ನಾವು ಆಚರಿಸುವ ಹಬ್ಬಗಳ ಬಗ್ಗೆ ಚರ್ಚಿಸುವುದಾದರೆ, ಬಹುತೇಕ ಎಲ್ಲ ಹಬ್ಬಗಳು ಪರಸ್ಪರ ಖುಷಿ ಮತ್ತು ಪ್ರೀತಿಯನ್ನು ನೀಡುತ್ತವೆ. ರಕ್ಷಾಬಂಧನ ಅಣ್ಣತಂಗಿಯರ ಪ್ರೀತಿಯನ್ನು ಬಿಂಬಿಸಿದರೆ, ದೀಪಾವಳಿ ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವು, ಹೋಳಿಹಬ್ಬ ಖುಷಿಯ ಬಣ್ಣಗಳ ಸಿಂಪರಣೆಯ ಸಂಕೇತವಾಗಿದೆ. ಇದರ ಹೊರತಾಗಿ ಸಂಕ್ರಾಂತಿ, ಯುಗಾದಿ, ದಸರಾ ಮುಂತಾದ ಹಬ್ಬಗಳನ್ನೂ ಆಚರಿಸುತ್ತೇವೆ. ನಮ್ಮ ಬಹುತೇಕ ಹಬ್ಬಗಳು ಕೃಷಿ ಚಟುವಟಿಕೆಯ ಜೊತೆಗೆ ನಿಕಟತೆ ಹೊಂದಿವೆ. ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣ ತಲ್ಲೀನರಾಗಿ ಒಂದು ಹಂತದವರೆಗೆ ಕೆಲಸ ಮಾಡುವುದು, ಫಸಲು ಬಂದ ಬಳಿಕ ಅಥವಾ ಬಿಡುವಿನ ಅವಧಿಯಲ್ಲಿ ಮನಸ್ಸಿಗೆ ಖುಷಿ ಕೊಡಲು ಹಬ್ಬಗಳ ಆಚರಣೆ ಸರ್ವೇ ಸಾಮಾನ್ಯ. ಆದರೆ ಈ ಸುಂದರ ಹಬ್ಬಗಳನ್ನು ಧರ್ಮ, ಸಮಾಜ ಹಾಗೂ ಭಾಷೆಗಳ ಹೆಸರಿನಲ್ಲಿ ಇಬ್ಭಾಗ ಮಾಡಿದರೆ ಬಹಳ ವ್ಯಥೆಯಾಗುತ್ತದೆ.

ಇದು ನನ್ನ ಧರ್ಮ ಅದು ನಿನ್ನ ಧರ್ಮ

ಕೆಲವು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ  ಒಂದು ಘಟನೆ. ಯುಗಾದಿ ಹಬ್ಬದ ಆಚರಣೆಗಾಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಭರ್ಜರಿ ಸಿದ್ಧತೆ ನಡೆದಿತ್ತು. ಈ ಕುರಿತಂತೆ ಎರಡು ಗುಂಪುಗಳ ನಡುವೆ ವಿವಾದ ಶುರುವಾಯಿತು. ಒಂದು ಗುಂಪು ಮೊದಲಿನಿಂದ ಈ ಆಚರಣೆಯನ್ನು ನಡೆಸಿಕೊಂಡು ಬಂದಿತ್ತು. ಆಗ ಇನ್ನೊಂದು ಗುಂಪು ಮಧ್ಯೆ ಪ್ರವೇಶಿಸಿ ತನ್ನದೇ ಆದ ಬೇರೆ ರೀತಿಯಲ್ಲಿ ಹಬ್ಬ ಆಚರಿಸಲು ಮುಂದಾಯಿತು. ಬಳಿಕ ಹೆಚ್ಚು ಜನ ಯಾವ ಗುಂಪಿನ ಆಚರಣೆಯನ್ನು ಇಷ್ಟುಪಡುತ್ತಾರೋ ಅದೇ ರೀತಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಕೊನೆಗೊಮ್ಮೆ ಹಳೆಯ ರೀತಿಯಲ್ಲಿಯೇ ಆಚರಿಸಲಾಯಿತು. ಸಾಕಷ್ಟು ಹೂಗಳ ಅಲಂಕಾರ ಮಾಡಲಾಯಿತು. ಪುರೋಹಿತರ ಪೂಜೆ ಪುನಸ್ಕಾರ, ಟಿ.ವಿ.ಯಲ್ಲಿ ಅದರ ನೇರ ಪ್ರಸಾರ ಮಾಡಲಾಯಿತು. ಇದೆಲ್ಲ ಸಾಧ್ಯವಾದದ್ದು ಗುಂಪು ಸಂಗ್ರಹ ಮಾಡಿದ ಹಣದಿಂದ.

ಈ ತೆರನಾದ ಹಬ್ಬಗಳನ್ನು ಜನರು ಬೇರೆ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ. ಆದರೆ ಅವರೆಲ್ಲರ ಉದ್ದೇಶ ಒಂದೇ ಆಗಿರುತ್ತದೆ. ಆದರೆ ಪೂಜಾರಿ ಪುರೋಹಿತರು ಹೇಳಿದ ರೀತಿರಿವಾಜುಗಳು ಮತ್ತು ಜಾತಿ, ಭಾಷೆ ಅಥವಾ ಪ್ರಾಂತ್ಯದ ಅಹಂನ್ನು ಬಿಂಬಿಸದ ಹೊರತು ಅವರಿಗೆ ಹಬ್ಬದ ಮಜವೇ ಬರುವುದಿಲ್ಲ.

ಈ ರೀತಿರಿವಾಜುಗಳು ಮತ್ತು ಧರ್ಮ ಬಂದದ್ದಾದರೂ ಎಲ್ಲಿಂದ ಎಂದು ಕೇಳಿದರೆ, ಅವರಿಗೆ ಅದರ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ಒಂದು ವಾಸ್ತವ ಸಂಗತಿಯೆಂದರೆ, ಸರಿಯಾದ ರೀತಿ ನೀತಿಗಳು ಯಾರಿಗೂ ಗೊತ್ತೇ ಇರುವುದಿಲ್ಲ. ಪೂಜಾರಿ ಪುರೋಹಿತರು ಏನು ಹೇಳಿರುತ್ತಾರೊ, ಅವರಿಗೆ ಅದೇ ಸತ್ಯ. ಅದಕ್ಕೆ ಪುರೋಹಿತರಿಗೆ ಸಾಕಷ್ಟು ದಕ್ಷಿಣೆ ಸಿಗುತ್ತದೆ.

ಗಣೇಶ ಉತ್ಸವಕ್ಕಾಗಿ ಚಂದಾ ವಸೂಲಿ ಮಾಡಲಾಗುತ್ತಿತ್ತು. ಆಗ ಕೆಲವು ಪಂಜಾಬಿ ಜನರು ಇಲ್ಲಿ ಲೋಹರಿ ಹಬ್ಬವನ್ನೇನೂ ಆಚರಿಸುವುದಿಲ್ಲ. ನಾವ್ಯಾಕೆ ಹಣ ಕೊಡಬೇಕು ಎಂದು ಹೇಳಿ ಚಂದಾ ಕೊಡಲು ನಿರಾಕರಿಸಿದರು. ಹಾಗೆ ನೋಡಿದರೆ ಧರ್ಮ ಒಂದೇ ಎಂದಾದರೂ, ಇಬ್ಬರ ನಡುವೆ ಸೂಕ್ಷ್ಮ ವೈಮನಸ್ಸು ಮೂಡಿತು.

ಇಲ್ಲೇ ಉದ್ಭವಿಸುವ ಒಂದು ಮುಖ್ಯ ಪ್ರಶ್ನೆ ಎಂದರೆ ನಾವು ಧರ್ಮ, ರಾಜ್ಯ, ಭಾಷೆ, ಜಾತಿಯ ಆಧಾರದ ಮೇಲೆ ಹಬ್ಬಗಳನ್ನು ಏಕೆ ಇಬ್ಭಾಗಿಸುತ್ತೇವೆ? ಹಬ್ಬಗಳನ್ನು ಆಚರಿಸುವುದರ ಹಿಂದಿನ ಉದ್ದೇಶ ಕೇವಲ ಖುಷಿಯ ಭಾವನೆಯೊಂದೇ ಅಲ್ಲ, ಎಲ್ಲರೊಂದಿಗೆ ಬೆರೆಯಿರಿ. ಸೂಕ್ತ ಪೋಷಾಕು ಧರಿಸಿ, ಮುಖದಲ್ಲಿ ಮುಗುಳ್ನಗೆ ತನ್ನಿ. ಆದರೆ ನಮ್ಮ ಧರ್ಮ, ಸಮಾಜ, ಭಾಷೆ ಇದರ ನಡುವೆ ಕಾಲುಗಾರನಾಗಿ ಕೆಲಸ ಮಾಡುತ್ತದೆ. ಹಬ್ಬಗಳಲ್ಲಿ ಈ ಜಗಳಗಳಿಂದ ಲಾಭವಾಗುವುದು ಪೂಜಾರಿ, ಪುರೋಹಿತರು ಮತ್ತು ಧರ್ಮದ ಗುತ್ತಿಗೆದಾರರಿಗೆ ಮಾತ್ರ. ಇಂತಹ ಧರ್ಮ ಹಾಗೂ ಸಮಾಜದ ಗುತ್ತಿಗೆದಾರರು ತಮ್ಮ ಮಠಗಳಲ್ಲಿ ಖುಷಿ ಖುಷಿಯಿಂದ ಬೇರೆ ಧರ್ಮಗಳ ಮುಖಂಡರನ್ನು ಹಾಡಿ ಹೊಗಳುತ್ತಾರೆ. ಅವರಿಗೆ ಧರ್ಮ ಗುರುಗಳಿಂದ ಒಂದಿಷ್ಟು ಲಾಭ ಬೇಕು. ಇನ್ನೊಂದೆಡೆ ಅವರೇ ತಮ್ಮ ಚೇಲಾಗಳನ್ನು ಬೇರೆ ಧರ್ಮದ ವಿರುದ್ಧ ಛೂ ಬಿಡುತ್ತಾರೆ. ಅವರು ಸ್ವತಃ ಒಂದಿಷ್ಟು ಲಾಭಕ್ಕಾಗಿ ಬೇರೆ ಧರ್ಮಗಳ ಗುತ್ತಿಗೆದಾರರಿಗೆ ತಮ್ಮ ಕಾರ್ಯಕ್ರಮಗಳ ವೇದಿಕೆಯಲ್ಲಿ ಹೂಮಾಲೆ ಹಾಕುತ್ತಾರೆ. ಸಮಾಜದ ಬಗ್ಗೆ ಹೇಳಬೇಕೆಂದರೆ, ಸಮಾಜವಂತೂ ಸಂಸ್ಕೃತಿಯ ಮುಖವಾಡ ಧರಿಸಿ ಒಂದು ಕ್ಷಣ ಈ ಕಡೆ, ಇನ್ನೊಂದು ಕ್ಷಣ ಆ ಕಡೆ ಇರುತ್ತದೆ. ಹಣವುಳ್ಳವ ಅಥವಾ ಬೇರಾವುದೇ ಶಕ್ತಿ ತನ್ನ ಕೈಯಲ್ಲಿ ಹಿಡಿದುಕೊಂಡು ಬಂದರೆ, ಆಗ ಧರ್ಮದ ನಿಯಮ ಕಾನೂನುಗಳು ಬದಲಾಗಿಬಿಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ