- ರಾಘವೇಂದ್ರ ಅಡಿಗ ಎಚ್ಚೆನ್.

ಸ್ಯಾಂಡಲ್​​ವುಡ್​​ನಲ್ಲಿ ಕ್ರಿಕೆಟ್ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಆರಡಿ ಕಟೌಟ್ ಕಿಚ್ಚ ಸುದೀಪ್. ಸಿನಿಮಾ ಜೊತೆಗೆ ರಾಜ್‌ಕಪ್, ಸಿಸಿಎಲ್, ಕೆಸಿಸಿ ಹೀಗೆ ಎಲ್ಲಾ ತರಹದ ಸಿಲೆಬ್ರಿಟಿ ಕ್ರಿಕೆಟ್ ಟೂರ್ನಿಗಳ ರೂವಾರಿ ಆಗಿರುವ ಸುದೀಪ್ ಇಡೀ ಕನ್ನಡ ಚಿತ್ರರಂಗವಲ್ಲದೆ ಕನ್ನಡಿಗರೇ ಖುಷಿಪಡುವ ಹೊಸ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ‌.

kn-bng-02-cinema-cricket-allade-hosa-kshethrakka-kalitta-abhineyachakravrthi-7204735_04072025183655_0407f_1751634415_810

ಹೌದು. ನಟನೆ, ನಿರ್ದೇಶನ, ಗಾಯ‌ನ, ನಿರೂಪಣೆ, ಅಡುಗೆ ಮಾಡುವುದು ಹೀಗೆ ಸಾಕಷ್ಟು ಕಲೆಗಳನ್ನು ಹೊಂದಿರುವ ಸುದೀಪ್​ ಇದೀಗ ಕಾರ್‌ ರೇಸ್ ಟ್ರ್ಯಾಕ್‌ಗೆ ಲಗ್ಗೆ ಇಟ್ಟಿದ್ದಾರೆ‌. ಅವರೀಗ ಇಂಡಿಯನ್ ಕಾರ್ ರೇಸಿಂಗ್ ಫೆಸ್ಟಿವಲ್​​​ನ ಒಂದು ಭಾಗವಾಗುತ್ತಿದ್ದಾರೆ‌. ಅಂದರೆ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ಎಂಬ ಹೆಸರಿನ ಮಾಲೀಕರಾಗಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ಇದರ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಸುದೀಪ್, RPPLನ ಅಧ್ಯಕ್ಷ ಅಖಿಲೇಶ್ ರೆಡ್ಡಿ ಹಾಗೂ ಹ್ಯಾರಿಸ್ ನಲಪಾಡ್ ಉಪಸ್ಥಿತರಿದ್ದರು.
ಚ್ಚ ಸುದೀಪ್ ಪತ್ನಿ ಪ್ರಿಯಾ ಅವರು ಸುದೀಪ್ ಮಾಲೀಕತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಹಾಗೂ ಲೋಗೋ ಲಾಂಚ್​ ಮಾಡಿದರು. ಇದೇ ಸಂದರ್ಭದಲ್ಲಿ ಸುದೀಪ್ ಮಾಲೀಕತ್ವದ ಎರಡು ರೇಸಿಂಗ್ ಕಾರುಗಳನ್ನು ಅನಾವರಣ ಮಾಡಲಾಯಿತು.
ಸ್ಪೋರ್ಟ್ಸ್ ಅಂದ್ರೆ ತುಂಬಾನೇ ಇಷ್ಟ: ಈ ಕುರಿತು ಮಾತನಾಡಿದ ಸುದೀಪ್, ''ಇದು ಕೇವಲ ಮತ್ತೊಂದು ತಂಡವಲ್ಲ, ಇದು ಒಂದು ಭಾವನೆ. ನನಗೆ ಮೊದಲಿಂದಲೂ ಸ್ಪೋರ್ಟ್ಸ್ ಅಂದ್ರೆ ತುಂಬಾನೆ ಇಷ್ಟ. ನಾನು ರೇಸಿಂಗ್ ಕಾರ್ ಮಾಲೀಕನಾಗಿರಬಹದು, ಆದರೆ ಬೆಂಗಳೂರು ಅನ್ನೋದು ಒಂದು ಬ್ರ್ಯಾಂಡ್ ಆಗಿದೆ. ನಾನು ಕಾರ್ ರೇಸಿಂಗ್ ಅಷ್ಟೇ, ನನಗೆ ಓಡಿಸೋದಕ್ಕೆ ಆಗೊಲ್ಲ. ಈ ಕಾರನ್ನು ಓಡಿಸಲು ಲೈಸನ್ಸ್ ಬೇಕು. ನಾನು ಮೊದಲು ಓಡಿಸಿದ ಕಾರು ಅಂದರೆ, ಮಾರುತಿ 800. ಅದು ನಮ್ಮ ತಂದೆ‌ಯವರ ಕಾರು. ಆ ಕಾರಿನಲ್ಲಿ ಡ್ರೈವಿಂಗ್ ಕಲಿಯೋದಕ್ಕೆ ಹೋಗಿ ಆಕ್ಸಿಡೆಂಟ್ ಆಗಿತ್ತು'' ಅಂತಾ ಹೇಳಿದರು‌.

kn-bng-02-cinema-cricket-allade-hosa-kshethrakka-kalitta-abhineyachakravrthi-7204735_04072025183655_0407f_1751634415_677

RPPLನ ಅಧ್ಯಕ್ಷ ಮತ್ತು MD ಅಖಿಲೇಶ್ ರೆಡ್ಡಿ ಮಾತನಾಡುತ್ತಾ, ''ಸುದೀಪ್ ಅವರಂತಹ ಸೂಪರ್‌ಸ್ಟಾರ್ IRFಗೆ ಪ್ರವೇಶ ಮಾಡಿರುವುದರಿಂದ ಈ ಸ್ಪೋರ್ಟ್ಸ್ ದಿಕ್ಕನ್ನೇ ಬದಲಾಯಿಸುವಂತಿದೆ. ಅವರ ಹೆಸರು ಪರಂಪರೆ, ಹೆಮ್ಮೆ ಮತ್ತು ಪ್ರಭಾವ ಈ ಮೋಟಾರು ಸ್ಫೋರ್ಟ್ಸ್​​​ಗೆ ಮತ್ತಷ್ಟು ಹುರುಪು ತುಂಬಲಿದೆ'' ಎಂದರು.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025 ಆಗಸ್ಟ್‌ನಲ್ಲಿ ಆರಂಭವಾಗಲಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಮತ್ತು ಇತರ ಪ್ರದೇಶಗಳ ಫ್ರಾಂಚೈಸಿ ತಂಡಗಳು ರೋಮಾಂಚಕ ಬೀದಿ ಸರ್ಕ್ಯೂಟ್‌ಗಳು ಮತ್ತು ವಿಶ್ವ ದರ್ಜೆಯ ಟ್ರ್ಯಾಕ್‌ಗಳಲ್ಲಿ ಸ್ಪರ್ಧಿಸಲಿವೆ. ಈ ಲೀಗ್, ಭಾರತದ ಮೊದಲ ನಿಜವಾದ ಕ್ರೀಡಾ ಹಾಗೂ ಮನರಂಜನಾ ಪ್ರದರ್ಶನವಾಗಿದೆ. ಇದು ಪ್ರಾದೇಶಿಕ ಅಭಿಮಾನಿಗಳು, ಸಿಲೆಬ್ರಿಟಿಗಳ ಒಳಗೊಳ್ಳುವಿಕೆ ಮತ್ತು ಸ್ವದೇಶಿ ಪ್ರತಿಭೆಗಳಿಗೆ ವೇದಿಕೆ ನಿರ್ಮಾಣ ಆಗುವ ವೇದಿಕೆಯಾಗಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ