ನಾವು ಹೇಗಿದ್ದೀವೇಯೋ ಹಾಗೇ ಇರುತ್ತೇವೆ : ಪಾಪುವಾ ನ್ಯೂಗಿನಿ ಒಂದು ಸಣ್ಣ ದ್ವೀಪ, ಆದರೆ ಈಗಲೂ ಅಲ್ಲಿ ಆದಿವಾಸಿಗಳ ಸಂಸ್ಕತಿಯದೇ ಮೇಲುಗೈ. ಅಲ್ಲಿನ ಜೀವನಶೈಲಿ ಕೆಟ್ಟದ್ದೇನಲ್ಲ, ಆದರೆ ರಾಜನೀತಿಯ ಬಗ್ಗೆ ಹೇಳುವುದೇ ಬೇಡ. ಅಲ್ಲಿನ ಜನತೆ ಇವತ್ತಿಗೂ ಸಹ ಕನಿಷ್ಠ ಉಡುಗೆ ಧರಿಸುವುದನ್ನು ತಮ್ಮ ಪ್ರತಿಷ್ಠೆ ಎಂದು ಭಾವಿಸುತ್ತಾರೆ. ಬಹುಶಃ ಅದುವೇ ಸರಿ. ಪ್ರಕೃತಿ ಇವರಿಗೆ ಎಂಥ ಜೀವನ ಕಲ್ಪಿಸಿಕೊಟ್ಟಿದೆಯೋ ಅದನ್ನು ಪರಿಪಾಲಿಸುವುದರಲ್ಲಿ ತಪ್ಪೇನಿದೆ?

ಜೀವನ ಎಂದರೆ ಇದು ! :  ಈ ಫ್ಯಾಮಿಲಿ ಫೋಟೋ ತೆಗೆದದ್ದು ಒಂದು ಕ್ರೂಝ್ ಶಿಪ್‌ನಲ್ಲಿ. ಅದರಲ್ಲಿ 4 ಸಾವಿರ ಯಾತ್ರಿಕರು ಪ್ರಯಾಣಿಸುತ್ತಾರೆ. ಹತ್ತು ಹಲವು ರೆಸ್ಟೋರೆಂಟ್ಸ್ ಇವೆ, ಗಾಲ್ಫ್ ಕೋರ್ಟ್, ಥಿಯೇಟರ್‌ಗಳಿಗೂ ಕಡಿಮೆ ಇಲ್ಲ. ಕ್ಯಾಬಿನ್ ಸಣ್ಣದಾದರೇನು? ಆದರೆ ಮನರಂಜನೆಯ ಪ್ಲಾಟ್‌ಫಾರ್ಮ್ ಅಗತ್ಯಕ್ಕಿಂತ ಹೆಚ್ಚು ದೊಡ್ಡದಾಗಿರುತ್ತದೆ. ಇಂಥ ತೇಲಾಡುವ ಹೋಟೆಲ್‌ಗಳು ಇದೀಗ ಹೊಸ ಮುಖ ಹೊತ್ತು ಮುನ್ನಡೆದಿವೆ. ಜನ ಟೈಟಾನಿಕ್‌ ಭೀತಿಯನ್ನು ಎಂದೋ ಮರೆತಿದ್ದಾರೆ!

ಪ್ರಜಾಪ್ರಭುತ್ವ ಕೇವಲ ಹೆಸರಿಗಷ್ಟೆ : ಪೊಲೀಸರು ಮನೆಗೆ ನುಗ್ಗಿದರು. ಮನೆಮಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಇಡೀ ಮನೆ ಜಾಲಾಡಿದರು. ಹುಡುಗಿ ಸ್ನಾನ ಮಾಡುತ್ತಿದ್ದರೂ ಬಾಗಿಲು ತೆರೆಸಿ ತಲಾಶಿ ನಡೆಸಿದರು. ನಮ್ಮ ಲಖ್ನೋದ ಯುಪಿ ಪೊಲೀಸ್‌ ಮನಸ್ಸು ಬಂದವರತ್ತ ಗುಂಡು ಹಾರಿಸುವಂತೆ, ಅಮೆರಿಕಾದಲ್ಲೂ ಹೀಗೇ ನಡೆದಿದೆ. ವಿಡಂಬನೆ ಎಂದರೆ, ಪೊಲೀಸರು ಅಮೆರಿಕಾದ ಮೆಸಾಚುಸಟ್ಸ್ ಯಾವ ಮನೆಗೆ ನುಗ್ಗಿದ್ದರೋ, ಅದು ಅವರ ತಪ್ಪು ಗ್ರಹಿಕೆ, ವಿಳಾಸ ತಪ್ಪಾಗಿತ್ತು! ಪೊಲೀಸರ ದರ್ಬಾರು ಭಾರತ, ಅಮೆರಿಕಾ ಎಲ್ಲಾ ಕಡೆ ಒಂದೇ…..!

ಜೀವಿಸುವ ಮಜಾ :  ರಷ್ಯಾದಲ್ಲಿ ಇಂಥ ಉನ್ಮುಕ್ತ ವಾತಾವರಣ ತುಂಬಾ ಇದೆ, ಆದರೆ ನೆನಪಿಡಿ, ಅಲ್ಲಿ ಲಗಾಮು ಅಷ್ಟೇ ಬಿಗಿ ಇದೆ. ಇದೀಗ ರಷ್ಯಾ ತನ್ನ ಸರ್ವಾಧಿಕಾರದ ಪ್ರವೃತ್ತಿಯಿಂದ ಬಲು ನಿಧಾನವಾಗಿ ಹೊರಬರುತ್ತಿದೆ. ಮಾಸ್ಕೋ ಇಂದಿಗೂ ಟೂರಿಸ್ಟ್ ಅಟ್ರಾಕ್ಷನ್‌ ಆಗಿರುವುದರ ಜೊತೆಗೆ ತುಸು ಹಿಂದುಳಿದ ನಗರದಂತೆಯೇ ಇದೆ. ಇದು ನಮ್ಮಲ್ಲಿ ಕಾವಿ ತುಂಬಿಕೊಂಡಿರುವ ಪುಷ್ಕರ, ವಾರಾಣಸಿ ನಗರಗಳ ಹಾಗೆಯೇ!

ಸೌಂದರ್ಯದ ಸರಿ ಮೌಲ್ಯ : ಈಕೆ ವಿಜ್ಞಾನಿ ಅಲ್ಲ, ಶ್ರೀಮಂತ ಸುಂದರ ಮಹಿಳೆಯರಿಗಾಗಿ ವಿಶೇಷ ಸ್ವರ್ಣಾಭರಣಗಳನ್ನು ಡಿಸೈನ್‌ಗೊಳಿಸುವ ಎಕ್ಸ್ ಪರ್ಟ್‌. ಶ್ರೀಮಂತರಿಗಾಗಿ ಆಭರಣ ಡಿಸೈನಿಂಗ್‌ ಮಾಡುವುದು ಲಕ್ಷಾಂತರ ಮಂದಿಯ ಕಸುಬಾಗಿದೆ, ಇದು ಎಷ್ಟೋ ಸಲ ವ್ಯರ್ಥವಾಗುತ್ತದೆ. ಹೆಂಗಸರ ಸೌಂದರ್ಯವೇನಿದ್ದರೂ ಅವರವರ ಮೈಕಟ್ಟಿನಿಂದ ಸ್ಪಷ್ಟವಾಗುತ್ತದೆ. `ಪದ್ಮಾವತ್‌’ ಚಿತ್ರದಲ್ಲಿ ದೀಪಿಕಾ ಆಭರಣ ಹೇರಿಕೊಂಡು ಒಣಪ್ರತಿಷ್ಠೆ ಮೆರೆಸಿದಂತೆ!

ಹೆಚ್ಚುತ್ತಿರುವ ಸಮರ್ಥನೆ : ಮಸ್ತಿಕೋರರು ಎಲ್ಲಾ ಕಡೆ ನುಗ್ಗಿ ಮಜಾ ಪಡೆಯುತ್ತಿದ್ದಾರೆ. ಸಲಿಂಗಿಗಳು ಹೆಚ್ಚಿನ ಸಾಮಾಜಿಕ ನಿಯಮಗಳಿಂದ ಬಂಧಿಸಲ್ಪಟ್ಟವರಲ್ಲ, ಖುಲ್ಲಂಖುಲ್ಲ ಅವರು ಬೇಕಾದ್ದು ಮಾಡುತ್ತಾರೆ. ಆಫ್ರಿಕಾದ ಒಂದು ದೇಶದಲ್ಲಿ ನಡೆದ ಇಂಥ ಪೆರೇಡ್‌ನಲ್ಲಿ ಅಲ್ಲಿನವರು ಮಾತ್ರವಲ್ಲದೆ ಪರದೇಶದವರೂ ಭಾಗಹಿಸಿದ್ದರು. ವಿಶ್ವದ ಮೂಲೆ ಮೂಲೆಯಿಂದ ಬಂದ ಸಲಿಂಗಿಗಳು ಧರ್ಮ, ಭಾಷೆ, ಜಾತಿ, ಬಣ್ಣ, ದೇಶ ಎಲ್ಲಾ ಮರೆತು ತಾವೆಲ್ಲ ಒಂದೇ ಎಂದು ಬೆರೆತಿದ್ದಾರೆ.

ಇದೀಗ ನಕಲಿಯಲ್ಲೂ ಅಸಲಿ ಆನಂದ : ಕರೆಂಟ್‌ ನೆರವಿನಿಂದ ನಡೆಯುವ ಪಂಪುಗಳ ಮಜಾ ಎಂದರೆ, ಈಗ ಮಾನವ ನಿರ್ಮಿತ ಕೃತಕ ಕೊಳಗಳಲ್ಲೂ ರಾಫ್ಟಿಂಗ್‌ ನಡೆಸಬಹುದಾಗಿದೆ. ಇದರಲ್ಲಿ ಹೆದ್ದೆರೆಗಳು ಮಾತ್ರವಲ್ಲದೆ ರಾಪಿಡ್ಸ್ ಕೂಡ ಲಭ್ಯ. ನಮ್ಮ ದೇಶದಲ್ಲಂತೂ ಗಂಗಾನದಿ ಮತ್ತಷ್ಟು ಕೊಳಕಾಗಬಾರದು ಎಂದು ರಾಫ್ಟಿಂಗ್‌ ನಿಲ್ಲಿಸಲಾಗಿದೆ. ಬೇರೆ ನದಿಗಳು ಒಣಗಲು, ಕೊಳಕಾಗಲು ತೊಡಗಿವೆ. ನದಿಗಳ ಬದಿಯ ಫಿಲ್ಟರ್ಡ್‌ ನೀರಿನ ಕೃತಕ ಕೊಳಗಳಲ್ಲೇ ರಾಫ್ಟಿಂಗ್‌ ನಡೆಸಬೇಕಿದೆ. ಸಾಗರದಾಳಕೆ ಇಳಿದು ಮುತ್ತು ಹೆಕ್ಕಿ ಕೊಡಲೇ ಎಂದು ಪ್ರೇಮಿ, ನೀರಿಗಿಳಿದರೆ ಸಿಗುವುದು ಟೈಲ್ಸ್ ಅಷ್ಟೇ!

ಸವಿನೆನಪು ಹಸಿರಾಗಿ ಉಳಿಯಲು : ಅಮೆರಿಕಾದಲ್ಲಿ ಆಗ ತಾನೇ ಹುಟ್ಟಿದ ನವಜಾತ ಶಿಶುವಿನ ಫೋಟೋ ತೆಗೆಸುವುದೇ ಒಂದು ದಂಧೆ! ಅಲ್ಲಿನ ಎಲ್ಲಾ ಜೋಡಿಗಳೂ ಮಗು ಬಯಸುವುದಿಲ್ಲವಂತೆ. ಬಯಸುವರು, ಯಾವುದೇ ಕ್ಷಣವನ್ನು ಕಳೆದುಕೊಳ್ಳಲು ಬಿಡುವುದಿಲ್ಲ. ಹೀಗಾಗಿ ಮಗುವಿಗೆ 3, 6, 10 ತಿಂಗಳಾಗುವವರೆಗೂ ಫೋಟೋ ಪ್ಯಾಕೇಜ್‌ ಲಭ್ಯವಿದೆ. ಫೋಟೋಗ್ರಾಫರ್ ದಿನಕ್ಕೊಮ್ಮೆ ಬಂದು ಭರ್ಜರಿ ಫೋಟೋ ಕ್ಲಿಕ್ಕಿಸುತ್ತಾನೆ. ನಂತರ ಈ ಫೋಟೋ ಜೀವನವಿಡೀ `ಫ್ರೇಮ್ ‘ಗಳಲ್ಲಿ  ತೂಗುತ್ತವೆ. ಇಂಥವರು ಹೆಚ್ಚಿನ ಇನ್‌ವಾಲ್ವ್‌ಮೆಂಟ್‌ ತೋರಿಸುತ್ತಾರೆ.

ಚೀನಾವನ್ನು ನಂಬಲಾಗದು : ಚೀನಾ ಹಾಂಕಾಂಗ್‌ ಮೇಲೆ ಸರ್ವಾಧಿಕಾರ ನಡೆಸಕೂಡದು ಎಂಬ ಭಯ ಪ್ರತಿ ಸಲ ಹಾಂಕಾಂಗ್‌ನವರನ್ನು ಕಾಡುತ್ತಲೇ ಇರುತ್ತದೆ. ಪ್ರಜೆಗಳು ಚೀನೀಯರಿಗಿಂತ ಹೆಚ್ಚು ಸುಖಿ, ಸ್ವತಂತ್ರರು. ಇದು ಚೀನೀಯರಿಗೆ ಕಣ್ಣುರಿ! ಅಲ್ಲಿ ಪ್ರತಿ ಅಕ್ಟೋಬರ್‌ನ್ಯಾಷನಲ್ ಡೇನಂದು ಪ್ರೋಡೋಕ್ರೆಸಿ ಮೆರವಣಿಗೆ ನಡೆಸುತ್ತಾರೆ. ಆದರೆ ಯಾವ ದಿನ ಬೀಜಿಂಗ್‌ನವರ ತಲೆ ಕೆಡುವುತ್ತದೋ ಹಾಂಕಾಂಗ್‌ನವರಿಗೆ ಗೊತ್ತಿಲ್ಲ.

 TAGS : ಸುದ್ದಿ ಸಮಾಚಾರ, ನಾವಿರುವುದೇ ಹೀಗೆ, ಇದುವೇ ಜೀವನ, ಪ್ರಜಾಪ್ರಭುತ್ವ, ಜೀವಿಸುವ ಮಜಾ, ಸೌಂದರ್ಯದ ಮೌಲ್ಯ, ಹೆಚ್ಚುತ್ತಿರುವ ಸಮರ್ಥನೆ, ನಕಲಿ-ಅಸಲಿ, ಸವಿನೆನಪು, ಚೀನಾ-ಹಾಂಕಾಂಗ್

COMMENT