ಪ್ರತಿಯೊಬ್ಬ ಮಹಿಳೆಯೂ ತನ್ನ ಹಣದ ಬಗ್ಗೆ ಪೂರ್ಣ ಮಾಹಿತಿ ಪಡೆದಿರುವುದರ ಜೊತೆಗೆ ಅದರ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿರುವುದು ಅವಶ್ಯಕ. ಆ ಬಗ್ಗೆ ಮಹಿಳೆಯರು ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟಿರಬೇಕು.

ನಿಮ್ಮದೇ ಬ್ಯಾಂಕ್‌ ಅಕೌಂಟ್‌

ನೀವು ಉದ್ಯೋಗಸ್ಥ ಮಹಿಳೆಯಾಗಿದ್ದಲ್ಲಿ ನಿಮ್ಮ ಹೆಸರಿನಲ್ಲಿ ಬ್ಯಾಂಕ್‌ ಅಕೌಂಟ್‌ ಇದ್ದೇ ಇರಬೇಕು. ಈ ಖಾತೆಯಲ್ಲಿ ನಿಮ್ಮ ಉಳಿತಾಯವನ್ನು ಸುರಕ್ಷಿತವಾಗಿ ಇರಿಸಬಹುದು. ನಿಮ್ಮ ಕುಟುಂಬಕ್ಕೆ ಆರ್ಥಿಕ ನೆರವು ನೀಡಬಹುದು. ನೀವು ಕ್ರೆಡಿಟ್‌ ಕಾರ್ಡ್ ತೆಗೆದುಕೊಳ್ಳಬೇಕೆಂದಿದ್ದರೆ ಅದನ್ನು ನಿಮ್ಮ ಹೆಸರಿನಲ್ಲೇ ಪಡೆಯಿರಿ. ಇದರಿಂದ ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮಗೊಳ್ಳುತ್ತದೆ ಮತ್ತು ನಿಮಗೆ ಸಾಲದ ಅವಶ್ಯಕತೆ ಬಿದ್ದಾಗಲೂ ಸಹಾಯವಾಗುತ್ತದೆ.

ತೀರ್ಮಾನದಲ್ಲಿ ನಿಮ್ಮ ಪಾತ್ರ

ಹಣಕಾಸಿನ ವ್ಯವಹಾರ ಮತ್ತು ಹಣ ಹೂಡಿಕೆಯ ವಿಷಯಗಳನ್ನು ತಮ್ಮ ಪಾರ್ಟ್‌ನರ್‌ ಅಥವಾ ಕುಟುಂಬದವರ ಪಾಲಿಗೆ ಬಿಡುವುದು ಮಹಿಳೆಯರ ಸ್ವಭಾವವಾಗಿರುತ್ತದೆ. ನೀವು ಸಹ ಹೀಗೆ ಹಣದ ಜವಾಬ್ದಾರಿಯನ್ನು ಬೇರೆಯವರ ಪಾಲಿಗೆ ಕೊಡುವುದಾದರೆ, ಆ ವ್ಯವಹಾರದ ಬಗ್ಗೆ ನಿಮಗೆ ತಿಳಿವು ಇರಬೇಕು. ನಂಬಿಕೆ ಒಳ್ಳೆಯದೇ, ಆದರೆ ಎಚ್ಚರಿಕೆಯೂ ಅವಶ್ಯಕ. ವಿಮಾ ಪಾಲಿಸಿ ಅಥವಾ ಮನೆ ಕೊಳ್ಳುವ ವಿಷಯವನ್ನು ನಿಮ್ಮ ಆಡಿಟರ್‌ ಅಥವಾ ಫೈನಾನ್ಸ್ ಅಡ್ವೈಸರ್‌ ಜೊತೆ ಮಾತನಾಡಿ. ಆ ಭೇಟಿಯ ಸಮಯದಲ್ಲಿ ನಿಮ್ಮ ಪಾರ್ಟ್‌ನರ್‌ನೊಂದಿಗೆ ನೀವು ಇರಬೇಕು ಮತ್ತು ನಿಮ್ಮ ಅಭಿಪ್ರಾಯವನ್ನೂ ಅವರ ಮುಂದಿಡಬೇಕು.

ಆಯವ್ಯಯದ ಬಗ್ಗೆ ಗಮನ

ನಿಮ್ಮ ಆದಾಯ ಮತ್ತು ವೆಚ್ಚದ ಬಗೆಗೆ ನಿಮಗೆ ಸಂಪೂರ್ಣ ಗಮನವಿರಬೇಕು. ಆಗಲೇ ನಿಮಗೆ ನಿಮ್ಮ ಖರ್ಚಿನ ಮೇಲೆ ಹತೋಟಿ ಇರಿಸಲು ಸಾಧ್ಯವಾಗುವುದು. ಇದರಿಂದ ನಿಮಗೆ ಎಷ್ಟು ಉಳಿತಾಯ ಮಾಡಬಹುದೆಂಬ ಅಂದಾಜು ದೊರೆಯುತ್ತದೆ ಮತ್ತು ನಿಮ್ಮ ಸರಾಸರಿ ಮಾಸಿಕ ಖರ್ಚು ವೆಚ್ಚದ ಲೆಕ್ಕ ಆಗುತ್ತದೆ.

ಮಕ್ಕಳ ಭವಿಷ್ಯ ನಿಧಿ

ನಿಮ್ಮ ಮಕ್ಕಳ ಮುಂದಿನ ಶಿಕ್ಷಣಕ್ಕಾಗಿ ಹಣ ಹೂಡಿಕೆ ಮಾಡಲು ನಿಮ್ಮ ಪಾರ್ಟ್‌ನರ್‌ ಆಸಕ್ತಿ ವಹಿಸದಿದ್ದಲ್ಲಿ, ಈ ಬಗ್ಗೆ ನೀವು ಅವರೊಂದಿಗೆ ಮಾತನಾಡಿ ಮತ್ತು ಆದಷ್ಟು ಬೇಗನೆ ಅದನ್ನು ಪ್ರಾರಂಭಿಸಿ. ಈ ಭವಿಷ್ಯ ನಿಧಿಗೆ ನಿಯಮಿತವಾಗಿ ಉಳಿತಾಯ ಮಾಡುತ್ತಾ ಬರಬೇಕು. ಇದನ್ನು ಬೇಗನೆ ಪ್ರಾರಂಭಿಸಿದಾಗ ಮಾತ್ರ ಹೆಚ್ಚು ಹಣ ಉಳಿತಾಯ ಮಾಡಲು ಸಾಧ್ಯ. ಮಕ್ಕಳು 15-16 ವಯಸ್ಸಿನವರಾದಾಗ ನೀವು ಪ್ರಾರಂಭಿಸಿದರೆ, ಆಗ ಕಡಿಮೆ ಉಳಿತಾಯ ಮಾಡಬಲ್ಲಿರಿ.

ರಿಟೈರ್‌ಮೆಂಟ್‌ ಪ್ಲಾನ್‌

ನೀವು ಸದಾ ಕುಟುಂಬ ನಿರ್ವಹಣೆಯಲ್ಲೇ ಮುಳುಗಿರುತ್ತೀರಿ ನಿಜ. ಆದರೆ, ಮುಂದೆ ಒಂದು ದಿನ ನೀವು ವಿಶ್ರಾಂತಿ ಪಡೆಯಲಿದ್ದೀರಿ ಎಂಬುದನ್ನು ಮರೆಯಬೇಡಿ. ಆದ್ದರಿಂದ ನೀವು ಮತ್ತು ನಿಮ್ಮ ಪಾರ್ಟ್‌ನರ್‌ ನಿವೃತ್ತ ಜೀವನಕ್ಕಾಗಿ ಉಳಿತಾಯ ಮಾಡುವುದರ ಬಗ್ಗೆ ಗಮನ ನೀಡಿ. ಈ ಪೆನ್ಶನ್‌ ಪ್ಲಾನ್‌ಗಾಗಿ ನೀವು ಎಷ್ಟು ಉಳಿತಾಯ ಮಾಡಬೇಕೆಂಬುದರ ಬಗ್ಗೆ ಸಲಹೆಗಾರರೊಂದಿಗೆ ಚರ್ಚಿಸಿ. ಮುಂದೆ ನೀವು ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ನಿವೃತ್ತ ಜೀವನ ನಡೆಸಲು ಅನುಕೂಲವಾಗುವಂತೆ ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ