ಗುಂಡ-ಪುಟ್ನಂಜಿ ಘನಘೋರ ಜಗಳವಾಡಿದರು. ಆಗ ಅವಳು ಕೆಂಡದಂಥ ಸಿಟ್ಟಿನಿಂದ ತವರಿಗೆ ಹೊರಟೇಬಿಟ್ಟಳು. 15 ದಿನಗಳಾದ ಮೇಲೆ ಗುಂಡ ಮಾವನ ಮನೆಗೆ ಫೋನ್‌ ಮಾಡಿದ.

ಅತ್ತೆ : ಎಷ್ಟು ಸಲ ಕಣಯ್ಯ ನಿನಗೆ ಹೇಳೋದು.... ಅವಳು ನಿನ್ನ ಮನೆಗೆ ಬರೋಲ್ಲ ಅಂದ್ರೆ ಬರೋಲ್ಲ! ಮತ್ತೆ ಮತ್ತೆ ಫೋನ್‌ಮಾಡಬೇಡ.

ಗುಂಡ : ಆಹಾ..... ಈ ಮಾತನ್ನು ಪದೇ ಪದೇ ಕೇಳಬೇಕೆಂದೇ ಫೋನ್‌ ಮಾಡೋಣ ಅನ್ಸುತ್ತೆ.

ಒಂದು ಖ್ಯಾತ ಖಾಸಗಿ ಸಂಸ್ಥೆಯ 60 ವರ್ಷ ವಯಸ್ಸಿನ ಮಾಲೀಕ ಒಬ್ಬ ಮಿಟಕಲಾಡಿ ಮಿನ್ನಿಯನ್ನು ಸೆಕ್ರೆಟರಿ ಆಗಿ ಕೆಲಸಕ್ಕೆ ನೇಮಿಸಿಕೊಂಡ. ಅದೇನಾಯಿತೋ ಏನೋ.... 10 ದಿನಗಳ ನಂತರ ಆತ ತನ್ನ ಕಟ್ಟಡದ 27ನೇ ಮಹಡಿಯಿಂದ ಧುಮುಕಿ ಪ್ರಾಣ ಬಿಡುವುದೇ? ತನಿಖೆಗೆ ಪೊಲೀಸರು ಬಂದರು.

ಪೊಲೀಸ್‌ : ಈ ಕೋಣೆಯಲ್ಲಿ ಆ ಹೊತ್ತು ಯಾರು ಯಾರು ಇದ್ದಿರಿ?

ಮಿನ್ನಿ : ನಾನು ಮಾತ್ರ ಸಾರ್‌.....

ಪೊಲೀಸ್‌ : ಅಂಥದ್ದೇನಾಯಿತು? ಇಷ್ಟು ಎತ್ತರದಿಂದ ನಿಮ್ಮ ಬಾಸ್‌ ಏಕೆ ಜಿಗಿದರು?

ಮಿನ್ನಿ : ಸಾರ್‌, ಅವರಂತೂ ತುಂಬಾನೇ ಒಳ್ಳೆಯವರು. ಒಂದು ದಿನ ಅವರು ನನಗೆ 2 ಲಕ್ಷ ರೂ. ಬೆಲೆ ಬಾಳುವ ರೇಷ್ಮೆ ಸೀರೆ ಕೊಡಿಸಿದರು. ನಾನು ಅಂಥ ದುಬಾರಿ ಗಿಫ್ಟ್ ಪಡೆದದ್ದು ಇದೇ ಮೊದಲು! ಅದಾದ ಕೆಲವು ದಿನಗಳ ನಂತರ 15 ಲಕ್ಷ ರೂ. ಬೆಲೆಯ ನೆಕ್‌ಲೇಸ್‌ ಕೊಡಿಸಿದರು. ಮೊನ್ನೆ 5 ಲಕ್ಷ ರೂ.ಗಳ ವಜ್ರದುಂಗುರ ಕೊಡಿಸಿದರು. ನೋಡಿ, ಅದಿನ್ನೂ ನನ್ನ ಬೆರಳಲ್ಲೇ ಇದೆ.....

ಪೊಲೀಸ್‌ :  ಮತ್ತೆ ಏನಾಯ್ತು?

ಮಿನ್ನಿ : ಇವತ್ತು ಅವರು ನನ್ನನ್ನು ಮದುವೆ ಆಗ್ತೀಯಾ ಅಂತ ಪ್ರಪೋಸ್‌ ಮಾಡಿದರು.

ಪೊಲೀಸ್‌ : ಮತ್ತೆ ಏನಾಯ್ತು?

ಮಿನ್ನಿ : ಅದೇ ಸಮಯಕ್ಕೆ ನನ್ನ ತಂದೆ ಫೋನ್‌ ಮಾಡಬೇಕೇ?

ಪೊಲೀಸ್‌ : ಅದರಿಂದ ಏನೀಗ?

ಮಿನ್ನಿ : ನನ್ನ ತಂದೆಯ ಕಾಲ್ ‌ರಿಸೀವ್ ‌ಮಾಡಿಕೊಂಡು ನಾನು ನನ್ನ ಬಾಸ್‌ ಬಗ್ಗೆ ಸಿಕ್ಕಾಪಟ್ಟೆ ಹೊಗಳಿದೆ. ಅಪ್ಪ, ನೀವು ಇಲ್ಲಿದ್ದು ಇದನ್ನು ಕಣ್ಣಾರೆ ನೋಡಬೇಕಿತ್ತು. ನನ್ನ ಬಾಸ್‌ ನನ್ನನ್ನು ಎಷ್ಟು ಲವ್ ಮಾಡ್ತಾರೆ ಗೊತ್ತಾ.... ಅಂತೆಲ್ಲ ಅವರಿಗೆ ಹೇಳುತ್ತಿದ್ದೆ.

ಪೊಲೀಸ್‌ : ಮತ್ತೆ ಏನಾಯ್ತು?

ಮಿನ್ನಿ : ಆಮೇಲೆ ಅಪ್ಪಂಗೆ ಹೇಳಿದೆ, ಮತ್ತೆ ಯಾವಾಗ್ಲೂ ನೀವು ನನ್ನನ್ನು ಬೈತಾ ಇರ್ತೀರಿ, ಪಪ್ಪು.... ಹೀಗೆಲ್ಲ ಹುಡುಗಿ ತರಹ ಡ್ರೆಸ್‌ ಮಾಡಿಕೊಂಡು ಹೊರಗಡೆ ತಿರುಗಾಡಬೇಡ ಅಂತ.

ಪೊಲೀಸ್‌ : ಆ.....ಮೇ....ಲೆ.....

ಮಿನ್ನಿ : ಪಾಪ, ಅದನ್ನು ಕೇಳಿ ನಮ್ಮ ಬಾಸ್‌ ಕಿಟಕಿಯಿಂದ ಧುಮುಕಿ ಬಿಡುವುದೇ......?

ಕೇಳಿಸಿಕೊಳ್ಳುತ್ತಿದ್ದ ಪೊಲೀಸ್‌ ಅಲ್ಲೇ ತಲೆಸುತ್ತಿ ಬಿದ್ದುಹೋದನಂತೆ!

ಬೀದಿಯಲ್ಲಿ ಆ್ಯಂಬುಲೆನ್ಸ್ ಹೊರಟಿರಲಿ ಅಥವಾ ಮದುವೆಯ ದಿಬ್ಬಣ, ತಕ್ಷಣ ಅದು ಮುಂದೆ ಹೋಗಲು ದಾರಿ ಬಿಟ್ಟುಕೊಡಿ. ಇಬ್ಬರೂ ಜೀವನ್ಮರಣದ ಹೋರಾಟಕ್ಕೆ ಹೊರಟಿದ್ದಾರೆ ಎಂಬುದನ್ನು ಮರೆಯದಿರಿ.

ಪುಟ್ನಂಜಿ ಗುಂಡನ ಜೊತೆ ಜಗಳವಾಡಿದಾಗೆಲ್ಲ ಸಮಾಧಾನವಾಗಿ ಒಂದು ಮಾತು ಹೇಳುತ್ತಾಳೆ, ``ನೋಡಿ.... ನಾನಾಗಿರೋ ಹೊತ್ತಿಗೆ ಆಯ್ತು. ನನ್ನಂಥ ಸಾಧು ಜೀವಿ ನಿಮಗೆ ಬೇರೆಲ್ಲಿ ಸಿಗಬೇಕು? ಬೇರೆಯವಳಾಗಿದ್ದರೆ ಉಗ್ರಕಾಳಿಯಾಗಿ ಸಿಡಿದು ನಿಂತಿರೋಳು. ಆಗ ನಿಮ್ಮ ಗತಿ ಏನೂಂತ.....?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ