ಯಾರಿಗೆ ತಮ್ಮ ಯಾವ ಬಯಕೆ ಬೇಗ ಕೈಗೂಡುತ್ತದೋ ಅವರು ಆ ಬಗ್ಗೆ ಬೇಗ ಉದಾಸೀನರಾಗುತ್ತಾರೆ. ಏಕೆಂದರೆ ಈಗ ಅವರಿಗೆ ಹೊಸ ಹೊಸ ಆಸೆಗಳು ಬೆನ್ನಟ್ಟಬೇಕಾಗಿರುತ್ತದೆ. ಇತ್ತೀಚಿನ ವಿವಾಹಿತ ಜೋಡಿಗಳು, ಮದುವೆಯ ಮಾತುಕಥೆ ಮುಗಿದ ನಂತರ ಪರಸ್ಪರರ ಕುರಿತಾಗಿ ಬಹಳ ಕುತೂಹಲಿಗಳಾಗಿರುತ್ತಾರೆ. ಒಟ್ಟೊಟ್ಟಿಗೆ ಸುತ್ತಾಟ, ಸದಾ ಫೋನ್‌ನಲ್ಲಿ ಮಾತು, ಚಾಟಿಂಗ್‌ ನಡೆಯುತ್ತಲೇ ಇರುತ್ತದೆ. ಹೋಟೆಲ್, ಸಿನಿಮಾ, ಪಾರ್ಕ್‌, ಮಾಲ್‌ ಶಾಪಿಂಗ್‌ ಇತ್ಯಾದಿ ಮಾಮೂಲು. ಭಾವೀ ಜೀವನದ ಕುರಿತು ದಿನಗಟ್ಟಲೆ ಕನಸು ಕಾಣುತ್ತಾರೆ. ಪರಸ್ಪರರ ಮನೆಗಳಲ್ಲಿ ನಡೆಯುವ ಫಂಕ್ಷನ್‌ಗಳಲ್ಲಿ ಒಟ್ಟೊಟ್ಟಿಗೆ ಹೊಸ ಹುರುಪಿನಿಂದ ಅಲಂಕರಿಸಿಕೊಂಡು ಕಾಣಿಸಿಕೊಳ್ಳುತ್ತಾರೆ. ಪರಸ್ಪರರನ್ನು ಬಲು ಹೆಮ್ಮೆಯಿಂದ ನೆಂಟರು, ಫ್ರೆಂಡ್ಸ್ ಗೆ ಪರಿಚಯಿಸುತ್ತಾರೆ. ಈ ನಿಟ್ಟಿನಲ್ಲಿ ಪರಸ್ಪರರ ಕುರಿತ ಸಮರ್ಪಣಾ ಮನೋಭಾವ ಆಗಸವನ್ನೇ ಮುಟ್ಟಿರುತ್ತದೆ. ಇಬ್ಬರಿಗೂ ಭಾವೀ ಅತ್ತೆಮನೆಯವರ ಪ್ರತಿ ವ್ಯವಹಾರ ಬೆಲ್ಲದಚ್ಚಿನಂತೆ ಸಿಹಿಯೋ ಸಿಹಿ! ಸ್ವಲ್ಪ ವ್ಯತ್ಯಾಸ ಎನಿಸಿದರೂ ಉದಾರ ಮನೋಭಾವದಿಂದ ಅದನ್ನು ಕಡೆಗಣಿಸುತ್ತಾರೆ.

ಆದರೆ ಇದೇ ಜೋಡಿ ಮದುವೆ ಆದ 1-2 ವರ್ಷಗಳಲ್ಲೇ ಸಂಪೂರ್ಣ ಬದಲಾಗಿರುತ್ತಾರೆ. ಪರಸ್ಪರ ಉದಾಸೀನತೆ ತಾಂಡವವಾಡುತ್ತಿರುತ್ತದೆ. ಅಂದರೆ ಇವರ ಪ್ರೀತಿಪ್ರೇಮ ಕ್ರಮೇಣ ತಗ್ಗುತ್ತಿರುತ್ತದೆ. ಪರಸ್ಪರರ ಒಳ್ಳೆಯ ಕೆಟ್ಟ ಗುಣಗಳು ಎದ್ದು ತೋರಲಾರಂಭಿಸುತ್ತವೆ. ಹಿಂದೆಲ್ಲ ಯಾವ ವಿಷಯವಾಗಿ ಉದಾರವಾಗಿ ಕಡೆಗಣಿಸಲಾಗುತ್ತಿತ್ತೋ ಈಗ ಅದೇ ಕಡ್ಡಿ ಗುಡ್ಡವಾಗುತ್ತದೆ. ಮದುವೆಗೆ ಮೊದಲು ಪರಸ್ಪರರ ಗೆಟಪ್‌, ಫ್ಯಾಷನ್‌, ವೈಯಕ್ತಿಕ ವ್ಯವಹಾರಗಳು ಕಲ್ಲುಸಕ್ಕರೆಯಂತಿದ್ದದ್ದು ಈಗ ಕಹಿಹಾಗಲ ಆಗಿರುತ್ತದೆ. ಪರಸ್ಪರರ ಲೋಪದೋಷಗಳೇ ದೊಡ್ಡದಾಗಿ ಕಾಣಿಸುತ್ತವೆ. ನೋಡನೋಡುತ್ತಿದ್ದಂತೆ ಪರಸ್ಪರ ಕಾಟಾಚಾರಕ್ಕೆ ಒಟ್ಟಿಗಿರುವಂಥ ಭಾವನೆ ಬಂದರೂ ಆಶ್ಚರ್ಯವಿಲ್ಲ. ವಿಭಿನ್ನ ಆಶಯಗಳನ್ನು ಬೆಳೆಸಿಕೊಂಡು ತಮ್ಮ ದಾರಿಗಳನ್ನೇ ಬೇರೆ ಮಾಡಿಕೊಳ್ಳುತ್ತಾರೆ. ಇಬ್ಬರೂ ಕೆಲಸದಲ್ಲಿದ್ದರಂತೂ ಹೆಚ್ಚು ಹೆಚ್ಚು ಬಿಝಿ ಆಗಿರುವ ನೆಪವೊಡ್ಡಿ ಪರಸ್ಪರರ ನಡುವೆ ಹೆಚ್ಚಿನ ಅಂತರ ಮಾಡಿಕೊಳ್ಳುತ್ತಾರೆ. ಸಿನಿಮಾ ಸ್ಟಾರ್‌ಗಳು ಇವರ ಪ್ರೇರಣೆ ಆಗಿರುತ್ತಾರೆ. 10 ರಲ್ಲಿ 5 ಸ್ಟಾರ್‌ಗಳ ಕಥೆ ಇದೇ ಆಗಿರುತ್ತದೆ.

ಬಬೀತಾ ರಣಧೀರ್‌ ಕಪೂರ್‌, ಅಮೃತಾ ಸಿಂಗ್‌ ಸೈಫ್‌ ಆಲಿಖಾನ್‌, ಆಮೀರ್‌ ಖಾನ್‌, ಸಂಜಯ್‌ ದತ್‌, ಹೃತಿಕ್‌ ರೋಷನ್‌, ಕರಿಷ್ಮಾ ಮುಂತಾದವರ ಕಥೆ ಇದೇ ಆಗಿದೆ.

ಮದುವೆ ನಂತರ ಅಂತರವೇಕೆ?

ಅಸಲಿಗೆ ನಮ್ಮ ಜೀವನ ಒಂದು ಗಾಡಿ ಇದ್ದಂತೆ. ಪತಿ ಪತ್ನಿ ಇಬ್ಬರೂ ಆ ಗಾಡಿಯ 2 ಚಕ್ರಗಳು. ಇದರ ಬ್ಯಾಲೆನ್ಸ್ ತಪ್ಪಿದರೆ, ಕುಟುಂಬ ನುಚ್ಚುನೂರಾಗುವ ಪರಿಸ್ಥಿತಿ ಬಂದೀತು.

3-4 ದಶಕಗಳ ಹಿಂದೆ ವಿಚ್ಛೇದನಗಳ ಪ್ರಕರಣಗಳು ಇಷ್ಟೊಂದು ಹೆಚ್ಚಿರಲಿಲ್ಲ, ಬಹಳ ಕಡಿಮೆ ಇತ್ತು. ಅದಕ್ಕೆ ಕಾರಣ ಇಲ್ಲದಿಲ್ಲ. ಅಂದಿನ ಕಾಲದಲ್ಲಿ ಯುವಕ-ಯುವತಿಯರಿಗೆ ಲಗ್ನಪತ್ರಿಕೆ ನಂತರ ಖುಲ್ಲಂಖುಲ್ಲ ಓಡಾಡುವ ಸ್ವಾತಂತ್ರ್ಯವಿರಲಿಲ್ಲ. ಅವರಿಬ್ಬರ ನಡುವೆ ಒಂದು ನಿಶ್ಚಿತ ಸೀಮಾರೇಖೆ ಇರುತ್ತಿತ್ತು. ಫೋನಿನಲ್ಲಷ್ಟೇ ಎಲ್ಲ ಮಾತುಕಥೆ. ಕುಟುಂಬದವರೆಲ್ಲರೂ ಫಂಕ್ಷನ್‌ಗೆ ಹೋದಾಗ ಮಾತ್ರ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು. ಅವರ ಜೀವನ ಇಡೀ ಕುಟುಂಬದವರಿಗೆ ತೆರೆದ ಪುಸ್ತಕವಾಗಿತ್ತು. ಸಿಂಗಾರದ ಪ್ರೈವೆಸಿಗಾಗಿ ಕಾಯುವುದರಲ್ಲೇ ಜೀವನ ಕಳೆದುಹೋಗುತ್ತಿತ್ತು. ಹೀಗಾಗಿಯೇ ಜೀವನ ಯಾಂತ್ರಿಕ ಎನಿಸುತ್ತಿರಲಿಲ್ಲ. ಬರಲಿರುವ ನಾಳೆಗಾಗಿ ಎದುರು ನೋಡುತ್ತಲೇ ಇರುತ್ತಿದ್ದರು. ಈ ರೀತಿ ಇಡೀ ಜೀವನದ ಮರುದಿನ ಸ್ವಾಗತಿಸುವುದರಲ್ಲಿ ಉತ್ಸಾಹ ತುಂಬಿರುತ್ತಿತ್ತು, ಬದುಕು ಸರಿದದ್ದೇ ಗೊತ್ತಾಗದೆ, ಪರಿಪಕ್ವತೆ ತುಂಬಿಕೊಳ್ಳುತ್ತಿತ್ತು. ಪರಸ್ಪರರ ಮನೆತನದ ವಿಚಾರಗಳು, ಶಿಕ್ಷಣ, ಕಲಿಕೆಯ ದಿನಗಳು, ಆಸೆ ಅಭಿಲಾಷೆ, ಫ್ರೆಂಡ್ಸ್ ಸರ್ಕಲ್ ಇತ್ಯಾದಿಗಳನ್ನೆಲ್ಲ ತಿಳಿದುಕೊಳ್ಳುವಷ್ಟರಲ್ಲಿ ಮದುವೆಯ ಅಡಿಪಾಯ ಎಷ್ಟು ಭದ್ರವಾಗುತ್ತಿತ್ತು ಎಂದರೆ ಅದು ಮುರಿದುಬೀಳುವ ಸಂಭವವೇ ಇರಲಿಲ್ಲ. ಆದರೆ ಇತ್ತೀಚೆಗೆ, ಅತಿ ಆಧುನಿಕತೆಯ ಹಿಂದೆ ಓಡುವ ಇಂದಿನ ಯುವಜನತೆ, ಮದುವೆ ಫಿಕ್ಸ್ ಆದ ಮರುದಿನದಿಂದಲೇ ಪರಸ್ಪರ ತೆರೆದ ಪುಸ್ತಕ ಆಗುತ್ತಾರೆ. ಮದುವೆ ಆಗುವ ಹೊತ್ತಿಗೆ ಪರಸ್ಪರರ ಕುರಿತು - ಎಲ್ಲವನ್ನೂ ಬಲ್ಲವರಾಗಿರುತ್ತಾರೆ. ಹೀಗಾಗಿ ಮದುವೆ ಆಗಿ ದಿನಗಳು ಸರಿದಂತೆ ಪರಸ್ಪರರ ಕುರಿತು ಕುತೂಹಲ ಎಂಬುದು ಎಳ್ಳಂಶ ಉಳಿಯದೆ, ಕ್ರಮೇಣ ಬೇಸರ, ಅಸಹನೆ ಹೆಚ್ಚುತ್ತಾ ಹೋಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ