ಆಧುನಿಕತೆ ಕುಟುಂಬದ ಪರಿಕಲ್ಪನೆಯನ್ನು ಬದಲಾಯಿಸಿಬಿಟ್ಟಿದೆ. ಈಗ ಹಿಂದಿನಂತೆ ಅವಿಭಾಜ್ಯ ಕುಟುಂಬಗಳು ಇಲ್ಲ. ಜನ ವೆಸ್ಟರ್ನ್‌ ಕಲ್ಚರ್‌ ಅನುಸರಿಸುತ್ತಾ ಸಿಂಗಲ್ ಫ್ಯಾಮಿಲಿಯಲ್ಲಿ ಇರತೊಡಗಿದ್ದಾರೆ. ಅದರಿಂದ ಕೆಲವು ಲಾಭಗಳಿವೆ. ಕೆಲವು ನಷ್ಟಗಳೂ ಇವೆ. ವಿಶೇಷವಾಗಿ ಅಂತಹ ಕುಟುಂಬದಲ್ಲಿ ಯಾರಿಗಾದರೂ ಗಂಭೀರ ಕಾಯಿಲೆ ಆಗಿದ್ದ್ದರೆ……. ಈ ವಿಷಯವಾಗಿ ಏಷ್ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್ ನ ನೆಫ್ರಾಲಿಸ್ಟ್ ಡಾ. ಜಿತೇಂದ್ರ ಹೀಗೆ ಹೇಳುತ್ತಾರೆ,  ನ್ಯೂಕ್ಲಿಯರ್‌ ಫ್ಯಾಮಿಲಿಯ ಟ್ರೆಂಡ್‌ ಭಾರತಕ್ಕಂತೂ ಬಂದಿದೆ. ಈ ಟ್ರೆಂಡ್‌ನ್ನು ಅನುಸರಿಸುವವರಿಗೆ ವೆಸ್ಟರ್ನ್‌ ಕಂಟ್ರೀಸ್‌ನಲ್ಲಿ ನ್ಯೂಕ್ಲಿಯರ್‌ ಫ್ಯಾಮಿಲಿಯಲ್ಲಿ ಇರುವ ವೃದ್ಧರು ಮತ್ತು ಮಕ್ಕಳ ಜವಾಬ್ದಾರಿ ಅಲ್ಲಿನ ಸರ್ಕಾರದ್ದಾಗಿರುತ್ತದೆ ಎಂದು ತಿಳಿದಿಲ್ಲ. ಅಲ್ಲಿ ಅವರಿಗೆ ಎಲ್ಲ ರೀತಿಯ ಸೌಲಭ್ಯ, ಸುರಕ್ಷತೆಯನ್ನು ಕೊಡಲಾಗುತ್ತದೆ. ಎಲ್ಲಿಯವರೆಗೆ ಎಂದರೆ ವೃದ್ಧರು, ಯುವಜನತೆ ಅಥವಾ ಮಕ್ಕಳಿಗೆ ಯಾವುದೇ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಲು ಕಷ್ಟವಾಗಬಾರದು.

ಆ ದೇಶಗಳಲ್ಲಿ ಯಾರಿಗಾದರೂ ಕಾಯಿಲೆಯಾಗಿ ಕೂಡಲೇ ಚಿಕಿತ್ಸೆ ನೀಡಬೇಕಾಗಿದ್ದಲ್ಲಿ ಅವರು ಆ್ಯಂಬುಲೆನ್ಸ್ ಗಾಗಿ ಕಾಯಬೇಕಾಗಿಲ್ಲ. ಅಂತಹ ಸಮಯಕ್ಕಾಗಿ ವಿಶೇಷ ವಾಹನಗಳಿದ್ದು ಯಾವುದೇ ತಡೆಯಿಲ್ಲದೆ ರಸ್ತೆಗಳಲ್ಲಿ ವೇಗವಾಗಿ ಓಡುತ್ತದೆ. ರೋಗಿಗಳು ಸುಲಭವಾಗಿ ಆಸ್ಪತ್ರೆಗೆ ತಲುಪಬಹುದು. ಆದರೆ ಭಾರತದಲ್ಲಿ  ಟ್ರ್ಯಾಫಿಕ್‌ ಪರಿಸ್ಥಿತಿ ಎಷ್ಟು ಹಾಳಾಗಿದೆಯೆಂದರೆ ಆ್ಯಂಬುಲೆನ್ಸ್ ರೋಗಿಯವರೆಗೆ ಬರುವುದು ತಡವಾಗುತ್ತದೆ.

ವಿಭಜಿತ ಕುಟುಂಬಗಳಲ್ಲಿ ಯಾರಿಗಾದರೂ ಕಾಯಿಲೆಯಾಗಿದ್ದರೆ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಅಗತ್ಯ ಕೆಲಸಗಳನ್ನೂ ತಾವೇ ಮಾಡಿಕೊಳ್ಳಲು ಅಭ್ಯಾಸ ಮಾಡಬೇಕು. ಕಾಯಿಲೆಯ ಸಂದರ್ಭದಲ್ಲಿ ಸ್ವಾವಲಂಬನೆ ಬಹಳ ಮುಖ್ಯ.

ಕಾಯಿಲೆಯ ಲಕ್ಷಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ : ಬಲಹೀನತೆ ಇದ್ದರೆ ಅಥವಾ ಸಾಧಾರಣ ಜ್ವರ ಬಂದರೆ ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅದನ್ನು ಮಾಮೂಲಿ ಜ್ವರ ಅಥವಾ ವೀಕ್‌ನೆಸ್‌ ಎಂದು ನೀವು ತಿಳಿದಿದ್ದರೆ ಅದು ಯಾವುದೋ ದೊಡ್ಡ ಕಾಯಿಲೆಯ ಸಂಕೇತವಾಗಿರಬಹುದು. ಅದರ ಬಗ್ಗೆ ನಿಮ್ಮ ಫ್ಯಾಮಿಲಿ ಡಾಕ್ಟರ್‌ರೊಂದಿಗೆ ಮಾತನಾಡಿ. ಅವರಲ್ಲಿಗೆ ಹೋಗಲು ತಡ ಮಾಡಬೇಡಿ. ಮನೆಯ ಯಾರಾದರೂ ಸದಸ್ಯರು ನಿಮ್ಮನ್ನು ಡಾಕ್ಟರ್‌ ಬಳಿಗೆ ಕರೆದೊಯ್ಯುತ್ತಾರೆಂದು ಕಾಯಬೇಡಿ.

ಡಾಕ್ಟರ್ಬಳಿ ಮಾತಾಡಲು ಹಿಂಜರಿಯಬೇಡಿ : ನಿಮ್ಮ ಡಾಕ್ಟರ್‌ರೊಂದಿಗೆ ಮುಕ್ತವಾಗಿ ಮಾತನಾಡಿ. ನಿಮಗೇನು ತೊಂದರೆ ಮತ್ತು ಏನು ಅನುಭವಿಸುತ್ತಿದ್ದೀರಿ ಎಂದು ಡಾಕ್ಟರ್‌ ಬಳಿ ಅಗತ್ಯವಾಗಿ ಹೇಳಿ. ನಂತರ ಅವರು ಕೇಳಿದ್ದಕ್ಕೆ ಚೆನ್ನಾಗಿ ಯೋಚಿಸಿ ಉತ್ತರಿಸಿ. ಯಾವುದನ್ನೂ ಉತ್ಪ್ರೇಕ್ಷಿಸಿ ಹೇಳಬೇಡಿ. ಏಕೆಂದರೆ ಅದರಿಂದ ಡಾಕ್ಟರಿಗೆ ಭ್ರಮೆ ಉಂಟಾಗುವುದು.

ತಾವೀಗ ಆಧುನಿಕ ಕಾಲದಲ್ಲಿರುವುದು ಎಂದು ರೋಗಿಗಳು ಗಮನಿಸಬೇಕು. ಈಗ ಎಲ್ಲ ಕಾಯಿಲೆಗಳಿಗೂ ಚಿಕಿತ್ಸೆ ಇದೆ. ಅದು ಕ್ಯಾನ್ಸರ್‌,  ಟ್ಯೂಬರ್‌ ಕ್ಯುಲೋಸೀಸ್‌ ಅಥವಾ ಜಾಂಡೀಸ್‌ ಆಗಲಿ. ಕಾಯಿಲೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಹೆದರುವ ಅಗತ್ಯವಾದರೂ ಏನಿದೆ?

ಪ್ರಿಸ್ಕ್ರಿಪ್ಶನ್ನ್ನು ಭದ್ರವಾಗಿಡಿ : ಡಾಕ್ಟರ್‌ ಬರೆದುಕೊಟ್ಟ ಪ್ರಿಸ್ಕ್ರಿಪ್ಶನ್‌ನ್ನು ಭದ್ರವಾಗಿ ಇಟ್ಟುಕೊಳ್ಳಿ. ಯಾವುದಾದರೂ ದೈಹಿಕ ಸಮಸ್ಯೆ ನಿಮ್ಮನ್ನು ಪದೇಪದೇ ಕಾಡುತ್ತಿರಬಹುದು. ಆಗ ನೀವು ಹಳೆಯ ಪ್ರಿಸ್ಕ್ರಿಪ್ಶನ್‌ನ್ನು ಡಾಕ್ಟರಿಗೆ ತೋರಿಸಿ ಕಳೆದ ಬಾರಿಯೂ ನಿಮಗೆ ಇದೇ ಸಮಸ್ಯೆಯಾಗಿತ್ತು ಎಂದು ನೆನಪಿಸಬಹುದು. ಪದೇ ಪದೇ ಉಂಟಾಗುವ ಕಾಯಿಲೆ ಗಂಭೀರ ರೂಪ ಪಡೆದುಕೊಳ್ಳಬಹುದು. ನಿಮ್ಮ ಡಾಕ್ಟರ್‌ಗೆ ಇದು ತಿಳಿದುಬಂದರೆ ಅದನ್ನು ತಡೆಯಲು ಅವರು ಮೊದಲೇ ನಿಮ್ಮನ್ನು ಎಚ್ಚರಿಸುತ್ತಾರೆ. ಯಾವುದಾದರೂ ಗಂಭೀರ ಕಾಯಿಲೆ ಇದ್ದರೆ ನಿಮ್ಮ ಮೆಡಿಕಲ್ ಕಾರ್ಡ್‌ ಮತ್ತು ಡೈರಿ ನಿಮ್ಮ ಬಳಿ ಇಟ್ಟುಕೊಳ್ಳಿ. ಯಾರಾದರೂ ರಸ್ತೆಯಲ್ಲಿ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ತಲೆಸುತ್ತು ಬಂದು ಬಿದ್ದರೆ ದಾರಿಯಲ್ಲಿ ಹೋಗುತ್ತಿದ್ದವರು ಮೊದಲು ರೋಗಿಯ ಜೇಬನ್ನು ಪರೀಕ್ಷಿಸಿ ಅವರ ಪರಿಚಯದ ಬಗ್ಗೆ ಏನಾದರೂ ಸಿಗುತ್ತದೆಯೇ ಎಂದು ನೋಡುತ್ತಾರೆ. ಮೆಡಿಕಲ್ ಕಾರ್ಡ್‌ ಸಿಕ್ಕರೆ ಅವರಿಗೆ ಯಾವ ಕಾಯಿಲೆ ಇದೆ,. ಅವರು ಜ್ಞಾನ ತಪ್ಪಿದ್ದಕ್ಕೆ ಯಾವ ಟ್ರೀಟ್‌ಮೆಂಟ್‌ ಕೊಡಿಸಬೇಕು ಎಂದು ತಿಳಿಯುತ್ತದೆ. ಈ ಮೆಡಿಕಲ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ ಹಾಗೂ ಪರಿಚಿತರ ನಂಬರ್‌ ಇದ್ದರೆ ಅವರನ್ನು ಸಂಪರ್ಕಿಸಲು ಸುಲಭವಾಗುತ್ತದೆ. ಅದರಿಂದ ಸಮಯಕ್ಕೆ ಸರಿಯಾಗಿ ನಿಮಗೆ ಚಿಕಿತ್ಸೆ ಸಿಗುತ್ತದೆ ಹಾಗೂ ನಿಮ್ಮ ಪರಿಚಿತರು ನಿಮ್ಮ ಬಳಿ ಇರುತ್ತಾರೆ.

ಮೆಡಿಕಲ್ ಡೈರಿಯೂ ಅಗತ್ಯ : ಗಂಭೀರ ಕಾಯಿಲೆ ಆದಾಗ ರೋಗಿ ತನ್ನ ಬಳಿ ಒಂದು ಮೆಡಿಕಲ್ ಡೈರಿಯನ್ನು ಇಟ್ಟುಕೊಳ್ಳಬೇಕು. ಡೈರಿಯಲ್ಲಿ ರೋಗಿ ತನ್ನ ಎಲ್ಲ ಟೆಸ್ಟ್ ಗಳು, ಔಷಧಗಳು, ಆಹಾರ, ಪಥ್ಯ ಇತ್ಯಾದಿ ಬರೆದಿಡಬೇಕು. ಡಾ. ಜಿತೇಂದ್ರ ಈ ಡೈರಿಯ ಮಹತ್ವದ ಬಗ್ಗೆ ಹೇಳುತ್ತಾ ಮೆಡಿಕಲ್ ಡೈರಿಯಲ್ಲಿ ರೋಗಿ ತಾನು ಮಾಡಿಸಿಕೊಳ್ಳಬೇಕಾದ ಟೆಸ್ಟ್ ಗಳ ತಾರೀಖು, ಔಷಧಗಳನ್ನು ತೆಗೆದುಕೊಳ್ಳಬೇಕಾದ ಸಮಯ ಅವು ಮುಗಿದ ನಂತರ ತರುವ ತಾರೀಖನ್ನು ಬರೆಯಬಹುದು. ಅನೇಕ ಬಾರಿ ಕಾಯಿಲೆಯಿಂದಾಗಿ ಅವರಿಗೆ ಎಲ್ಲ ನೆನಪಿರುವುದಿಲ್ಲ. ಆದ್ದರಿಂದ ದಿನ ಈ ಡೈರಿಯನ್ನು ಒಮ್ಮೆ ಓದಿಕೊಂಡರೆ ಯಾವಾಗ ಏನು ಮಾಡಬೇಕೆಂದು ತಿಳಿಯುತ್ತದೆ ಎನ್ನುತ್ತಾರೆ.

ಆಧುನಿಕ ಟೆಕ್ನಿಕ್ಗಳ ಬಗ್ಗೆ ತಿಳಿವಳಿಕೆ : ಆಧುನಿಕ ಯುಗದಲ್ಲಿ ಪ್ರಚಲಿತ ಟೆಕ್ನಿಕ್‌ಗಳ ಜ್ಞಾನ ಎಲ್ಲರಿಗೂ ಇರಬೇಕು. ಒಂದು ವೇಳೆ ಯಾರಿಗಾದರೂ ಏನಾದರೂ ಗಂಭೀರವಾದ ಕಾಯಿಲೆ ಇದ್ದರೆ ಇದಕ್ಕಾಗಿ ಟೆಕ್ನಿಕ್‌ಗಳನ್ನು ತಿಳಿಯುವುದು ಅಗತ್ಯ. ಈಗ ಸ್ಮಾರ್ಟ್‌ಫೋನ್‌ನ ಕಾಲ. ಸ್ಮಾರ್ಟ್‌ಫೋನ್‌ ರೋಗಿಯ ಬಳಿ ಇರಬೇಕು. ಅದನ್ನು ಉಪಯೋಗಿಸುವುದನ್ನು ರೋಗಿ ತಿಳಿದಿರಬೇಕು. ಇಂದು ಸ್ಮಾರ್ಟ್‌ಫೋನ್‌ನಲ್ಲಿ ಬಹಳಷ್ಟು ಆ್ಯಪ್ಸ್ ಗಳಿವೆ. ಉದಾ : ಕ್ಯಾಬ್‌ ಬುಕಿಂಗ್‌ ಆ್ಯಪ್ಸ, ಡಯೆಟ್‌ ಅಲರ್ಟ್‌ ಆ್ಯಪ್ಸ್, ಚ್ಯಾಟಿಂಗ್‌ ಆ್ಯಪ್ಸ್ ಇತ್ಯಾದಿ ವಿವಿಧ ರೀತಿಯ ಆ್ಯಪ್ಸ್ ರೋಗಿಗಳಿಗೆ ಸೌಲಭ್ಯಗಳು ಮತ್ತು ನೂತನ ಮಾಹಿತಿಗಳನ್ನು ಕೊಡುತ್ತದೆ.

ಚಾಟಿಂಗ್‌ ಆ್ಯಪ್ಸ್ ಹೇಗಿರುತ್ತವೆಂದರೆ ರೋಗಿ ಹಾಗೂ ಡಾಕ್ಟರ್‌ ನಡುವಿನ ಇಂಟರ್ಯಾಕ್ಷನ್‌ನ್ನು ಬಾಧಿತಗೊಳಿಸುವುದಿಲ್ಲ. ರೋಗಿಗೆ ಸಣ್ಣಪುಟ್ಟ ಮಾಹಿತಿ ಬೇಕಾಗಿದ್ದರೆ ಅವರು ಡಾಕ್ಟರ್‌ ಜೊತೆ ಇದರ ಮೂಲಕ ಮಾತಾಡಬಹುದು. ಹಲವು ಬಾರಿ ರೋಗಿಗಳು ತಮ್ಮ ಡಾಕ್ಟರ್‌ರಿಂದ ದೂರವಿರುತ್ತಾರೆ. ಆಗ ಪ್ರತ್ಯಕ್ಷವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಆಗ ವೀಡಿಯೋ ಕಾನ್ಛರೆನ್ಸ್ ಮೂಲಕ ರೋಗಿ ತಮ್ಮ ಡಾಕ್ಟರ್‌ರೊಂದಿಗೆ ಸಲಹೆ ಪಡೆಯಬಹುದು.

ನಗದು ಹಣ ಅಗತ್ಯವಾಗಿ ಇಟ್ಟುಕೊಳ್ಳಿ : ರೋಗಿ ಮನೆಯಲ್ಲಿ ಯಾವಾಗಲೂ ನಗದು ಹಣ ಅಗತ್ಯವಾಗಿ ಇಟ್ಟುಕೊಂಡಿರಬೇಕು. ನಗದು ಹಣ ಇಡಲು ಅಸುರಕ್ಷತೆ ಅನ್ನಿಸಿದರೆ ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಇಟ್ಟುಕೊಂಡಿರಬೇಕು.

ಕುಟುಂಬದವರ ಸಹಕಾರ ಅವಶ್ಯಕ

ವಿಭಜಿತ ಕುಟುಂಬವಾಗಲಿ, ಒಟ್ಟು ಕುಟುಂಬವಾಗಲಿ ಯಾರಾದರೂ ಒಬ್ಬರಿಗೆ ಗಂಭೀರ ಕಾಯಿಲೆ ಉಂಟಾದರೆ ರೋಗಿಗೆ ಮನೆಯವರ ದೈಹಿಕ ಹಾಗೂ ಮಾನಸಿಕ ಎರಡೂ ರೀತಿಯ ಸಹಕಾರ ಬೇಕಾಗುತ್ತದೆ. ವಿಶೇಷವಾಗಿ ವಿಭಜಿತ ಕುಟುಂಬದಲ್ಲಿ ರೋಗಿ ತನ್ನನ್ನು ಏಕಾಂಗಿ ಎಂದುಕೊಳ್ಳುತ್ತಾರೆ. ಖ್ಯಾತ ಸೈಕಾಲಜಿಸ್ಟ್ ಡಾ. ಮೀನಾಕ್ಷಿ ಹೀಗೆ ಹೇಳುತ್ತಾರೆ, ವಿಭಜಿತ ಕುಟುಂಬದಲ್ಲಿ ಕೆಲವೇ ಮಂದಿ ಇರುವುದರಿಂದ ಎಲ್ಲರ ಜವಾಬ್ದಾರಿ ಮತ್ತು ಕೆಲಸಗಳು ಹಂಚಲ್ಪಟ್ಟಿರುತ್ತವೆ. ಮನೆಯಲ್ಲಿ ಯಾರಾದರೂ ಕಾಯಿಲೆ ಮಲಗಿದರೆ ಉಳಿದರ ಕೆಲಸ ಹೆಚ್ಚಾಗುತ್ತದೆ. ರೋಗಿ ತನ್ನ ಸಣ್ಣ ಪುಟ್ಟ ಕೆಲಸಗಳನ್ನು ಸ್ವತಃ ಗಮನಿಸಿಕೊಂಡರೂ ಅವರ ಮನೆಯವರಿಗೆ ಕೆಲಸವಂತೂ ಹೆಚ್ಚುತ್ತದೆ. ರೋಗಿ ಕಾಯಿಲೆಯೊಂದಿಗೆ ಹೋರಾಡಲು ಮಾನಸಿಕವಾಗಿ ಹೇಗೆ ಸದೃಢರಾಗಬೇಕೆಂದು ತಿಳಿಯೋಣ ಬನ್ನಿ :

ಕಾಯಿಲೆ ಎಷ್ಟೇ ಗಂಭೀರವಾದರೂ ರೋಗಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಸಂಪೂರ್ಣವಾಗಿ ಗುಣವಾಗುತ್ತೀರಿ ಎಂದು ಭರವಸೆ ಕೊಡಿ.

ರೋಗಿ ಸದಾ ನಿಮ್ಮನ್ನು ಅವಲಂಬಿಸಿರಬೇಕೆಂದು ನಿರೀಕ್ಷಿಸಬೇಡಿ. ಅವರು ಸ್ವತಃ ಡಾಕ್ಟರ್‌ ಬಳಿ ಹೋಗಬಯಸಿದರೆ, ಹೋಗಲು ಬಿಡಿ.

ಕೆಲಸದಲ್ಲಿ ಎಷ್ಟೇ ವ್ಯಸ್ತರಾಗಿದ್ದರೂ ರೋಗಿಯ ದೇಹ ಸ್ಥಿತಿಯ ಬಗ್ಗೆ ದಿನಕ್ಕೆ 2-3 ಬಾರಿ ವಿಚಾರಿಸಿ. ಆಗ ರೋಗಿಗೆ ತನ್ನ ಬಗ್ಗೆ ಇತರರಿಗೂ ಕಾಳಜಿ ಇದೆ ಅನ್ನಿಸುತ್ತದೆ.

ಕಾಯಿಲೆ ಬರುವುದಕ್ಕೆ ಮೊದಲು ರೋಗಿ ಆಫೀಸಿಗೆ ಹೋಗುತ್ತಿದ್ದರೆ ಅವರು ಆಫೀಸಿಗೆ ಹೋಗುವುದನ್ನು ತಡೆಯಬೇಡಿ. ಅವರು ಆಫೀಸಿಗೆ ಹೋಗಬಹುದೇ ಬೇಡವೇ ಎಂದು ಡಾಕ್ಟರ್‌ ಬಳಿ ಸಲಹೆ  ಪಡೆಯಿರಿ. ರೋಗಿಗೆ ಯಾವುದಾದರೂ ಸಣ್ಣಪುಟ್ಟ ಕೆಲಸಗಳನ್ನು ಕೊಡುತ್ತಿರಿ. ಅದರಿಂದ ಅವರಿಗೆ ಮಾನಸಿಕ ಒತ್ತಡ ಆಗುವುದಿಲ್ಲ ಮತ್ತು ಅವರಿಗೆ ಏಕಾಂಗಿತನ ಉಂಟಾಗುವುದಿಲ್ಲ.

ಡಾ. ಅನುರಾಧಾ

Tags:
COMMENT