ಪ್ರಾಡಿಜಿ ಎಂದರೆ ಅದ್ಭುತ, ಅಸಾಧಾರಣ ಎಂದರ್ಥ. ಮಕ್ಕಳಲ್ಲಿನ ಅದ್ಭುತ, ಬೌದ್ಧಿಕ ಸಾಮರ್ಥ್ಯ ಹೊರಹೊಮ್ಮಿಸುವುದೇ ಈ ಸ್ಪರ್ಧೆಯ ಉದ್ದೇಶ. ರಾಜ್ಯದ ನಾನಾ ಸ್ಥಳಗಳಾದ ಹುಬ್ಬಳ್ಳಿ, ರಾಣೆಬೆನ್ನೂರು, ಬಳ್ಳಾರಿ, ಬ್ಯಾಡಗಿ, ಚಿಕ್ಕಬಳ್ಳಾಪುರ, ಗುಲ್ಬರ್ಗಾ, ಉಡುಪಿ, ಕೊಪ್ಪಳ, ಮೈಸೂರು, ರಾಯಚೂರು, ಹೊನ್ನಾವರ ಮುಂತಾದ ಭಾಗಗಳಿಂದ ಸುಮಾರು 3800 ಮಕ್ಕಳು ಭಾಗವಹಿಸಿದ್ದು ಈ ಸ್ಪರ್ಧೆಯ ವಿಶೇಷವಾಗಿದೆ. ಮಕ್ಕಳ ಪ್ರತಿಭೆ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ಅಬಾಕಸ್‌ ಪದ್ಧತಿ ಮೂಲಕ ಕಲಿಕೆಯ ಸಾಮರ್ಥ್ಯ ಹೆಚ್ಚಿಸುವುದು ವಿಶೇಷ ಎನಿಸುತ್ತದೆ. ಅಬಾಕಸ್‌ನಿಂದ ಮಕ್ಕಳಿಗೆ ಕಲಿಕೆಯ ಸಾಮರ್ಥ್ಯ ಹೆಚ್ಚಳ, ಏಕಾಗ್ರತೆ, ಜ್ಞಾಪಕಶಕ್ತಿ ಹೆಚ್ಚಳ, ತಾರ್ಕಿಕ ಶಕ್ತಿ ಮತ್ತು ಕಲಾತ್ಮಕ ಗುಣಗಳ ಬೆಳವಣಿಗೆ, ಭಯ, ಆತಂಕ ನಿವಾರಣೆ ಆಗಲಿದೆ.

ಈ ದಿಸೆಯಲ್ಲಿ ಅಬಾಕಸ್‌ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿರುವ ಎಸ್‌.ಐ.ಪಿ ಅಕಾಡೆಮಿ ಇಂಡಿಯಾ ಪ್ರೈ.ಲಿ. ಇತ್ತೀಟೆಗೆ ಹೆಬ್ಬಾಳದ ಮಾನ್ಯತಾ ಟೆಕ್‌ಪಾರ್ಕ್‌ನ ಮ್ಯಾನ್ಪೋ ಕನ್ವೆನ್ಷನ್‌ ಸೆಂಟರ್‌ನಲ್ಲಿ 17ನೇ ಪ್ರಾದೇಶಿಕ ಅಬಾಕಸ್‌ ಮತ್ತು ಬೌದ್ಧಿಕ ಅಂಕಗಣಿತ ಸ್ಪರ್ಧೆ ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 3800ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಅಬಾಕಸ್‌ ಮೂಲಕ ತಮ್ಮ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಅಚ್ಚರಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಸಿಪ್‌ ಅಕಾಡೆಮಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್‌ ವಿಕ್ಟರ್‌ ಸಂಸ್ಥೆಯ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಸ್ಪರ್ಧೆಯ ವಿಶೇಷ ಈ ಮೂಲಕ ಅಬಾಕಸ್‌ ಬ್ರೈನ್‌ಜಿಮ್ ಸ್ಪರ್ಧೆ ಏರ್ಪಡಿಸಿತ್ತು. ಅಬಾಕಸ್‌ನಿಂದ ಮಕ್ಕಳ ಏಕಾಗ್ರತೆ, ವಿಶ್ವಾಸ, ಬುದ್ಧಿವಂತಿಕೆ, ವೇಗ, ನಿಖರತೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಈ ಸ್ಪರ್ಧೆಯ ಉದ್ದೇಶ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತಮಪಡಿಸುವುದಾಗಿತ್ತು.

ಎಸ್‌.ಐ.ಪಿ. ಅಕಾಡೆಮಿಯು ಅಂತಾರಾಷ್ಟ್ರೀಯ ಅಬಾಕಸ್‌ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಿರುವುದಕ್ಕೆ ಮತ್ತು ಪುಟಾಣಿಗಳು ಎಸ್‌.ಐ.ಪಿ. ಸ್ಪರ್ಧೆಯಲ್ಲಿ 5 ನಿಮಿಷದ ಅವಧಿಯಲ್ಲಿ ಅತಿ ಹೆಚ್ಚಿನ ಸಮಸ್ಯೆಗಳನ್ನು ಪರಿಹಾರ ಮಾಡಿದ ಸಾಧನೆಗಾಗಿ ಲಿಮ್ಕಾ ಸಾಧನೆಯ ಪುಸ್ತಕಕ್ಕೆ ದಾಖಲೆಯಾಗಿದೆ.

ಅಬಾಕಸ್‌ ಮತ್ತು ಬೌದ್ಧಿಕ ಕಸರತ್ತು

ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಅಬಾಕಸ್‌ನ ಬಳಕೆ ಬೆರಳುಗಳಿಂದ ನರಗಳನ್ನು ಜಾಗೃತಗೊಳಿಸಲಿದ್ದು, ಮೆದುಳಿಗೆ ತ್ವರಿತವಾಗಿ ಸಂದೇಶ ರವಾನೆಯಾಗುತ್ತದೆ. ಇದರ ನಿರಂತರ ಪ್ರಕ್ರಿಯೆಯು ಮೆದುಳಿಗೆ ಶಕ್ತಿಯನ್ನು ಒದಗಿಸಲಿದೆ. ವಿಶೇಷವಾಗಿ ಮಕ್ಕಳ ಮೆದುಳಿನಲ್ಲಿ ನಿರಂತರವಾಗಿ ಹೊಸ ಸಂವಹನದ ಸಾಧ್ಯತೆಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಇದರಿಂದ ಅಬಾಕಸ್‌ ಮತ್ತು ಬೌದ್ಧಿಕ  ಕಸರತ್ತು  ಒಟ್ಟಾರೆಯಾಗಿ ಮೆದುಳಿನ ವಿಕಸನ ಮತ್ತು ಬುದ್ಧಿಮತ್ತೆಯ ಸಮತೋಲನಕ್ಕೆ ದಾರಿಯಾಗಲಿದೆ.

ಎಸ್‌.ಐ.ಪಿ. ಅಕಾಡೆಮಿಯ ಪರಿಚಯ

ಎಸ್‌.ಐ.ಪಿ ಅಕಾಡೆಮಿ ಇಂಡಿಯಾ ಸಂಸ್ಥೆ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಳಗೊಳಿಸಬೇಕೆಂಬ ಉದ್ದೇಶದಿಂದ ಸ್ಥಾಪನೆಯಾದ ಸಂಸ್ಥೆಯಾಗಿದೆ. ವಿಶ್ವದ 10 ರಾಷ್ಟ್ರಗಳಲ್ಲಿ ತನ್ನ ಅಕಾಡೆಮಿ ಮೂಲಕ ಅಬಾಕಸ್‌ ಕಲಿಕೆಯನ್ನು ಹೇಳಿಕೊಡುತ್ತಿದೆ. 2003ರಲ್ಲಿ ಚೆನ್ನೈನಲ್ಲಿ ಆರಂಭಗೊಂಡ ಈ ಸಂಸ್ಥೆ ಇಂದು ದೇಶದ 23 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತದಲ್ಲಿ 750ಕ್ಕೂ ಹೆಚ್ಚಿನ ಸಿಪ್‌ ಅಕಾಡೆಮಿಗಳಲ್ಲಿ 2 ಲಕ್ಷಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕರ್ನಾಟಕವೊಂದರಲ್ಲೇ 80 ಕೇಂದ್ರಗಳಿವೆ. ಇಲ್ಲಿ 512 ವರ್ಷದ ಮಕ್ಕಳಿಗೆ ಅಬಾಕಸ್‌ ತರಬೇತಿಯನ್ನು ನೀಡುತ್ತಿದೆ. ಸಿಪ್‌ ಅಕಾಡೆಮಿ ಸೇರಿದ ನಂತರ ಮುಂಚಿನಕ್ಕಿಂತ 5 ಪಟ್ಟು ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಭರವಸೆಯನ್ನು ಸಂಸ್ಥೆ ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ