ಶರತ್ ಚಂದ್ರ

ಗಾಲಿ ಜನಾರ್ದನ್ ರೆಡ್ಡಿ ಅವರ ಮಗ ಕಿರೀಟಿ ನಟಿಸಿರುವ, ಮಾಯಾ ಬಜಾರ್ ಚಿತ್ರದ ನಿರ್ದೇಶಕ ರಾಧಾ ಕೃಷ್ಣ ರೆಡ್ಡಿ  ಆಕ್ಷನ್ ಕಟ್ ಹೇಳಿರುವ ಕನ್ನಡ ಮತ್ತು ತೆಲುಗು ಭಾಷೆ ಯಲ್ಲಿ ನಿರ್ಮಾಣ ವಾಗಿರುವ ‘ಜೂನಿಯರ್ ‘ಇದೇ 18 ರಂದು ತೆರೆಗೆ ಅಪ್ಪಳಿಸಲಿದೆ.

ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿರುವ ಈ ಚಿತ್ರದ ಹೊಸ ಹಾಡೊಂದು ಬಿಡುಗಡೆಯಾಗಿದೆ. ತೆಲುಗಿನ ಸ್ಟಾರ್ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ‘ ವೈರಲ್ ವೈಯಾರಿ’ ಎಂಬ ಸಾಂಗ್ ಜುಲೈ 4ಕ್ಕೆ ಬಿಡುಗಡೆಯಾಗಿದೆ.

ಕಿರೀಟಿಗೆ ಜೋಡಿ ಆಗಿ ನಟಿಸಿರುವ ಶ್ರೀಲೀಲಾ ಅವರ ಭರ್ಜರಿ ಸ್ಟೆಪ್ಸ್, ಹಾಗೂ ಕಿರೀಟಿ ಯ ಚುರುಕಾದ ಡ್ಯಾನ್ಸ್ ನೋಡುಗರ ಮನಸೆಳೆದಿದೆ

1000590484

ದೇವಿ ಶ್ರೀ ಪ್ರಸಾದ್ ಅವರೇ ಕಂಪೋಸ್ ಮಾಡಿದ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಪುಷ್ಪ 2 ಚಿತ್ರದಲ್ಲಿ ಶ್ರೀಲೀಲಾ ಡಾನ್ಸ್ ಮಾಡಿರುವ ‘ ಕಿಸ್ಸಿಕ್ ‘ ಎಂಬ ಐಟಂ ಸಾಂಗ್ ಸಖತ್ ವೈರಲ್ ಆಗಿತ್ತು.

1000590558

ವೈರಲ್ ವಯ್ಯಾರಿ ಹಾಡು ಕೂಡ ಅದೇ ಮಟ್ಟದಲ್ಲಿ ವೈರಲ್ ಆಗುವ ನಿರೀಕ್ಷೆ ಇದೆ. ಸಂಗೀತ ನಿರ್ದೇಶಕರು ತೆಲುಗಿನವರು ಆಗಿರುವುದರಿಂದ ಹಾಡು ತೆಲುಗು ಹಾಡು ಕೇಳಿದ ಅನುಭವವಾಗುತ್ತದೆ.

ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ‘ಸಂಗಮ’ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದರು.

1000590560

ಬಹು ವರ್ಷಗಳ ನಂತರ ದೇವಿ ಶ್ರೀ ಪ್ರಸಾದ್ ಕನ್ನಡ ಚಿತ್ರವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ. ಕಿಚ್ಚ ಸುದೀಪ್ ಸೇರಿ  ಕನ್ನಡ ಚಿತ್ರ ರಂಗ ದೊಂದಿಗೆ ನಂಟನ್ನು ಹೊಂದಿರುವ ದೇವಿ ಶ್ರೀ ಪ್ರಸಾದ್, ಸುದೀಪ್ ನಟಿಸಿರುವ ರನ್ನ ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದರು.ಈ ವರ್ಷ ಬೆಂಗಳೂರಿನಲ್ಲಿ ದೇವಿ ಶ್ರೀ ಪ್ರಸಾದ್ಅವರ ಕೂಡ ಶೋ ತುಂಬಾ ಯಶಸ್ವಿ ಯಾಗಿತ್ತು.ಒಟ್ಟಿನಲ್ಲಿ ಜೂನಿಯರ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ