ಕೌಟುಂಬಿಕ ಸಮಸ್ಯೆಗಳಲ್ಲಿ ಸುಸ್ತಾಗಿ ಹೋಗುವ ಗಂಡ-ಹೆಂಡತಿ ಸಾಮಾನ್ಯವಾಗಿ ಪ್ರೇಮಿ ಅಥವಾ ಪ್ರೇಯಸಿಯ ರೂಪವನ್ನು ಕಳೆದುಕೊಳ್ಳುತ್ತಾರೆ. ಹಿಂದೊಮ್ಮೆ 2 ದೇಹ ಒಂದೇ ಆತ್ಮದಂತಿದ್ದವರಿಗೆ ಮನಸ್ಸಿನಲ್ಲಿ ಉತ್ಸಾಹ, ಪ್ರೀತಿ, ಗೌರವ ಪರಸ್ಪರರಿಗಾಗಿ ಮಿಡಿಯುತ್ತಿತ್ತು. ಇದೀಗ ಅಲ್ಪ ಸಂದೇಹ, ಅಹಂ ಇಣುಕಲಾರಂಭಿಸುತ್ತಿವೆ. ಪರಸ್ಪರರ ದೋಷಾರೋಪದಲ್ಲಿ ಕಾಮನಬಿಲ್ಲಿನ ಎಲ್ಲ ಕನಸುಗಳು ಬಣ್ಣರಹಿತ ಎನಿಸತೊಡಗುತ್ತವೆ. ಸಂದೇಹ ಎಂಬ ಮಹಾಘಾತುಕ ರೋಗಕ್ಕೆ ಯಾವ ವೈದ್ಯರ ಬಳಿಯೂ ಚಿಕಿತ್ಸೆ ಇಲ್ಲ. ಇದೊಂದು ಮನೋವ್ಯಾಧಿ. ಅದು ಕುಟುಂಬವನ್ನೇ ಹಾಳುಗೆಡಹುತ್ತದೆ. ಈ ರೋಗ ಜೀವನದಲ್ಲಿ ಅಶಾಂತಿಯನ್ನುಂಟು ಮಾಡಿ ಕುಟುಂಬಗಳನ್ನು ತಲ್ಲಣಗೊಳಿಸುತ್ತದೆ.

ಈ ಅಸಾಧ್ಯ ರೋಗದ ಪರಿಣಾಮದ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೂ ಬಹಳಷ್ಟು ಜನರು ಅದರ ಕಪಿಮುಷ್ಟಿಗೆ ಸಿಲುಕಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆ.

ಪ್ರೀತಿ ಹಾಗೂ ವಿಶ್ವಾಸವನ್ನು ಕಾಯ್ದುಕೊಂಡು ಹೋಗಲು ಇಬ್ಬರೂ ಪ್ರಯತ್ನ ಮಾಡಬೇಕು. ಪರಸ್ಪರರ ಬಗೆಗಿನ ಪ್ರೀತಿಪ್ರೇಮ ಹಾಗೂ ನಂಬಿಕೆಯ ಧಾರೆ ಜೊತೆ ಜೊತೆಗೆ ಹರಿಯಬೇಕು. ಪರಸ್ಪರರ ಭಾವನೆಗಳನ್ನು ಗೌರವಿಸುವುದು ಸುಖಿ ವೈವಾಹಿಕ ಜೀವನದ ನಿಜವಾದ ಕೀಲಿ ಕೈ. ಇದರ ಯಶಸ್ಸು ಇಬ್ಬರ ದೂರದೃಷ್ಟಿಯನ್ನು ಅವಲಂಬಿಸಿದೆ. ಇಲ್ಲದಿದ್ದರೆ ಇಂದಿನ ಖಿನ್ನತೆ ಹಾಗೂ ಸಮಸ್ಯೆಗಳಿಗಿಂತಲೂ ಹೆಚ್ಚಾಗಿ ಜೀವನವನ್ನು ನರಕಮಯಗೊಳಿಸುತ್ತವೆ.

ತಾಯಿಯೂ ನಾನೇ… ತಂದೆಯೂ ನಾನೇ…!

ಪರಸ್ಪರರ ಶಕ್ತಿ

ಮದುವೆ ಎನ್ನುವುದು ಜಗತ್ತಿನ ಸುಂದರ ಬಂಧನವಾಗಿದೆ. ಇದನ್ನು ಖಾಯಂ ಆಗಿ ಉಳಿಸಿಕೊಂಡು ಹೋಗುವುದು ಇಬ್ಬರ ಕರ್ತವ್ಯವಾಗಿದೆ. ಗಂಡ ಮನೆಯ ಛಾವಣಿಯಾಗಿದ್ದರೆ, ಹೆಂಡತಿ ಆ ಮನೆಯ ಅಡಿಪಾಯ ಆಗಿದ್ದಾಳೆ. ಹೆಂಡತಿ ವಿಶ್ವಾಸಾರ್ಹ ಸಂಗಾತಿ. ನಿಜವಾದ ಅರ್ಧಾಂಗಿ ಆಗಿರುತ್ತಾಳೆ ಹೊರತು, ಪುರುಷ ಸಮಾಜದ ಎರಡನೇ ದರ್ಜೆ ಕೆಲಸದವಳಲ್ಲ. ಇಬ್ಬರೂ ಪರಸ್ಪರರ ಶಕ್ತಿಯಾಗಿರುತ್ತಾರೆ. ಸಂದೇಹದ ಆಧಾರದ ಮೇಲೆ ಗಂಡ-ಹೆಂಡತಿಯ ಸಂಬಂಧ ಮುರಿದು ಬೀಳುತ್ತದೆ. ಮಗು ಇದ್ದರೆ ಅದರ ಬಾಲ್ಯ ಹಾಗೂ ಶೈಕ್ಷಣಿಕ ಜೀವನ ಕೂಡ ಅಸ್ತವ್ಯಸ್ತವಾಗುತ್ತದೆ. ಗಂಡ ಅಥವಾ ಹೆಂಡತಿಗೆ ತಮ್ಮ ಮುದ್ದು ಕಂದನ ಭವಿಷ್ಯ ಹಾಳುಗೆಡಹುವ ಯಾವ ಹಕ್ಕು ಅಧಿಕಾರ ಇಲ್ಲ.

ಒಳ್ಳೆಯ ನೆರೆಮನೆಯವರಾಗಲು ಕಿವಿಮಾತು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ