ನಿಮಗೆ `ಕಾಡಿನ ಬೆಂಕಿ’ ಚಿತ್ರದ ಸುರೇಶ್‌ ಹುಬ್ಳೀಕರ್‌, `ತರ್ಕ’ ಚಿತ್ರದ ದೇವರಾಜ್‌, `ಸಾತ್‌ ಖೂನ್‌ ಮಾಫ್‌’ ಚಿತ್ರದ ಇರ್ಫಾನ್‌ಖಾನ್‌, `ಮರ್ಡರ್‌’ ಚಿತ್ರದ  ಖಳನಾಯಕ…. ಇಂಥ ಪಾತ್ರಗಳು ನೆನಪಿರಬೇಕಲ್ಲವೇ? `ಸಾತ್‌ ಖೂನ್‌ ಮಾಫ್‌’ನಲ್ಲಿ ಇರ್ಫಾನ್‌ಖಾನ್‌ ಅಂತೂ ಎಂಥ ಕವಿಯ ಪಾತ್ರವೆಂದರೆ, ಸೆಕ್ಸ್ ಸಮಯದಲ್ಲಿ ವಿಜೃಂಭಿಸುವ ಖಳನಾಗುವಂಥದು. `ಮರ್ಡರ್‌’ನಲ್ಲೂ  ಖಳನಾಯಕ ಮಾನಸಿಕ ರೋಗದಿಂದ ಪೀಡಿತ. `ಅಗ್ನಿಸಾಕ್ಷಿ’ ಚಿತ್ರದಲ್ಲಿ ನಾನಾ ಪಾಟೇಕರ್‌ ಪ್ರಾಬ್ಲಮ್ಯಾಟಿಕ್‌ ಬಿಹೇವಿಯರ್‌ಹೊಂದಿರುತ್ತಾನೆ. ಇದನ್ನು ಕೇವಲ ಸೆಕ್ಷುಯಲ್ ರೋಗದ ದೃಷ್ಟಿಯಿಂದ ಮಾತ್ರವಲ್ಲದೆ, ಗಂಭೀರ ಮಾನಸಿಕ ರೋಗಿಯಾಗಿಯೂ ನೋಡಬೇಕಾಗುತ್ತದೆ. ತಜ್ಞರ ಅಭಿಪ್ರಾಯದಲ್ಲಿ ಈ ರೋಗ ಹೇಗೆಲ್ಲ ಇದೆ ಎಂದು ತಿಳಿಯೋಣ :

ಫೀಟಿಶಿಸಮ್ : ಇದರಲ್ಲಿ ವ್ಯಕ್ತಿ ತನ್ನ ಕಾಮದಾಸೆಯನ್ನು ಪೂರೈಸಿಕೊಳ್ಳಲು ಬೇಕಾದ ವಸ್ತುಗಳ ಹಿಂದೆ ಬಹಳ ಕ್ರೇಝಿಯಾಗುತ್ತಾನೆ. ಈ ರೋಗಪೀಡಿತ ವ್ಯಕ್ತಿ ತನ್ನ ಆಸುಪಾಸಿನ ಮಹಿಳೆಯರ ಒಳವಸ್ತ್ರಗಳನ್ನು ಕದ್ದು ರಾತ್ರಿ ಹೊತ್ತು ಅಥವಾ ಒಂಟಿಯಾಗಿದ್ದಾಗ ಧರಿಸುತ್ತಾನೆ. ಒಮ್ಮೊಮ್ಮೆ ಇಂಥವರು ಅಂದದ ಹೆಂಗಸರ ಮೇಲೆ ವಿನಾಕಾರಣ ಆಕ್ರಮಣ ನಡೆಸುತ್ತಾರೆ ಅಥವಾ ಬಚ್ಚಿಟ್ಟುಕೊಂಡು ಅವರನ್ನೇ ಗಮನಿಸುತ್ತಾರೆ.

ಸೆಕ್ಸ್ ಫೆರಾಮೋನ್‌ : ಸೆಕ್ಸ್ ಫಿರಾಮೋನ್‌ ಅಥವಾ ಗಂಧ ಕಾಮುಕತೆಯಿಂದ ಪೀಡಿತ ವ್ಯಕ್ತಿ ಬಹಳ ಅಪಾಯಕಾರಿ ಎನಿಸುತ್ತಾನೆ. ಇಂಥ ವ್ಯಕ್ತಿ (ವಯಸ್ಸಿನ ವ್ಯತ್ಯಾಸವಿಲ್ಲದೆ) ಹೆಣ್ಣಿನ ದೇಹದ ಸುಗಂಧದಿಂದ ಉತ್ತೇಜಿತನಾಗುತ್ತಾನೆ. ಹಾಗಿರುವಾಗ ಯಾವ ಹೆಣ್ಣೇ ಆಗಲಿ, ಅವಳ ದೇಹದ ಸುವಾಸನೆಯಿಂದ ಇವನು ಉತ್ತೇಜಿತನಾದಾಗ, ಅವಳು ಅವನಿಗೆ ಶಿಕಾರಿಯಾಗುವ ಸಂಭವ ಇದೆ. ಅವಳನ್ನು ಪಡೆಯಲು ಏನು ಮಾಡಲಿಕ್ಕೂ ಸಿದ್ಧ.

ಸೆಕ್ಷುಯಲಿ ಪ್ರಾಬ್ಲಮ್ಯಾಟಿಕ್ಬಿಹೇವಿಯರ್‌ : ಸೆಕ್ಸ್ ಗೆ ಮೊದಲು ಪಾರ್ಟ್‌ನರ್‌ನ್ನು ಟಾರ್ಚರ್‌ ಮಾಡುವ (ತರ್ಕ ಚಿತ್ರದಂತೆ) ಮನೋವಿಕಾರವನ್ನೇ ಸೆಕ್ಷುಯಲಿ ಪ್ರಾಬ್ಲಮ್ಯಾಟಿಕ್‌ ಬಿಹೇವಿಯರ್‌ ಎಂದು ಹೇಳುತ್ತಾರೆ. `ಅಗ್ನಿಸಾಕ್ಷಿ’ಯ ನಾನಾ ಪಾಟೇಕರ್‌ಮತ್ತೊಂದು ಉದಾ. ಹೆಣ್ಣಿನ ಕಂಗಳಿಗೆ ಪಟ್ಟಿ ಕಟ್ಟುವುದು, ಅವಳ ಕೈಕಾಲುಗಳನ್ನು ಕಟ್ಟಿಹಾಕುವುದು, ಅವಳನ್ನು ಕಚ್ಚಿಹಾಕುವುದು, ಸಿಗರೇಟ್‌ನಿಂದ ಮೈಯೆಲ್ಲ ಸುಡುವುದು, ಬೆಲ್ಟ್ ಚಾಟಿಯಿಂದ ಬೀಸಿ ಹೊಡೆಯುವುದು, ಸೂಜಿಯಿಂದ ಚುಚ್ಚುವುದು, ಬೆತ್ತಲೆ  ನಡೆಸುವುದು, ಉಸಿರುಗಟ್ಟುವಂತೆ ಚುಂಬಿಸುವುದು, ಇಡೀ ಶರೀರ ನಜ್ಜುಗಜ್ಜಾಗುವಂತೆ ಹಿಂಸಿಸುವುದು…. ಇತ್ಯಾದಿ ಕುಚೇಷ್ಟೆಗಳೇ `ಹಿಂಸಾರತಿ’ ಎನಿಸುತ್ತದೆ. ಸೌಮ್ಯ ಸ್ವಭಾವದ ಗಂಡನ ಮೇಲೆ ಇಂಥದೇ ದೌರ್ಜನ್ಯ ನಡೆಸುವ ಹೆಂಡತಿಯರೂ ಅಪರೂಪವೇನಲ್ಲ.

ನಿವೆಲ್ ಛೋಮೇನಿಯಾ : ಇದು ಬಹು ಕಾಮನ್‌ ಡಿಸೀಸ್‌ ಎನಿಸಿದೆ. ಇದರ ಪೇಶೆಂಟ್‌ ಕೇನಲ ಫೀಮೇಲ್ಸ್ ಆಗಿರುತ್ತಾರೆ. ಡಿಸ್ ಬ್ಯಾಲೆನ್ಸ್ಡ್ ಹಾರ್ಮೋನ್ಸ್ ಕಾರಣ ಅವರಲ್ಲಿ ಹೈಪರ್‌ ಸೆಕ್ಷುಯಾಲಿಟಿ ಕಂಡುಬರುತ್ತದೆ. ಫೀಮೇಲ್ಸ್ ಸೆಕ್ಷುಯಲಿ ಹೆಚ್ಚುವ ಆ್ಯಕ್ಟಿವ್ ಆಗುವುದರಿಂದ, ಅವರಿಗೆ ಮೇಲ್ಸ್ ಸಾಂಗತ್ಯ ಹೆಚ್ಚು ಹೆಚ್ಚು ಬೇಕೆನಿಸುತ್ತದೆ. ಇಂಥ ಹೆಂಗಸರಿಗೆ ಗಂಡಸರನ್ನು ತಮ್ಮತ್ತ ಆಕರ್ಷಿಸಲು ಹಲವು ವಿದ್ಯೆಗಳು ಗೊತ್ತಿರುತ್ತವೆ. ಏನಾದರೂ ಮಾಡಿ ವಯೋಭೇದವಿಲ್ಲದೆ ಗಂಡಸರನ್ನು ಆಕರ್ಷಿಸುತ್ತಾರೆ. ಅದು ಯಶಸ್ವಿ ಆಗದಿದ್ದಾಗ, ಡಿಪ್ರೆಶನ್‌ಗೆ ಹೋಗಿಬಿಡುತ್ತಾರೆ

ಹಿಂಸಾರತಿ ಎಂಬ ಕಾಮವಿಕೃತಿ : ಈ ಕಾಯಿಲೆಯಲ್ಲಿ ವ್ಯಕ್ತಿ ಸಹವಾಸಕ್ಕೆ ಮುನ್ನ, ಹೆಣ್ಣನ್ನು ಬಹಳ ಹಿಂಸಿಸಿ ಹೊಡೆಯುತ್ತಾನೆ. ಗುಪ್ತಾಂಗಗಳನ್ನು ಗಾಯಗೊಳಿಸಲೂ ಹೇಸುವುದಿಲ್ಲ. ಇಡೀ ದೇಹವನ್ನು ಉಗುರಿನಿಂದ ಗೀರಿ ಹುಣ್ಣು ಮಾಡುತ್ತಾನೆ. ಸಂಗಾತಿ ನೋವು ಅನುಭವಿಸಿದಷ್ಟೂ ಈ ರೋಗಪೀಡಿತನಿಗೆ ತೃಪ್ತಿ ಹೆಚ್ಚು. ಎಷ್ಟೋ ಹೆಣ್ಣುಮಕ್ಕಳಿಗೆ ಮದುವೆಯಾದ ಮೇಲೆ ಮಾತ್ರ ತನ್ನ ಗಂಡ ಇಂಥ ವಿಕೃತಿ (ಅಬ್‌ನಾರ್ಮಲ್ ಸೆಕ್ಷುಯಲ್ ಡಿಸ್‌ಆರ್ಡರ್‌) ಹೊಂದಿರುವ ವಿಷಯ ತಿಳಿಯುತ್ತದೆ. ಹಾಗಾದಾಗ ಅಂಥ ವ್ಯಕ್ತಿಯನ್ನು ತಕ್ಷಣ ಮನೋಚಿಕಿತ್ಸಕರು ಅಥವಾ ಸೆಕ್ಸಾಲಜಿಸ್ಟ್ ರ ಬಳಿ ಅಗತ್ಯ ಕರೆದೊಯ್ಯಬೇಕು. ಚಿಕಿತ್ಸೆ ನಂತರ ಆತ ಸರಿಹೋಗದಿದ್ದರೆ, ವಕೀಲರನ್ನು ಸಂಪರ್ಕಿಸಿ ಮುಂದೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತಾಗಿ ಕಾನೂನಿನ ಸಲಹೆ ಪಡೆಯುವುದು ಲೇಸು.

ವೈವಾಹಿಕ ಅತ್ಯಾಚಾರ : ಮದುವೆ ನಂತರ ಗಂಡನೇ ಹೆಂಡತಿ ಮೇಲೆ ಅತ್ಯಾಚಾರ ಎಸಗುವುದೆಂದರೆ, ಇದನ್ನು ಕೇಳಲು ವಿಚಿತ್ರ ಎನಿಸುತ್ತದೆ. ಆದರೆ ಕೆಲವು ಹೆಂಗಸರು ಇಂಥ ಸ್ಥಿತಿ ಎದುರಿಸಬೇಕಾಗಿರುವುದು ನಿಜಕ್ಕೂ ಶೋಚನೀಯ. ಇಂಥ ಗಂಡಂದಿರು ಕೀಳರಿಮೆಯಿಂದ ಕುಗ್ಗುತ್ತಿರುತ್ತಾರೆ. ಅವರಿಗೆ ತಮ್ಮ ಕಾಮತೃಪ್ತಿಯೇ ಮುಖ್ಯವಾಗಿರುತ್ತದೆ. ಸಂಗಾತಿಯ ಭಾವನೆಗಳನ್ನು ಎಂದೂ ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲ. ಕಾನೂನಿನ ಪ್ರಕಾರ, ಪತ್ನಿಯ ಸಹಮತಿ ಇಲ್ಲದೆ ಪತಿ ಬಲವಂತವಾಗಿ ಅವಳನ್ನು ಆಕ್ರಮಿಸಲು ಯತ್ನಿಸಿದರೆ, ಅದು ಲೈಂಗಿಕ ಶೋಷಣೆ ಹಾಗೂ ಅತ್ಯಾಚಾರವೆಂದೇ ಎನಿಸುತ್ತದೆ.

ಸಾಮಾನ್ಯಾಗಿ ಕುಡುಕ ಗಂಡಂದಿರು ಇಂಥ ಅಪರಾಧ ಮಾಡುತ್ತಾರೆ. ಹೆಂಡದ ಅಮಲಿನಲ್ಲಿ ಹೆಂಡತಿಯ ಮೇಲೆ ಲೈಂಗಿಕ ಶೋಷಣೆ ನಡೆಸಿ, ಹೊಡೆದೂಬಡಿದೂ ಮಾಡುತ್ತಾರೆ. ಕಾನೂನಿನ ಪ್ರಕಾರ ಇದು ಅಪರಾಧ. ಇಂಥ ಅಪರಾಧಕ್ಕೆ ಕಲಂ 375  379 ಪ್ರಕಾರ, ಪತ್ನಿಗೆ ಹಲವು ಹಕ್ಕುಗಳಿದ್ದು, ಬಯಸಿದರೆ ಆಕೆ ವಿಚ್ಛೇದನ ಸಹ ಪಡೆಯಬಹುದು.

ಪೀಡೋಫೀಲಿಯಾ : ಪೀಡೋಫೀಲಿಯಾ ಅಥವಾ ಬಾಲರತಿಗೆ ಈಡಾದ ವ್ಯಕ್ತಿ, ಸಣ್ಣ ಮಕ್ಕಳ ಮೇಲೆ ಅತ್ಯಾಚಾರವೆಸಗಿ ಸಂತೃಪ್ತಿ ಪಡೆಯುತ್ತಾನೆ. ಮಕ್ಕಳೊಂದಿಗೆ ಹಾಗೆ ಕ್ರೂರವಾಗಿ ನಡೆದುಕೊಂಡು, ತಮ್ಮ ತಪ್ಪನ್ನು ಮರೆಮಾಚಲು ಮುಗ್ಧ ಮಕ್ಕಳನ್ನು ಕೊಲ್ಲಲಿಕ್ಕೂ ಹೇಸುವುದಿಲ್ಲ. ಇಂಥ ರೋಗಗ್ರಸ್ತರಲ್ಲಿನ ಒಂದು ಭ್ರಾಂತಿ ಎಂದರೆ ಹೀಗೆ ಮಕ್ಕಳೊಂದಿಗೆ ಅತಿರೇಕದ ಲೈಂಗಿಕ ಚಟುವಟಿಕೆ ನಡೆಸಿದರೆ, ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು. ಇಂಥ ವ್ಯಕ್ತಿ ಸಾಮಾನ್ಯವಾಗಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನೇ ಈ ಕುಕೃತ್ಯಕ್ಕಾಗಿ ಆರಿಸಿಕೊಳ್ಳುತ್ತಾನೆ.

ಸೆಕ್ಸ್ ಮೇನಿಯಾ : ಈ ರೋಗಪೀಡಿತ ವ್ಯಕ್ತಿಗೆ `ಸದಾಶಿವನಿಗೆ ಅದೇ ಧ್ಯಾನ’ ಎಂಬಂತೆ ಸೆಕ್ಸ್ ಒಂದೇ ಚಿಂತೆ ಕೊರೆಯುತ್ತಿರುತ್ತದೆ. ಹಗಲೂ ರಾತ್ರಿ ಅದನ್ನೇ ಯೋಚಿಸುತ್ತಿರುತ್ತಾನೆ. ಇಂಥ ವ್ಯಕ್ತಿ ಬೇರೆ ಯಾವುದೇ ಚಟುವಟಿಕೆಯಲ್ಲಿ ತೊಡಗಿದ್ದರೂ ಮನಸ್ಸು ಅದನ್ನೇ ಬಯಸುತ್ತಿರುತ್ತದೆ. ತನ್ನ ಮುಂದೆ ಹಾದುಹೋಗುವ ಪ್ರತಿ ಹೆಣ್ಣನ್ನೂ ಇದೇ ದೃಷ್ಟಿಯಿಂದ ಅಳೆಯುತ್ತಾನೆ.

ಇದೊಂದು ಬಗೆಯ ಮಾನಸಿಕ ರೋಗ. ಈ ಕಾರಣದಿಂದ ವ್ಯಕ್ತಿ ಆ ಕ್ರಿಯೆಯಲ್ಲಿ ಎಷ್ಟು ಪ್ರಬಲನಾಗುತ್ತಾನೆ ಎಂದರೆ, ಮತ್ತೆ ಮತ್ತೆ ತನ್ನ ಪತ್ನಿಯನ್ನು ಅದಕ್ಕಾಗಿ ಒತ್ತಾಯಿಸುತ್ತಿರುತ್ತಾನೆ. ಜೊತೆಗೆ ಹೊರಗೆ ಸಹ ಅನೇಕ ಗರ್ಲ್ ಫ್ರೆಂಡ್ಸ್ ಇರುತ್ತಾರೆ. ಒಬ್ಬ ಸಂಗಾತಿಯೇ ತನಗೆ ಸಾಕು ಎಂಬ ತೃಪ್ತಭಾವ ಇರುವುದಿಲ್ಲ. ಬಹು ಸಂಗಾತಿಗಳಿಂದ ಸುಖ ಹೊಂದುವುದರಲ್ಲಿ ಆನಂದ.

ಈತನಿಗೆ ಓವರ್‌ ಕಾನ್‌ಫಿಡೆನ್ಸ್ ಎಷ್ಟಿರುತ್ತದೆ ಎಂದರೆ, ತನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನಿಸುತ್ತದೆ. ತಾನು ಏನನ್ನೇ ಬಯಸಿದರೂ ಹಠದಿಂದ ಅದನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ಹುಚ್ಚಾಟದಲ್ಲಿ ತಾನು ಸರಿ ಮಾಡುತ್ತಿದ್ದೀನೋ ತಪ್ಪೋ ಎಂಬ ಪರಿಜ್ಞಾನ ಇರುವುದಿಲ್ಲ. ಒಮ್ಮೊಮ್ಮೆ ಅಪರಾಧಕ್ಕೂ ಇಳಿಯುತ್ತಾನೆ. ಹೀಗೆ ಮಾಡಿದ್ದಕ್ಕೆ ಪಶ್ಚಾತ್ತಾಪ ಇರುವುದಿಲ್ಲ, ಏಕೆಂದರೆ  ಹಾಗೇ ಮಾಡಿದ್ದಕ್ಕೆ ಅವನಿಗೆ ವಿಚಿತ್ರ ತೃಪ್ತಿ ಇರುತ್ತದೆ, ವಿವೇಕ ಅದನ್ನೇ ಸರಿ ಎನ್ನುತ್ತದೆ.

ಸೆಕ್ಸ್ ಫೋಬಿಯಾ : ಇದು ಮೇಲಿನ ಸೆಕ್ಸ್ ಮೇನಿಯಾಗೆ ತದ್ವಿರುದ್ಧ ಸೆಕ್ಸ್ ಸಮಸ್ಯೆ. ಸೆಕ್ಸ್ ಮೇನಿಯಾದಲ್ಲಿ ವ್ಯಕ್ತಿಗೆ ಸೆಕ್ಸ್ ಕುರಿತು ಅತಿಯಾದ ಉನ್ಮಾದವಿದ್ದರೆ, ಇದರಿಂದ ಪೀಡಿತರು ಸೆಕ್ಸ್ ಎಂದರೆ ಮೂಗು ಮುರಿಯುತ್ತಾ ತಮ್ಮನ್ನು ತಾವೇ ಎಲ್ಲರಿಂದ ಪ್ರತ್ಯೇಕವಾಗಿಸಿಕೊಳ್ಳುತ್ತಾರೆ. ಸೆಕ್ಸ್ ನಲ್ಲಿ ಅವರಿಗೆ ಏನೇನೂ ಆಸಕ್ತಿ ಇರುವುದಿಲ್ಲ, ಅಷ್ಟೇ ದ್ವೇಷ ಇರುತ್ತದೆ. ಇಂಥ ಎರಡು ವಿಭಿನ್ನ ಧ್ರುವಗಳ ಮನಸ್ಕರು ಮದುವೆಯಾದಾಗ, ಸೆಕ್ಸ್ ಕುರಿತಾಗಿ ತೀರಾ ವೈರುಧ್ಯದ ಭಾವಗಳಿರುವುದರಿಂದ, ಆ ಕುರಿತಾಗಿ ಸದಾ ವಿವಾದ, ತಿಕ್ಕಾಟ, ಘರ್ಷಣೆಗಳಿದ್ದೇ ಇರುತ್ತವೆ. ಕೊನೆಗೆ ಈ ಎರಡೂ ಗುಣಗಳು ಮಾನವರ ಮನದಲ್ಲಿ ಮಡುವಗಟ್ಟಿದ ವಿಕಾರಗಳು ಎಂಬುದನ್ನು ಇವರು ಗುರುತಿಸುವುದಿಲ್ಲ. ಸಕಾಲದಲ್ಲಿ ಮನೋಚಿಕಿತ್ಸಕರ ಸಲಹೆ ಪಡೆಯುವುದರಿಂದ ಹೊರಬರಬಹುದು.

ಪೀಪಿಂಗ್‌ : ಬೇರೆ ವ್ಯಕ್ತಿಗಳು ಮಿಲನದಲ್ಲಿರುವುದನ್ನು ಕದ್ದುಮುಚ್ಚಿ ನೋಡುವ ಈ ಸ್ವಭಾವ ಇಣುಕು ಕಾಮ ಅಥವಾ ಪೀಪಿಂಗ್‌ಎನಿಸಿದೆ. ಈ ಮನೋರೋಗಿಗಳು ಮುಂದೆ ಅಂಥವರ ಜೊತೆ ಲೈಂಗಿಕ ಸಂಪರ್ಕಕ್ಕೆ ತೊಡಗುತ್ತಾರೆ. ಮಿಲನದಲ್ಲಿರುವವರನ್ನು ಕಂಡು ರೋಮಾಂಚಿತಗೊಳ್ಳುವುದು ಮಾನವನ ಸಹಜ ಸ್ವಭಾವ. ಈ ಕುರಿತಾಗಿ ಹೆವ್ಯಾಕ್‌ ಎಲ್ವಿಸ್‌ ತನ್ನ `ಸೈಕಾಲಜಿ ಆಫ್‌ ಸೆಕ್ಸ್’ ಕೃತಿಯಲ್ಲಿ, ಮಾನವನ ಈ ಪ್ರವೃತ್ತಿ ಎಷ್ಟು ಸಹಜ ಎಂದರೆ, ಗಂಡು ಅಥವಾ ಹೆಣ್ಣಿರಲಿ, ಅವಕಾಶ ಸಿಕ್ಕಿದಾಗ, ಇತರರ ಸಮಾಗಮ ಗಮನಿಸಿ ಅವರಲ್ಲಿ ಆಸಕ್ತಿ ಬೆಳೆಸಿಕೊಂಡು ಅದೇ ನಿಟ್ಟಿನಲ್ಲಿ ಮುಂದುವರಿಯುತ್ತಾರೆ. ಅದೇ ತರಹ ಚಪಲಚಿತ್ತ ಹೆಂಗಸರೂ ಸಹ ಪರಪುರುಷರ ಕೋಣೆಯಲ್ಲಿ ಇಣುಕಿ ನೋಡಲು ಹಿಂಜರಿಯುವುದಿಲ್ಲ. ಈ ದುರಭ್ಯಾಸ ಒಂದು ಹಂತ ಮೀರಿದರೆ, ಅದು ಗಂಭೀರ ಮಾನಸಿಕ ರೋಗವಾಗಿ ಪರಿಣಮಿಸುತ್ತದೆ.

ಪ್ರೇಟ್ಯೂರಿಸಮ್ : ಈ ಕಾಮವಿಕೃತಿಗೆ ಒಳಗಾದ ವ್ಯಕ್ತಿ ಇತರರ ಜೊತೆಗೆ ಸಮಾಗಮಕ್ಕೆ ಮೊದಲು ತನ್ನ ಗುಪ್ತಾಂಗವನ್ನು ಜೋರಾಗಿ ಅಮುಕಿಕೊಳ್ಳುವುದು, ಉಜ್ಜುವುದು ಈ  ರೀತಿ ವಿಕಾರವಾಗಿ ವರ್ತಿಸುತ್ತಾನೆ. ಈ ಸಮಸ್ಯೆ ಹೆಚ್ಚಾಗಿ ನಪುಂಸಕರಲ್ಲಿ ಕಂಡುಬರುತ್ತದೆ.

ಬೇಸ್ಟಿಯಾಲಿಟಿ : ಇದರಿಂದ ಪೀಟಿತ ವ್ಯಕ್ತಿ ಸೆಕ್ಸ್ ಕುರಿತು ಎಷ್ಟು ತಲ್ಲೀನನಾಗಿರುತ್ತಾನೆ ಎಂದರೆ, ಎಂಥವರೇ ಸಿಕ್ಕರೂ ಅವರೊಂದಿಗೆ ಮಲಗಲು ಹಿಂಜರಿಯುವುದಿಲ್ಲ. ಇಂಥವರು ಬಲು ಅಸಹಾಯಕರು ಅಥವಾ ಪ್ರಾಣಿಗಳ ಮೇಲೂ ತಮ್ಮ ದಾಹ ತೀರಿಸಿಕೊಳ್ಳುತ್ತಾರೆ.

ಸ್ಯಾಡಿಝಂ  ಮ್ಯಾಸೋಕಿಸಮ್ : ಇದರಿಂದ ಪೀಡಿತನಾದ ವ್ಯಕ್ತಿ ಹೆಚ್ಚು ಸಮಯ ಫ್ಯಾಂಟಸಿಯಲ್ಲೇ ಕಳೆದುಬಿಡುತ್ತಾನೆ. ಇಂಥವರು ಮಿಲನದ ಸಮಯದಲ್ಲಿ ತಮ್ಮ ಸಂಗಾತಿಗೆ ಹಾನಿ ಮಾಡಬಹುದು.

ಎಕ್ಸೆಸಿಲ್ ಡಿಸೈರ್‌ : ವಿವಾಹಿತ ವ್ಯಕ್ತಿ ಗಂಡಸು ಅಥವಾ ಹೆಂಗಸೇ ಆಗಿರಲಿ, ತನ್ನ ಸಂಗಾತಿಯನ್ನು ಹೊರತುಪಡಿಸಿ ವಿವಾಹೇತರ ಸಂಬಂಧ ಬೆಳಿಸ ಬಯಸಿದರೆ ಅಂಥವರು ಒಂದು ಬಗೆಯ ಡಿಸ್‌ಆರ್ಡರ್‌ಗೆ ಒಳಗಾಗಿದ್ದಾರೆ ಎಂದೇ ಅರ್ಥ.

ಸೆಕ್ಸ್ ಅಡಿಕ್ಷನ್‌ : ಇದೊಂದು ಬಗೆಯ ದುಶ್ಚಟವೇ ಆಗಿದೆ. ಇದರಿಂದ ಪೀಡಿತ ವ್ಯಕ್ತಿ ಎಲ್ಲಾ ಜಾಗದಲ್ಲೂ ಹಗಲೂ ರಾತ್ರಿ ಸೆಕ್ಸ್ ನದೇ ಚಿಂತೆ ಆಗಿರುತ್ತದೆ. ಇಂಥವರು ಹೆಚ್ಚಿನ ಸಮಯನ್ನು ಸೆಕ್ಸ್ ಪ್ರವೃತ್ತಿಗಳಲ್ಲೇ ಕಳೆದುಬಿಡುತ್ತಾರೆ. ಅಶ್ಲೀಲ ಸಾಹಿತ್ಯ, ನೀಲಿ ಚಿತ್ರಗಳು, ಪೋರ್ನ್‌ ಸೈಟ್ಸ್, ಅತಿರೇಕದ ವಿಡಿಯೋ ಇತ್ಯಾದಿ. ಇಂಥವರಿಗೆ ಸೆಕ್ಸ್ ಕಂಟ್ರೋಲ್ ‌ಮಾಡಲಾಗದು. ಇಂಥವರು ವಯಸ್ಸಿನ ಭೇದವಿಲ್ಲದೆ ಇತರರ ಮೇಲೆ ಹರಿಹಾಯುತ್ತಾರೆ, ಪ್ರಾಣಿಗಳನ್ನೂ ಬಿಡುವುದಿಲ್ಲ.

ಎಗ್ಸಿಬಿಷನಿಸಮ್ : ಈ ಕಾಮವಿಕೃತಿಗೆ ಒಳಗಾದ ವ್ಯಕ್ತಿ ತನ್ನ ಗುಪ್ತಾಂಗವನ್ನು ಬೇಕೆಂದೇ ಬೇರೆ ಹೆಂಗಸರು ಅಥವಾ ಮಕ್ಕಳಿಗೆ ತೋರಿಸಲು ಬಯಸುತ್ತಾನೆ. ಇದರಿಂದ ಅಂಥವರಿಗೆ ಖುಷಿ, ಸಂತೃಪ್ತಿ ಸಿಗುತ್ತದೆ. ಇಂಥವರು ಬೇರೆಯವರಿಗೆ ಅಪ್ರತ್ಯಕ್ಷವಾಗಿ ಹಾನಿ ಉಂಟು ಮಾಡುತ್ತಾರೆ. ನಮ್ಮ ದೇಶದಲ್ಲಿ ಇಂಥ ವರ್ತನೆಗೆ ಕಾನೂನಿನಿಂದ ಶಿಕ್ಷೆ ಇದೆ. ಇಂಥ ಅಪರಾಧಿಗಳಿಗೆ ನಿರ್ದಿಷ್ಟ ಕಾಲಾವಧಿಗೆ ಸೆರೆವಾಸ ಅಥವಾ ಅಧಿಕ ಜುಲ್ಮಾನೆ ವಿಧಿಸಲಾಗುತ್ತದೆ.

ಅತಿರೇಕದ ವರ್ತನೆಗಳಿಗೆ ಕಾರಣ

ವಿಜ್ಞಾನಿಗಳು, ಮನೋಚಿಕಿತ್ಸಕರು ಇಂಥ ಅಬ್‌ನಾರ್ಮಲ್ ಸೆಕ್ಷುಯಲ್ ಬಿಹೇವಿಯರ್‌ಗೆ ಇಂಥದ್ದೇ ಎಂದು ಸಮರ್ಪಕ ಕಾರಣಗಳನ್ನು ಹೇಳಲಾಗಿಲ್ಲ. ಈ ತಜ್ಞರ ಪ್ರಕಾರ, ಮೆದುಳಿನಲ್ಲಿರುವ ನ್ಯೂರೋಟ್ರಾನ್ಸಿಮಿಟರ್‌ನಲ್ಲಿ ಯಾವುದೇ ವಿಧದ ವಿಕಾರ, ಮೆದುಳಿನ ರಾಸಾಯನಿಕ ಜೀವಕೋಶಗಳಲ್ಲಿ ಏರುಪೇರು, ಜೀನ್ಸ್ ನ ವಿಕೃತಿ ಇತ್ಯಾದಿಗಳಿಂದ ವ್ಯಕ್ತಿ ಅಬ್‌ನಾರ್ಮಲ್ ಸೆಕ್ಷುಯಲ್ ಬಿಹೇವಿಯರ್‌ನಿಂದ ಪೀಡಿತನಾಗುತ್ತಾನೆ.

ಅದೇ ಸೆಕ್ಸ್ ಅಡಿಕ್ಷನ್‌ ವಿಷಯದ ಕುರಿತಾಗಿ ತಜ್ಞರು ಹೇಳುವುದೆಂದರೆ 80% ಸೆಕ್ಸ್ ಅಡಿಕ್ಟೆಡ್‌ ಜನರ ತಾಯಿತಂದೆಯರೂ ಜೀವನದಲ್ಲಿ ಒಮ್ಮೆಯಾದರೂ ಸೆಕ್ಸ್ ಅಡಿಕ್ಟ್ ಆಗಿರಬಹುದು. ಸಾಮಾನ್ಯವಾಗಿ ಇಂಥ ಜನರಲ್ಲಿ ಸೆಕ್ಷುಯಲ್ ಅಬ್ಯೂಸ್‌ನ ಹಿಸ್ಟರಿ ಇರುತ್ತದೆ, ಅಂದರೆ ಇಂಥ ಜನ ಎಂದಾದರೊಮ್ಮೆ ಲೈಂಗಿಕ ಶೋಷಣೆಗೆ ಗುರಿಯಾಗಿರುತ್ತಾರೆ. ಇಷ್ಟು ಮಾತ್ರವಲ್ಲದೆ, ಯಾವ ಕುಟುಂಬದಲ್ಲಿ ಮಾನಸಿಕ ಹಾಗೂ ಭಾವನಾತ್ಮಕ ಬೆಸುಗೆ ಇಲ್ಲವೋ, ಅಂಥ ಕುಟುಂಬದ ಸದಸ್ಯರು ಸೆಕ್ಸ್ ಅಡಿಕ್ಟ್ ಆಗುವ ಸಂಭವ ಇರುತ್ತದೆ. ಇಂಥ ಡಿಸ್‌ಆರ್ಡರ್‌ಗಳಿಗೆ ಹಲವಾರು ಕಾರಣಗಳಿರಬಹುದು. ಸಾಮಾನ್ಯವಾಗಿ 60ಕ್ಕೆ ಹತ್ತಿರವಾಗುವ ಮಂದಿ ಇಂಥ ಮನೋವಿಕಾರಕ್ಕೆ ತುತ್ತಾಗಬಹುದು. ದೂಷಿತ ವಾತಾವರಣ, ಕೆಟ್ಟ ಪರಿಸರ, ಅಶ್ಲೀಲ ಸಾಹಿತ್ಯದ ಅತಿ ಹುಚ್ಚು, ಬ್ಲೂ ಫಿಲ್ಮ್ ನ ತೆವಲು ಇತ್ಯಾದಿಗಳಿಂದ ವ್ಯಕ್ತಿ ಇಂಥ ಕಾಮವಿಕೃತಿಗೆ ಒಳಗಾಗುತ್ತಾನೆ. ಗಂಡ/ಹೆಂಡತಿ ತಮ್ಮ ಸಂಗಾತಿಯ ಈ ದುರ್ಗುಣ ಅರಿತಾಗ ಅತಿ ಸಂದಿಗ್ಧಕ್ಕೆ ಸಿಲುಕುತ್ತಾರೆ.

ಇದರಿಂದ ಮುಕ್ತಿ ಹೇಗೆ?

ತಮ್ಮ ಸಂಗಾತಿಗೆ ಈ ಮನೋವಿಕಾರವಿದೆ ಎಂದು ತಿಳಿದಾಗ, ಗಂಡ/ಹೆಂಡತಿ ಆದವರು ಬಹಳ ಸಂಯಮದಿಂದ ಈ ಪರಿಸ್ಥಿತಿ ಎದುರಿಸಬೇಕು. ಈ ಕಾರಣಕ್ಕಾಗಿ ಸಂಗಾತಿಯ ಮೇಲೆ ಸಿಡುಕುತ್ತಾ, ಕೋಪಗೊಳ್ಳುವುದರಿಂದ, ಅವರ ಕಾಮೇಚ್ಛೆ ತಣಿಸದೆ ಕೆರಳಿಸುವುದರಿಂದ, ಸಿಡುಕುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಆಗ ಒತ್ತಡಕ್ಕೆ ಸಿಲುಕಿದ ಪೀಡಿತ ವ್ಯಕ್ತಿ ಏನಾದರೂ ತಪ್ಪು ನಿರ್ಧಾರ ಕೈಗೊಳ್ಳಬಹುದು. ಅದು ಹತ್ಯೆ/ ಆತ್ಮಹತ್ಯೆ ಏನಾದರೂ ಆಗಿರಬಹುದು.

ಕಾಮ ವಿಕೃತಿಗೆ ಈಡಾದ ಸಂಗಾತಿಗೆ ಆ ಕುರಿತು ಪ್ರೀತಿಯಿಂದ ತಿಳಿಹೇಳಿ, ಸರಳ ಸಮಾಗಮ ನಡೆಸುವಂತೆ ಮನವೊಲಿಸಿ. ಸಂಗಾತಿ ಸುಲಭ ಮಾತಿಗೆ ಜಗ್ಗದಿದ್ದಾಗ ಅವರಿಗೆ ಸಂಬಂಧಿಸಿದ ಹಿರಿಯರ ಕೈಲಿ ಹೇಳಿಸಿ ಅಥವಾ ಕೌನ್ಸಿಲಿಂಗ್‌ಗೆ ಕರೆದೊಯ್ಯಿರಿ.

ಅಷ್ಟಕ್ಕೂ ಸರಿಹೋಗದಿದ್ದರೆ, ಇಂಥವರನ್ನು ಮನೋಚಿಕಿತ್ಸಕರ ಬಳಿ ಕರೆದೊಯ್ಯಬೇಕಾಗುತ್ತದೆ. ಮೊದಲ ಕೌನ್ಸಿಲಿಂಗ್‌ ನಂತರ, ವ್ಯಕ್ತಿ ಯಾವ ಮಟ್ಟಕ್ಕೆ ಇದರಲ್ಲಿ ಗ್ರಸ್ತನೆಂದು ತಿಳಿಯುತ್ತದೆ. ನಂತರ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ.

ಸಮಯ ಮೀರುವುದಕ್ಕೆ ಮೊದಲೇ ಸೂಕ್ತ ವೈದ್ಯರಿಂದ ಸಲಹೆ ಪಡೆದರೆ, ಇಂಥ ಕಾಮವಿಕೃತಿಗಳೂ ಸರಿಹೋಗುತ್ತವೆ. ಯಾವ ಚಿಕಿತ್ಸೆಗೂ ಬಗ್ಗದೆ ವ್ಯಕ್ತಿ ಹಿಂಸಾರೂಪ ಪ್ರದರ್ಶಿಸುತ್ತಿದ್ದರೆ, ವಿಚ್ಛೇದನ ಒಂದೇ ಪರಿಹಾರವಾಗುತ್ತದೆ.

ಶೀಲಾ ಜೈನ್

ಕಾಮಾಂಧ ಪತ್ನಿಯಿಂದ ಪೀಡಿತ ಪತಿ

ಜನವರಿ 2011ರಲ್ಲಿ ಜರ್ಮನಿಯಲ್ಲಿ ಪ್ರಕಟಗೊಂಡ ಒಂದು ಲೇಖನದ ಅನುಸಾರ, ಅಲ್ಲಿನ ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಕಾಮಾಂಧತೆಯಿಂದ ಎಷ್ಟು ರೋಸಿದ್ದನೆಂದರೆ, ಅವನು ಅದಕ್ಕಾಗಿ ಪೊಲೀಸರ ನೆರವು ಪಡೆಯಬೇಕಾಯಿತು. ಜರ್ಮನಿಯ `ಬಿಲ್ಡ್’ ದೈನಿಕದ ಪ್ರಕಾರ, ಪೊಲೀಸ್‌ ಸ್ಟೇಷನ್‌ ತಲಪಿದ ಆ ವ್ಯಕ್ತಿ, ಕಳೆದ 4 ವರ್ಷಗಳಿಂದ ತಾನು ಬೆಡ್‌ರೂಮಿನ ಹೊರಗಿನ ಸೋಫಾದಲ್ಲೇ ಮಲಗುತ್ತಿರುವುದಾಗಿ ಹೇಳಿದನಂತೆ. ಆದರೂ ಆತ ಪತ್ನಿಯ ಕಾಮುಕ ಹಿಂಸೆಯಿಂದ ತಪ್ಪಿಸಿಕೊಳ್ಳಲು ಆಗಿಲ್ಲವಂತೆ.  ಜರ್ಮನ್‌ ಪೊಲೀಸರ ಪ್ರಕಾರ, 2 ಮಕ್ಕಳ ತಂದೆಯಾದ ಆತ, ಹೆಂಡತಿಯ ಅತಿಯಾದ ಕಾಮೇಚ್ಛೆ ತಣಿಸಲಾಗದೆ, ಡೈವೋರ್ಸ್‌ ಪಡೆಯಲಿದ್ದಾನಂತೆ.

ಪತ್ನಿಯನ್ನು ಬಿಟ್ಟು ಹೋಗಲು ಕಾರಣ, ಅವೇಳೆ ಹಾಗೂ ರಾತ್ರಿಗಳಲ್ಲಿ ಅವಳು ಅತಿಯಾಗಿ ಕಾಟ ಕೊಡದಂತೆ. ದಿನವಿಡೀ ದುಡಿದು ದಣಿದ ಅವನು ವಿಶ್ರಾಂತಿ ಇಲ್ಲದೆ ರಾತ್ರಿ ನಿದ್ದೆಗೆಟ್ಟು ಆರೋಗ್ಯ ಹಾಳು ಮಾಡಿಕೊಂಡನಂತೆ. ಅವಳ ಈ ಅತಿಕಾಮುಕತೆ ಅವನ ಕೆಲಸದ ಮೇಲೆ ಪ್ರಭಾವ ಬೀರಿ ಇನ್‌ಕ್ರಿಮೆಂಟ್‌, ಪ್ರಮೋಶನ್ಸ್ ತಪ್ಪಿಹೋಗತೊಡಗಿತು. ಇಂಥ ಕಾಮವಿಕೃತಿ ನಿಜಕ್ಕೂ ಸಂಸಾರದ ಸೌಮ್ಯತೆ ಹಾಳುಮಾಡಿ, ಕೌಟುಂಬಿಕ ನೆಮ್ಮದಿ ಕೆಡಿಸಿ, ವಿಚ್ಛೇದನಕ್ಕೆ ದಾರಿ ಮಾಡುತ್ತದೆ. ಸಂಗಾತಿಗಳಿಬ್ಬರೂ ಪರಸ್ಪರ ಚರ್ಚಿಸಿ, ವೈದ್ಯರ ಸಲಹೆ ಪಡೆದು ಸಂಸಾರ ಉಳಿಸಿಕೊಂಡಾಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ.

ಸಮೀಕ್ಷೆ ಏನು ಹೇಳುತ್ತದೆ?

2012ರ ಹೊತ್ತಿಗೆ ಅಮೆರಿಕಾ ಸಹ ಈ ಕಾಮಾಂಧತೆಯ ದುಶ್ಚಟಕ್ಕೆ `ಮಾನಸಿಕ ವಿಕೃತಿ’ ಎಂದು ಹೆಸರು ನೀಡಿತು. ಲಾಸ್‌ಏಂಜಲೀಸ್‌ನ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಸಂಶೋಧನಾಕಾರರು ಈ ತೀರ್ಮಾನಕ್ಕೆ ಬಂದರು. ಭಾರತದಲ್ಲಿ ಈ ಸಮಸ್ಯೆ ಇನ್ನೂ ಆರಂಭಿಕ ಹಂತದಲ್ಲಿದೆ. ಒಂದು ಕಡೆ ಮೀಡಿಯಾ, ಇಂಟರ್‌ನೆಟ್‌ಗಳಲ್ಲಿ ಲಭ್ಯವಿರುವ ಉದ್ರೇಕಕಾರಿ ಮಾಹಿತಿ, ಇನ್ನೊಂದು ಕಡೆ ಲೈಂಗಿಕ ಜಾಗೃತಿ ಹಾಗೂ ಚಿಕಿತ್ಸೆಯ ಕೊರತೆಯ ಕಾರಣ, ಈ ಕಾಮವಿಕೃತಿ ಮಹಾಮಾರಿಯಾಗಿ ನಮ್ಮ ದೇಶವನ್ನು ಕಾಡುವ ದಿನ ದೂರವಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ