ಪ್ರಕರಣ-1

ನಿರ್ಮಲಾಗೆ ಹದಿನೆಂಟರ ಹರೆಯ. ಎರಡನೇ ಡಿಗ್ರಿಯಲ್ಲಿ ಓದುತ್ತಿದ್ದಾಳೆ. `ಮನೆಯಲ್ಲಿ ನನ್ನನ್ನು ಯಾರೂ ಗಮನಿಸುವುದೇ ಇಲ್ಲ. ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುವುದೂ ಇಲ್ಲ. ನಾನೆಂದರೆ ಅವರಿಗೆ ಒಂದು ರೀತಿ ಉದಾಸೀನತೆ, ಗೆಳತಿಯರ ಬಳಗದಲ್ಲೂ ಅಷ್ಟೇ, ಬರಿಯ ಗ್ರೂಪಿಸಮ್,' ಎನ್ನುತ್ತಾಳೆ ಚೆಂದದ ಮುದ್ದು ಹುಡುಗಿ. ಕವಿತೆಗಳು, ಒಳ್ಳೆಯ ಹನಿಗವನಗಳನ್ನು ಬರೆಯುತ್ತಾಳೆ. `ನನ್ನನ್ನು ಯಾರೂ ಗುರುತಿಸುವುದಿಲ್ಲ,' ಎನ್ನುವುದೇ ಅವಳ ಬೇಸರ ಮತ್ತು ಖಿನ್ನತೆಗೆ ಕಾರಣ.

ಪ್ರಕರಣ-2

ಪ್ರೇಮಾಗೆ ಹತ್ತೊಂಬತ್ತರ ವಯಸ್ಸು. ಮನೆಯ ಕೆಲವು ಅನಿವಾರ್ಯಗಳಿಂದ ಮಧ್ಯದಲ್ಲಿ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಕೆಲವು ದಿನ ಉದ್ಯೋಗಕ್ಕೆ ಸೇರಿದಳು, ಮತ್ತೆ ಈಗ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾಳೆ. `ನಾನು ಏನು ಮಾಡಿದರೂ ಅಷ್ಟೆ, ಯಾಕೋ ನನಗೆ ಯಾವುದರಲ್ಲೂ ಯಶಸ್ಸು ದೊರಕುತ್ತಿಲ್ಲ. ನನ್ನಲ್ಲಿ ಆತ್ಮವಿಶ್ವಾಸವೇ ಹೊರಟುಹೋಗಿದೆ. ನನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನನ್ನ ಅದೃಷ್ಟವೇ ಇಷ್ಟೇನೇನೋ?' ಎಂದು ಬೇಸರಿಸಿಕೊಂಡು ಕಣ್ಣೀರಿಡುತ್ತಾಳೆ.

ಪ್ರಕರಣ-3

ಗೀತಾಳಿಗೆ ಫೇಸ್‌ಬುಕ್‌ ಅಂದರೆ ಬಹಳ ಇಷ್ಟ ಆಗಾಗ ತನ್ನ ಫೋಟೋಗಳನ್ನು ಅಪ್‌ಲೋಡ್‌ ಮಾಡುವುದು, ಅನ್ಯರಿಂದ ಅದಕ್ಕೆ ಲೈಕ್‌ ಅಥವಾ ಕಾಮೆಂಟ್‌ ಪಡೆಯುವುದು ಮಿಕ್ಕವರಿಗೆ ತನ್ನ ಕಾಮೆಂಟ್‌ ನೀಡುವುದು ಇವುಗಳನ್ನು ಮಾಡುತ್ತಾ ಅವಳಿಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ದಿನದಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚು ಹೊತ್ತು ಅದರಲ್ಲಿ ಕಳೆದುಹೋಗುತ್ತಿತ್ತು. ಹೀಗಾಗಿ ಓದಿನಲ್ಲಿ ಅವಳು ಹಿಂದೆ ಉಳಿದಳು. ಇದು ಫೇಸ್‌ಬುಕ್‌ನಿಂದಾದ ಫಲ ಎಂದು ಅವಳಿಗೆ ಅರ್ಥಾಗಲು ಪ್ರಾರಂಭವಾಯಿತು. ಈಗ ತನ್ನನ್ನು ತಾನು ಫೇಸ್‌ಬುಕ್‌ನಿಂದ ದೂರವಿಡಲು ಪ್ರಯತ್ನಿಸುತ್ತಿದ್ದಾಳೆ.

ಪ್ರಕರಣ-4

ಪ್ರಣೀತಾಳಿಗೆ ಮೊಬೈಲ್ ಇಲ್ಲದೆ ಜೀವನವೇ ಇಲ್ಲ. ಕರೆನ್ಸಿ ಮುಗಿದು ಹೋದರೆ ಹಾಕಿಸಿಕೊಳ್ಳುವವರೆಗೂ ಅವಳಿಗೆ ತಡಯಲಾಗದು. ಬಸ್ಸಿನಲ್ಲಿದ್ದರೂ ಅಷ್ಟೇ, ಮನೆಯಲ್ಲಿದ್ದರೂ ಅಷ್ಟೇ ಹೊರಗೆ ನಡೆದಾಡುವಾಗಲೂ ಅವಳಿಗೆ  ಮೊಬೈಲ್‌ನಲ್ಲಿ ಮಾತನಾಡುತ್ತಲೇ ಇರಬೇಕು. ಅದಿಲ್ಲದೆ ಅವಳು ಸ್ವಲ್ಪ ಹೊತ್ತೂ ಇರಲಾರಳು. ಅವಳೊಂದು ರೀತಿಯಲ್ಲಿ ಮೊಬೈಲ್ ಅಡಿಕ್ಟ್ ಆಗಿದ್ದಾಳೆ ಎನ್ನಬಹುದು. ಹದಿ ಹರೆಯದಲ್ಲಿ ಇಂತಹ ಪ್ರಕರಣಗಳು ಬಹು ಸಾಮಾನ್ಯ. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಅಡೋಲೋಸೆನ್ಸ್ ಎಂದರೇನು?

ಬಾಲ್ಯದಿಂದ ಪ್ರೌಢಾವಸ್ಥೆಗೆ ತಲುಪುವ ಮುಂಚಿನ ಒಂದು ಹಂತ. ಅಂದರೆ ಎ ಟ್ರಾನ್ಸಿಶನ್‌ ಪೀರಿಯಡ್‌ ಫ್ರಂ ಚೈಲ್ಡ್ ಹುಡ್‌ ಟು ಅಡ್ಟ್‌ ಹುಡ್‌. ಈ ಹಂತದಲ್ಲಿ ಬಹಳಷ್ಟು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆಯ ಹಂತದಲ್ಲಿ ಹದಿಹರೆಯದವರು ಬಹಳ ಸೂಕ್ಷ್ಮ ಮನಸ್ಸಿನವರಾಗಿಬಿಡುತ್ತಾರೆ. ಅನೇಕ ಬಾರಿ ತಮ್ಮಲ್ಲಿನ ಆತ್ಮವಿಶ್ವಾಸ ಕಳೆದುಕೊಂಡುಬಿಡುತ್ತಾರೆ.  ನಾಚಿಕೆ ಶುರುವಾಗುತ್ತದೆ. ಬಹಳ ಬೇಗ ಸಿಟ್ಟು ಬಂದುಬಿಡುತ್ತದೆ. ಈ ಸಮಯದಲ್ಲಿ ಅವರಿಗೆ ಹೆಚ್ಚು ಹೆಚ್ಚು ಸ್ನೇಹಿತರಾಗುತ್ತಾರೆ. ಅವರ ಸೋಶಿಯಲ್ ಸರ್ಕಲ್ ಬೆಳೆಯುತ್ತದೆ. ತಮ್ಮನ್ನು ತಾವು ರೂಪಿಸಿಕೊಳ್ಳುವಲ್ಲಿ, ತಮ್ಮದೊಂದು ಐಡೆಂಟಿಟಿಯನ್ನು ಕಂಡುಕೊಳ್ಳುವ ಹಂತದಲ್ಲಿ ತಮ್ಮ ಸ್ನೇಹಿತರಿಂದ ಬಹಳ ಪ್ರಭಾವಿತರಾಗುತ್ತಾರೆ. ನಿಜಕ್ಕೂ ಇದು ಆರೋಗ್ಯಕಾರಿ ಬೆಳವಣಿಗೆಯೇ, ಆದರೆ ಅನೇಕ ಬಾರಿ ಒತ್ತಡಗಳಿಗೆ ಒಳಗಾಗುವುದೂ ಉಂಟು. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಮಾನಸಿಕವಾಗಿ ಬೆಂಬಲ ನೀಡುವರು. ಅವರನ್ನು ಅರ್ಥ ಮಾಡಿಕೊಳ್ಳುವವರು ಬೇಕಾಗುತ್ತದೆ. ಅವರ ಮನಸ್ಸು ಒಂದು ರೀತಿಯ ರೋಲರ್‌ ಕೋಸ್ಟರ್‌ನಂತೆ. ಒಮ್ಮೆ  ಮೇಲೆ, ಒಮ್ಮೆಲೇ ಕೆಳಗೆ, ಉಲ್ಟಾ ಪಲ್ಟಾ ಆಗುವಂತೆ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆ ಪರಿಣಾಮವನ್ನು ಬೀರುತ್ತದೆ ಎನ್ನುತ್ತಾರೆ ಮಾನಸಿಕ ವೈದ್ಯರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ