ವಯಸ್ಸಿನ ಕೊನೆಯ ಘಟ್ಟದಲ್ಲಿ ಮದುವೆ ಮಾಡಿಕೊಳ್ಳುವುದು ಆ ವ್ಯಕ್ತಿಯ ವೈಯಕ್ತಿಕ ವಿಷಯವೇ, ಸಾಮಾಜಿಕ ಚರ್ಚೆಯ ವಿಷಯವೇ ಈ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದು ಒಳ್ಳೆಯದು…….!

ಇತ್ತೀಚಿನ ವರ್ಷಗಳಲ್ಲಿ ಮದುವೆಯಂತಹ ಖಾಸಗಿ ವಿಷಯದ ಬಗ್ಗೆ ಜನರ ಅಭಿಪ್ರಾಯಗಳು ಕರೆಯದೆ ಬಂದ ಅತಿಥಿಗಳ ಹಾಗೆ ಪ್ರತ್ಯಕ್ಷವಾಗುತ್ತವೆ. ಇಳಿ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ಅಪರಾಧ ಎಸಗಿದರೇನೋ ಎಂಬಂತೆ ಆ ವ್ಯಕ್ತಿಯ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಅಪರಾಧಿ ಅಲ್ಲದಿದ್ದರೂ ಆ ವ್ಯಕ್ತಿ ವ್ಯಂಗ್ಯದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಈ ತೆರನಾದ ಮದುವೆಯನ್ನು ಸಮಾಜದಲ್ಲಿ ಐಷಾರಾಮಿ, ಮೋಜಿನ ಮದುವೆಯ ಶ್ರೇಣಿಯಲ್ಲಿ ಇರಿಸಲಾಗುತ್ತದೆ. ಆ ವ್ಯಕ್ತಿ ಇಳಿ ವಯಸ್ಸಿನಲ್ಲಿ ಮದುವೆ ಮಾಡಿಕೊಳ್ಳುವುದರ ಮೂಲಕ ಮದುವೆ ಎಂಬ ಪವಿತ್ರ ಸಂಬಂಧವನ್ನು ಹಾಳುಗೆಡವಿದ್ದಾನೆ ಎಂದೆಲ್ಲ ಮಾತನಾಡಿಕೊಳ್ಳಲಾಗುತ್ತದೆ. ಇಳಿಯಸ್ಸಿನಲ್ಲಿ ಆದ ಈ ಮದುವೆಯ ಕಾರಣದಿಂದ ಜನರಿಗೆ ವಿವಾಹ ಬಂಧನದ ಬಗೆಗಿನ ನಂಬಿಕೆಯೇ ಹೊರಟುಹೋಗುತ್ತದೆ ಎಂದು ಕೆಲವರು ಮಾತನಾಡಿಕೊಳ್ಳುವುದೂ ಉಂಟು. ಬಹಳ ತಡವಾಗಿ ಮಾಡಿಕೊಂಡ ಮದುವೆ ಸ್ಥಿರವಾಗಿ ಉಳಿಯುತ್ತದೆಯೇ ಅಥವಾ ಇಲ್ಲವೇ ಈ ಬಹಳಷ್ಟು ಪ್ರಶ್ನೆಗಳಿಗೆ ಆ ವ್ಯಕ್ತಿ ಉತ್ತರ ಕೊಡುವುದೇ ಕಷ್ಟವಾಗುತ್ತದೆ. ಸಮಾಜದ ಗುತ್ತಿಗೆದಾರ ಎಂದು ಹೇಳಿಕೊಳ್ಳುವ ವ್ಯಕ್ತಿಗಳ ಯೋಚನೆ ಅವರ ಸಂಕೀರ್ಣ ಮಾನಸಿಕತೆಯನ್ನು ಬಿಂಬಿಸುತ್ತದೆ. ಅವರ ಪ್ರಕಾರ, ವಯಸ್ಸಿನ ಈ ಹಂತದಲ್ಲಿ ರಾಮಭಜನೆ ಮಾಡುವುದು ಸೂಕ್ತ. ಅಂತಹ ಸ್ಥಿತಿಯಲ್ಲಿ ಮದುವೆಯ ಅವಶ್ಯಕತೆಯಾದರೂ ಏನಿದೆ? ಎಂದು ಅವರು ಪ್ರಶ್ನಿಸುತ್ತಾರೆ.

ವಾಸ್ತವ ಏನು?

ಆದರೆ ವಾಸ್ತವ ಸಂಗತಿ ಬೇರೆಯೇ ಆಗಿದೆ. ಜೀವನಾನುಭವದ ಪ್ರಕಾರ, ಜೀವನದ ಈ ಹಂತದಲ್ಲಿ ಏಕಾಂಗಿತನ ಕಾಡುತ್ತದೆ. ಅದರಲ್ಲೂ ವಿಶೇಷವಾಗಿ ಸಂಗಾತಿ ಅಗಲಿದ್ದರೆ ಅಥವಾ ವಿಚ್ಛೇದನ ಪಡೆದುಕೊಂಡಿದ್ದರೆ ಅದರ ನೋವು ಇನ್ನೂ ಹೆಚ್ಚಾಗಿರುತ್ತದೆ.

ದೈಹಿಕ ಸುಸ್ತು ಮತ್ತು ಮಾನಸಿಕವಾಗಿ ಅಸುರಕ್ಷತೆಯ ಭಾವನೆ ವ್ಯಕ್ತಿಯೊಬ್ಬನನ್ನು ಒಳಗೊಳಗೇ ಭಯಭೀತಗೊಳಿಸುತ್ತದೆ. ವಯಸ್ಸಿನ ಈ ಹಂತದಲ್ಲಿ ವ್ಯಕ್ತಿಯೊಬ್ಬನಿಗೆ ಸಂಗಾತಿಯ ಅವಶ್ಯಕತೆ ಇದೆ ಎನಿಸುತ್ತದೆ. ತನಗೆ ಭಾವನಾತ್ಮಕವಾಗಿ ಬೆಂಬಲ ನೀಡಬೇಕೆನ್ನುವುದೇ ಆ ವ್ಯಕ್ತಿಯ ಅಭಿಲಾಷೆಯಾಗಿರುತ್ತದೆ. ತನ್ನ ದುಃಖ ಅಥವಾ ಮನಸ್ಸನ್ನು ಹೆಂಡತಿ ಮಾತ್ರ ಅರ್ಥ ಮಾಡಿಕೊಳ್ಳಬಲ್ಲವಳಾಗಿರುತ್ತಾಳೆ ಎನ್ನುವುದು ಪುರುಷನ ಗ್ರಹಿಕೆಯಾಗಿರುತ್ತದೆ. ವೃದ್ಧಾಪ್ಯ ಎನ್ನುವುದು ಅನುಭವದ ಭಂಡಾರವೇ ಆಗಿರುತ್ತದೆ. ಆ ಹಂತದಲ್ಲಿ ಅವರ ಮಾತುಗಳನ್ನು ಕೇಳಿಸಿಕೊಳ್ಳುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ. ಯೌವನಾವಸ್ಥೆಯನ್ನು ಏಕಾಂಗಿಯಾಗಿ ಕಳೆಯಬಹುದು. ಆದರೆ ವೃದ್ಧಾಪ್ಯವನ್ನು ಏಕಾಂಗಿಯಾಗಿ ಕಳೆಯುವುದು ಕಷ್ಟಕರ. ಈ ಹಂತದಲ್ಲಿ ಒಬ್ಬ ಸಂಗಾತಿ ಇರಬೇಕೆನ್ನಿಸುತ್ತದೆ. ಇಂತಹ ಸ್ಥಿತಿಯಲ್ಲಿ ಸಂಗಾತಿಯ ಆಸರೆ ಬಯಸುವುದರಲ್ಲಿ ತಪ್ಪೇನಿದೆ? ಇಳಿ ವಯಸ್ಸಿನಲ್ಲಿ ತನ್ನ ಖುಷಿಗಾಗಿ, ತನ್ನ ಜೀವನಕ್ಕಾಗಿ ನಿರ್ಧಾರ ಕೈಗೊಳ್ಳಬಾರದೇ?

ಜೀವನ ಹೀಗೇಕೆ?

ವೃದ್ಧಾಪ್ಯ ಎಂತಹ ಒಂದು ಹಂತವೆಂದರೆ, ವ್ಯಕ್ತಿ ಅಲ್ಲಿಯವರೆಗೆ ತನ್ನೆಲ್ಲ ಕರ್ತವ್ಯಗಳನ್ನು ಮುಗಿಸಿರುತ್ತಾನೆ. ಉದಾಹರಣೆಗೆ ಮಕ್ಕಳನ್ನು ಓದಿಸಿ, ಉದ್ಯೋಗ ಮಾಡುವಂತೆ ಅವರನ್ನು ಸಶಕ್ತರಾಗಿಸುತ್ತಾರೆ. ಮಕ್ಕಳ ಮದುವೆ ಕೂಡ ಮುಗಿದುಹೋಗಿರುತ್ತದೆ. ಅವರು ತಮ್ಮದೇ ಆದ ಜವಾಬ್ದಾರಿಗಳಲ್ಲಿ ಮಗ್ನರಾಗಿಬಿಡುತ್ತಾರೆ. ಅವರು ಇಷ್ಟಪಟ್ಟು ಕೂಡ ತಮ್ಮ ವಯಸ್ಸಾದ ತಂದೆತಾಯಿಗಳೊಂದಿಗೆ ಹೆಚ್ಚು ಸಮಯ ಕಳೆಯುವುದು ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ತಂದೆಯಾದವನು ತನ್ನ ಜೀವನವಿನ್ನು ಮುಗಿಯಿತು, ಇನ್ನುಮುಂದೆ ಜೀವನ ಹೇಗೆ ನಡೆಸಿಕೊಂಡು ಹೋಗುತ್ತೋ ಹಾಗೆ ನಡೆಸಿಕೊಂಡು ಹೋಗಲಿ ಎಂದು ಹಾಗೆಯೇ ಇದ್ದುಬಿಡುವುದಾ ಅಥವಾ ಜೀವನದಲ್ಲಿ ಹೊಸದೊಂದು ಅಧ್ಯಾಯವನ್ನು ಆರಂಭಿಸಬೇಕಾ? ಇಂತಹ ಸ್ಥಿತಿಯಲ್ಲಿ ಮದುವೆ ಮಾಡಿಕೊಳ್ಳುವ ನಿರ್ಣಯ ಒಂದು ಮುಖ್ಯ ನಿರ್ಧಾರವಾಗಿರುತ್ತದೆ. ಅದನ್ನು ಮುಕ್ತಕಂಠದಿಂದ ಸ್ವಾಗತಿಸಬೇಕು. ಹಿಂದಿ ಚಿತ್ರರಂಗದ ಹೆಸರಾಂತ ನಟನಿರ್ದೇಶಕ ಕಬೀರ್‌ ಬೇಡಿ 70ನೇ ವಯಸ್ಸಿನಲ್ಲಿ 42 ವರ್ಷದ ಪರ್ವಿನಾ ದುಸಾಂಜ್‌ ಅವರ ಕೈ ಹಿಡಿದದ್ದು ಇದಕ್ಕೊಂದು ಸೂಕ್ತ ಉದಾಹರಣೆ. ಇದು ಕಬೀರ್‌ ಬೇಡಿಯ 4ನೇ ಮದುವೆ. ಅವರ ಮುಂಚಿನ ಮೂರು ಮದುವೆಗಳು ಏಕೆ ಯಶಸ್ವಿಯಾಗಲಿಲ್ಲ, ಅವು ಮುರಿದು ಬೀಳಲು ಏನು ಕಾರಣ ಎಂಬುದೆಲ್ಲ ಅವರ ವೈಯಕ್ತಿಕ ವಿಚಾರಗಳು. ಈ ಸಂಬಂಧಗಳ ವಾಸ್ತವಿಕತೆ ಏನೇ ಆಗಿರಲಿ, ಅವುಗಳ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ. ಅದು ಹಸ್ತಕ್ಷೇಪ ಎನಿಸುತ್ತದೆ. ಮೊದಲಿನ 3 ಮದುವೆಗಳ ಹಾಗೆ ಈ ಮದುವೆ ಕೂಡ ವೈಫಲ್ಯದ ಹಾದಿ ಹಿಡಿಯುತ್ತದೋ, ಯಶಸ್ವಿಯಾಗುತ್ತದೊ ಎಂದು ಜನರು ಆಗಲೇ ಮಾತನಾಡಿಕೊಳ್ಳುತ್ತಾರೆ. ಈ ಕುರಿತಂತೆ ಮುಕ್ತಾ ಅವರು ತಮ್ಮ ಅಭಿಪ್ರಾಯನ್ನು ಹೀಗೆ ದಾಖಲಿಸುತ್ತಾರೆ, ``ಕಬೀರ್‌ ಬೇಡಿಯ ಮೊದಲ 3 ಮದುವೆಗಳು ವೈಫಲ್ಯ ಕಂಡಿರುವಾಗ ನಾಲ್ಕನೇ ಮದುವೆ ಸ್ಥಿರವಾಗಿ ಉಳಿಯುತ್ತದೆಂದು ಹೇಳಲಾಗದು. ಆಕಾಂಕ್ಷಾ ಕೂಡ ಇದೇ ಅಭಿಪ್ರಾಯ ತಾಳುತ್ತಾರೆ,' ಕಬೀರ್‌ರ ನಾಲ್ಕನೇ ಮದುವೆ ಯಶಸ್ವಿಯಾಗುತ್ತದೆಂದು ಹೇಳುವುದು ಕಷ್ಟ. ನವವಿವಾಹಿತ ಜೋಡಿಯೊಂದರ ಮದುವೆ 2-3 ತಿಂಗಳಲ್ಲಿಯೇ ಮುರಿದು ಬೀಳುವ ಸಾಧ್ಯತೆ ಇರುತ್ತದೆ ಎಂದಾದರೆ, ವಯಸ್ಸಾದವರ ಮದುವೆಯ ಬಗ್ಗೆ ನಿಮಗೆ ಅಷ್ಟೊಂದು ಆಕ್ಷೇಪ ಏಕೆ? ಕಿಶೋರ್‌ ಕುಮಾರ್‌ಗೆ 4 ಮದುವೆಗಳಾಗಿದ್ದವು. ಆದಾಗ್ಯೂ ಅವರ ಜನಪ್ರಿಯತೆ ಕಿಂಚಿತ್ತೂ ಕುಂದಿರಲಿಲ್ಲ. ಈಗಲೂ ಅವರನ್ನು ಮಹಾನ್‌ ಗಾಯಕರೆಂದೇ ಭಾವಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ