`ಮದುವೆ ಮಂಟಪದಿಂದ ವರ ಹಠಾತ್ತನೇ ಎದ್ದು ಹೋದ,' ಅಥವಾ `ವಧುವಿನ ಮನೆ ಬಾಗಿಲಿಗೆ ಬಂದ ದಿಬ್ಬಣ ವಾಪಸ್ ಹೊರಟುಹೋಯಿತು,' ಎಂಬಂತಹ ಸುದ್ದಿಗಳು ಯಾವಾಗಲಾದರೊಮ್ಮೆ ನಮ್ಮ ಕಣ್ಣಿಗೆ ಬೀಳುತ್ತಿರುತ್ತವೆ. ಸಂಬಂಧ ಕೂಡಿ ಬಂದು ಮದುವೆಯೂ ಆಗುತ್ತದೆ. ಆದರೆ ಕೆಲವೇ ದಿನಗಳಲ್ಲಿ ಅದು ಮುರಿದು ಬೀಳುತ್ತದೆ. ಇಲ್ಲಿ ಸಂಬಂಧದ ಮಾಧುರ್ಯವೇ ಹೊರಟುಹೋಗುತ್ತದೆ. ಇದರ ಹಿಂದಿನ ಕಾರಣ ಮಾತ್ರ ಅತ್ಯಂತ ಕ್ಷುಲ್ಲಕವಾಗಿರುತ್ತದೆ. ಒಂದು ಸಣ್ಣ ಮಾತು ಸಂಬಂಧದಲ್ಲಿ ಹುಳಿ ಹಿಂಡುತ್ತದೆ. ಆ ಮಾತಿನಿಂದ ಎರಡೂ ಕಡೆಯವರು ಅದೆಷ್ಟು ರೊಚ್ಚಿಗೇಳುತ್ತಾರೆಂದರೆ, ಸಿಟ್ಟಿನ ಆವೇಶದಲ್ಲಿ ಮದುವೆ ಮುರಿಯುವ ನಿರ್ಣಯ ಕೈಗೊಳ್ಳುತ್ತಾರೆ. ಅದು ಇಬ್ಬರಿಗೂ ಹಾನಿಕರ.

ಇದರಲ್ಲಿ ಪ್ರಮುಖ ಪಾತ್ರ ವಹಿಸುವವರೆಂದರೆ, ವಧುವರರ ತಂದೆ ತಾಯಿ. ಕೆಲವು ಸಲ ಇದರಲ್ಲಿ ಮನೆಯ ಹಿರಿಯರ ಪಾತ್ರ ಇರಬಹುದು.

ಅಂದಹಾಗೆ, ಯುವಕ ಯುವತಿ ಮದುವೆಯ ಬಂಧನದ ಬಳಿಕ ಗಂಡ ಹೆಂಡತಿಯರಾಗುತ್ತಿದ್ದಂತೆ, ಎರಡೂ ಕುಟುಂಬಗಳಲ್ಲಿ ಹಲವು ಸಂಬಂಧಗಳು ಏರ್ಪಡುತ್ತವೆ. ಇಬ್ಬರು ತಾಯಂದಿರು ಕ್ಷಣಾರ್ಧದಲ್ಲಿ ಅತ್ತೆಯರಾಗುತ್ತಾರೆ. ಅದೇ ರೀತಿ ಇಬ್ಬರು ಪುರುಷರಿಗೆ ತಂದೆಯ ಜೊತೆಗೆ ಮಾವನ ಪಟ್ಟ ದೊರೆಯುತ್ತದೆ. ಹೆಂಡತಿಗೆ ಗಂಡನ ತಂಗಿ ನಾದಿನಿಯಾಗಿಯೂ, ಹಾಗೂ ಗಂಡನಿಗೆ ಹೆಂಡತಿಯ ತಂಗಿ ನಾದಿನಿಯಾಗಿಯೂ ದೊರೆಯುತ್ತಾಳೆ. ನವ ವಧು ಹೆಂಡತಿಯಾಗಿ ಕುಟುಂಬದಲ್ಲಿ ಸೊಸೆ, ಅತ್ತಿಗೆ, ಅತ್ತೆ, ಚಿಕ್ಕಮ್ಮ, ಹಿರಿಯ ಸೊಸೆ, ಕಿರಿಯ ಸೊಸೆ ಹೀಗೆ ಹಲವು ಸಂಬಂಧಗಳಿಗೆ ಕಾರಣವಾಗುತ್ತಾಳೆ. ಅಂದಹಾಗೆ, ಇವು ರಕ್ತಸಂಬಂಧಗಳಾಗಿರುವುದಿಲ್ಲ, ಆದರೆ ಅದಕ್ಕೂ ಮುಖ್ಯವಾಗಿ ಅಮೂಲ್ಯ ಹಾಗೂ ಅತ್ಯಂತ ಪ್ರಮುಖ ಸಂಬಂಧಗಳಾಗಿರುತ್ತವೆ. ಈ ಸಂಬಂಧಗಳ ಹೊರತಾಗಿ ಮತ್ತೊಂದು ಸಂಬಂಧವಿದೆ, ಅದು ಎರಡೂ ಕುಟುಂಬಗಳ ದೊಡ್ಡವರ ನಡುವೆ ಬೆಸೆಯಲ್ಪಡುತ್ತದೆ. ಅದು ವಿಶಿಷ್ಟ ಹಾಗೂ ಗೌರವಾರ್ಹವಾಗಿರುತ್ತದೆ. ಅದು ಇಬ್ಬರು ಬೀಗರ ನಡುವಿನ ಸಂಬಂಧ. ಅವರಿಂದಾಗಿಯೇ ಈ ಎಲ್ಲ ಹೊಸ ಸಂಬಂಧಗಳು ಜನ್ಮ ತಳೆಯುತ್ತವೆ.

ಈ ಸಂಬಂಧಗಳಲ್ಲಿ ಒಂದೆಡೆ ಅನೇಕ ತಕರಾರುಗಳು ಕೇಳಿ ಬರುತ್ತವಾದರೆ, ಮತ್ತೊಂದೆಡೆ ಈ ಸಂಬಂಧ ಅತ್ಯಂತ ಆತ್ಮೀಯ ಭಾವನೆಯನ್ನು, ಗೌರವವನ್ನು ಪಡೆದುಕೊಳ್ಳುತ್ತದೆ. ಹೆಂಡತಿಯ ತಂದೆತಾಯಿ ಅಳಿಯನ ಜೀವನದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಸ್ತಕ್ಷೇಪ ಮಾಡಿದಾಗ ಅಥವಾ ವರನ ತಂದೆತಾಯಿಗಳು ವಧುವಿನ ಮನೆಯರನ್ನು ಕೆಳಮಟ್ಟದವರೆಂದು ಭಾವಿಸಲು ಆರಂಭಿಸಿದಾಗ ಇಂತಹ ತಕರಾರುಗಳು ಕೇಳಿಬರುತ್ತವೆ. ಈ ಸಂಬಂಧಗಳು ಮತ್ತಷ್ಟು ಹಸಿರಾಗಿರಲು ಪರಸ್ಪರ ತಿಳಿವಳಿಕೆ, ಹೊಂದಾಣಿಕೆ ಮತ್ತು ಸಹನಶೀಲ ಗುಣ ಅತ್ಯವಶ್ಯ.

ವಕೀಲಿ ವೃತ್ತಿ ಮಾಡುವ ನಯನಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ನಾನು ಹೇಳಿದ್ದನ್ನು ಕೇಳಿ ಅನೇಕರು ನಂಬುವುದೇ ಇಲ್ಲ, ಆದರೂ ಅದು ಸತ್ಯ. ನನ್ನ ಮದುವೆಯಾಗಿ 12 ವರ್ಷಗಳೇ ಕಳೆದುಹೋಗಿವೆ. ಆದರೂ ನನ್ನ ಅಮ್ಮ ಹಾಗೂ ಅತ್ತೆ ನಡುವೆ ಒಂದೇ ಒಂದು ಸಲ ಮನಸ್ತಾಪ ಉಂಟಾಗಿಲ್ಲ.

``ಅವರಿಬ್ಬರೂ ಗೆಳತಿಯರಂತಿರುತ್ತಾರೆ. ನಮ್ಮ ಅತ್ತೆಗೆ ಇಲ್ಲಿ ಬೇಸರವೆನಿಸಿದರೆ ನನ್ನ ತಾಯಿಯ ಮನೆಗೆ ಹೋಗಿ ಒಂದೆರಡು ದಿನ ಕಳೆದು ಬರುತ್ತಾರೆ. ಅಮ್ಮ ಕೂಡ ಆಗಾಗ ಇಲ್ಲಿಗೆ ಬರುತ್ತಿರುತ್ತಾರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಅವರು ಪರಸ್ಪರರಿಗೆ ಕೊಡುವ ಗೌರವ. ಒಬ್ಬರು ಇನ್ನೊಬ್ಬರ ಮನಸ್ಸನ್ನು ನೋಯಿಸುವುದಿಲ್ಲ. ಈ ಕಾರಣದಿಂದ ಅವರ ನಡುವೆ ಉತ್ತಮ ಸಂಬಂಧ ಕಾಯ್ದುಕೊಂಡು ಹೋಗಲು ಸಾಧ್ಯವಾಗಿದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ