ಮದುವೆಗೆ ಮೊದಲು ಹಾಗೂ ಮದುವೆಯ ನಂತರ ಬದುಕು ಉದ್ದೇಶಗಳು ವಿವಿಧ ರೀತಿಯಲ್ಲಿರುತ್ತವೆ. ಮದುವೆಗೆ ಮೊದಲು ನಾವು ಸೆಲ್ಫ್ ಸೆಂಟರ್ಡ್‌ ಲೈಫ್‌ ನಡೆಸಿದ್ದೇವೆ. ಮದುವೆಯ ನಂತರ ಪರಸ್ಪರರಿಗಾಗಿ ಬದುಕಲು ಪ್ರಯತ್ನಿಸುವುದು ಪತಿಪತ್ನಿಯರ ಯಶಸ್ಸಿನ ಮಾನದಂಡವಾಗಿದೆ.

ಆರೋಗ್ಯಕರ ಮಾನಸಿಕತೆಯೊಂದಿಗೆ ಪರಿಸ್ಥಿತಿಗಳು ಅನುಕೂಲ ಅಥವಾ ಪ್ರತಿಕೂಲವಾದಾಗ ಎರಡೂ ಸ್ಥಿತಿಗಳಲ್ಲಿ ನಿಮ್ಮ ಸರಿಯಾದ ಆಲೋಚನೆಗಳೊಂದಿಗೆ ಜೀವನದ ಈ ವಿಶೇಷ ತಂಗುದಾಣದಲ್ಲಿ ಸ್ಥಿರತೆ ಹಾಗೂ ಸಂತಸದ ಕೌಟುಂಬಿಕ ವಾತಾವರಣ ಮಾಡಿಕೊಂಡು ನಿಮ್ಮ ಲೈಫ್‌ ಪಾರ್ಟ್‌ನರ್‌ನ ಸುಖದುಃಖದ ಸಂಗಾತಿಯಾಗಿ.

ಏನು ಮಾಡಬೇಕು?

ಪರಸ್ಪರರಿಗಾಗಿ ಸಾಕಷ್ಟು ಸಮಯ ಮೀಸಲಾಗಿಡಿ. ಮಾತನ್ನು ಕೇಳಲು ಸಮಯ, ಒಟ್ಟಿಗಿರಲು ಸಮಯ ಕೊಡಿ. ಒಟ್ಟಿಗೆ ಕೆಲಸ ಮಾಡುವಾಗ ಸಹಾಯ ಮಾಡಿ. ಅವಸರ ಬಿಟ್ಟು ಇವೆಲ್ಲವನ್ನು ಮಾಡಲು ಸಾಕಷ್ಟು ಸಮಯ ಇರಬೇಕು.

ಬದುಕಿನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ. ಒಂದೇ ಟೀಂ ಎಂಬ ಭಾವನೆಯಿಂದ ಸಣ್ಣ ಸಣ್ಣ ವಿಷಯಗಳನ್ನೂ ಎಂಜಾಯ್ ಮಾಡಿ. ಎಲ್ಲರೊಂದಿಗೆ ರಿಲೇಶನ್‌ಶಿಪ್‌ನ್ನು ಮುಗುಳ್ನಗೆಯೊಂದಿಗೆ ಉತ್ಸಾಹದಿಂದ ಇಟ್ಟುಕೊಳ್ಳಿ. ಆಗ ನಿಮ್ಮ ಸಂಪರ್ಕಕ್ಕೆ ಬರುವವರೆಲ್ಲರೂ ಮುಗುಳ್ನಗೆ ಹಾಗೂ ಉತ್ಸಾಹದಿಂದಿರುತ್ತಾರೆ.

ಧನ್ಯವಾದ, ಹೌದು, ಆಯ್ತು, ಡಿಯರ್‌, ನೀನು ಹೇಳಿದ್ದು ಸರಿ, ಕ್ಷಮಿಸು, ನಂದು ತಪ್ಪಾಯ್ತು, ಐ ಆ್ಯಮ್ ಸಾರಿ ಇತ್ಯಾದಿ ಪದಗಳನ್ನು ಸರಿಯಾದ ಸಂದರ್ಭಗಳಲ್ಲಿ ಉಪಯೋಗಿಸಿ.

ತಿಂಗಳಿಗೆ ಕನಿಷ್ಠ 1 ದಿನ ಪರಸ್ಪರರೊಂದಿಗೆ ಕಳೆಯಿರಿ. ಇಬ್ಬರಿಗೂ ಇಷ್ಟವಾದ ಕಾರ್ಯಕ್ರಮಗಳಲ್ಲಿ ಸಮಯ ಕಳೆಯಿರಿ.

ಯಾವುದಾದರೂ ವಿಷಯ ಇಷ್ಟವಾದರೆ ಅದಕ್ಕೆ ಪರಸ್ಪರ ಧನ್ಯವಾದ ಅರ್ಪಿಸಿ.

ನಿಮ್ಮ ಮಾತುಕಥೆಯಲ್ಲಿ ಹಾಸ್ಯ ತುಂಬಿರಲಿ. ಒಂದುವೇಳೆ ಏನಾದರೂ ಅಭಿಪ್ರಾಯ ಭೇದವುಂಟಾದರೆ ಅದನ್ನು ಹಾಸ್ಯದಿಂದಲೇ ಪರಿಹರಿಸಿಕೊಳ್ಳಿ.

ಟೋಟಲ್ ಮೇಕ್‌ ಓವರ್‌ ಮತ್ತು ಡ್ರೆಸ್‌ ಪರಸ್ಪರರ ಇಷ್ಟಕ್ಕೆ ತಕ್ಕಂತೆ ಇರಲಿ. ಆಗ ಪರಸ್ಪರ ಆಕರ್ಷಣೆ ಹೆಚ್ಚುತ್ತದೆ.

ಯಾವಾಗಲೂ ಖುಷಿಯಾಗಿರಲು ನಿರ್ಧರಿಸಿ. ಸಕಾರಾತ್ಮಕ ಆಲೋಚನೆಗಳನ್ನು ನಿಮ್ಮದಾಗಿಸಿಕೊಂಡು ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ.

ಗುಂಪಿನಲ್ಲಿ ಕಾಲ ಕಳೆಯಬೇಡಿ. ಸರಳ ಜೀವನ ಅನುಸರಿಸಿ. ಜೀವನ ಜಟಿಲವಾಗದಿರಲಿ.

ಯಾವುದೇ ಮಾತುಕಥೆಯನ್ನು ಸ್ನೇಹ ಮತ್ತು ಪ್ರೀತಿಯ ಭಾವನೆಯಿಂದಲೇ ಮಾಡಿ. ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರಾಮಾಣಿಕತೆಯಿಂದ ಪ್ರಯತ್ನಿಸಿ.

ಜ್ಯೋತಿ ರಾವ್ ‌ಇದರ ಬಗ್ಗೆ ಹಲವಾರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ವೈವಾಹಿಕ ಜೀವನ ನಡೆಸುವವರು ಇದನ್ನು ಅಗತ್ಯವಾಗಿ ಗಮನಿಸಬೇಕು.

ಒಳ್ಳೆಯ ಸಂವಾದ ಮತ್ತು ಮಾತುಕಥೆ : ಪರಸ್ಪರ ಮಾತನಾಡಲು ಸಂಕೋಚ ಬೇಡ. ಒಬ್ಬರ ಮಾತನ್ನೊಬ್ಬರು ಗಮನವಿಟ್ಟು ಕೇಳಿ. ಸೀಕ್ರೆಟ್‌ ವಿಷಯಗಳನ್ನು ಶೇರ್‌ ಮಾಡಿಕೊಳ್ಳಿ. ಆದರೆ ವಿವೇಕದೊಂದಿಗೆ. ಮಾತುಗಳು ಮಧುರವಾಗಿರಲಿ ಹಾಗೂ ಐ ಕಾಂಟ್ಯಾಕ್ಟ್ ಬಗ್ಗೆ ಗಮನವಿಡಿ.

ವಿವಾದ ಉಂಟುಮಾಡಿ ಜಗಳ ಆಡಬೇಡಿ : ಜಗಳವಾಡುವಾಗ ಕೋಪ ಬೆಂಕಿಗೆ ತುಪ್ಪ ಹೊಯ್ದಂತೆ ಕೆಲಸ ಮಾಡುತ್ತದೆ. ಕೋಪದಲ್ಲಿರುವಾಗ ಮಾತು ನಿಲ್ಲಿಸಿ. ಮಾತುಕಥೆಗೆ ಸೌಹಾರ್ದಪೂರ್ಣ ವಾತಾವರಣಕ್ಕೆ ಕಾಯಿರಿ. ಪರಸ್ಪರ ತ್ಯಾಗ ಮನೋಭಾವ ಇರಲಿ. ನಿಮ್ಮ ಮಾತೇ ನಡೆಯಬೇಕೆಂಬ ಹಠ ಬೇಡ.  ಗಿಲ್ಟ್ ‌ಅಂಡ್‌ ಟೇಕ್‌ ಒಳ್ಳೆಯ ಪಾಲಿಸಿ. ಒತ್ತಡ ಇಲ್ಲದಿದ್ದರೆ ಎಲ್ಲ ವಿಷಯಗಳನ್ನೂ ಸರಿಯಾದ ದೃಷ್ಟಿಕೋನದೊಂದಿಗೆ ತೆಗೆದುಕೊಳ್ಳಲಾಗುತ್ತದೆ. ನಿಮ್ಮ ಲೈಫ್‌ಪಾರ್ಟ್‌ನರ್‌ನ್ನು ಉತ್ಸಾಹಗೊಳಿಸುತ್ತಿರಿ. ಅವರ ಪ್ರತಿ ಒಳ್ಳೆಯ ಕೆಲಸನ್ನು ಹೊಗಳುತ್ತಿರಿ. ಅವರಿಗೆ ಸಹಾಯ ಮಾಡಿ, ಕ್ಷಮಾಶೀಲರಾಗಿ. ಅವರ ಯೋಗ್ಯತೆ ಹೆಚ್ಚಿಸಲು ಸದಾ ಪ್ರಯತ್ನಿಸಿ. ವ್ಯಂಗ್ಯ ಬಾಣಗಳು ಬೇಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ