ಭಾರತ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿ 2025 ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಕಲೆ, ಶಿಕ್ಷಣ, ಸಮಾಜ ಸೇವೆ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಪ್ರಶಸ್ತಿ ಪಡೆದ ಗಣ್ಯರನ್ನು ದೆಹಲಿಗೆ ಕರೆಸಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ಸಚಿವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಜನವರಿಯಲ್ಲಿ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಆ ಪ್ರಶಸ್ತಿಯನ್ನು ಸೋಮವಾರ ರಾಷ್ಟ್ರಪತಿ ಭವನದಲ್ಲಿ ನೀಡಿ ಗೌರವಿಸಲಾಯಿತು.
ಈ ವೇಳೆ ಚಿತ್ರರಂಗ, ಕ್ರೀಡಾ ಲೋಕ ಸೇರಿದಂತೆ ಪ್ರಶಸ್ತಿ ವಿಜೇತ ಗಣ್ಯರು ಗಮನ ಸೆಳೆದರು. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್, ತೆಲುಗಿನ ದಿಗ್ಗಜ ಬಾಲಕೃಷ್ಣ, ಕ್ರೀಡಾ ಕ್ಷೇತ್ರದಿಂದ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಜಿತ್ ಕುಮಾರ್ ಕಪ್ಪು ಬಣ್ಣದ ಸೂಟ್ ಧರಿಸಿ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪಡೆದರೆ, ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಸಂಪ್ರದಾಯಿಕ ಉಡುಗೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ದಶಕಗಳಿಂದ ಸಾಧನೆ ಹಾಗೂ ಸೇವೆ ಮಾಡಿದವರಿಗೆ ಈ ಪ್ರತಿಷ್ಠಿತ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ತಮಿಳು ನಟ ಅಜಿತ್ ಕುಮಾರ್, ತೆಲುಗು ನಟ ಬಾಲಕೃಷ್ಣ ಜೊತೆಗೆ ಸಿನಿಮಾದಲ್ಲಿದಲ್ಲಿ ಶೇಖರ್ ಕಪೂರ್, ಶೋಭನಾ ಅವರಿಗೂ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಹಾಗೇ ಬಾಲಿವುಡ್ ಗಜಲ್ ಗಾಯಕ ದಿವಂಗತ ಪಂಕಜ್ ಉದಾಸ್ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಿಸಲಾಗಿತ್ತು. ಈ ಪ್ರಶಸ್ತಿಯನ್ನು ಅವರ ಪತ್ನಿ ರಾಷ್ಟ್ರಪತಿಗಳಿಂದ ಸ್ವೀಕರಿಸಿದರು.
ಪದ್ಮಭೂಷಣದ ಜೊತೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಗಾಯಕ ಅರಿಜಿತ್ ಸಿಂಗ್ ಹಾಗೂ ರಿಕ್ಕಿ ಕೇಜ್ ಸ್ವೀಕರಿಸಿದರು. ಕೇವಲ ಕಲೆಯಷ್ಟೇ ಅಲ್ಲದೆ, ಕ್ರೀಡೆ, ವೈದ್ಯಕೀಯ, ಉದ್ಯಮ, ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರದ ಗಣ್ಯರನ್ನು ಈ ಪ್ರಶಸ್ತಿ ಸಮಾರಂಭದಲ್ಲಿ ಗೌರವಿಸಲಾಯಿತು.
ಜನವರಿಯಲ್ಲಿ 139 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 28ರಂದು ಮೊದಲ ಹಂತದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಇದರಲ್ಲಿ 71 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಳಿದ ಸಾಧಕರಿಗೆ ಎರಡನೇ ಹಂತದ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ.
ಮೊದಲ ಹಂತದಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದವರೆಂದರೆ;
ಡಾ. ಎಲ್. ಸುಬ್ರಮಣಿಯಂ - ಕರ್ನಾಟಕ- ಆರ್ಟ್
ಎಂ. ಟಿ. ವಾಸುದೇವನ್ ನಾಯರ್ (ಮರಣೋತ್ತರ) - ಕೇರಳ - ಸಾಹಿತ್ಯ & ಸಿನಿಮಾ
ನಂದಮೂರಿ ಬಾಲಕೃಷ್ಣ - ಆಂಧ್ರ ಪ್ರದೇಶ - ಸಿನಿಮಾ
ಅಜಿತ್ ಕುಮಾರ್ - ತಮಿಳುನಾಡು- ಸಿನಿಮಾ
ಶೇಖರ್ ಕಪೂರ್ - ಮಹಾರಾಷ್ಟ್ರ- ಸಿನಿಮಾ
ಒಸಾಮು ಸುಜುಕಿ (ಮರಣೋತ್ತರ) - ಜಪಾನ್ - ಉದ್ಯಮ & ಕೈಗಾರಿಕೆ
ಡಾ. ಡಿ. ನಾಗೇಶ್ವರ ರೆಡ್ಡಿ- ತೆಲಂಗಾಣ - ವೈದ್ಯಕೀಯ