`ಯುವರ್‌ ಬೆಸ್ಟ್ ಇಯರ್‌ಯೆಟ್‌'ನ ಲೇಖಕಿ ಜಿನ್ನಿ ಡಿಟಜಲರ್‌ ಹೀಗೆ ಹೇಳುತ್ತಾರೆ, ಒಂದು ವೇಳೆ ನೀವು ನಿಮ್ಮ ಪ್ರತಿ ವರ್ಷ ವಿಶೇಷವಾಗಿ ಚೆನ್ನಾಗಿರಬೇಕೆಂದು ಬಯಸಿದರೆ ನಿಮ್ಮನ್ನು ನೀವು ಪ್ರೀತಿಸಿ. ಆನಂದ ಪಡೆಯಲು ಮೊಟ್ಟ ಮೊದಲು ನಿಮ್ಮ ಬಗ್ಗೆ ನೀವು ದಯಾಳುವಾಗಿರಿ. ನೀವು ಚಿಂತಾಮುಕ್ತರಾಗಿರುವ ವಿಧಾನ ಕಲಿಯುವವರೆಗೆ ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಇತರರೊಂದಿಗೆ ಉದಾರವಾಗಿ ವರ್ತಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮನ್ನು ಪ್ರೀತಿಸಿ ಹಾಗೂ ನಿಮ್ಮನ್ನು ಸಂತೋಷ ಹಾಗೂ ಪಶ್ಚಾತ್ತಾಪದಿಂದ ಮುಕ್ತಗೊಳಿಸಿ.

ನಿಮ್ಮನ್ನು ನೀವು ಸ್ವೀಕರಿಸಿ

ನಿಮ್ಮನ್ನು ನೀವು ಬೇಷರತ್ತಾಗಿ ಪ್ರೀತಿಸಿದಾಗ ನಿಮ್ಮ ಆ ಗುಣ ಇತರರನ್ನು ಪ್ರೀತಿಸುವ ಯೋಗ್ಯತೆಯನ್ನು ಹೆಚ್ಚಿಸುತ್ತದೆ. ಯೋಗ ಗುರು ಗುರ್‌ ಮುಖ್‌ ಖಾಲ್ ಸಾ ಹೀಗೆ ಹೇಳುತ್ತಾರೆ, ``ನಮ್ಮನ್ನು ಪ್ರೀತಿಸುವುದೆಂದರೆ ಉಸಿರಾಡಿದಂತೆ. ಆದರೆ ಸಾಮಾನ್ಯವಾಗಿ ನಾವು ನಮ್ಮಿಂದ ಹಾಗೂ ನಮ್ಮ ಕನಸುಗಳಿಂದ ದೂರವಾಗುತ್ತೇವೆ. ಹೀಗಾಗಿ ನಾವು ದುಃಖಿತರಾಗಿರುತ್ತೇವೆ.''

ಜಿನ್ನಿ ಕೊಂಚ ವ್ಯಾವಹಾರಿಕವಾಗಿ ನಮ್ಮೊಡನೆ ನಾವು ಸೇರಿಕೊಳ್ಳಲು ಹೇಳುತ್ತಾರೆ. ಅವೆಂದರೆ ಒಳ್ಳೆಯ ಊಟ, ಧ್ಯಾನ, ಹೊಸ ಫ್ಯಾಷನ್ನಿನ ಉಡುಪು ಧರಿಸುವುದು, ದಾನ ಮಾಡುವ ಕಲೆ ಮತ್ತು ಜೀವನದ ಉದ್ದೇಶಗಳ ಪ್ರಾಪ್ತಿ ಇತ್ಯಾದಿ.

100 ದಿನಗಳ ನಿಯಮ

ಮೋನಿಕಾ ಜಾಂಡ್ಸ್, `ನಿಮ್ಮನ್ನು ನೀವು ಪ್ರೀತಿಸಿ' ಹೆಸರಿನಲ್ಲಿ ಪ್ರಚಾರಾಂದೋಲನ ಆರಂಭಿಸಿದ್ದಾರೆ. ಅವರು ಹೀಗೆ ಹೇಳುತ್ತಾರೆ, ``ನಿಮಗೆ ನೀವು ಪ್ರೀತಿಭರಿತ ಆಲಿಂಗನ ಕೊಡಿ. ನಿಮ್ಮನ್ನು ನೀವು ಪ್ರೀತಿಸಿದರೆ ಜೀವನಪರ್ಯಂತ ನಿಮಗೆ ಪ್ರೀತಿ ಸಿಗುತ್ತದೆ. ನಾನು ಪ್ರಚಾರ ಆರಂಭಿಸಿದಾಗ ಜನ ತಮ್ಮನ್ನು 100 ದಿನಗಳ 100 ವಿಧಾನಗಳಿಂದ ಪ್ರೀತಿಸಬೇಕು.

``ತಮ್ಮನ್ನು ನೋಡಿಕೊಳ್ಳಬೇಕು ಎಂದು ಬಯಸದೆ, ಜೀವನದ ಬಗ್ಗೆ ಪ್ರೀತಿ ಇಟ್ಟುಕೊಳ್ಳಬೇಕು. ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದು ಬಯಸಿದ್ದೆ. ನೀವು ವಿಭಿನ್ನ ವಸ್ತುಗಳ ಜೊತೆ ವಿಭಿನ್ನ ವಿಧಾನಗಳಿಂದ ದಿನ ವ್ಯವಹರಿಸತೊಡಗಿದಾಗ ನಿಮ್ಮನ್ನು ನೀವು ಪ್ರೀತಿಸಲು ಶುರು ಮಾಡಬಹುದು. ಜೊತೆಗೆ ನಿಮ್ಮ ಜೀವನದ ಉದ್ದೇಶವನ್ನು ನಿರ್ಧರಿಸಿ ನಿಮ್ಮ ಗುರಿ ತಲುಪಬಹುದು.''

ಪೂರ್ವಾಗ್ರಹ ಬೇಡ

ಎಂದಿಗೂ ಪೂರ್ವಾಗ್ರಹ ಇಟ್ಟುಕೊಳ್ಳಬೇಡಿ. ಸಾಧ್ಯವಾದಷ್ಟೂ ಕ್ಷಮಾಶೀಲರಾಗಿ. `ನಿಮಗಾಗಿ ಉತ್ತಮ ಸಂಭಾವ್ಯತೆಗಳು' ಪುಸ್ತಕದ ಲೇಖಕ ಮೈಲ್ ಡಿಓಲಿ ಹೀಗೆ ಹೇಳುತ್ತಾರೆ. ಜೀವನದಲ್ಲಿ ಸುಗಮ ಯಾತ್ರೆಗಾಗಿ ಪೂರ್ವಾಗ್ರಹಗಳ ಹೆಚ್ಚುವರಿ ಭಾರದಿಂದ ಸಮಯಾನುಸಾರವಾಗಿ ಮುಕ್ತರಾಗಬೇಕು. ಅಗತ್ಯ ಬಿದ್ದಾಗ ಮಾತ್ರ ವ್ಯಕ್ತಿ ಒಂದು ಸ್ಥಾನದಲ್ಲಿ ನಿಲ್ಲಬೇಕು. ನಿಮ್ಮ ದ್ವೇಷ, ನಿಮ್ಮ ನಕಾರಾತ್ಮಕ ಆಲೋಚನೆ, ನಿಮ್ಮ ವಿಕ್ಷಿಪ್ತತೆ, ದ್ವಂದ್ವ, ಕೋಪ ಮತ್ತು ನಿಮ್ಮ ಉದಾರತನದ ಕೊರತೆ, ನೀವು ಒಳ್ಳೆಯ ಸಂಬಂಧಗಳನ್ನು ಮಾಡುವುದನ್ನು ತಪ್ಪಿಸುತ್ತದೆ. ಲೇಖಕಿ ಅನಿತಾ ಮೋರಜಾನಿ ಹೀಗೆ ಹೇಳುತ್ತಾರೆ, ``ವಾಸ್ತವದಲ್ಲಿ ನಮ್ಮ ಶತ್ರು ಸ್ವಯಂ ನಾವೇ ಆಗಿದ್ದೇವೆ, ನಮ್ಮ ಉಗ್ರ ವಿಮರ್ಶಕರೂ ನಾವೇ ಆಗಿದ್ದೇವೆ. ಬೇರೆಯವರ ಬಗ್ಗೆ ನಾವು ಇದೇ ರೀತಿ ವರ್ತಿಸಿದರೆ ನಾವು ಎಲ್ಲ ವ್ಯಕ್ತಿಗಳನ್ನೂ ಒಂದೇ ದೃಷ್ಟಿಕೋನದಿಂದ ನೋಡುತ್ತೇವೆ. ನಾವು ನಮ್ಮ ಜೀವನದ ಪ್ರತ್ಯೇಕ ಪಾರ್ಶ್ವವನ್ನು ಅದು ಒಳ್ಳೆಯದಾಗಲಿ ಕೆಟ್ಟದಾಗಲಿ, ಸ್ವೀಕರಿಸಲೇಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ