ವಿಭಾ*

ನಟಿ ಭಾವನಾ ರಾಮಣ್ಣ ಗರ್ಭಿಣಿ ಎಂಬ ಸುದ್ದಿ ಬೆಳಕಿಗೆ ಬಂದಾಗಿನಿಂದ  ಪತಿ ಯಾರು, ಮದುವೆ ಯಾವಾಗ ಆಯಿತು ಎಂಬ ನೂರೆಂಟು ಮಾತುಗಳು ಹರಿದಾಡಿತು..ಆದರೆ ಆಕೆಯೇ ಸ್ವತಃ ಸಂದರ್ಶನವೊಂದರಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ..

ಕನ್ನಡದ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ  ತುಂಬು ಕುಟುಂಬದಲ್ಲಿ ಬೆಳೆದ ನಟಿ, ಮದುವೆ ವಯಸ್ಸು ದಾಟಿದ ಮೇಲೆ ತನಗೂ ಮಕ್ಕಳು ಬೇಕೆನಿಸಿತಂತೆ, ವಿಜ್ಞಾನ ಮುಂದುವರೆದ ಈ ಕಾಲದಲ್ಲಿ  ಐವಿಎಫ್ ಮೂಲಕ ಗರ್ಭ ಧರಿಸುವ ಅವಕಾಶವಿರುತ್ತದೆ..ಆದರೆ ಭಾವನಾ ಧೈರ್ಯದಿಂದ ಮುಂದೆ ಹರಿದು ಸಿಂಗಲ್ ಪೇರೆಂಟ್ ಆಗಿ ಮಗುವನ್ನು ಪಡೆಯಲು ನಿರ್ಧರಿಸಿದಳು.

ವಯಸ್ಸಾದ ಮೇಲೆ ಹೆಣ್ಣುಮಕ್ಕಳು ಗರ್ಭಧರಿಸುವುದು ತಾಯಿ-ಮಗು ಇಬ್ಬರ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿ ಎಂದಿದ್ದರೂ   ಸುರಕ್ಷತಾ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಗರ್ಭ ಧರಿಸುವುದುಂಟು.

ಕನ್ನಡದ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ತಾಯಿಯಾಗುವ ಸಂಭ್ರಮದಲ್ಲಿ, ಅದೂ ಅವಳಿ ಜವಳಿ ಮಕ್ಕಳಿಗೆ. ಮದುವೆಯಾಗದೆ ಸಿಂಗಲ್ ಮದರ್ ಅನಿಸಿಕೊಳ್ಳುತ್ತಿರುವ ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳನ್ನು ತಮ್ಮ ಜೀವನಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ.

ಭಾವನಾ ಈಗ ಆರು ತಿಂಗಳ.. ಗರ್ಭಿಣಿ.

ವೈದ್ಯರ ಸಲಹೆ ಮೇರೆಗೆ ಮೊದಲ ಪ್ರಯತ್ನದಲ್ಲೇ ನಾನು ತಾಯಿಯಾಗಿರೋದು ಖುಷಿ ಕೊಟ್ಟಿದೆ.  ತಂದೆ ತುಂಬ ಖುಷಿಪಟ್ಟರು. ನೀನು ಮಹಿಳೆ, ನಿನಗೆ ಮದರ್ ಆಗುವ ಹಕ್ಕಿದೆ ಎಂದು ನನ್ನ ತಂದೆ ಹೇಳಿದ್ದಾರೆ. ನನ್ನ ಆಸೆಗೆ ನನ್ನ ಮನೆಯವರ ಬೆಂಬಲವಿದೆ  ಎಂದು ಭಾವನಾ ರಾಮಣ್ಣ   ಹೇಳಿಕೊಂಡಿದ್ದಾರೆ . .

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ