ಪಾಪ್ಯುಲರ್‌ ಆಗುತ್ತಿರುವ ಪೋಲ್ ಡ್ಯಾನ್ಸ್ : ಅಮೆರಿಕಾದ ಸಣ್ಣ ರಾಜ್ಯವಾದ ಆ್ಯಶ್‌ವಿಲೆ ಕೇವಲ 1 ಲಕ್ಷದಷ್ಟು ಮಾತ್ರ ಜನಸಂಖ್ಯೆ ಹೊಂದಿದೆ. ಆದರೆ ಅಲ್ಲಿನ ಪೋಲ್‌ ಡ್ಯಾನ್ಸ್ ಅಕ್ಯಾಡೆಮಿಗೆ ದಿನೆ ದಿನೇ ಹೆಚ್ಚುತ್ತಿರುವ ಜನಪ್ರಿಯತೆ ದಂಗುಗೊಳಿಸುತ್ತದೆ. ಇದು ಸ್ಥೂಲದೇಹಿ ಮಹಿಳೆಯರನ್ನು ತೆಳ್ಳಗಾಗಿಸಲು ಉತ್ತಮ ಪ್ರಯತ್ನ ಕೂಡ. ಈ ಡ್ಯಾನ್ಸ್ ನಿಂದ ಹೆಚ್ಚಿನ ಆತ್ಮವಿಶ್ವಾಸ ಗಳಿಸುವ ಅಲ್ಲಿನ ಹೆಂಗಸರು ಗ್ಲಾಮರ್‌ ಬೋಲ್ಡ್ ನೆಸ್‌ನತ್ತ ಹೇಗೆ ಮುನ್ನುಗ್ಗುತ್ತಿದ್ದಾರೆ..... ನೀವೇ ನೋಡಿ!

 

ಇಲ್ಲಿ ರಂಗು & ನೃತ್ಯ ಎರಡೂ ಉಂಟು : ಕೆನಡಾದ ಮಾಂಟ್ರಿಯಾನಾ ಪ್ರದೇಶದಲ್ಲಿ ಭಾರತೀಯ ಮೂಲದ ಜನರು ಉತ್ಸವ ಮೇಳ ನಡೆದಾಗ ತಮ್ಮ ಪಾರಂಪರಿಕ ಗೀತೆ, ಸಂಗೀತ, ನೃತ್ಯಗಳನ್ನು ಪ್ರಸ್ತುತಪಡಿಸುತ್ತಾ ಕೆಲವು ನೆರೆ ರಾಷ್ಟ್ರಗಳಿಗೂ ತಮ್ಮ ಸಂಸ್ಕೃತಿ ವ್ಯಕ್ತಪಡಿಸಲು ಅವಕಾಶವಿತ್ತರು. ಆಗ ಏಷ್ಯಾ ಮೂಲದ ಇತರರೂ ಮುಂದಾದರು. ಆಗ್ನೇಯ ಏಷ್ಯಾದ ಈ ಪರಿಯ ರಂಗು, ನೃತ್ಯಗಳು ಮೇಲುಗೈ ಸಾಧಿಸಿದವು.

ಈ ರೇಸ್‌ನ ಮಜವೇ ಬೇರೆ : ರಬ್ಬರ್‌ನಿಂದ ರೂಪುಗೊಂಡ ಒಂದೇ ಗಾತ್ರ, ಒಂದೇ ತೂಕದ ಹಲವು ಬಾತುಕೋಳಿಗಳನ್ನು ಒಟ್ಟಾಗಿ ನೀರಿಗೆ ತೇಲಿಬಿಟ್ಟಾಗ, ಹಲವು ಮೊದಲು ಗುರಿ ತಲುಪುತ್ತವೆ, ಇನ್ನುಳಿದವು ನಂತರ. ಈ ರೇಸ್‌ನ ಸ್ವಾರಸ್ಯ ಇರುವುದೇ ಪ್ರತಿ ಸ್ಪರ್ಧಿಯೂ ತನ್ನ ಡಕ್‌ ಮೊದಲೇ ಆರಿಸಿಕೊಳ್ಳುವುದರಲ್ಲಿ. ಒಂದೇ ತರಹ ಕಾಣಿಸುವ ಈ ಡಕ್‌ಗಳ ಸಂಖ್ಯೆ ಗುರುತಿಟ್ಟುಕೊಳ್ಳುವುದೂ ಕಷ್ಟವೇ! ಆದರೆ ರೇಸ್‌ ಕೊನೆಗೊಂಡಾಗ, ಎಲ್ಲಕ್ಕೂ ಮೊದಲು ತಲುಪಿದ ಡಕ್‌ ಸಂಖ್ಯೆ ಗುರುತಿಸಲು ಎಲ್ಲರೂ ಉತ್ಸುಕರಾಗುತ್ತಾರೆ. ಇದುವೇ ಡಕ್‌ ರೇಸ್‌ನ ಮೋಜು! ಇಲ್ಲಿ ಡಕ್‌ ರೇಸ್‌ನ ತಯಾರಿ ನಡೆಯುತ್ತಿದೆ, ಡಕ್‌ ಮುಳುಗಬಾರದೆಂಬುದೇ ಎಲ್ಲರ ಚಿಂತೆ. ನಮ್ಮಲ್ಲಿನ ಕುದುರೆ ಜೂಜಿನಂತೆ ಜರ್ಮನಿಯಲ್ಲಿ ಈ ಡಕ್‌ ಜೂಜು. ಇದಕ್ಕೆ ಎಂಟ್ರಿ ಫೀ ಸಹ ಉಂಟು, ಕೆಲವೆಡೆ ಊಟೋಪಚಾರ ಉಂಟಂತೆ!

ಹೀಗೆ ಪರಿಸರ ಕಾಪಾಡಿಕೊಳ್ಳಿ : ಪರಿಸರ ಕಾಪಾಡಿ ಎಂದು ಕೇವಲ ಕೆಂಪು ಕೋಟೆಯ ಭಾಷಣದಿಂದ ಸಾರಿದರೆ ಏನೇನೂ ಲಾಭವಿಲ್ಲ. ಅದನ್ನು ಪ್ರಯೋಗಶಾಲೆಗಳಿಂದಲೂ ಮಾಡಬೇಕಾಗುತ್ತದೆ. ವಾಷಿಂಗ್‌ಟನ್‌ ಯೂನಿರ್ಸಿಟಿಯ ಸೈಂಟಿಸ್ಟ್ ಪ್ಲಾಸ್ಟಿಕ್‌ನಿಂದ ಜೆಟ್‌ ಫ್ಯೂಯೆಲ್‌ ತಯಾರಿಸುವ ಟೆಕ್ನಿಕ್‌ನ್ನು ಬಹುತೇಕ ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಕೆಲಸಕ್ಕೆ ಮಹಿಳಾ ವಿಜ್ಞಾನಿಗಳ ಕೊಡುಗೆ ಏನೂ ಕಡಿಮೆಯಲ್ಲ. ಕೇವಲ ಭಾಷಣ ಮಾಡಿ, ಕಂಠಶೋಷಣೆ ಮಾಡಿಕೊಳ್ಳುವುದರಿಂದ ಅಲ್ಲ, ಈ ರೀತಿ ಲ್ಯಾಬ್‌ಗಳಲ್ಲಿ ಪ್ರಯೋಗದ ಮೂಲಕ ಅದನ್ನು ಸಾಧಿಸಿ ತೋರಿಸಬೇಕು.

ಇಲ್ಲಿ ಎಲ್ಲ ತೋರಿಕೆಯಷ್ಟೆ : ಡೀರ್‌ ಹಂಟರ್‌ ಕನ್ವೆನ್ಶನ್‌ ದಿನ ಹೆಸರಿಗಷ್ಟೆ ಇದೆ, ಏಕೆಂದರೆ ಈಗ ಅಮೆರಿಕಾದಲ್ಲೂ ಜಿಂಕೆಗಳ ಬೇಟೆ ನಿಷೇಧಿಸಲಾಗಿದೆ. ಈಗಂತೂ ಅವುಗಳ ಎಣಿಕೆ ನಿಯಂತ್ರಣ ತಪ್ಪಿದೆ. ಹಳೆಯ ಕಂದಾಚಾರದ ಕನ್ವೆನ್ಶನ್‌ನವರು, ಮುಂದೆ ನಕಲಿ ಜಿಂಕೆಗಳ ಬೇಟೆ ಆಡಿಕೊಂಡು ಅಥವಾ ತಾವೇ ಬೆಳೆಸಿದ ಜಿಂಕೆಗಳನ್ನು ಕೊಂದು ತಮ್ಮ ಹಿಂಸಾತ್ಮಕ ಆಟ ತೋರಿಸಬಹುದೆಂಬ ಐಡಿಯಾದಲ್ಲೇ ಇದ್ದಾರೆ. ಈ ಕನ್ವೆನ್ಶನ್‌ಗಳಲ್ಲಿ ಊಟೋಪಚಾರ ಜೋರಾಗಿರುತ್ತದೆ, ಜಿಂಕೆ ಬೇಟೆಯ ವಿಚಾರವಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ