“ತಾತ, ಈಗಿನಂತೆ ನೀವೆಲ್ಲಾ ನಿಮ್ಮ ಕಾಲದಲ್ಲಿ

ತಂತ್ರಜ್ಞಾನವಿಲ್ಲದೇ

ಕಂಪ್ಯೂಟರ್ ಇಲ್ಲದೇ

ಡ್ರೋಣ್ ಇಲ್ಲದೇ

ಬಿಟ್ ಕಾಯಿನ್ಸ್ ಇಲ್ಲದೇ

ಇಂಟರ್ನೆಟ್ ಇಲ್ಲದೇ

ಟಿವಿ ಇಲ್ಲದೇ

ಹವಾ ನಿಯಂತ್ರಣವಿಲ್ಲದೇ

ಕಾರಿಲ್ಲದೇ

ಮೊಬೈಲ್ ಇಲ್ಲದೇ ಹೇಗೆ ಬದುಕಿದ್ರಿ?”.

ಅದಕ್ಕೆ ತಾತ ಅಷ್ಟೇ ಸುಂದರವಾಗಿ ಉತ್ತರಿಸಿದ,

“ಇಂದು ನೀವು

ಪ್ರಾರ್ಥನೆ ಇಲ್ಲದೇ

ಸಹಾನುಭೂತಿ ಇಲ್ಲದೇ

ಪರಸ್ಪರ ಗೌರವವಿಲ್ಲದೇ

ನೈಜ ಶಿಕ್ಷಣವಿಲ್ಲದೇ

ನೈಜ ವ್ಯಕ್ತಿತ್ವವಿಲ್ಲದೇ

ಹೃದಯವಂತಿಕೆಯಿಲ್ಲದೇ

ನಾಚಿಕೆಯಿಲ್ಲದೇ

ನಮ್ರತೆಯಿಲ್ಲದೇ

ಪ್ರಾಮಾಣಿಕತೆ

ಇದ್ಯಾವುದೂ ಇಲ್ಲದೇ ಹೇಗೆ ಬದುಕುತ್ತಿದ್ದೀರೋ, ಆ ಕಾಲದಲ್ಲಿ ನಾವೂ ಕೂಡ ನಿಮಗಿರುವ ಯಾವ ಆಧುನಿಕ ಸೌಕರ್ಯಗಳಿಲ್ಲದೆಯೂ ಬದುಕಿದ್ದೆವು”.

ಅಷ್ಟೇ ಅಲ್ಲ, 1930-1990 ರವರೆಗೆ ಜನಿಸಿದ ನಾವೆಲ್ಲಾ ಏನಿದೇವೆ, ಇಂದು ನಾವು ಬದುಕುತ್ತಿರುವ ರೀತಿಯೇ ಅಂದಿನ ನಮ್ಮ ಜೀವನ ಶೈಲಿಯನ್ನು ಹೇಳುತ್ತೆ.

thatha1

ನಿಮಗೆ ಗೊತ್ತಿರಲಿ; ನಾವು ಆಟವಾಡುವಾಗ ಅಥವಾ ಬೈಕ್ ಓಡಿಸುವಾಗ ಎಂದೂ ಹೆಲ್ಮೆಟ್ ಹಾಕುತ್ತಿರಲಿಲ್ಲ. ಅಷ್ಟರಮಟ್ಟಿಗೆ ಸ್ವ-ನಿಯಂತ್ರಣ ಇತ್ತು. ಶಾಲೆ ಮುಗಿದ ನಂತರ ನಮ್ಮಷ್ಟಕ್ಕೆ ನಾವೇ ಹೋಂವರ್ಕ್ ಮುಗಿಸಿ, ಹುಲ್ಲಿನ ಮೈದಾನದಲ್ಲಿ ಸೂರ್ಯ ಮುಳುಗುವವರೆಗೂ ಆಟವಾಡಿಕೊಳ್ತಾ ಇದ್ದೆವು. ನೆರೆಹೊರೆಯ ಸ್ನೇಹಿತರ ಜೊತೆಗೆ ಆಟವಾಡುತ್ತಿದ್ದೇವೆಯೇ ಹೊರತು, ನಿಮ್ಮ ಹಾಗೆ ವಿಡಿಯೋ ಕಾಲ್ ಮಾಡ್ಕೊಂಡ್ ವರ್ಚುವಲ್ ಫ್ರೆಂಡ್ ಜೊತೆ ಆಟವಾಡ್ತಾ ಇರಲಿಲ್ಲ. ಬಾಯಾರಿಕೆಯಾದರೆ ನಿಮ್ಮ ಹಾಗೆ ಮಿನರಲ್ ನೀರು ಕುಡಿತಾ ಇರಲಿಲ್ಲ. ಕೊಳ, ಕೆರೆ, ಬಾವಿ, ಚಿಲುಮೆಗಳಲ್ಲಿ ನೀರು ಕುಡಿತಾ ಇದ್ದೆವು. ಸ್ನೇಹಿತರೆಲ್ಲ ಒಂದೇ ತಟ್ಟೆಯಲ್ಲಿ ಊಟ ಹಾಗೂ ಒಂದೇ ಲೋಟದಲ್ಲಿ ಪಾನೀಯಗಳನ್ನು ಕುಡಿತಾ ಇದ್ದೆವು. ಯಾವುದೇ ರೋಗರುಜಿನ, ಸೋಂಕಿನ ಭಯವಿರಲಿಲ್ಲ. ಪ್ರತಿನಿತ್ಯ ನಾವು ಸೇವಿಸುತ್ತಿದ್ದ ಆಹಾರಗಳು ನಮಗೆ ಬೊಜ್ಜು ಹೆಚ್ಚಿಸುವ ಭಯವಿರಲಿಲ್ಲ. ಪಾದರಕ್ಷೆಗಳಿಲ್ಲದೇ ನಡೆದಾಡಿದರೂ ನಮ್ಮ ಪಾದಗಳಲ್ಲಿ ಯಾವುದೇ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆರೋಗ್ಯವಾಗಿರಬೇಕೆಂದು ದಿನನಿತ್ಯ ಬಳಸುವ ಆಹಾರದ ಜೊತೆ ವಿಶೇಷವಾಗಿ, ಪೂರಕವಾದ ಆಹಾರವನ್ನು ಬಳಸುತ್ತಿರಲಿಲ್ಲ. ನಮ್ಮನ್ನ ಹೆತ್ತವರು ಶ್ರೀಮಂತರಾಗಿರಲಿಲ್ಲ. ಆ ಕಾರಣಕ್ಕೆ ಅವರು ನಿರ್ಜೀವ ವಸ್ತುಗಳ ಗಿಫ್ಟ್ ಕೊಡದೇ ನೈಜ ಪ್ರೀತಿಯನ್ನು ನಮಗೆ ಧಾರೆ ಎರೆದಿದ್ದರು. ನಾವು ಮೊಬೈಲ್, ಡಿವಿಡಿ, ಪಿಎಸ್ಪಿ, ವಿಡಿಯೋ ಗೇಮ್, ಲ್ಯಾಪ್‌ಟಾಪ್, ಇಂಟರ್ನೆಟ್ ಚಾಟ್ ಹೊಂದಿರಲಿಲ್ಲ. ಆದರೆ ಉತ್ತಮ ಗೆಳೆಯರಿದ್ದರು. ಕರೆಯದೇ ಇದ್ದರೂ ನಾವು ನಮ್ಮ ಸ್ನೇಹಿತರ ಮನೆಗೆ ಹೋಗಿ ಅವರ ಮನೆಯಲ್ಲಿ ತಂಗಳಿರಲಿ, ಮೃಷ್ಟಾನ್ನವಿರಲಿ ಸವಿದು ಬರುತ್ತಿದ್ದೆವು.

ಮಕ್ಕಳಿಗೆ ಕೌಟುಂಬಿಕ ಸಮಯ ನೀಡಲು ನಮ್ಮ ಪೋಷಕರು ಮರೆಯುತ್ತಿರಲಿಲ್ಲ. ನಮ್ಮ ಕಾಲದಲ್ಲಿ ಇದ್ದಿದ್ದು ಕಪ್ಪು ಬಿಳುಪಿನ ಫೋಟೋಗಳೇ ಆದರೂ ಇಂದಿಗೂ ಕಲರ್ ಫುಲ್ ನೆನಪುಗಳು ಮಾಸದಂತಿವೆ.

ನಾವೆಲ್ಲಾ ಒಂದು ಅನನ್ಯ ಹಾಗೂ ಅರ್ಥಪೂರ್ಣವಾದ ಪೀಳಿಗೆ. ಯಾಕೆಂದರೆ ತಂದೆ ತಾಯಿ ಮಾತುಗಳನ್ನು ಪಾಲಿಸುತ್ತಾ ಬೆಳೆದು ಬಂದ ಕೊನೆಯ ಪೀಳಿಗೆ ನಮ್ಮದು!

ಹಾಗೆಯೇ ‘ನಮ್ಮ‌ಮಾತು’ ಕೇಳ್ರೋ ಎಂದು ಮಕ್ಕಳನ್ನು ಒತ್ತಾಯಿಸಿದ ಮೊದಲ ಪೀಳಿಗೆಯೂ ನಮ್ಮದೇ!!

ನಮ್ಮದೇನೋ ಮುಗಿಯಿತು; ಇನ್ನೇನಿದ್ದರೂ ನಿಮ್ಮದೇ. ನಾವು ಕಣ್ಮರೆಯಾಗುವ ಮುನ್ನ ನಮ್ಮಿಂದೇನಾದರೂ ಕಲಿಯುವ, ಪಡೆಯುವ ಉದ್ದೇಶವಿದ್ದರೆ ಅದನ್ನು ಈಡೇರಿಸಿಕೊಳ್ಳಿ.

Old is Gold….

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ