ಮದುವೆಯೆನ್ನುವುದು ಪ್ರತಿಯೊಬ್ಬರ ಜೀವನದ ಒಂದು ಮಹತ್ವದ ನಿರ್ಧಾರವಾಗಿರುತ್ತದೆ. ಆದರೆ ಈಚೆಗೆ ಕೆರಿಯರ್‌ ಅಂದರೆ ವೃತ್ತಿ ಜೀವನವನ್ನು ರೂಪಿಸಿಕೊಳ್ಳುವುದು ಕೂಡ ಒಂದು ಪ್ರಮುಖ ನಿರ್ಧಾರವಾಗಿದೆ. ಪುರುಷರಷ್ಟೇ ಉದ್ಯೋಗ ಮಾಡಬೇಕೆಂಬ ಮೊದಲಿನ ದಿನಗಳು ಎಂದೋ ಮುಗಿದುಹೋದವು. ಈಗ ಹುಡುಗಿಯರಿಗೆ ಮೊದಲು ಕೆರಿಯರ್‌, ನಂತರ ವಿವಾಹದ ಬಗ್ಗೆ ಯೋಚನೆ ಬರುತ್ತದೆ. ಒಮ್ಮೊಮ್ಮೆ ಪರಿಸ್ಥಿತಿ ಹೇಗಾಗಿ ಬಿಡುತ್ತದೆಯೆಂದರೆ, ಕೆರಿಯರ್‌ ರೂಪಿಸಿಕೊಳ್ಳುತ್ತಾ ಸಾಕಷ್ಟು ವರ್ಷಗಳೇ ಕಳೆದುಹೋಗುತ್ತವೆ. ಆಗ ಅವರಿಗೆ ಮದುವೆಯ ವಿಚಾರ ಬರುತ್ತದೆ. ಅಷ್ಟರಲ್ಲಿ ಅದೆಷ್ಟು ವಿಳಂಬವಾಗಿರುತ್ತದೆಂದರೆ, ನಾನು ಹಿಂದೆಯೇ ಈ ವಿಚಾರ ಮಾಡಬೇಕಿತ್ತು ಎಂದು ಅನಿಸತೊಡಗುತ್ತದೆ.

ಇಂತಹ ಮಾತುಗಳು ಈಗ ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿವೆ. ತಂದೆತಾಯಿಗಳೊ ಮಗಳ ಮದುವೆಗಾಗಿ ಅದೆಷ್ಟೋ ಚಿಂತಾಕ್ರಾಂತರಾಗಿದ್ದಾರೆ. ಆದರೆ ಮಗಳು ಮಾತ್ರ ನನಗೀಗಲೇ ಮದುವೆ ಬೇಡ ಎನ್ನುತ್ತಾ ಅದನ್ನು ಮುಂದೂಡುತ್ತಲೇ ಹೊರಟಿದ್ದಾಳೆ. ಹುಡುಗಿಯರು ತಡವಾಗಿ ಮದುವೆಯಾಗುವುದು ಈಗ ಸಾಮಾನ್ಯವಾಗಿದೆ.

ತಂದೆ ತಾಯಿಯರ ದೃಷ್ಟಿಕೋನದಿಂದ ನೋಡಿದರೆ, ಇದು ಅತ್ಯಂತ ಒತ್ತಡದ ವಿಷಯ. ತಮ್ಮ ಮಗಳಿಗೆ ಒಳ್ಳೆಯ ವರ ಸಿಗಬೇಕು ಎನ್ನುವುದು ಪ್ರತಿಯೊಬ್ಬ ತಂದೆತಾಯಿಗಳ ಅಭಿಲಾಷೆಯಾಗಿರುತ್ತದೆ. ಅದೊಂದು ಸಲ ಒಳ್ಳೆಯ ಹುಡುಗ ಸಿಕ್ಕೇ ಬಿಡುತ್ತಾನೆ. ಮಗಳು ಒಪ್ಪಿಯೇ ಬಿಡುತ್ತಾಳೆ ಎಂದು ತಂದೆತಾಯಿ ಅಂದುಕೊಂಡಿರುತ್ತಾರೆ. ಆದರೆ ಆಕೆ ಆ ಕ್ಷಣವೇ ಬೇಡ ಎಂದುಬಿಡುತ್ತಾಳೆ. ಆಗ ತಂದೆತಾಯಿಗಳಿಗೆ ಮಗಳು ಏಕೆ ಬೇಡ ಎನ್ನುತ್ತಿದ್ದಾಳೆ ಎಂಬ ಬಗ್ಗೆ ಆಶ್ಚರ್ಯವಾಗುತ್ತದೆ. ಅವರ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಏಳುತ್ತವೆ. ತಡವಾಗಿ ಮದುವೆಯಾಗುವ ಕಾರಣಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

ಸದ್ಯ ಮದುವೆ ಬೇಡ ಏಕೆ?

ಮದುವೆಯ ಬಳಿಕ ಕೆರಿಯರ್‌ ರೂಪಿಸಲು ಸಾಧ್ಯವೇ ಇಲ್ಲವೆಂದು ಬಹಳಷ್ಟು ಹುಡುಗಿಯರು ಭಾವಿಸಿರುತ್ತಾರೆ. ಮದುವೆಗೆ ಮುಂಚೆ ಏನೇನು ಸಾಧನೆ ಮಾಡಬೇಕೊ ಮಾಡಿಬಿಡಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಓದಿಗೆ ಹಾಗೂ ಒಳ್ಳೆಯ ಪ್ಲೇಸ್‌ ಮೆಂಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಇಂದಿನ ಯುವತಿಯರು ಹೆಚ್ಚು ಮಹತ್ವಾಕಾಂಕ್ಷಿಗಳಾಗುತ್ತಿದ್ದಾರೆ. ಅವರು ಏನನ್ನಾದರೂ ಮಹತ್ವದ್ದನ್ನು ಸಾಧಿಸಬೇಕೆನ್ನುತ್ತಿದ್ದಾರೆ. ಎಲ್ಲೋ ಒಂದು ಕಡೆ ನೌಕರಿ ಸಿಕ್ಕರೆ, ಅದರಲ್ಲಿ ಅವರಿಗೆ ತೃಪ್ತಿ ದೊರೆಯದೇ ಇದ್ದಲ್ಲಿ ಹೊಸದೊಂದು ಒಳ್ಳೆಯ ನೌಕರಿಯ ಶೋಧದಲ್ಲಿ ಅವರು ಸದಾ ನಿರತರಾಗಿರುತ್ತಾರೆ.

ಈ ಚಕ್ರ ಹೀಗೆಯೇ ಮುಂದುವರಿಯುತ್ತಿರುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆ ನೌಕರಿ ಬದಲಾಗುತ್ತ ವಯಸ್ಸು ಕೈಯಿಂದ ಜಾರಿ ಹೋಗುತ್ತಿರುತ್ತದೆ. ಅವರ ಗಮನವೆಲ್ಲ ಸದಾ ನೌಕರಿಯ ಮೇಲೆ ಇರುವುದರಿಂದ ಮದುವೆಯ ವಿಷಯ ಯಾವಾಗಲೂ ಕೊನೆಯ ಸ್ಥಾನದಲ್ಲಿಯೇ ಉಳಿದುಬಿಡುತ್ತದೆ.

ಯುವತಿಯರ ಮದುವೆಗೆ ತಡವಾಗುವುದರ ಮತ್ತೊಂದು ಮುಖ್ಯ ಕಾರಣವೆಂದರೆ, ಅವರು ಮುಖ್ಯ ಹುದ್ದೆಯಲ್ಲಿ ಆಸೀನರಾಗಿದ್ದರೆ, ತಮಗಿಂತ ಕಡಿಮೆ ಅರ್ಹತೆಯ ಹುಡುಗರು ಅವರಿಗೆ ಇಷ್ಟವಾಗುವುದಿಲ್ಲ. ಯಾವ ರಾಜಕುಮಾರ ಅಥವಾ `ಮಿಸ್ಟರ್‌ ರೈಟ್‌'ನ ಶೋಧದಲ್ಲಿರುತ್ತಾರೊ ಅವನು ಸಿಗುವುದಿಲ್ಲ. ತಂದೆತಾಯಿಗೆ ಇಷ್ಟವಾದವನು ಆಕೆಗೆ ಹಿಡಿಸುವುದಿಲ್ಲ. ಈ ಕಾರಣದಿಂದ ಮನೆಯಲ್ಲಿ ಎಷ್ಟೋ ಸಲ ಜಗಳ ಕೂಡ ಆಗುತ್ತದೆ.

ತಡವಾಗಿ ಮದುವೆಯಾಗಲು ಮತ್ತೊಂದು ಮುಖ್ಯ ಕಾರಣವೆಂದರೆ, ಹುಡುಗಿಗೆ ಈಗಾಗಲೇ ಯಾರೊಂದಿಗಾದರೂ ಅಫೇರ್ ಇದ್ದಿರಬಹುದು. ಆಕೆ ಅದರಲ್ಲಿ ಯಶಸ್ವಿಯಾಗದೇ ಇರುವುದು ಅಥವಾ ಹುಡುಗ ಕೈಕೊಟ್ಟು ಹೋಗಿರುವುದು ಆಕೆಯ ಮನಸ್ಸಿಗೆ ಆಘಾತವನ್ನುಂಟು ಮಾಡಿರುತ್ತದೆ. ಅಪ್ಪ ಅಮ್ಮನ ಭಾವನೆ ಗುರುತಿಸಿ ಹುಡುಗಿಯರು ತಮ್ಮ ಕೆರಿಯರ್‌ನಲ್ಲಿ ಸದಾ ವ್ಯಸ್ತರಿರುತ್ತಾರೆ. ಇಲ್ಲಿ ಬೇರಾವುದೊ ಕಾರಣದಿಂದ ಸದ್ಯ ಮದುವೆಯ ಬಂಧನದಲ್ಲಿ ಸಿಲುಕಲು ಇಷ್ಟಪಡುವುದಿಲ್ಲ. ಆದರೆ ಅಪ್ಪ ಅಮ್ಮ ತಮ್ಮ ಮಗಳ ಮದುವೆಗಾಗಿ ಅದೆಷ್ಟೋ ಕನಸು ಕಂಡಿರುತ್ತಾರೆ ಎಂಬುದನ್ನು ಗಮನಿಸುವುದು ಅಷ್ಟೇ ಅತ್ಯವಶ್ಯ. ತಮ್ಮ ಮಗಳ ಜೀವನ ಸುರಕ್ಷಿತವಾಗಿರಲಿ ಎಂಬುದು ಪ್ರತಿಯೊಬ್ಬ ತಂದೆತಾಯಿಯ ಅಪೇಕ್ಷೆಯಾಗಿರುತ್ತದೆ. ಉತ್ತಮ ವರನ ಶೋಧದ ಪ್ರಯತ್ನದಲ್ಲಿ ಅವರು ಸದಾ ಇರುತ್ತಾರೆ. ಆದರೆ ಮಗಳು ಮಾತ್ರ ಸದಾ ನಿರಾಕರಿಸುತ್ತಲೇ ಹೋಗುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ