ಪ್ರೀತಿಯ ಅನುಭೂತಿ ಬಹಳ ಗಾಢವಾಗಿರುತ್ತದೆ. ಸರಿಯಾಗಿ ನಿಭಾಯಿಸಿದರೆ ಪರವಾಗಿಲ್ಲ. ಇಲ್ಲದಿದ್ದರೆ ಶರೀರದಲ್ಲಿ ಮುಳ್ಳುಗಳು ಚುಚ್ಚಿದಂತಾಗುತ್ತದೆ.

ಒಂದು ಕಾಲದಲ್ಲಿ ಮಹಿಳೆಯರು ಬ್ರೇಕಪ್‌ ನಂತರ ಸಂಪೂರ್ಣವಾಗಿ ಕುಸಿದು ಹೋಗುತ್ತಿದ್ದರು. ಕೆಲವರು ಸಾಯಲೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಆದರೆ ಇಂದಿನ ಮಾಡರ್ನ್‌ ವುಮನ್‌ ಬ್ರೇಕಪ್‌ ನಂತರ ಕುಸಿಯುವುದಿಲ್ಲ. ಬದಲಾಗಿ ಬದುಕಿನ ರೀತಿಯನ್ನು ತಮಗೆ ತಕ್ಕಂತೆ ಬದಲಿಸಲು ಕಲಿತಿದ್ದಾರೆ.

ಅನೇಕ ಚಿತ್ರ ನಟಿಯರ ಬ್ರೇಕಪ್‌ ಮತ್ತು ಕೆರಿಯರ್‌ ಮುಗಿದುಹೋಗುವ ಬಗ್ಗೆ ನೋಡುತ್ತಿರುತ್ತೇವೆ. ಅವರು ಸಂಪೂರ್ಣವಾಗಿ ಹತಾಶೆಗೊಳ್ಳುತ್ತಾರೆ. ಅವರ ಗೆಳತಿಯರು ಅವರಿಗೆ ಮೇಕ್‌ಓವರ್‌ನ ಸಲಹೆ ನೀಡುತ್ತಾರೆ. ಆಗ ಅವರು ತಮ್ಮ ಲೈಫ್‌ ಸ್ಟೈಲ್ನ್ನು ಸಂಪೂರ್ಣವಾಗಿ ಬದಲಿಸಿ ಕೊಳ್ಳುತ್ತಾರೆ. ಕೆಲವು ಉದಾಹರಣೆಗಳು ಇಲ್ಲಿವೆ.

ಬಿಪಾಶಾ ಬಸು

ಹಾಟ್‌ ಬಿಪಾಶಾ ಬಸು ಮತ್ತು ಡ್ಯಾಶಿಂಗ್‌ ಜಾನ್‌ ಅಬ್ರಹಾಂ ಬ್ರೇಕಪ್‌ ಸುದ್ದಿ ಬಂದಾಗ ಯಾರಿಗೂ ನಂಬಲಾಗಿರಲಿಲ್ಲ. ಒಂದು ಮೂಲದ ಪ್ರಕಾರ, ಜಾನ್‌ ಅಬ್ರಹಾಂರ ಮನೆಯವರಿಗೆ ಬಿಪಾಶಾರ ಬೋಲ್ಡ್ ನೆಸ್‌ ಇಷ್ಟವಾಗಿರಲಿಲ್ಲ. ಹೀಗಾಗಿ ಅವರು ಬಿಪಾಶಾರನ್ನು ತಮ್ಮ ಸೊಸೆಯನ್ನಾಗಿ ಸ್ವೀಕರಿಸಲಿಲ್ಲ.

ಮನೆಯವರ ಮಾತನ್ನು ಒಪ್ಪಿ ಜಾನ್‌ ಬಿಪಾಶಾರನ್ನು ತನ್ನ ಬದುಕಿನಿಂದ ದೂರ ಮಾಡಿದರು. ಆದರೆ ಇದರಿಂದ ಬಿಪಾಶಾ ಕುಸಿಯಲಿಲ್ಲ. ಈ ದುಃಖದಿಂದ ಚೇತರಿಸಿಕೊಂಡು ಅವರು ಸಂಪೂರ್ಣವಾಗಿ ತಮ್ಮ ಕೆರಿಯರ್‌ ಹೊಳೆಯುವಂತೆ ಮಾಡುವಲ್ಲಿ ವ್ಯಸ್ತರಾದರು.

ಕತ್ರೀನಾ ಕೈಫ್

ಕ್ಯಾಟ್‌ ತನ್ನ ಕೆರಿಯರ್‌ ರೂಪಿಸಿಕೊಳ್ಳಲು ಸಲ್ಮಾನ್‌ರನ್ನು ಆಶ್ರಯಿಸಿದರು. ಈ ಜೋಡಿ ಡೇಟಿಂಗ್‌ ಸಹ ಮಾಡಿತ್ತು. ಕ್ಯಾಟ್ ಆಗೆಲ್ಲಾ ತನ್ನ ಲುಕ್ಸ್ ಬಗ್ಗೆ ವಿಶೇಷ ಗಮನ ಕೊಡುತ್ತಿರಲಿಲ್ಲ. ಆದರೆ ಸಲ್ಲೂರಿಂದ ಬ್ರೇಕಪ್‌ ಆದ ನಂತರ ಅವರು ತಮ್ಮ ಫಿಗರ್‌ ಬಗ್ಗೆ ಗಮನಕೊಟ್ಟರು. ಬಳುಕುತ್ತ, ಒಯ್ಯಾರ ಮಾಡುತ್ತಾ ಕತ್ರೀನಾ ರಣಬೀರ್‌ ಕಪೂರ್‌ರನ್ನು ತನ್ನ ಪ್ರೇಮಿಯಾಗಿಸಿಕೊಂಡರು.

ಪ್ರೀತಿ ಝಿಂಟಾ

ಡಿಂಪಲ್ ಗರ್ಲ್ ಪ್ರೀತಿ ಝಿಂಟಾ ನೆಸ್‌ಲಾಡಿಯಾರಿಂದ ಬ್ರೇಕಪ್‌ ಆದನಂತರ ಬಹಳ ಕಾಲ ಬಾಲಿವುಡ್‌ನಿಂದ ಸಂಬಂಧ ಕಡಿದುಕೊಂಡಿದ್ದರು. ನಂತರ ತಮ್ಮನ್ನು ಸಂಭಾಳಿಸಿಕೊಂಡು ಟಿ.ವಿ.ಯಲ್ಲಿ ಸಕ್ರಿಯರಾದರು. ಇದರ ಮಧ್ಯೆ ಅವರು ರಿಯಾಲಿಟಿ ಶೋ ಕೂಡಾ ಮಾಡಿದರು. ಇಂದು ನೀವು ಪ್ರೀತಿಯ ಬ್ರೇಕಪ್‌ ನಂತರದ ಹೇರ್‌ಸ್ಟೈಲ್ ‌ಹಾಗೂ ಡ್ರೆಸಿಂಗ್‌ ಸೆನ್ಸ್ ನೋಡಿದರೆ ಆಶ್ಚರ್ಯಪಡುವಿರಿ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಮತ್ತು ರಣಬೀರ್‌ ಕಪೂರ್‌ರ ಪ್ರೀತಿಯ ಬಗ್ಗೆ ಎಲ್ಲರೂ ಚರ್ಚಿಸುತ್ತಿದ್ದರು. ಆದರೆ ಈ ಜೋಡಿಯೂ ಬ್ರೇಕಪ್ ಆದ ಸುದ್ದಿ ಬಂದಾಗ ಇಡೀ ಬಾಲಿವುಡ್‌ ಆಶ್ಚರ್ಯಗೊಂಡಿತ್ತು. ಇವರಿಬ್ಬರ ಸಂಬಂಧ ಇರುವವರೆಗೆ ದೀಪಿಕಾ ಸಿಂಪಲ್ ಲುಕ್‌ ಸೀರೆ ಮತ್ತು ಉದ್ದ ಕೂದಲಿನಲ್ಲಿ ಕಂಡುಬರುತ್ತಿದ್ದರು. ಬ್ರೇಕಪ್‌ ನಂತರ ದೀಪಿಕಾ ಸೀರೆ ಧರಿಸುವುದನ್ನೇ ಮರೆತುಬಿಟ್ಟರು. ಅವರು ತಮ್ಮ ಉದ್ದ ಕೂದಲನ್ನು ಕಟ್‌ ಮಾಡಿಸಿಕೊಂಡರು. ತಮ್ಮ ಡ್ರೆಸಿಂಗ್‌ ಸೆನ್ಸ್ ಗೆ ವಿಶೇಷ ಗಮನಕೊಟ್ಟರು. ಹೀಗೆ ಮಾಡಿದ ನಂತರ ಅವರು ಹೆಚ್ಚು ಸುಂದರವಾಗಿ, ಬೋಲ್ಡ್ ಆಗಿ ಕಾಣುತ್ತಿದ್ದಾರೆ.

ವಿದ್ಯಾ ಬಾಲನ್

ಶಾಹಿದ್‌ ಕಪೂರ್‌ ಮತ್ತು ವಿದ್ಯಾ ಬಾಲನ್‌ರ ಬಗ್ಗೆ ಬಹಳ ಚರ್ಚೆಗಳಿದ್ದವು. ಇಬ್ಬರೂ `ಕಿಸ್ಮತ್‌ ಕನೆಕ್ಷನ್‌' ಚಿತ್ರದಿಂದ ಹತ್ತಿರವಾದರು. ವಿದ್ಯಾ ತಮ್ಮ ಬಳುಕು, ಒಯ್ಯಾರ ಇತ್ಯಾದಿಗಳಿಂದ ಶಾಹಿದ್‌ರನ್ನು ಸೆಳೆದರು. ಆಗ ವಿದ್ಯಾ ಶಾರ್ಟ್‌ ಡ್ರೆಸ್‌ಗಳನ್ನು ಬಿಟ್ಟು ಸೀರೆ ಉಡತೊಡಗಿದರು. ಆದರೆ ಸ್ವಲ್ಪ ಸಮಯದಲ್ಲೇ ವಿದ್ಯಾರಿಗೆ ಶಾಹಿದ್‌ ಬೇಸರವಾಯಿತು. ಶಾಹಿದ್‌ರ ದುಃಖ ಮರೆಯಲು ಅವರು `ಡರ್ಟಿ ಪಿಕ್ಚರ್‌'ನಲ್ಲಿ ಬೋಲ್ಡ್ ಲುಕ್ಸ್ ನಲ್ಲಿ ಕಾಣಿಸಿಕೊಂಡರು. ಈಗ ವಿದ್ಯಾ ಮದುವೆಯಾಗಿ ಖುಷಿಯಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ