ಹೆಜ್ಜೆ ಹೆಜ್ಜೆಗೂ ಹೆಂಡತಿಯನ್ನು ಟೀಕಿಸುವ ಪತಿಯಲ್ಲಿ ಯಾವುದಾದರೂ ದೋಷ ಇರುತ್ತದಾ?  ಆತನ ಈ ಸ್ವಭಾವ ಸರಿಪಡಿಸುವ ಬಗ್ಗೆ ನೀವೇ ಅರಿತುಕೊಳ್ಳಿ!

ಪ್ರತಿಮಾ ಸ್ನಾತಕೋತ್ತರ ಪದವೀಧರೆ. ನೋಡಲು ಆಕರ್ಷಕವಾಗಿದ್ದಾಳೆ. ಚೆನ್ನಾಗಿ ಅಡುಗೆ ಕೂಡ ಮಾಡುತ್ತಾಳೆ. ವ್ಯವಹಾರ ಜ್ಞಾನ ಉಳ್ಳವಳು. ಸಂಬಂಧಿಕರು, ಅಕ್ಕಪಕ್ಕದವರು ಎಲ್ಲರೂ ಅವಳನ್ನು ಹೊಗಳುತ್ತಾರೆ. ಆದರೆ ಗಂಡನ ದೃಷ್ಟಿಯಲ್ಲಿ ಮಾತ್ರ ಅವಳು ಏನೂ ಗೊತ್ತಿಲ್ಲದವಳು. ಏಕೆ? ಈ ಪ್ರಶ್ನೆ ಕೇವಲ ಪ್ರತಿಮಾ ಒಬ್ಬಳದೇ ಅಲ್ಲ, ಅಂತಹ ಅನೇಕ ಮಹಿಳೆಯರು ಇದೇ ಪ್ರಶ್ನೆ ಕೇಳುತ್ತಾರೆ.

ಅವರ ಅಭ್ಯಾಸಗಳು, ರೀತಿ ನೀತಿಗಳು, ಜೀವನಶೈಲಿಗಳು ಗಂಡಂದಿರಿಗೆ ಹಿಡಿಸುವುದೇ ಇಲ್ಲ. ಈ ಕಾರಣದಿಂದ ಅವರು ಹೆಜ್ಜೆ ಹೆಜ್ಜೆಗೂ ತಪ್ಪು ಕಂಡುಹಿಡಿಯುತ್ತಾರೆ. ಇಂತಹ ಪತಿಯಂದಿರು ಎಲ್ಲ ನಿಟ್ಟಿನಲ್ಲೂ ಪರ್ಫೆಕ್ಟ್ ಆಗಿರುತ್ತಾರಾ?

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಭಾವ, ತನ್ನದೇ ಆದ ರೀತಿನೀತಿ, ದೃಷ್ಟಿಕೋನ ಹಾಗೂ ಆಸಕ್ತಿ ಇರುತ್ತವೆ. ಎಲ್ಲರೂ ನನ್ನ ಸ್ವಭಾವದ ಹಾಗೆ ಇರುವುದಿಲ್ಲ. ಹೀಗಾಗಿ ಯಾರೊಬ್ಬರೂ ಪರ್ಫೆಕ್ಟ್ ಅಲ್ಲ ಎಂದು ಯೋಚಿಸಿ, ಪ್ರತಿಯೊಬ್ಬರಲ್ಲೂ ತಪ್ಪು ಕಂಡುಹಿಡಿಯುವವರಲ್ಲಿ ಯಾವುದೇ ವಿಶೇಷ ಗುಣಗಳು ಇರುವುದಿಲ್ಲ ಎಂದು ಹೇಳುವುದು ಅತಿಶಯೋಕ್ತಿಯಾಗುತ್ತದೆ. ಪ್ರತಿಮಾಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆಕೆ ಚೆನ್ನಾಗಿ ಅಡುಗೆ ಮಾಡುತ್ತಾಳೆ. ವ್ಯವಹಾರ ನಿಪುಣೆ. ಆದರೆ ಆ ವಿಶೇಷಗಳೇನೂ ಗಂಡನಲ್ಲಿಲ್ಲ. ಬೇರೆಯವರ ತಪ್ಪು ಕಂಡುಹಿಡಿಯುವ ವ್ಯಕ್ತಿಯಲ್ಲಿ ಯಾವುದಾದರೂ ವಿಶೇಷ ಗುಣಗಳಿರಬೇಕು. ಅವನಲ್ಲಿ ಯಾವುದೇ ಬೌದ್ಧಿಕ ಪ್ರತಿಭೆಯೂ ಇಲ್ಲ. ಆಟೋರಿಕ್ಷಾದಿಂದ ದುಡಿಯುತ್ತಾನೆ, ಹಣ ಗಳಿಸುತ್ತಾನೆ. ಅದಕ್ಕೆ ಅವನಿಗೆ ಹೆಮ್ಮೆಯಿದೆ. ಪ್ರತಿಭಾ ಮನೆಯಲ್ಲಿ ಟ್ಯೂಶನ್‌ ಮಾಡಿ ತಿಂಗಳಿಗೆ 8-10 ಸಾವಿರ ರೂ. ಗಳಿಸುತ್ತಾಳೆ. ಮುಂಜಾನೆ 5 ಗಂಟೆಗೆ ಏಳುವುದು, ಮಕ್ಕಳಿಗೆ ತಿಂಡಿ ತಯಾರಿಸುವುದು, ಬಳಿಕ ಅವರನ್ನು ರೆಡಿ ಮಾಡುವುದು, ಅಷ್ಟೇ ಅಲ್ಲ ಮನೆಯನ್ನು ಅಚ್ಚುಕಟ್ಟಾಗಿ ಇಡುವುದರ ಮೂಲಕ ಸಂಜೆ ಕೂಡ ಪತಿಗೆ ಎಲ್ಲ ವ್ಯವಸ್ಥಿತ ಎನಿಸಿರಬೇಕು. ಸಂಜೆ ಮನೆಗೆ ಬಂದ ಮಕ್ಕಳಿಗೆ ಓದಿಸುವುದು, ಹೋಂವರ್ಕ್‌ ಮಾಡಲು ಏನಾದರೂ ತೊಂದರೆ ಎನಿಸಿದಲ್ಲಿ ಅವರಿಗೆ ಸಹಾಯ ಮಾಡುವುದು ಇತ್ಯಾದಿ.

ಅತಿಯಾದ ಅಪೇಕ್ಷೆ

ಗಂಡ 7ಕ್ಕಿಂತ ಮುಂಚೆ ಎಂದೂ ಏಳುವುದಿಲ್ಲ. ಇದಕ್ಕೆ ಮುಖ್ಯ ಕಾರಣ ನಾನು ಗಳಿಸುತ್ತೇನೆಂಬ ಅಹಂ. ಮುಂಜಾನೆ ಎಲ್ಲಕ್ಕೂ ಮುಂಚೆ ಏಳುವುದು ಹಾಗೂ ರಾತ್ರಿ ಎಲ್ಲರೂ ಮಲಗಿದ ನಂತರ ಮಲಗುವುದು ಪ್ರತಿಮಾಳ ದಿನಚರಿ. ಇಂತಹದರಲ್ಲಿ ಅವಳ ಗಂಡ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತಪ್ಪು ಕಂಡುಹಿಡಿಯುತ್ತಾನೆ. ಗಂಡ ಬರುವ ಸದ್ದು ಕೇಳಿಯೇ ಇವತ್ತೇನು ತಪ್ಪು ಕಂಡುಹಿಡಿಯುತ್ತಾರೋ? ಎಂದು ಆಕೆಗೆ ಆತಂಕ ಶುರುವಾಗುತ್ತದೆ. ಗಂಡ ಬರುತ್ತಲೇ ಕೂಗಾಡಲು ಶುರು ಮಾಡುತ್ತಾನೆ, ``ನೀನು ದಿನವಿಡೀ ಮನೆಯಲ್ಲಿ ಮಾಡುವುದಾದರೂ ಏನು? ಮಕ್ಕಳ ಬಟ್ಟೆಗಳು ಹಾಸಿಗೆಯ ಮೇಲೆ ಹಾಗೆಯೇ ಬಿದ್ದಿವೆ. ಕಪಾಟುಗಳು ಬಾಯಿ ತೆರೆದುಕೊಂಡಿವೆ. ಇಂದು ಪಲ್ಯದಲ್ಲಿ ಹೆಚ್ಚು ಉಪ್ಪು ಸುರಿದಿದ್ದೆ. ಅದನ್ನು ಕಸದ ಬುಟ್ಟಿಗೆ ಹಾಕೋ ಅಷ್ಟು ಕೋಪ ಬಂದಿತ್ತು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ