ವೈಶಾಖ ಮಾಸದ ಶುದ್ಧ ತೃತೀಯದ ತಿಥಿಯನ್ನು ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ವಸ್ತುವನ್ನು ಅಥವಾ ಸಂಪತ್ತನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದಲ್ಲಿ, ಯಥೇಚ್ಛವಾಗಿ ದಾನ ಧರ್ಮ ಮಾಡಿದಲ್ಲಿ ಕಾಲಕ್ರಮೇಣ ಆ ಸಂಪತ್ತು ದ್ವಿಗುಣಗೊಳ್ಳುತ್ತದೆ ಎನ್ನುವುದು ಎಲ್ಲರ ನಂಬಿಕೆ ಇರುವ ಕಾರಣ ಎಲ್ಲೆಡೆಯೂ ದಾರ್ಮಿಕ ಅಚರಣೆಗಳು ಸಂಭ್ರಮದಿಂದ ನಡೆಸಲಾಗುತ್ತದೆ.

ಇನ್ನು ಪೌರಾಣಿಕವಾಗಿ ಅಕ್ಷಯ ತದಿಗೆಯ ಮಹತ್ವವನ್ನು ನೋಡಿದಲ್ಲಿ,
- ಕೃಷ್ಣ ಸ್ನೇಹಿತ ಕುಚೇಲ ತನ್ನ ಗೆಳೆಯನಿಂದ ಸಹಾಯ ಪಡೆಯಲು ದ್ವಾರಕೆಗೆ ಬಂದು ಕೃಷ್ಣನ ಆತಿಥ್ಯವನ್ನು ಕಂಡು ಸಹಾಯವನ್ನು ಕೇಳಲು ಮನಸ್ಸಾಗದೇ ತಾನು ತಂದಿದ್ದ ಅವಲಕ್ಕಿಯನ್ನು ಕೊಟ್ಟು ಏನನ್ನೂ ಕೇಳದೇ ಮನೆಗೆ ಮರಳಿದ ದಿನವೂ ಅಕ್ಷಯ ತೃತೀಯವಾಗಿತ್ತು.
- ಪಾಂಡವರು ಕೌರವರ ಕುಟಿಲತೆಯಿಂದ ಜೂಜಿನಲ್ಲಿ ಸೋತು 12 ವರ್ಷ ವನವಾಸಕ್ಕೆ ಹೋಗಿದ್ದಾಗ ಶ್ರೀಕೃಷ್ಣನ ಆದೇಶದಂತೆ ದ್ರೌಪದಿಯು ಸೂರ್ಯ ದೇವನನ್ನು ಪ್ರಾರ್ಥಿಸಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಅಕ್ಷಯ ತೃತೀಯ ದಿನದಂದೇ, ಅದೇ ರೀತಿ ಪಾಂಡವರು ತಮ್ಮ ವನವಾಸದ ನಂತರ ಅಜ್ಞಾತವಾಸ ಮುಗಿಸಿ ಮರದ ಮೇಲೆ ಕಟ್ಟಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ಪಡೆದದ್ದೂ ಸಹಾ ಅಕ್ಷಯ ತೃತೀಯದಂದೇ.
- ದೇವಾನು ದೇವತೆಗಳ ಕೋರಿಕೆಯಂತೆ ಶ್ರೀ ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ ದಿನವೂ ಸಹಾ ಅಕ್ಷಯ ತೃತೀಯವಾಗಿತ್ತು.
- ಮಹಾಭಾರತದ ಕರ್ತೃ ವೇದವ್ಯಾಸರು ಮಹಾಭಾರತ ಬರೆಯಲು ಶ್ರೀ ಗಣೇಶನೊಂದಿಗೆ ಒಪ್ಪಂದ ಮಾಡಿಕೊಂಡ ದಿನವೂ ಅಕ್ಷಯ ತೃತೀಯವಾಗಿತ್ತು.
- ಇದೇ ಆಕ್ಷಯ ತದಿಗೆಯಂದೇ, ಹಿಂದೂಗಳ ನಾಲ್ಕು ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಬದರಿಯಲ್ಲಿ ಶ್ರೀ ಬದರಿ ನಾರಾಯಣನ ಮಂದಿರವನ್ನು ತೆರೆಯುವ ಮೂಲಕ, ಆದಿಗುರು ಶ್ರೀ ಶಂಕರಾಚಾರ್ಯರು ಶ್ರೀ ಬದರಿ ನಾರಾಯಣನ ಪ್ರತಿಮೆಯನ್ನು ಮರು ಪ್ರತಿಷ್ಠಾಪನೆ ಮಾಡಿ, ತಮ್ಮ ಜೊತೆ ಬಂದಿದ್ದ ಕೇರಳ ಮೂಲದ ಅರ್ಚಕರನ್ನು ಅಲ್ಲಿಗೆ ಪೂಜೆಗೆ ನಿಯಮಿಸಿದ್ದು, ಇಂದಿಗೂ ಸಹಾ ಅದೇ ಪದ್ದತಿ ಮುಂದುವರೆದು ಕೊಂಡು ಬಂದಿದೆ. ದೀಪಾವಳಿ ಸಮಯದಲ್ಲಿ ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಮುಚ್ಚಲ್ಪಡುವ ಬದರಿ ನಾರಾಯಣನ ದೇವಾಲಯ ಪ್ರತೀ ವರ್ಷ ಸಕಲ ವಿಧಿ ವಿಧಾನಗಳೊಂದಿಗೆ ಮತ್ತೆ ಬಾಗಿಲು ತೆಗೆಯುವುದು ಇದೇ ಆಕ್ಷಯ ತದಿಗೆಯಂದು ಎನ್ನುವುದು ವಿಶೇಷವಾಗಿದೆ.
- ಜಾತೀಯತೆಯಲ್ಲಿ ತುಂಬಿ ಹೋಗಿದ್ದ ಈ ದೇಶದಲ್ಲಿ ಸಮಾನತೆ ತರುವ ಸಲುವಾಗಿ ಅನುಭವ ಮಂಟಪವನ್ನು ಸ್ಥಾಪಿಸಿ ಎಲ್ಲರಿಗೂ ಲಿಂಗ ಧಾರಣೆ ಮಾಡಿ ತಮ್ಮ ವಚನಗಳ ಮೂಲಕ ಸಮಾನತೆಯ ಸಾರವನ್ನು ಸಾರಿದ ಹರಿಕಾರ ಜಗಜ್ಯೋತಿ ಬಸವಣ್ಣನವರು ಜನಿಸಿದ್ದೂ ಅಕ್ಷಯ ತದಿಗೆಯಂದೇ.
ಇನ್ನು ವೈದಿಕ ಜ್ಯೋತಿಷ್ಯದ ಪ್ರಕಾರ ಅಕ್ಷಯ ತೃತೀಯದಂದು, ಸೂರ್ಯ ಮತ್ತು ಚಂದ್ರರು ಇಬ್ಬರೂ ಸಹಾ ತಮ್ಮ ಉತ್ತುಂಗ ಸ್ಥಾನದಲ್ಲಿರುತ್ತಾರೆ. ಅಂದು ಅವರಿಬ್ಬರ ಶಕ್ತಿ, ಹೊಳಪು ಮತ್ತು ಸಕಾರಾತ್ಮಕ ಪ್ರಭಾವದ ಉತ್ತುಂಗದಲ್ಲಿರುವ ಕಾರಣ, ಅಪರೂಪದ ಅತ್ಯಂತ ಶುಭ ಅಥವಾ ಸ್ವಯಂ ಸಿದ್ಧ ಮುಹೂರ್ತ ಕ್ಷಣವನ್ನು ಸೃಷ್ಟಿಸುವ ಕಾರಣ, ಇಂದು ಆರಂಭಿಸುವ ಎಲ್ಲಾ ಕೆಲಸಗಳೂ ಸಹಾ ಅಕ್ಷಯವಾಗುತ್ತದೆ ಮತ್ತು ಶುಭ ಫಲಗಳನ್ನು ತರುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಯುಗಾದಿ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಅಂತಹ ದಿವಸಗಳಂದು ಯಾವುದೇ ಮಹೂರ್ತವನ್ನು ನೋಡದೇ ಶುಭಕಾರ್ಯಗಳನ್ನು ಪ್ರಾರಂಭಿಸುವ ಹಾಗೆ ಅಕ್ಷಯ ತೃತೀಯದಂದೂ ಒಳ್ಳೆಯ ತಿಥಿಯನ್ನು ನೋಡುವ ಅವಶ್ಯಕತೆ ಇಲ್ಲದೇ ಶುಭಕಾರ್ಯಗಳನ್ನು ಮಾಡಿದಲ್ಲಿ ಅದು ಅತ್ಯಂತ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





