ಮದುವೆ ಹೊರೆ ಎನಿಸಿದಾಗ….

ರೋಗಗ್ರಸ್ತ ಮದುವೆಯೊಂದಿಗೆ ಇರುವುದು, ಮದುವೆಯೊಂದನ್ನು ಕೊನೆಗೊಳಿಸುವುದಕ್ಕಿಂತ ಒಳ್ಳೆಯದೆ? ಈ ಪ್ರಶ್ನೆ ಹಲವು ಪುರುಷರು ಮತ್ತು ಮಹಿಳೆಯರ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಯಾವ ಗಂಡ-ಹೆಂಡತಿಯರು ಸದಾ ಪರಸ್ಪರರ ದೂಷಿಸುತ್ತಿರುತ್ತಾರೊ, ಪರಸ್ಪರರ ತಪ್ಪುಗಳನ್ನು ಹೆಕ್ಕಿ ತೆಗೆಯುತ್ತಿರುತ್ತಾರೊ, ಅವರು ಈ ವಿವಾಹದ ಸುಳಿಯಲ್ಲಿ ಯಾಕಾದರೂ ಸಿಲುಕಿದೆನೊ, ಈ ವಿವಾಹ ಸಂಬಂಧ ಮುರಿದುಕೊಂಡುಬಿಟ್ಟರೆ ಹೇಗೆ ಎಂದು ಅವರಿಗೆ ಅನಿಸುತ್ತಿರುತ್ತದೆ.

ಇದು ಜೀವನದ ಉತ್ತರ ಸಿಗಲಾರದ ಪ್ರಶ್ನೆಯಂತೆಯೇ ಇದೆ. ಮದುವೆ, ಇದು ಯಾವುದೇ ಸಂಸ್ಕಾರವಲ್ಲ, ದೇವರ ಕೃಪೆ ಅಲ್ಲ, ಅದು ಜೀವನದ ಖಾಯಂ ಭಾಗವಲ್ಲ. ಅದನ್ನು ಮೊದಲಿನಿಂದಲೂ ಮುರಿದುಕೊಂಡು ಬರಲಾಗುತ್ತಿದೆ. ನಮ್ಮ ಪೌರಾಣಿಕ ಇತಿಹಾಸದಲ್ಲಂತೂ ಗಂಡ-ಹೆಂಡತಿ ಸದಾ ವಿವಾದಗ್ರಸ್ತರು. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಆದರ್ಶ ಸತಿಪತಿಗಳಾಗಿ ಗೋಚರಿಸಬಹುದು. ಯಾರು ದೇವರ ಅವತಾರದಲ್ಲಿದ್ದಾರೊ, ಅವತಾರಗಳ ಸಂತಾನ ಎಂದು ಕರೆಯಲ್ಪಡುತ್ತಾರೊ, ಅವರೂ ಕೂಡ ಆದರ್ಶ ಸತಿಪತಿಯ ಉದಾಹರಣೆಯನ್ನು ಪ್ರಸ್ತುತಪಡಿಸಲು ಆಗಿಲ್ಲ.

ಹೀಗಾಗಿ ಯಾರೊಬ್ಬರೂ ವಿವಾಹ ಸಂಬಂಧ ಮುರಿದುಬಿದ್ದದ್ದಕ್ಕಾಗಿ ಅಪರಾಧಿ ಭಾವನೆಯನ್ನು ತಾಳಬಾರದು. ಮದುವೆ ಸಂಬಂಧದಿಂದಾಗಿ ಮಕ್ಕಳು ಹುಟ್ಟಿದರೋ ಇಲ್ಲವೋ, ಆ ರೋಗಗ್ರಸ್ತ ದೇಹವನ್ನು ಹೊತ್ತುಕೊಂಡು ಹೋಗುವುದಕ್ಕಿಂತ ಅದರಿಂದ ಮುಕ್ತಿ ಪಡೆದುಕೊಳ್ಳುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರುವುದು ಸೂಕ್ತ.

ಒಂದು ವೇಳೆ ಮುಸ್ಲಿಂರ ಒಂದು ಪಂಗಡ ತ್ರಿವಳಿ ತಲಾಖ್‌ನ್ನು ಒಪ್ಪುತ್ತದೆ ಎಂದಾದರೆ, ಅದು ತಪ್ಪಲ್ಲ. ಏಕೆಂದರೆ ಅದು ಒಮ್ಮುಖ ನಿರ್ಧಾರವಾಗಿರುವುದರ ಜೊತೆಗೆ ರೋಷ, ಬೇಸರಭರಿತ ಸಂಬಂಧ ಮುರಿದುಕೊಳ್ಳಲು ಸಹಜ ಮತ್ತು ಸುಲಭ ವಿಧಾನವಾಗಿದೆ.

ಭಾರತೀಯ ಜನತಾ ಪಾರ್ಟಿಯಂತೂ ಇದನ್ನು ಮಾಡಲು ಸಾಧ್ಯವಿಲ್ಲ. ಆದರೆ ಬೇರೆ ಪಕ್ಷಗಳಿಗೆ ಮಾತ್ರ ಇದು ಬೇಕಿದೆ. ತಲಾಖ್‌ನ ಈ ಹಕ್ಕು ಪುರುಷರ ಜೊತೆ ಜೊತೆಗೆ ಮಹಿಳೆಗೂ ದೊರಕಬೇಕು ಎನ್ನುವುದು ಅವುಗಳ ಪ್ರತಿಪಾದನೆ. ಏಕೆಂದರೆ ಕಾನೂನು ಪ್ರಕಾರ ಸಮಾನ ಹಕ್ಕು ದೊರೆಯಬೇಕು. ಭೇದಭಾವದ ಅನ್ವಯದಡಿ ಹಿಂದೂ ಅಜೆಂಡಾವನ್ನು ಅನ್ವಯಿಸಲು ಕೊಡಬಾರದು.

ಈ ವ್ಯವಸ್ಥೆ ಹಿಂದೂಗಳಿಗೂ ಕೂಡ ದೊರೆಯಬೇಕು. ಏಕೆಂದರೆ ಹೊರೆಯಾದ ಮದುವೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕೊನೆಗೊಳಿಸಲು ಸಾಧ್ಯವಾಗಬೇಕು.

ಆದರೆ ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಯಾವ ಮದುವೆ ಹೊರೆಯಾಗಿದೆ? ಯಾವ ಮದುವೆ ರೋಗಗ್ರಸ್ತವಾಗಿದೆ? ಗುಣಪಡಿಸಲಾಗದ ರೋಗವೊಂದರಿಂದ ಬಳಲುತ್ತಿರು ಮಗ ಅಥವಾ ತಂದೆಯನ್ನು ಹೇಗೆ ಸಹಿಸಿಕೊಳ್ಳುತ್ತೇವೋ ಹಾಗೆಯೇ ಮದುವೆ ಎನ್ನುವುದು ಎಲ್ಲಿಯವರೆಗೆ ಜೀವಂತಾಗಿರುತ್ತದೋ, ಅಲ್ಲಿಯವರೆಗೆ ಅದನ್ನು ಸಹಿಸಿಕೊಳ್ಳಲೇಬೇಕು ಹಾಗೂ ಅದನ್ನು ಒಪ್ಪಿಕೊಳ್ಳಲೇಬೇಕು. ಅವಶ್ಯಕತೆ ಇರುವುದು ಚಿತಿತ್ಸೆ. ಅದಕ್ಕೆ ವಿಷ ಉಣಿಸುವುದರಲ್ಲಿ ಇಲ್ಲ.

ವಾಸ್ತದಲ್ಲಿ ಮದುವೆ ಮುರಿದುಕೊಳ್ಳುವುದು ನಿಕಟ ಸಂಬಂಧಿಯ ಮೃತ್ಯುವಿಗೆ ಸಮಾನ. ಅಷ್ಟೇ ಅಲ್ಲ, ಅದಕ್ಕೂ ಮಿಗಿಲಾದುದು. ಯಾವಾಗ ಮದುವೆ ಎನ್ನುವುದು ಸೋಂಕಿನ ಕಾರಣದಿಂದ ತಂತಾನೇ ಸತ್ತು ಹೋಗುತ್ತದೋ ಆಗ ಅದನ್ನು ಊದಿಬಿಡಬಹುದು. ಈ ಸೋಂಕು ಒಬ್ಬ ಸಂಗಾತಿ ಇನ್ನೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳಬಹುದು. ಪ್ರತ್ಯೇಕವಾಗಿ ಇರುವುದಾಗಿರಬಹುದು.

ಕೇವಲ ಅಸಮ್ಮತಿ, ನಿಂದಿಸುವುದು, ಜೋರಾಗಿ ಮಾತನಾಡುವುದು, ಅತ್ತು ಕರೆದು ಮಾಡುವುದು, ತಡವಾಗಿ ಮನೆಗೆ ಬರುವುದು, ಗದರಿಸುವುದು, ಇವೇ ಮುಂತಾದವುಗಳನ್ನು ವಿವಾಹದ ಚಿಕ್ಕ ದೊಡ್ಡ ರೋಗದ ಕಾರಣಗಳೆಂದು ಪಟ್ಟಿ ಮಾಡಬಹುದು. ಅವನ್ನು ಮದುವೆ ಮುರಿದು ಬೀಳುತ್ತಿರುವ ಚಿಹ್ನೆಗಳೆಂದು ಭಾವಿಸಬಾರದು.

ಬಹಳಷ್ಟು ಯುವಕ ಯುವತಿಯರು ಪರಸ್ಪರ ಒಪ್ಪಿಗೆಯ ಮೇರೆಗೆ ಮದುವೆಯನ್ನು ಮುರಿದುಕೊಳ್ಳುತ್ತಾರೆ. ಈ ಆವೇಶ ದೀರ್ಘಾವಧಿತನಕ ಕಷ್ಟ ಕೊಡುತ್ತದೆ. ಅರೇಂಜ್ಡ್ ಮದುವೆ ಅಥವಾ ಲವ್ ಮ್ಯಾರೇಜ್‌ನಲ್ಲಿ ಗಂಡ-ಹೆಂಡತಿ ಸಮಾಗಮದ ಮುಖಾಂತರ ಪ್ರೇಮಿಗಳಾಗಿ ಬಿಡುತ್ತಾರೆ. ಒಂದು ಸಲದ ಪ್ರೇಮ ಕೆಲವು ವರ್ಷಗಳ ಬಳಿಕ ಎಷ್ಟೊಂದು ಕಹಿ ಸಂಬಂಧವಾಗಿ ಪರಿಣಮಿಸುತ್ತದೆ ಎಂದರೆ, ಮನೆ ಬದಲಿಸುವಷ್ಟು ಸುಲಭವಾಗಿ ಸಂಬಂಧವನ್ನು ಮುರಿದುಕೊಳ್ಳುವುದು ತಪ್ಪು.

ಎಲ್ಲಿಯವರೆಗೆ ಎರಡನೇ ಬಾಗಿಲು ತೆರೆಯುವುದಿಲ್ಲವೋ ಅಲ್ಲಿಯವರೆಗೆ ಸುರಕ್ಷತೆ ನೀಡಿದ ಬಾಗಿಲನ್ನು ಮುರಿದು ಹಾಕುವುದು ಗಂಡ-ಹೆಂಡತಿ ಇಬ್ಬರಿಗೂ ಮೂರ್ಖತನದ ನಿರ್ಧಾರವೇ ಸರಿ. ಮದುವೆ ಎನ್ನುವುದು ವ್ಯಾವಹಾರಿಕತೆಯ ತತ್ವದ ಮೇಲೆ ನಿಂತಿದೆ. ಅದು ಧಾರ್ಮಿಕ ಅಥವಾ ಕಾನೂನು ಬಂಧನವಲ್ಲ. ವಿವಾಹದಲ್ಲಿ ವಿವಾದ ಇರಬೇಕೆಂದು ಇಬ್ಬರೂ ಬಯಸುತ್ತಾರೆ. ಧರ್ಮ ಮತ್ತು ಕಾನೂನಿನ ಮಧ್ಯಸ್ಥಿಕೆ ಇರಬೇಕೆನ್ನುವುದೇ ಇದರ ಹಿಂದಿನ ತಿರುಳು.

ಗಂಡ-ಹೆಂಡತಿಯ ವಿವಾದದಲ್ಲಿ ಹೊರಗಿನವರು, ಇಬ್ಬರ ತಾಯಿ-ತಂದೆ, ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿ, ಕೌನ್ಸೆಲರ್‌, ಪೂಜಾರಿ, ಪುರೋಹಿತರು, ಪೊಲೀಸರು, ನ್ಯಾಯಾಲಯ ಇವರಾರೂ ಬರದೆ ಇದ್ದರೆ ಸೂಕ್ತ. ಇವರೆಲ್ಲ ಗಂಡ-ಹೆಂಡತಿಯ ಜಗಳದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.

ಗುಣದೋಷಗಳ ಬಗ್ಗೆ ಚರ್ಚೆ ಮಾಡಬೇಕಿತ್ತು!

`ಜೀವನ ಮತ್ತು ಮರಣ’ದ ಬಗ್ಗೆ ಯಾರೊಬ್ಬರ ನಿಯಂತ್ರಣ ಇಲ್ಲ, ಎನ್ನುವುದೊಂದು ಹಳೆಯ ಗಾದೆ ಮಾತು. ಆದರೆ ಸಾವಿನ ವಿಷಯವನ್ನು ನಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆಯಲ್ವ? 54 ವರ್ಷದ ಶ್ರೀದೇವಿ ದುಬೈನ ಹೋಟೆಲೊಂದರ ಕೋಣೆಯಲ್ಲಿ ಬಾಥ್‌ ಟಬ್‌ನಲ್ಲಿ ಸತ್ತುಹೋದ ಘಟನೆ ಟಿ.ವಿ.ಯಲ್ಲಿ ಗಂಟೆಗಳ ಕಾಲ, ಪತ್ರಿಕೆಯಲ್ಲಿ ಹಲವು ದಿನಗಳ ಕಾಲ ಚರ್ಚೆ ನಡೆಯಿತು. ಆ ನಟಿಯ ಬಗ್ಗೆ ಅಲ್ಲಸಲ್ಲದ ಚರ್ಚೆ ಹೇಗೆ ನಡೆಯಿತೆಂದರೆ, ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆಯೋ ಎಂಬಂತೆ.

ಶ್ರೀದೇವಿಯ ಸಾವು ನೈಸರ್ಗಿಕವೋ, ದುರಂತವೋ, ಪೂರ್ವನಿಯೋಜಿತವೋ ಏನೇ ಆಗಿದ್ದರೂ ಅದು ವೈಯಕ್ತಿಕವಾದುದಕ್ಕಿಂತ ಬೇರೇನೂ ಅಲ್ಲ. ಬೋನಿ ಕಪೂರ್‌ ಹಾಗೂ ಶ್ರೀದೇವಿ ನಡುವಣ ಮನಸ್ತಾಪ ಇರಬಹುದು ಅಥವಾ ಆ ಸಾವಿನಲ್ಲಿ ರಹಸ್ಯ ಇದ್ದರೂ ಇರಬಹುದು. ಆದರೆ ಆ ಘಟನೆಗೆ ಪತ್ರಿಕೆಗಳು, ಟಿ.ವಿ. ಚಾನೆಲ್‌ಗಳು ಅಷ್ಟು ಮಹತ್ವ ಕೊಡುವ ಅಗತ್ಯವೇ ಇರಲಿಲ್ಲ. ಅದು ಖಾಲಿ ಇರುವ ಸಮಾಜದ ಹೆಗ್ಗುರುತು. ಅವರಿಗೆ ಬೇರೆಯವರ ದುಃಖ ಮತ್ತು ತಪ್ಪಿನಲ್ಲಿಯೇ ಖುಷಿ ದೊರೆಯುತ್ತದೆ, ಏಕೆಂದರೆ ತಮ್ಮ ದುಃಖ ಮರೆಯಬೇಕಿರುತ್ತದೆ.

ನಿಧನ ಹೊಂದಿದಾಗ ಶ್ರೀದೇವಿ ಒಬ್ಬ ನಿವೃತ್ತ ನಟಿ. 12 ವರ್ಷಗಳ ಬಳಿಕ ಸಂಸಾರದ ಸುಳಿಯಿಂದ ಹೊರಬಂದು `ಇಂಗ್ಲಿಷ್‌ವಿಂಗ್ಲಿಷ್‌’ ಹಾಗೂ `ಮಾಮ್’ ಎಂಬ ಚಿತ್ರಗಳಲ್ಲಿ ಚೆನ್ನಾಗಿ ನಟಿಸಿದ್ದಳು. ಆದರೂ ಆಕೆ ಮೊದಲಿನ ವೈಭವವನ್ನೇನೂ ಪಡೆಯಲಿಲ್ಲ. ಸಾವಿನ ಸಮಯದಲ್ಲಿ ಆಕೆ ಮರ್ಲಿನ್‌ ಮನ್ರೊ ಅಥವಾ ಮಧುಬಾಲಾ ಏನೂ ಆಗಿರಲಿಲ್ಲ.

ಶ್ರೀದೇವಿ ಸಾಕಷ್ಟು ಒಳ್ಳೆಯ ಚಿತ್ರಗಳಲ್ಲಿ ನಟಿಸಿದ್ದಳು. ಆದರೆ ಸಮಾಜದ ಮೇಲೆ ಪರಿಣಾಮ ಬೀರಿದ ಚಿತ್ರಗಳ ಸಂಖ್ಯೆ ತುಂಬಾ ಕಡಿಮೆ.

ಶ್ರೀದೇವಿ ಕೊನೆಯ 2 ಚಿತ್ರಗಳಲ್ಲಿ ತಾಯಿ ಹಾಗೂ ಪತ್ನಿಯ ಪಾತ್ರದಲ್ಲಿ ನಟಿಸಿ ಪ್ರೇಮಿಗಳು ಮತ್ತು ನರ್ತಕಿಯರಲ್ಲಿ ಒಳ್ಳೆಯ ಪ್ರಭಾವ ಬೀರಿದ್ದರು. ಎರಡೂ ಚಿತ್ರಗಳು ಸಾಮಾಜಿಕ ವಿಷಯಗಳ ಕುರಿತಾಗಿದ್ದವು ಹಾಗೂ ತಾಯಿಯ ವಿಶಿಷ್ಟ ಸ್ಥಾನವನ್ನು ಬಿಂಬಿಸುವಂತಾಗಿದ್ದವು. ಆದರೆ `ಚಾಂದನಿ,’ `ಸದ್ಮಾ,’ ‘ಮಿಸ್ಟರ್‌ ಎಕ್ಸ್’ದಲ್ಲಿ ಪಾತ್ರ ಒಳ್ಳೆಯದಾಗಿದ್ದರೂ ಅವರು ದೀರ್ಘ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. `ಲಮ್ಹೆ’ಯ ವಿಷಯ ಅಚ್ಚರಿದಾಯಕವಾಗಿತ್ತು. ಅದು ಬೇರೆ ಚಿತ್ರಗಳಿಗಿಂತ ಹೆಚ್ಚು ಯಶಸ್ವಿಯಾಗಬಹುದೆಂಬ ಆಶಾಭಾವನೆ ಇತ್ತು. ಆದರೆ ಭಾರತೀಯ ಪ್ರೇಕ್ಷಕರ ಮೇಲೆ ತನ್ನ ಪ್ರಭಾವ ಬೀರಲಿಲ್ಲ. ತನ್ನ ತಾಯಿಯ ಪ್ರಿಯಕರನನ್ನು ಪ್ರೇಮಿಸುವುದು ಅವರಿಗೆ `ಇನ್‌ಸ್ಟೆಂಟ್’ನ ಹಾಗೆ ಅನಿಸಿತು.

ಒಬ್ಬ ನಟಿಯ ಸಾವು ಆಕೆಯ ನಟನೆಯ ಅವಲೋಕನ ಮಾಡುವ ಮತ್ತೊಂದು ಅವಕಾಶವನ್ನು ನೀಡುತ್ತದೆ. ಆಕೆಯ ಬಗ್ಗೆ ನಡೆದ ಚರ್ಚೆ ಆಕೆಯ ಅಭಿನಯದ ಚಿತ್ರಗಳು, ವ್ಯಕ್ತಿತ್ವ ಮತ್ತು ಗುಣದೋಷಗಳ ಬಗ್ಗೆ ಚರ್ಚೆ ನಡೆಯಬೇಕಿತ್ತೇ ಹೊರತು ಸಾವು ಹೇಗೆ ಸಂಭವಿಸಿತು ಎನ್ನುವುದರ ಮೇಲಲ್ಲ.

ಯಾರೋ ಒಬ್ಬರು ನಕಲಿ ಬಾಥ್‌ ಟಬ್‌ ತೋರಿಸಿದರು. ಇನ್ಯಾರೋ ಮದ್ಯದ ವಿಷಯ ಪ್ರಸ್ತಾಪಿಸಿದರು. ಸಿನಿಮಾ ಸ್ಟೈಲ್‌ನಲ್ಲಿ ಈ ವಿಷಯವನ್ನು ಎಷ್ಟೊಂದು ಎಳೆದಾಡಿದರೆಂದರೆ, ಪೋಸ್ಟ್ ಮಾರ್ಟಮ್ ನಲ್ಲೂ ಕೂಡ ಅಷ್ಟೊಂದು ಮಾಡಲಿಲ್ಲ.

ಪ್ರಸಿದ್ಧ ತಾರೆಯರು ಗತಿಸಿದಾಗ ಒಂದಿಷ್ಟು ಆವೇಶ ಕಾಣಿಸಿಕೊಳ್ಳುವುದು ಸಹಜವೇ ಹೌದು. ಆದರೆ ಆ ಬಗ್ಗೆ ಸಂಯಮದಿಂದ ನೋಡಬೇಕೇ ಹೊರತು, ಗಾಸಿಪ್‌ಗಳಿಗೆ ಅವಕಾಶ ಕೊಡಬಾರದು.

ಹತಾಶೆಯಿಂದ ಕೊರಗುವುದೊಂದೇ ಬಾಕಿ

ದೇಶದ ಮಹಿಳೆಯರು ನೀರವ್ ಮೋದಿ ಹಾಗೂ ಗೀತಾಂಜಲಿ ಜ್ಯೂವೆಲರ್ಸ್‌ನ್ನು ಕಾಪಾಡಿಕೊಳ್ಳಲು ಒಗ್ಗಟ್ಟಾಗಬೇಕಿದೆ. ದೇಶದ ಮಹಿಳೆಯರೆಂದರೆ  ಹಣವುಳ್ಳವರು, ಆಭರಣ ಹೊತ್ತುಕೊಂಡವರು. ನೀರವ್ ಮೋದಿ, ಗೀತಾಂಜಲಿ ಜ್ಯೂವೆಲರ್ಸ್‌, ಗಿಲಿ ಇಂಡಿಯಾ ನಕ್ಷತ್ರದಂತಹ ಕಂಪನಿಗಳು ಅವರಿಗೆ ಒಂದು ವಿಶೇಷ ಮೆರುಗು ನೀಡಿವೆ.

ಪಾರ್ಟಿಯಲ್ಲಿ ನೀರವ್ ಮೋದಿಯರ ಕೈಯಲ್ಲಿ ಕೈ ಹಾಕಿಕೊಂಡು ನಾನಂತೂ ಬರಿ ನೀರವ್ ಮೋದಿ ಕಂಪನಿಯ ಆಭರಣ ಧರಿಸುತ್ತೇನೆ ಎಂದು ಹೇಳಬೇಕು, ಇದು ಭಗವಾಧಾರಿಗಳು ಮೋದಿಯೇ ಸರ್ವೋತ್ತಮ ಪ್ರಧಾನಮಂತ್ರಿ ಎಂದು ಹೇಳಿದಂತೆಯೇ ಇತ್ತು. ಆ ನೀರವ್ ಮೋದಿ ಅಥವಾ ಮೇಹಲ್ ‌ಚೋಕಸಿ ಅವರನ್ನು ಪರಾರಿ ಎಂದು ಘೋಷಿಸುವುದರ ಹಿಂದಿನ ಅರ್ಥ ಈ ಮಹಿಳೆಯರ ಲಾಕರ್‌ನಲ್ಲಿ ಇಟ್ಟ ಲಕ್ಷಾಂತರ ರೂ.ಗಳ ಆಭರಣಗಳನ್ನು ವ್ಯರ್ಥ ಮಾಡಿಬಿಡುವುದು. ಯಾವುದೇ ಕಾರಣಕ್ಕೂ ಇದನ್ನು ಒಪ್ಪಲು  ಸಾಧ್ಯವಿಲ್ಲ.

ಯಾವುದೇ ಯುಗ, ಯಾವುದೇ ರಾಜ ಇರಬಹುದು, ಆಭರಣ ಇರಬಹುದು ಎಲ್ಲರೂ ಚಿನ್ನಕ್ಕಾಗಿ ಕೆಲಸ ಮಾಡಿದ್ದಾರೆ. ಪಿರಮಿಡ್‌ಯುಗದಲ್ಲಿ ರಾಜರಾಣಿ ಸತ್ತ ಬಳಿಕ ತಮ್ಮೊಂದಿಗೆ ಚಿನ್ನವನ್ನು ಕೊಂಡೊಯ್ಯುತ್ತಿದ್ದರು. 5000 ವರ್ಷಗಳ ಬಳಿಕ ಶೋಧನೆಯ ಸಮಯದಲ್ಲಿ ಅಷ್ಟಿಷ್ಟು ಚಿನ್ನ ದೊರೆಯುತ್ತಲೇ ಇರುತ್ತದೆ, ಒಂದಿಷ್ಟು ಪ್ರಮಾಣ ಸ್ಮಗ್ಲರ್‌ಗಳ ಪಾಲಾಗುತ್ತದೆ. ಉಳಿದದ್ದು ಸಂಗ್ರಹಾಲಯಕ್ಕೆ ಹೋಗುತ್ತದೆ.

ಹಿಂದಿ ಸಿನಿಮಾಗಳ ಒಂದು ಯುಗವಂತೂ ಚಿನ್ನದ ಸ್ಮಗ್ಲಿಂಗ್‌ ಮೇಲೆಯೇ ಆಧರಿಸಿತ್ತು. ಪ್ರತಿ ಸಿನಿಮಾದಲ್ಲಿ ಒಬ್ಬ ಚಿನ್ನದ ಕಳ್ಳಸಾಗಾಣಿಕೆದಾರ ಇರುತ್ತಿದ್ದ. ಅವನು ಬೇರೆ ದೇಶದಿಂದ ಚಿನ್ನ ಹೊತ್ತು ತರುತ್ತಿದ್ದ ಅಥವಾ ಕಳ್ಳತನದಿಂದ ತೆಗೆದುಕೊಂಡು ಬರುತ್ತಿದ್ದ ಕಳ್ಳನಾಗಿರುತ್ತಿದ್ದ. ರಾಮ ರಾವಣನನ್ನು ಸಂಹರಿಸಿದ್ದು ಇದೇ ಚಿನ್ನದ ಮೋಹದ ಕಾರಣದಿಂದ. ಸೀತಾ ರಾಮನಿಗೆ ಬಂಗಾರದ ಜಿಂಕೆಯನ್ನು ತೆಗೆದುಕೊಂಡು ಬರಲು ಹಠ ಹಿಡಿದಿದ್ದಳು. ಇಂದಿನ ಮಹಿಳೆಯರು ಕೂಡ ಅದೇ ರೀತಿ ನೀರವ್ ಮೋದಿ ಮತ್ತು ಮೆಹುಲ್ ‌ಚೌಕಸಿಯಂತಹ ಬಂಗಾರದ ಜಿಂಕೆಗಳನ್ನು ಗೌರಪೂರ್ವಕವಾಗಿ ದೇಶಕ್ಕೆ ಕರೆ ತರಲು ಒತ್ತಾಯ ಹೇರಬೇಕು. ಚಿನ್ನ ಚಿನ್ನವೇ! ಅದರ ಬಗ್ಗೆ ಯಾವುದೇ ತಪ್ಪುಕಲ್ಪನೆ ಬೇಡ. ಸ್ಮರ್ಣ ಭಸ್ಮದ ಹೆಸರು ಹೇಳಿ ಜನರಿಗೆ ಯಾವ ಯಾವ ಪ್ರಕಾರದ ಔಷಧಿಗಳನ್ನು ತಿನ್ನಿಸಲಾಗುತ್ತದೋ ಹೇಳಲಾಗದು. ಅಂತಹ ಚಿನ್ನನ್ನು ದೊರಕಿಸಿಕೊಳ್ಳಲು ದೇಶ ಒಂದು ಹುಳಿ ತೇಗನ್ನು ಸ್ವೀಕರಿಸಲು ಸಿದ್ಧ ಇಲ್ಲವೇ?

ಇದು ಮಹಿಳೆ ಅದರಲ್ಲೂ ಶ್ರೀಮಂತ ಮಹಿಳೆಯರಿಗೆ ಮಾಡುವ ಅಪಮಾನವೇ ಆಗಿದೆ. ಅವರ ಸೇವೆ ಮಾಡುವ ನೀರವ್ ಮೋದಿ ಮತ್ತು ಮೆಹುಲ್ ‌ಚೌಕಸಿಯವರ ಕುಟುಂಬದವರು ಈ ರೀತಿಯಲ್ಲಿ ಪರಿತಪಿಸುವಂತೆ ಮಾಡಬಾರದಿತ್ತು.

ನಮ್ಮ ಮುಖಂಡರು ಈ ತೆರನಾದ ಮಹಿಳೆಯರ ಗುಣಗಳು ಹಾಗೂ ಪ್ರಭಾವವನ್ನು ಅರಿಯುತ್ತಾರೆ. ಹಾಗೆಂದೇ ಒಮ್ಮೆ ದಾಮೋಸ್‌ (ಸ್ವಿಡ್ಜರ್ಲೆಂಡ್‌) ಇನ್ನೊಮ್ಮೆ ಗುಜರಾತ್‌, ಮತ್ತೊಮ್ಮೆ ಶೋರೂಮಿನಲ್ಲಿ ಪ್ರಭಾವಶಾಲಿ ಜ್ಯೂವೆಲರ್ಸ್‌ನ ಸಂಗತಿಯಲ್ಲಿ ಕಂಡುಬರುತ್ತಿತ್ತು. ಅವರು ಮಹಿಳೆಯರ ವೋಟುಗಳನ್ನು ಒಗ್ಗೂಡಿಸುತ್ತಿದ್ದರು. ಅವರು ಈ ಮಹಿಳೆಯರಿಗೆ ಚಿನ್ನದ ಲಭ್ಯತೆಯನ್ನು ಮತ್ತಷ್ಟು ಸದೃಢಗೊಳಿಸುತ್ತಿದ್ದರು.

ಪಂಜಾಬ್‌ ನ್ಯಾಷನಲ್ ಬ್ಯಾಂಕಿನ ಎದುರು ಮಹಿಳೆಯರೇಕೆ ತಮ್ಮ ಏರ್‌ಕಂಡೀಶನ್ಡ್ ಗಾಡಿಯಲ್ಲಿ ಕುಳಿತು ಸತ್ಯಾಗ್ರಹ ನಡೆಸಬಾರದು? ಸೇವೆ ಮಾಡಲೇಬೇಕಿದ್ದರೆ ಯಾವಾಗಲಾದರೊಮ್ಮೆ ಕಷ್ಟ ಅನುಭವಿಸಲೇಬೇಕು. ನೀರವ್ ಮೋದಿಯಂತಹವರನ್ನು ಅವಮಾನ ಮಾಡುವ ಧೈರ್ಯ ಯಾರಿಗೂ ಬರಬಾರದು. ಅದಕ್ಕಾಗಿ ಏನಾದರೂ ಮಾಡಿ, ಇಲ್ಲದಿದ್ದರೆ ಮುಂದೆ ಸೋಲು ಕಟ್ಟಿಟ್ಟ ಬುತ್ತಿ!

Tags:
COMMENT