೋಡಿ,

ನಿಮಗೆ ಬೇಕೆನಿಸಿದರೆ ಸಕ್ಕರೆಯೂ ತಿನ್ನಿ,

ಹಳೆಯ ಅಂಗಿ ಹಾಕಿ ನೋಡಿ,

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ