ಸಂಬಂಧಗಳಲ್ಲಿ ಈಗ ಎಲ್ಲ ಇನ್‌ಸ್ಟೆಂಟ್‌ ಆಗತೊಡಗಿವೆ. ಹೀಗಾಗಿ ಹಳೆಯ ಗಾದೆ ಮಾತು ಬದಲಾಗುತ್ತಿದೆ. `ಲಗ್ನಪತ್ರಿಕೆ ಮುಗಿಯುತ್ತಿದ್ದಂತೆ ಮುಹೂರ್ತದ ದಿನ ಓಡಿ ಬಂತು,' ಎಂಬುದು ಬದಲಾಗಿ ಈಗ `ಮುಹೂರ್ತ ಮುಗಿಯುತ್ತಿದ್ದಂತೆ ಡೈವೋರ್ಸ್‌ಆಗೇಹೋಯ್ತು!' ಮಾಮೂಲಿ ಎನಿಸಿಬಿಟ್ಟಿದೆ.

ಇಂದಿನ ಯುವಜನತೆಗೆ `ಜಗಳ ಶುರುವಾಯ್ತು ಡೈವೋರ್ಸ್‌ ಆಗ್ಹೋಯ್ತು,' ಎಂಬುದು ಟ್ರೆಂಡ್‌ ಆಗಿಹೋಗಿದೆ. ಪ್ರೇಮ ಪ್ರಕರಣಗಳಲ್ಲಿ ಬಿಝಿ ಎನಿಸಿರುವ ಅಮೆರಿಕನ್‌ಪಾಪ್‌ ಸ್ಟಾರ್‌ ಸಿಂಗರ್‌ ಜೆನಿಫರ್‌ ಲೋಪೇಸ್‌ ಈಗಾಗಲೇ 3 ಬಾರಿ ಡೈವೋರ್ಸ್‌ಪಡೆದಾಯಿತು. ಆ್ಯಕ್ಟರ್‌ ಮಾಡೆಲ್ ಓಜಾನಿ ನೇಲಾ ಜೊತೆ ಈಕೆಯ ಸಂಬಂಧ 1 ವರ್ಷ ಸಹ ಇರಲಿಲ್ಲ. ಡ್ಯಾನ್ಸರ್‌ ಕ್ರಿಸ್‌ ಜೂಡ್ ಜೊತೆ 2 ವರ್ಷ ಇದ್ದದ್ದೇ ಹೆಚ್ಚು. ಅದೇ ತರಹ ಗಾಯಕ ಮಾರ್ಕ್‌ ಆಲ್ಯೋನಿ ಜೊತೆ 3 ವರ್ಷಕ್ಕೆ ಮೊದಲೇ ಡೈವೋರ್ಸ್ ಆಯಿತು.

ಇದೇ ತರಹ ಭಾರತದಲ್ಲಿ ಕಣ್ಣಾಡಿಸಿದರೆ, ಉ. ಭಾರತದ ಭೋಜ್‌ಪುರದಲ್ಲಿ ಸುನೀತಾ ಮದುವೆಯಾದ ಎರಡೇ ದಿನಗಳಲ್ಲಿ ತನ್ನ ಕೈಗಳ ಮದರಂಗಿ ಬಣ್ಣ ತೇಲುವ ಮೊದಲೇ, ಗಂಡ ತನಗೆ ಇಷ್ಟ ಆಗಲಿಲ್ಲ ಎಂಬ ನೆಪ ಹೇಳಿ ವಿಚ್ಛೇದನಕ್ಕೆ ಅರ್ಜಿ ಹಾಕಿದಳು.

ಹೀಗೆಯೇ ಬಿಕೇನೇರ್‌ನಲ್ಲಿ ಫೇಸ್‌ಬುಕ್‌ನಿಂದ ಆರಂಭಗೊಂಡ ಲವ್ ಸ್ಟೋರಿಯೊಂದು, 1 ವಾರ ಮುಗಿಯುಷ್ಟವರಲ್ಲೇ ಮದುವೆ ಆದರು. ಇನ್ನೇನು? ಮಧುಚಂದ್ರ ಮುಗಿಸಿ ಬರುವಷ್ಟರಲ್ಲಿ ದೊಡ್ಡ ಜಗಳವಾಗಿ, ಪರಸ್ಪರ ಸಹಮತಿಯಿಂದ ವಿಚ್ಛೇದನಕ್ಕೆ ಮುಂದಾದರು.

ದಿಢೀರ್‌ ಮದುವೆ ದಿಢೀರ್‌ ಡೈವೋರ್ಸ್‌ಗಳ ಕೆಲವು ಪ್ರಕರಣಗಳ ಕಾರಣ ಕೆದಕಿದರೆ ಬೆಚ್ಚಿಬೀಳುಂತಾಗುತ್ತದೆ. ಆಫೀಸಿನಿಂದ ಬರಲು ತಡವಾಯ್ತು, ಜೊತೆಯಲ್ಲಿ ಡ್ರಿಂಕ್ಸ್ ತೆಗೆದುಕೊಳ್ಳಲಿಲ್ಲ, ಗೊರಕೆ...... ಇತ್ಯಾದಿ. ಒಟ್ಟಾರೆ ಹೇಳುವುದಾದರೆ ಧೈರ್ಯದ ಕೊರತೆ, ಅತ್ಯಧಿಕ ಮಹತ್ವಾಕಾಂಕ್ಷೆ ಸಂಬಂಧಗಳನ್ನು ದುರ್ಬಲಗೊಳಿಸುತ್ತವೆ. ಧರ್ಮಕ್ಕೆ ಅನುಸಾರ ಮದುವೆಯಾದರು, 1-2 ವರ್ಷಗಳಲ್ಲೇ ಆ ಧಾರ್ಮಿಕ ವಿಧಿಗಳನ್ನೆಲ್ಲ ಗಾಳಿಗೆ ತೂರಿ ವಿಚ್ಛೇದನಕ್ಕೆ ಮೊರೆಹೋಗುವುದು ನಿಜಕ್ಕೂ ವಿಪರ್ಯಾಸ.

ಇನ್‌ಸ್ಟೆಂಟ್‌ ದೋಸ್ತಿ ಹಾಗೂ ಅಷ್ಟೇ ವೇಗದ ಬ್ರೇಕ್‌ಅಪ್‌ ಮಾಡಿಕೊಳ್ಳುವ ಇಂದಿನ ಯುವಜನತೆಗೆ ಏನು ಹೇಳುವುದು? ಹಿಂದಿಯ ಬಿಗ್‌ಬಾಸ್‌ನಿಂದ ಖ್ಯಾತಿಗೊಂಡ ಗೌಹರ್‌ ಹಾಗೂ ಕುಶಾಲ್ ‌ಟಂಡನ್‌ ಎಷ್ಟು ಬೇಗ ಪ್ರೇಮಿಗಳಾದರೋ ಅಷ್ಟೇ ಬೇಗ ದೂರ ಸರಿದರು. ಹೀಗೆ ಎಲ್ಲ ದಿಢೀರ್‌ ಆಗಿಬಿಡಬೇಕು ಎಂಬುದು ಇಂದಿನವರ ಧಾವಂತ.

ಫಾಸ್ಟ್ ಫುಡ್‌, ಫಾಸ್ಟ್ ಟ್ರಾಕ್‌ ವಾಚಸ್‌, ಸ್ಪೀಡಿ ಬೈಕ್ಸ್, 2 ಮಿನಿಟ್‌ ನೂಡಲ್ಸ್, ಹೈ ಸ್ಪೀಡ್‌ ಇಂಟರ್‌ನೆಟ್‌, ಆನ್‌ಲೈನ್‌ ಶಾಪಿಂಗ್‌, ಆನ್‌ಲೈನ್‌ ಪಿಜ್ಜಾ  ಆರ್ಡರ್‌, ಆನ್‌ಲೈನ್‌ ಮೂವಿ ಟಿಕೆಟ್‌ ಬುಕಿಂಗ್‌, ರೆಸ್ಟೋರೆಂಟ್‌ನ ಟೇಬಲ್ ಬುಕಿಂಗ್‌.... ಇತ್ಯಾದಿಗಳೆಲ್ಲವೂ ಒಂದೇ ಟಚ್‌ ಒಂದೇ ಕ್ಲಿಕ್‌ನಲ್ಲಿ! ಇಷ್ಟು ಮಾತ್ರವಲ್ಲ ಬ್ಯೂಟಿಫುಲ್ ಆಗಿ ಕಾಣಿಸಲು ಇನ್‌ಸ್ಟೆಂಟ್‌ ಗ್ಲೋ. ಒಟ್ಟಾರೆ ಹೇಳಬೇಕೆಂದರೆ ಇಂದಿನ ಯುವಜನತೆಯ ಜೀವನದ ಫಂಡಾ ಎಂದರೆ ಇನ್‌ಸ್ಟೆಂಟ್‌ಸ್ಪೀಡ್‌. ಅವರಿಗಿರುವುದು ಒಂದೇ ಪಾಲಿಸಿ, ಮೂವ್ ‌ಆನ್‌! ಸದಾ ಮುಂದುವರಿಯುವುದೊಂದೇ ಧ್ಯೇಯ. ಇಂದು ಅವರಿಗೆ ಯಾವುದು ಅತ್ಯಗತ್ಯ, ಅದನ್ನು ಹೊಂದಲೇಬೇಕು ಎಂಬ ವ್ಯಾಮೋಹ ಇರುತ್ತದೋ, ನಾಳೆಗೆ ಅದು ಕಾಲ ಕಸವಾಗಿರುತ್ತದೆ. ಹೀಗೆ ಸದಾ ವೇಗವಾಗಿ ಓಡುವುದೊಂದನ್ನೇ ಜೀವನದ ಗುರಿಯಾಗಿಸಿಕೊಂಡ ಇಂದಿನ ಯುವಜನತೆ, `ಆತುರಗಾರನಿಗೆ ಬುದ್ಧಿಮಟ್ಟ' ಎಂಬಂತೆ ನಡೆದುಕೊಳ್ಳುತ್ತಾರೆ. ಇದರಿಂದ ಅವರ ಜೀವನದ ಮೇಲಾಗುವ ಪರಿಣಾಮಗಳನ್ನು ಗಮನಿಸೋಣ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ