ಪತಿ ಪತ್ನಿಯರ ಸಂಬಂಧ ಅದ್ಭುತವಾಗಿರುತ್ತದೆ. ಇದು ಕೊಂಚ ಹುಳಿಯಾಗಿದ್ದರೆ ಕೊಂಚ ಸಿಹಿಯಾಗಿರುತ್ತದೆ. ಪತ್ನಿಯಿಲ್ಲದೆ ಪತಿಗೆ ಇರಲಾಗುವುದಿಲ್ಲ. ಆದರೂ ಪತ್ನಿಯ ಕೆಲವು ಅಭ್ಯಾಸಗಳು ಆತನಿಗೆ ಕೋಪ ತರಿಸುತ್ತವೆ. ಒಮ್ಮೊಮ್ಮೆ ಜಗಳವಾಡುವಾಗ ಪತಿ ತನಗೆ ಇಷ್ಟವಿಲ್ಲದ ವಿಚಾರದ ಬಗ್ಗೆ ಹೇಳಿಬಿಡುತ್ತಾನೆ. ಇನ್ನೊಮ್ಮೆ ಜಗಳವಾದೀತೆಂಬ ಭಯದಿಂದ ತೆಪ್ಪಗಿದ್ದು ಮನದಲ್ಲೇ ಕುದ್ದುಹೋಗುತ್ತಾನೆ.

ಬನ್ನಿ, ಪತ್ನಿಯರ ಯಾವ ಯಾವ ಅಭ್ಯಾಸಗಳು ಪತಿಯರಿಗೆ ಇಷ್ಟವಾಗದೆ, ಅವರು ಅದರಿಂದ ಬೇಸತ್ತು ಹೋಗುತ್ತಾರೆಂದು ನೋಡೋಣ.

ಬೇರೊಬ್ಬ ಮಹಿಳೆಯನ್ನು ಹೊಗಳಿದರೆ ಹೊಟ್ಟೆಕಿಚ್ಚು : ಎಂದಾದರೂ ಗಂಡನ ಬಾಯಲ್ಲಿ ಬೇರೊಬ್ಬ ಮಹಿಳೆಯ ಹೊಗಳಿಕೆ ಕೇಳಿದ ಕೂಡಲೇ ಆಕೆಯ ಮುಖದ ಬಣ್ಣ ಬದಲಾಗುತ್ತದೆ. ಅವರ ಮನಸ್ಸಿನಲ್ಲಿ ಹೊಟ್ಟೆಕಿಚ್ಚು ಉಂಟಾಗುತ್ತದೆ. ಅನುಮಾನದ ಬೀಜ ಉತ್ಪತ್ತಿಯಾಗುತ್ತದೆ. ಖಂಡಿತಾ ತನ್ನ ಗಂಡ ಆ ಮಹಿಳೆಯತ್ತ ಆಕರ್ಷಿತನಾಗುತ್ತಿದ್ದಾನೆ ಅನ್ನಿಸುತ್ತದೆ. ಕೆಲವು ಮಹಿಳೆಯರು ಭಾವುಕರಾಗಿ ಗಂಡನ ಮೇಲೆ ಬಿರುಸು ಮಾತುಗಳನ್ನಾಡುತ್ತಾರೆ ಅಥವಾ ಮುಖ ಊದಿಸಿಕೊಳ್ಳುತ್ತಾರೆ. ಇನ್ನು ಕೆಲವರು ಕಣ್ಣೀರು ಸುರಿಸುತ್ತಾ ನಾನು ನಿಮಗೆ ಚೆನ್ನಾಗಿ ಕಾಣಿಸೋದಿಲ್ಲ. ಇಡೀ ದಿನ ಅವಳ ಗುಣಗಾನಾನೇ ಮಾಡ್ತಿರ್ತೀರಿ. ಅವಳ ಹತ್ತಿರಾನೇ ಹೋಗಿ ಎನ್ನುತ್ತಾರೆ. ಹೆಂಡತಿಯ ಈ ಅಭ್ಯಾಸ ಗಂಡನಿಗೆ ಚೂರೂ ಹಿಡಿಸುವುದಿಲ್ಲ.

ಸೆಕ್ಸ್ ನ್ನು ಅಸ್ತ್ರವನ್ನಾಗಿಸುವುದು : ಪತಿ ಪತ್ನಿ ಇಬ್ಬರಿಗೂ ಸೆಕ್ಸ್ ನೈಸರ್ಗಿಕ ಅಗತ್ಯವಾಗಿದೆ. ಆದರೆ ಕೆಲವು ಬಾರಿ ಪತ್ನಿಯರು ಈ ಪ್ರಾಕೃತಿಕ ಅಗತ್ಯವನ್ನು ತಮ್ಮ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ. ಅದಕ್ಕೆ ಒಪ್ಪಿಸಲು ಅಥವಾ ಕೊಂಚ ಆವೇಶದಿಂದ ಪತಿ ಮಾತಾಡಿದರೆ ಅವರು ಪತಿಯನ್ನು ಸೆಕ್ಸ್ ನಿಂದ ವಂಚಿತರನ್ನಾಗಿ ಮಾಡುತ್ತಾರೆ. ಒಂದೇ ಮಂಚದ ಮೇಲೆ ಮಲಗಿದ್ದರೂ ವಿರುದ್ಧ ದಿಕ್ಕಿನಲ್ಲಿ ಮುಖ ತಿರುಗಿಸಿಕೊಂಡು ಮಲಗಿಕೊಳ್ಳುತ್ತಾರೆ. ಹೆಂಡತಿಯ ಈ ಅಭ್ಯಾಸ ಗಂಡನಿಗೆ ಅಪ್ರಿಯವಾಗುತ್ತದೆ.

ಸುತ್ತಿ ಬಳಸಿ ಮಾತಾಡುವುದು : ಕೆಲವು ಪತ್ನಿಯರು ಯಾವುದೇ ವಿಷಯವನ್ನು ಸ್ಪಷ್ಟವಾಗಿ ಹೇಳುವುದಿಲ್ಲ. ಯಾವಾಗಲೂ ಸುತ್ತಿ ಬಳಸಿ ಸಂಕೇತ ಕೊಡಲು ಪ್ರಯತ್ನಿಸುತ್ತಾರೆ. ಗಂಡ ಅವರ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳದಿದ್ದಾಗ ಅವರು ವ್ಯಂಗ್ಯದ ಬಾಣಗಳನ್ನು ಬಿಡುತ್ತಾರೆ. ಆದರೂ ಗಂಡ ಅವರ ಸೂಚನೆಗಳನ್ನು ಅರ್ಥ ಮಾಡಿಕೊಳ್ಳದ್ದಿದರೆ ಅವರ ಸಿಟ್ಟು ನೆತ್ತಿಗೇರುತ್ತದೆ. ಪತ್ನಿ ಏನೇ ಹೇಳುವುದಿದ್ದರೂ ಸ್ಪಷ್ಟವಾಗಿ ಹೇಳಲಿ ಎಂದು ಗಂಡ ಬಯಸುತ್ತಾನೆ.

ಪರ್ಸನಲ್ ವಸ್ತುಗಳೊಂದಿಗೆ ಆಟ : ತಮ್ಮತನ, ತಮ್ಮ ಅಧಿಕಾರಗಳನ್ನು ಸೂಚಿಸಲು ಪತ್ನಿಯರು ಗಂಡನ ಆಫೀಸ್‌ ಬ್ಯಾಗ್‌, ಪ್ಯಾಂಟ್‌ ಶರ್ಟ್‌ನ ಜೇಬು, ಪರ್ಸ್‌, ಮೊಬೈಲ್‌, ಲ್ಯಾಪ್‌ಟಾಪ್‌ನಂತಹ ವಸ್ತುಗಳಿಗೆ ಕೈ ಹಾಕಿದಾಗ ಇಲ್ಲವೇ ತಡಕಾಡಿದಾಗ ಗಂಡಂದಿರಿಗೆ ಬಹಳ ಬೇಸರವಾಗುತ್ತದೆ. ಮಹಿಳಾ ಕ್ಲೈಂಟ್‌ನ ಪೋನ್‌ ನಂಬರ್‌, ಅವರು ಕಳಿಸಿದ ಎಸ್‌ಎಂಎಸ್‌ ಅವರ ಫೋಟೋ ಅಥವಾ ಏನಾದರೂ ಕಾಗದ ನೋಡಿದರೆ ಅವರ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಪರ್ಸ್‌ನಲ್ಲಿ ಹೆಚ್ಚು ಹಣ ನೋಡಿ ಇದೆಲ್ಲಿಂದ ಬಂತು, ಯಾರು ಕೊಟ್ಟರು ಎಂದೆಲ್ಲಾ ಕೇಳುತ್ತಾರೆ.

ಸದಾ ಅಡ್ಡಿಪಡಿಸುವಿಕೆ : ಕೆಲವು ಪತ್ನಿಯರು ಸದಾ ಏನಾದರೊಂದು ಅಡಚಣೆ ಉಂಟುಮಾಡುತ್ತಲೇ ಇರುತ್ತಾರೆ. ಅವರಿಗೆ ತಮ್ಮ ಗಂಡನ ಪ್ರತಿಯೊಂದು ನಡವಳಿಕೆ ಹಾಗೂ ಅಭ್ಯಾಸದ ಬಗ್ಗೆ ವಿರೋಧವಿರುತ್ತದೆ. ಇವತ್ತು ಈ ಡ್ರೆಸ್‌ ಏಕೆ ಧರಿಸಿದ್ರಿ? ಇವತ್ಯಾಕೆ ಬೇಗನೆ ಹೊರಟಿದ್ದೀರಿ? ಇವತ್ಯಾಕೆ ಮನೆಗೆ ಲೇಟಾಗಿ ಬಂದ್ರಿ? ಅಷ್ಟು ಯಾಕೆ ಫೋನ್‌ ಮಾಡ್ತಿದ್ದೀರಿ? ಇಂತಹ ಪ್ರಶ್ನೆಗಳನ್ನು ಗಂಡನಿಗೆ ಕೇಳಿಕೇಳೀ ಅವರನ್ನು ಹಣ್ಣು ಮಾಡಿಬಿಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ