ಕಠಿಣ ಶ್ರಮದಿಂದ ರಾಜಸ್ಥಾನದ ಸಾವಿರಾರು ಹಳ್ಳಿಗಳಿಗೆ ನೀರು ತರಿಸಿದ ಭಾಗೀರಥಿ ಗ್ರಾಸ್‌ ರೂಟ್‌ ಚೇಂಜ್‌ ಮೇಕರ್‌ ಅಚೀವರ್ ಅವಾರ್ಡ್‌ ಅಮಲಾ ರುಯಿಯಾ ಹುಟ್ಟಿದ್ದು 1946ರಲ್ಲಿ. ಉ.ಪ್ರ. ರಾಜ್ಯದ ಒಂದು ಅನುಕೂಲಸ್ಥರ ಮನೆತನ ಈಕೆಯ ತವರು. ಈಕೆ ಕಲಿತದ್ದೆಲ್ಲ ದಟ್ಟ ಸಾಹಿತ್ಯಕಾರಕ, ಆಧ್ಯಾತ್ಮಕ ವಾತಾವರಣದಲ್ಲಿ. ಈಕೆ ಚಿಕ್ಕ ವಯಸ್ಸಿನಿಂದಲೇ ಸಮಾಜದತ್ತ ತನ್ನ ಹೊಣೆ ಏನು ಎಂಬುದನ್ನು ಗುರುತಿಸಿಕೊಂಡರು. ಹೀಗಾಗಿ ಮೊದಲ ಅವಕಾಶ ದೊರಕಿದ ತಕ್ಷಣ ಇವರು ಸಾಮಾಜಿಕ ಕಾರ್ಯಗಳಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು.

ಮರುಭೂಮಿಯೇ ಪ್ರಧಾನವಾಗಿರುವ ರಾಜ್ಯ ರಾಜಸ್ಥಾನ. ಅಲ್ಲಿ ಪ್ರತಿ ಊರಿನಲ್ಲೂ ನೀರಿನ ಕೊರತೆ ತಾಂಡವವಾಡುತ್ತದೆ. ಬಳಸುವ ನೀರಿರಲಿ, ಕುಡಿಯಲು ನೀರು ಸಿಗುವುದೇ ಇಲ್ಲಿ ಅಪರೂಪ! ಆದ್ದರಿಂದ ಅಲ್ಲಿನ ಪ್ರತಿ ಮನೆಯ ಹೆಣ್ಣೂ, ಮೈಲುಗಟ್ಟಲೇ ನಡೆದು, ತಲೆ ಮೇಲೆ 2-3 ಬಿಂದಿಗೆ ಹೊತ್ತು ಮನೆಗೆ ನೀರು ಪೂರೈಸಬೇಕಾಗುತ್ತದೆ.

ರಾಜಸ್ಥಾನದ ಗ್ರಾಮೀಣ ಸಮುದಾಯದ ಹೆಂಗಸರ ಎದುರು ಸದಾ ಕಾಡುವ ಸಮಸ್ಯೆ ಎಂದರೆ ನೀರಿನದು. 16ರ ಹೊಸ್ತಿಲಿಗೆ ಕಾಲಿರಿಸಿದ ಅಮಲಾ, ಇದರ ನಿವಾರಣೆಗೆ ಕಂಕಣತೊಟ್ಟರು. 1999-2000 ಹಾಗೂ 2003ರಲ್ಲಿ ರಾಜಸ್ಥಾನವನ್ನೂ ಆಕ್ರಮಿಸಿದ ಬರ ಇವರನ್ನು ಗಂಭೀರವಾಗಿ ಆಲೋಚಿಸುವಂತೆ ಮಾಡಿತು.

ಈ ಘಟನೆಯಿಂದ ಅಲ್ಲಿನ ಪ್ರತಿ ಹಳ್ಳಿಗೂ ನೀರು ತರಿಸಲೇಬೇಕೆಂಬ ಭಗೀರಥ ಪ್ರಯತ್ನಕ್ಕೆ ಇಳಿದರು. ಜಲ ಸುರಕ್ಷತೆ ಒದಗಿಸುವ  ಚೆಕ್‌ ಡ್ಯಾಮ್ ನಿರ್ಮಿಸಲು ಎಲ್ಲ ಹಳ್ಳಿಗರ ಮನ ಓಲೈಸಲು, ಆಕಾರ್‌ ಚ್ಯಾರಿಟೆಬಲ್ ಟ್ರಸ್ಟ್ ಸ್ಥಾಪಿಸಿದರು.

ಬದಲಾದ ಹಳ್ಳಿಗಳ ಸ್ವರೂಪ

ಚೆಕ್‌ ಡ್ಯಾಮ್ ನಿರ್ಮಿಸಲೇಬೇಕೆಂಬ ಈಕೆಯ ಪ್ರಮುಖ ಪ್ರಯತ್ನ, ಇಡೀ ರಾಜಾಸ್ಥಾನದ 450 ಹಳ್ಳಿಗಳ 2 ಮಿಲಿಯನ್‌ ಗೂ ಹೆಚ್ಚಿನ ಜನರ ಜೀವನವನ್ನೇ ಬದಲಾಯಿಸಿತು. ಸೀಸನ್‌ ಗೆ ತಕ್ಕಂತೆ ರಚಿಸಲಾಗಿದ್ದ ಸಣ್ಣಪುಟ್ಟ ನೀರಿನ ಚ್ಯಾನೆಲ್ ‌ಗಳನ್ನೇ ಚೆಕ್‌ ಡ್ಯಾಮ್ ಆಗಿ ಬದಲಾಯಿಸಿ, ಭೂಮಿಯ ಪದರಗಳಲ್ಲಿ ನೀರಿನ ಪಸೆ ಇಳಿಸುತ್ತದೆ. ಇದರಿಂದ ಇಡೀ ವರ್ಷ ನೀರಿನ ಸೆಲೆ ಬತ್ತದೆ ಸಿಗುತ್ತದೆ. ಅಮಲಾ ಹೀಗೆ ಆ ಸಮುದಾಯಗಳಿಗೆ ಶ್ರಮಸಂಸಾಧನಗಳ ಪಾತ್ರ ವಹಿಸುವಂತೆ ಮಾಡುವಲ್ಲಿ ಯಶಸ್ವಿಯಾದರು, ಇದರಿಂದ ಹಲವು ಪರಿಯೋಜನೆಗಳಿಗೆ ಸ್ವಾಮಿತ್ವ ಸ್ಥಿರತೆ ಸಿಕ್ಕಂತಾಯಿತು.

ಈಕೆ ಆ ರಾಜ್ಯದ ಸಾವಿರಾರು ಹಳ್ಳಿಗಳಿಗೆ ನೀರು ತಲುಪುವಂತೆ ಮಾಡಿದ್ದಾರೆ. ಈಕೆ ಸಾಂಪ್ರದಾಯಿಕ ಜಲ ಸಂಚಯನ ಟೆಕ್ನಿಕಲ್ಸ್ ನ್ನು ಬಳಸಿಕೊಳ್ಳುತ್ತಾ, ಚೆಕ್‌ ಡ್ಯಾಮ್ ನಿರ್ಮಿಸುತ್ತಾ, ಆ ಹಳ್ಳಿಗಳ ಸ್ವರೂಪವನ್ನೇ ಬದಲಾಯಿಸಿದರು. ಅಲ್ಲಿನ ಎಲ್ಲಾ ಪ್ರಾದೇಶಿಕ ಸಮುದಾಯಗಳ ನೆರವಿನಿಂದ ಇವರು ಈ ಕೆಲಸದಲ್ಲಿ ಯಶಸ್ಸು ಪಡೆದರು.

ಹಿಂದಿರುಗಿ ನೋಡಲೇ ಇಲ್ಲ

ಅಮಲಾರ ಮೊದಲ ಪ್ರಾಜೆಕ್ಟ್ ಮಂಡಾರ್‌ ಗ್ರಾಮವಾಗಿತ್ತು. ಈ ಪ್ರಾಜೆಕ್ಟ್ ಗೆ ಅಲ್ಲಿ ದೊಡ್ಡ ಯಶಸ್ಸು ದೊರಕಿತು. ಅಲ್ಲಿನ ರೈತರು ಇವರ ಟ್ರಸ್ಟ್ ಮೂಲಕ ನಿರ್ಮಿಸಲಾದ 2 ಚೆಕ್‌ ಡ್ಯಾಮ್ ಗಳ ನೆರವಿನಿಂದ ಒಂದು ವರ್ಷದಲ್ಲಿ 12 ಕೋಟಿ ರೂ. ಗಳಿಸಿದರು! ಅದಾದ ಮೇಲೆ ಆಕೆ ಎಂದೂ ಹಿಂದಿರುಗಿ ನೋಡಲೇ ಇಲ್ಲ! ಈ ಸಮಿತಿಯು ರಾಜಸ್ಥಾನದ 100 ಹಳ್ಳಿಗಳಲ್ಲಿ 200 ಚೆಕ್‌ ಡ್ಯಾಮ್ ಗಳನ್ನು ನಿರ್ಮಿಸಿತು. 2 ಲಕ್ಷಕ್ಕೂ ಹೆಚ್ಚು ಮಂದಿಗೆ ಲಾಭ ತಂದುಕೊಟ್ಟಿತು. ಈಗ ಅದು ಪ್ರತಿ ವರ್ಷ 300 ಕೋಟಿ ರೂ.ಗಳ ಒಟ್ಟು ಆದಾಯಕ್ಕೆ ನಾಂದಿ ಹಾಡಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ