ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ !!!
ಹೆತ್ತ ತಂದೆ-ತಾಯಿ ಇರುವವರೆಗೆ ಮಾತ್ರ ಊರು, ಒಡಹುಟ್ಟಿದವರು, ಬಂಧು ಮಿತ್ರರು, ಎಂಬ ಕೊಂಡಿ ಬೆಸೆದು ಕೊಂಡಿರುತ್ತದೆ. ಅವರೇ ಕಾಲವಾದ ನಂತರ ಎಲ್ಲರೂ ಒಂದಲ್ಲಾ ಒಂದು ಕಾರಣದಿಂದ ದೂರವಾಗುತ್ತಲೇ ಹೋಗುತ್ತಾರೆ. *ಇದು ಎಲ್ಲಾ ರೀತಿಯ ಕುಟುಂಬಗಳಿಗೂ ಅನ್ವಯಿಸುವುದಂತೂ ನಿಜ.* ನಾವು ಎಷ್ಟೇ ಕಷ್ಟಪಟ್ಟು ಹಿಡಿದಿಟ್ಟುಕೊಂಡ ಬಾಂಧವ್ಯದ ಕೊಂಡಿಗಳು ಕಾಲಕ್ರಮೇಣ ಸಡಿಲವಾಗಿ ಎಲ್ಲೋ ಒಂದು ಕಡೆ ಜಾರುವ ಸಂದರ್ಭಗಳು ಬರಬಹುದು. ಕೆಲವರು ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಂತಹವರಿಗೆ ಇಂತಹ ಪರಿಸ್ಥಿತಿಯನ್ನು ತಕ್ಷಣವೇ ಸುಧಾರಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಇದಂತೂ ಕಟುಸತ್ಯ, *ಕಾಲಕ್ರಮೇಣ ಕುಟುಂಬ ಬೆಳೆದಂತೆ ಪ್ರತಿಯೊಬ್ಬರೂ ಅವರವರ ಸಂಸಾರಕ್ಕೆ ಪ್ರಾಮುಖ್ಯತೆ ಕೊಟ್ಟು ಹೆಂಡತಿ ಮಕ್ಕಳೆನ್ನುವ ಮಮಕಾರಕ್ಕೆ ಸಿಲುಕಿ ಅಸಹಾಯಕರಾಗಿ ಹಿಂದಿನಷ್ಟು ಕುಟುಂಬದೊಂದಿಗೆ ಬೆರೆಯಲು* ಸಾಧ್ಯವಾಗುವುದಿಲ್ಲ. *ಅದರಲ್ಲೂ ಹಾಗೋ ಹೀಗೋ ತಂದೆತಾಯಿ ಬದುಕಿರುವವರೆಗೆ ಅವರ ಮನಸ್ಸಂತೋಷಕ್ಕಾಗಿ ಯಾದರೂ ಅಗಾಗ್ಗೆ ಉಳಿದ ಅಣ್ಣ-ತಮ್ಮಂದಿರೊಂದಿಗೆ ಹಾಗೂ ಅಕ್ಕ-ತಂಗಿಯ ರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ.*
*ಒಮ್ಮೆ ಹಳೆಯ ಕೊಂಡಿ ಎನಿಸಿಕೊಂಡ ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿ ಬಿಡುವುದು ವಿಪರ್ಯಾಸ*.
ಇಂತಹ ಒಂದು ಬೆಳವಣಿಗೆಗೆ ಮುಖ್ಯ ಕಾರಣ *ನಮ್ಮ ಒಳಗಿರುವ ಸ್ವಾರ್ಥ ಹಾಗೂ ಅಹಂ ಕಾರಣವಷ್ಟೇ* ಅಲ್ಲದೆ ಬೇರೇನೂ ಅಲ್ಲ. ಒಂದೇ ಕುಟುಂಬದವರಾದರೂ ಕೂಡ *ಪ್ರತ್ಯೇಕ ಸಂಸಾರ ಹೂಡಿದ ಮೇಲೆ ತಮ್ಮ ಪ್ರತಿಷ್ಠೆ ಮೆರೆಯಲು ಇತರರನ್ನು ತುಚ್ಚವಾಗಿ ಕಾಣುವುದು* ಹಾಗೂ
*ಎಲ್ಲಾ ವಿಷಯದಲ್ಲೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುವುದು*
ಸರ್ವೇಸಾಮಾನ್ಯ ವಾಗಿಬಿಟ್ಟಿದೆ.

ಇಂತಹ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ನಮ್ಮವರೊಂದಿಗೇ ಅಪರಿಚಿತರಾಗುತ್ತಿರುವ ಸಂಶಯ ಮನಸ್ಸಿನಲ್ಲಿ ಮೂಡುವುದು ನಿಜವಲ್ಲವೇ.
ಹೆತ್ತವರು ಬದುಕಿರುವವರೆಗೂ ಕುಟುಂಬದಲ್ಲಿ ಒಂದು ಒಗ್ಗಟ್ಟು ಇರುತ್ತದೆ, ಯಾವುದೇ ವಿಚಾರವಾದರೂ ಸಮಯೋಚಿತವಾಗಿ ಯೋಚಿಸಿ ಬುದ್ದಿಹೇಳುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿಯೊಬ್ಬ ಮಕ್ಕಳನ್ನು ಆಗಾಗ ನೋಡಬೇಕೆಂಬ ಹಂಬಲದಿಂದ ಎಷ್ಟೇ ದೂರವಿದ್ದರೂ ತಮ್ಮಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಬ್ಬ ಹರಿದಿನ ಗಳೆಂದರೆ ಎಲ್ಲರೂ ಜೊತೆಯಾಗಿಯೇ ಆಚರಿಸಿ ಕೊಳ್ಳಬೇಕೆನ್ನುವ ಅಪೇಕ್ಷೆಯಂತೆ ಸಾಧ್ಯವಾದಷ್ಟು ಕುಟುಂಬದ ಐಕ್ಯತೆಯನ್ನು ಹಿಡಿದಿಟ್ಟು ಕೊಂಡಿರುತ್ತಾರೆ. ಇದನ್ನು ಎಲ್ಲರೂ ತಮ್ಮ ಕಾಲಾನಂತರವೂ ನಡೆಸಿಕೊಂಡು ಹೋಗಬೇಕೆನ್ನುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಅದರೆ ಇಂದಿನ ಜೀವನ ಶೈಲಿ ಈ ತಲೆಮಾರಿನ ತೋರಿಕೆಯ ಪ್ರೀತಿ ವಿಶ್ವಾಸ ಇಂತಹ ಒಂದು ಬಾಂಧವ್ಯದ ಕೊಂಡಿ ಬೆಸೆಯುವಲ್ಲಿ ವಿಫಲವಾಗಿದೆ . ಬಹಳಷ್ಟು ಕುಟುಂಬಗಳು ಹಂಚಿ ಹರಡಿ ಪ್ರತ್ಯೇಕ ಸಂಸಾರಗಳಾಗಿ ಅಷ್ಟಕ್ಕೇ ಸೀಮಿತಗೊಂಡಿವೆ. ಅವರ ಆಚರಣೆ ಹಾಗೂ ಬಾಂಧವ್ಯ ತವರಿನ ಸಂಪರ್ಕ ಕಳೆದುಕೊಂಡು ಮನಸ್ಸಿನಲ್ಲೇ ದುಃಖಿಸುತ್ತಿರುವ ಎಷ್ಟೋ ಜನರನ್ನು ನಾವು ನೋಡುತ್ತಿದ್ದೇವೆ… ಇವತ್ತಿಗೂ ಜನ-ಮಾನಸ ದಲ್ಲಿ ಉಳಿದಿರುವುದು ಮಾತ್ರ ತಂದೆ-ತಾಯಿಗಳು ಬದುಕಿರುವವರೆಗೆ ಅನುಭವಿಸಿದ ಸಂಭ್ರಮದ ದಿನಗಳು ಹಾಗೂ ಆದರಾಥಿತ್ಯದ ಪ್ರೀತಿ ವಿಶ್ವಾಸದಿಂದ ಒಡಹುಟ್ಟಿದವರೊಂದಿಗೆ ನಕ್ಕುನಲಿದ ಕ್ಷಣಗಳು.
*ಇದನ್ನೆಲ್ಲ ಮೆಟ್ಟಿ , ಬಾಂಧವ್ಯದಿಂದ. ಇರುವ ಪ್ರಯತ್ನ ಎಲ್ಲರೂ ಮಾಡಬೇಕಿದೆ. ಅದಕ್ಕಾಗಿ ಹೆಚ್ಚು ತ್ಯಾಗ ಬೇಡ , ಅಹಂಕಾರ, ಪ್ರತಿಷ್ಟೆ ಬಿಟ್ಟು ಹಿರಿಯರಿಗೆ ಅವರ ಯೋಗ್ಯತೆಗೆ ತಕ್ಕ ಗೌರವ ಕೊಡುವ ಮನಸ್ಸಿದ್ದರೆ ಸಾಕು*
ಕುಟುಂಬದ ಸದಸ್ಯರನ್ನು ಪ್ರೀತಿಯಿಂದ ಕಾಣಿ, ಗೌರವದಿಂದ ನೋಡಿ, *ಎಲ್ಲವನ್ನೂ ಹಣದಿಂದ ತೂಗಬೇಡಿ.*
ಹಳೆಯ ಮನಸ್ತಾಪದ ಬಗ್ಗೆ ಮೆಲಕು ಹಾಕಬೇಡಿ, *ನಾನು ಸರಿ ಅವರು ಕೆಟ್ಟವರು* ಅನ್ನುವುದನ್ನು ಬಿಟ್ಟು ಉಳಿದ ಜೀವನವನ್ನು ಸಂತೋಷವಾಗಿ ಅನುಭವಿಸಿ, ಎಲ್ಲರನ್ನೂ ಖುಷಿ ಪಡಿಸುವ ಹಾಗೆ ಮಾತನಾಡಿ.
*ಯಾರು ಮೇಲಿನ ಶಬ್ದಗಳನ್ನು ಪೋಣಿಸರು ಎಂಬುವುದು ಗೊತ್ತಿಲ್ಲ!*
*ನಿಜವಾದ ಸಂಬಂಧಗಳು ಹೆತ್ತವರು ಪರಲೋಕ ಸೇರಿದ ನಂತರವೂ ಉಳಿಸಿ ಬೆಳೆಸಲು ಕುಟುಂಬದ ಪ್ರತೀ ಸದಸ್ಯರು ಪ್ರಯತ್ನಿಸಬೇಕು. ಸಂಬಂಧಗಳ ಬಗ್ಗೆ ಅದ್ಭುತ ವಿಶ್ಲೇಷಣೆ*,
*ಇಲ್ಲಿ ಪ್ರತಿಯೊಬ್ಬರೂ ಪಾತ್ರಧರಿಗಳೇ ಅಲ್ಲ ಸೂತ್ರಧಾರಿಗಳೇ! ಕೆಲವರು ಜೀವನದಲ್ಲಿ ಸಂಬಂಧಿಗಳಿಂದ ಅವರಿಗೆ ಅರಿವು ಇಲ್ಲದೇ ಗುರ್ತಿಸಿಕೊಳ್ಳುತಾರೆ! ಇನ್ನು ಕೆಲವರು ಸಂದರ್ಭಕ್ಕೆ ಸರಿಯಾಗಿ ಬಣ್ಣ ಬದಲಾಯಿಸಿ ಅತೀ ಒಳ್ಳೆಯವರಾಗಿ ಜೀವನ ಸಾಗಿಸುತ್ತಾರೆ.*

*ಆದರೆ ಮೇಲಿನ ಬರಹವನ್ನು ಓದಿ, 30 ವರ್ಷಗಳ ಸುದೀರ್ಘ ಕಾಲ ನಮ್ಮ ಕುಟುಂಬವನ್ನು, ಎತ್ತು ಗಾಣವ ಎಳೆದಂತೆ ಎಳೆದ ನನಗೆ, ಇಂದು ಕುಟುಂಬದ ಯಾವ ಸದಸ್ಯನೂ ಸಂಪರ್ಕ ಇಟ್ಟುಕೊಂಡಿಲ್ಲ! ರೆಕ್ಕೆ ಬಲಿತ ಹಕ್ಕಿ ಗೂಡಿನಿಂದ ಹೊರಗೆ ಹೋದ ಮೇಲೆ ಗೂಡಿನಲ್ಲಿರುವರೊಂದಿಗೆ ಸಂಪರ್ಕ ಏಕೆ?*
*ಹಿರಿಯ ನಾಗರಿಕರಾದ ನಾವೇಲ್ಲ ಕೆಳಗಿನ ಹಾಡಿನೊಂದಿಗೆ ಜೀವಿತಾವದಿಯನ್ನು ಮಗಿಸೋಣ!*
*ನಮ್ಮ ಸಂಸಾರ, ಆನಂದ ಸಾಗರ*
*ಪ್ರೀತಿಯೆಂಬ ದೈವವೇ ನಮಗಾಧಾರ*,
*ಆ ದೈವ ತಂದ ವರದಿಂದ ಬಾಳೇ ಬಂಗಾರ.*
*……………. ಅಶ್ರುತರ್ಪಣ*





