ಟೀಚರ್‌: ತಿಮ್ಮ ಎರಡು ವಿರುದ್ಧ ಪದಗಳನ್ನು ಹೇಳು.

ತಿಮ್ಮ : ಸುಖ ದುಃಖ, ಮೇಲೆ ಕೆಳಗೆ.

ಟೀಚರ್‌: ಗುಂಡ ನೀನೊಂದು ವಿರುದ್ಧ ಪದ ಹೇಳು.

ಗುಂಡ : ಪತಿ ಪತ್ನಿ.

ರಂಗಮ್ಮ : ಕಾಮಿನಿ ನಿನ್ನ ಮದುವೆ ಆಯ್ತಾ.....?

ಕಾಮಿನಿ : ಆಯ್ತು ಆಂಟಿ.

ರಂಗಮ್ಮ : ಹುಡುಗ ಏನು ಮಾಡ್ಕೊಂಡಿದಾನೆ....?

ಕಾಮಿನಿ : ಬೇಜಾರು ಮಾಡ್ಕೊಂಡಿದ್ದಾನೆ.

ಟೀಚರ್‌: ತಿಮ್ಮ ಪಾತ್ರೆ ತೊಳೆಯಬೇಕು ಮತ್ತು ತಿಮ್ಮ ಪಾತ್ರೆ ತೊಳೆಯಲೇಬೇಕು ಈ ಎರಡು ವಾಕ್ಯದಲ್ಲಿನ ವ್ಯತ್ಯಾಸ ಹೇಳು.

ಗುಂಡ : ಮೊದಲ ವಾಕ್ಯ ತಿಮ್ಮ ಮದುವೆಯಾಗಿಲ್ಲ ಎಂಬುದನ್ನು ತಿಳಿಸುತ್ತದೆ. ಅದೇ ಎರಡನೇ ವಾಕ್ಯ ಅವನು ಗ್ಯಾರಂಟಿ ಮದುವೆಯಾಗಿದ್ದಾನೆ ಎಂದು ತಿಳಿಸುತ್ತದೆ.

ವರದಿಗಾರ : ಮದುವೆಗೆ ಮೊದಲು ನೀವು ಏನು ಮಾಡುತ್ತಿದ್ದೀರಿ?

ಗುಂಡೂರಾಯ : ನನ್ನ ಮನಸ್ಸು ಬಯಸಿದ್ದೆಲ್ಲ ಮಾಡುತ್ತಿದ್ದೆ. ಆದರೆ ಈಗ..........

ಗುಂಡ ಮಹಾ ಜಿಪುಣ. ಇಸ್ತ್ರೀ ಮಾಡುವಾಗ ಒಮ್ಮೆ ಆಕಸ್ಮಿಕವಾಗಿ ಅವನಿಗೆ ಶಾಕ್‌ ಹೊಡೆಯಿತು.

ಪತ್ನಿ : ಅಯ್ಯಯ್ಯೋ....  ನಿಮಗೇನೂ ಆಗಿಲ್ಲ ತಾನೇ?

ಗುಂಡ : ನನಗೇನೂ ಆಗಿಲ್ಲ ಬಿಡು, ಮೊದಲು ಮೀಟರ್‌ನೋಡು.... ಎಷ್ಟು ಕರೆಂಟ್‌ ಹೋಯ್ತೋ ಏನೋ....

ಅರುಣ್‌ : ಇವತ್ತು ನನ್ನ ಹೆಂಡತಿಯ ದೂರುಗಳಿಗೆ ಮಿತಿಯೇ ಇಲ್ಲದೇ ಹೋಯ್ತು. ಸಾಕಾಯ್ತಪ್ಪ...

ಕಿರಣ್‌ : ಅದೆಂಥ ಹೊಸ ದೂರು?

ಅರುಣ್‌ : ಎಲ್ಲಿಂದ ಗೋಧಿಹಿಟ್ಟು ತೆಗೆದುಕೊಂಡು ಬಂದ್ರಿ.....? ಮಾಡಿದ ಚಪಾತಿ ಎಲ್ಲಾ ಸೀಯುತ್ತಿವೆ ಅಂತ ಬೈತಾನೇ ಇದ್ದಾಳೆ.

ಗುಂಡ ಮತ್ತು ಗುಂಡಿ ಇಬ್ಬರೂ ಘನಘೋರ ಜಗಳ ಆಡಿಕೊಂಡು ಒಂದು ವಾರ ಮಾತು ಬಿಟ್ಟರು. ಸುದೀರ್ಘ ಮೌನ ಇಬ್ಬರಿಗೂ ಸಹಿಸದಾಯಿತು.

ಗುಂಡ : ಹೋಗ್ಲಿ ಬಿಡು ಡಾರ್ಲಿಂಗ್‌ ನೀನು ಹೀಗೆ ಮೌನಗೌರಿ ಆದ್ರೆ ನನಗೆ ಬಹಳ ಕಷ್ಟ.

ಗುಂಡಿ : ನೀವು ಒಂದು ಕೆಲಸ ಮಾಡಿ.

ಗುಂಡ : ಏನು ಹಾಗಂದ್ರೆ....? ಮನೆಯಲ್ಲೂ

ಗುಂಡಿ : `ಗೊತ್ತಾಗಲಿಲ್ಲ.... ಸಾರಿ ತಪ್ಪಾಯ್ತು!' ಅಂತ ಆಗಾಗ ಹೇಳುತ್ತಿರಬೇಕು.

ಗುಂಡ ಒಮ್ಮೆ ಶಾಪಿಂಗ್‌ ಮಾಡಲೆಂದು ಮಾಲ್ ಒಳಹೊಕ್ಕ. ಅವನು ಗ್ರಾಸೆರಿ ವಿಭಾಗಕ್ಕೆ ಹೋಗಿ ಬೇಕಾದ್ದು ಖರೀದಿಸಿದ. ಅಲ್ಲಿ ಯಾರೋ 60ರ ಮಹಿಳೊಬ್ಬರು ತನ್ನನ್ನು ಹಿಂಬಾಲಿಸಿ ಬರುತ್ತಿರುವಂತೆ ಅನಿಸಿತು. ಅದೆಲ್ಲ ಭ್ರಮೆ ಎಂದು ಹಣ್ಣು ತರಕಾರಿ ಸ್ಟಾಲ್‌ಗೆ ಹೋದ. ಅಲ್ಲೂ ಬೇಕಾದ್ದನ್ನು ಖರೀದಿಸಿದ. ಆ ಮಹಿಳೆ ಅಲ್ಲಿಗೂ ಹಿಂಬಾಲಿಸಿ ಬಂದಂತೆ ಅನಿಸಿತು.

ಬೇಗ ಬೇಗ  ತನಗೆ ಬೇಕಾದ್ದನ್ನು ಖರೀದಿಸಿ, ಗುಂಡ ಮಕ್ಕಳ ಆಟಿಕೆಗಳ ವಿಭಾಗಕ್ಕೆ ಬಂದ. ತಿರುಗಿ ನೋಡಿದರೆ... ಮತ್ತೆ ಆಕೆಯೇ ಕಾಣಿಸಿಕೊಳ್ಳಬೇಕೇ? ತಡೆಯಲಾರದೆ ಗುಂಡ ಕೇಳಿಯೇ ಬಿಟ್ಟ, ``ಅಮ್ಮ, ನೀವು ಹುಷಾರಾಗಿದ್ದೀರಿ ತಾನೇ?''

ಆಕೆ ಹೇಳಿದಳು, ``ನೋಡಪ್ಪ.... ನಿನ್ನನ್ನು ನೋಡಿದರೆ ನನ್ನ ಹೆತ್ತ ಮಗನನ್ನು ನೋಡಿದಂತೆಯೇ ಅನಿಸುತ್ತೆ.... ಅದೇ ಮುಖ ಅದೇ ಕಣ್ಣು.... ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಅವನು ಹೋಗಿಬಿಟ್ಟ. ಬೇಡ ಅಂತ ವಿವೇಕ ಹೇಳುತ್ತಿದ್ದರೂ ಹೃದಯ ಕೇಳದೇ ನಿನ್ನನ್ನು ಮತ್ತೆ ಮತ್ತೆ ನೋಡಬೇಕೆನಿಸಿ ಹಿಂಬಾಲಿಸಿಕೊಂಡು ಬರುತ್ತಿರುವೆ.... ಏನು ತಪ್ಪು ತಿಳಿಯಬೇಡಪ್ಪ...``ಇನ್ನೊಮ್ಮೆ ಬಾಯ್ತುಂಬಾ ಅಮ್ಮ  ಅಂತ ಕರೆದುಬಿಡಪ್ಪ.... ಕೇಳಿಸಿಕೊಂಡು ಧನ್ಯಳಾಗಿ ಹೋಗಿಬಿಡ್ತೀನಿ....'' ಎಂದು ಕಂಬನಿ ಮಿಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ