ಫೌಂಡರ್‌ ಬ್ಲಾಸಮ್ ಕೋಚರ್‌ ಆ್ಯರೋಮಾ ಮ್ಯಾಜಿಕ್‌

ಆ್ಯರೋಮಾ ಥೆರಪಿಯ ಮಾಸ್ಟರ್‌ ಡಾ. ಬ್ಲಾಸಮ್ ಕೋಚರ್‌ರ ಪರಿಚಯವನ್ನು ಓದುಗರಿಗೆ ಹೊಸದಾಗಿ ಮಾಡಿಕೊಡಬೇಕಿಲ್ಲ. ಇತ್ತೀಚೆಗಂತೂ ಅವರು ತಮ್ಮ ಹೆಚ್ಚಿನ ಸಮಯವನ್ನು `ಫೆಮೀನಾ ಮಿಸ್‌ ಇಂಡಿಯಾ' ಸ್ಪರ್ಧೆಯಲ್ಲಿ ಭಾಗಹಿಸುವ ಪ್ರತಿಭಾಶಾಲಿಗಳ ಟ್ರೇನಿಂಗ್‌ ಗ್ರೂಮಿಂಗ್‌ನಲ್ಲಿ ಬಿಝಿಯೋ ಬಿಝಿ.

`ಫೆಮೀನಾ ಮಿಸ್‌ ಇಂಡಿಯಾ'ದ ನಾರ್ಥ್‌ ಝೋನ್‌ ಸುಂದರಿಯರಿಗೆ ಟ್ರೇನಿಂಗ್‌ ನೀಡುವ ಸಂದರ್ಭದಲ್ಲಿ ಆಕೆ `ಗೃಹಶೋಭಾ' ಜೊತೆ ನಡೆಸಿದ ಸಂವಾದದ ಆಯ್ದ ಭಾಗಗಳು :

ನೀವು ಈ ಸೌಂದರ್ಯ ಸ್ಪರ್ಧೆಗಳ ಜೊತೆ ಜೊತೆಗೆ ಯಾವಾಗಿನಿಂದ ಪಯಣಿಸುತ್ತಿದ್ದೀರಿ?

ನಾನು ಹುಟ್ಟಿದ್ದು ಚೆನ್ನೈನಲ್ಲಿ. ನನ್ನ ತಂದೆ ಬ್ರಿಟನ್ನಿನ ಆರ್ಮಿಗೆ ಸೇವೆ ಸಲ್ಲಿಸುತ್ತಿದ್ದರು, ತಾಯಿ ಸಹ ಅಲ್ಲೇ ನರ್ಸ್‌ ಆಗಿದ್ದರು. ನಂತರ ಅವರು ಊಟಿಗೆ ಬಂದು ನೀಲಗಿರಿ ಎಸ್ಟೇಟ್‌ನಲ್ಲಿ ಕಾಫಿ ಬೆಳೆಯ ಉದ್ಯಮದಲ್ಲಿ ತೊಡಗಿಕೊಂಡರು. ನನ್ನ ಹೆಸರು ಬ್ಲಾಸಮ್ ಎಂಬುದು ಇಲ್ಲಿಂದಲೇ ಸೇರಿತು. ಬಾಲ್ಯದಿಂದಲೇ ನನಗೆ ಕಾಫಿ ಮತ್ತು ವಿವಿಧ ಹೂಗಳ ಸುಗಂಧ ಅಂದ್ರೆ ಬಹಳ ಇಷ್ಟ. ಬೋರ್ಡಿಂಗ್‌ ಶಾಲೆಯಿಂದಲೇ ನಾನು ಸ್ಕೂಲ್‌ನ ಹೇರ್‌ ಡ್ರೆಸೆರ್‌ ಆಗಿದ್ದೆ. ಇದರ ಆರಂಭ ಬಹಳ ಮಜವಾಗಿತ್ತು. ಒಂದು ಸಲ ನಮ್ಮ ಹಾಸ್ಟೆಲ್‌ನ ನನ್‌ ಯಾವ ಹುಡುಗಿಗೆ ಹೇರ್‌ ಕಟಿಂಗ್‌ ಗೊತ್ತು ಎಂದು ಕೇಳಿದರು. ಕೂದಲು ಕತ್ತರಿಸುವ ಯಾವ ಅನುಭವ ಇಲ್ಲದಿದ್ದರೂ ನಾನು ಬೇಕೆಂದೇ ಕೈ ಮೇಲೆತ್ತಿದೆ. ಬಟ್ಟೆ ಕತ್ತರಿಸುವ ಟೇಲರಿಂಗ್‌ ಕತ್ತರಿ ಹಿಡಿದು ನಾನು ಒಬ್ಬ ಹುಡುಗಿಯ ಕೂದಲನ್ನು ಮನ ಬಂದಂತೆ ಕಟ್‌ ಮಾಡಿದೆ. ಒಂದು ಭಾಗದಿಂದ ಸರಿ ಇತ್ತು, ಮತ್ತೊಂದು ಕಡೆ ಸುಮಾರಾಗಿತ್ತು. ಒಟ್ಟಾರೆ ನೋಡುವ ಹಾಗಿತ್ತು. ಹೀಗಾಗಿ ನನಗೆ ಹೊಗಳಿಕೆ ಸಿಕ್ಕಿತು. ಈ ರೀತಿ `ಬ್ಯೂಟಿ' ನನ್ನ ಕೆರಿಯರ್‌ ಆಗಲು ಶಾಲೆ ಪ್ರೇರಣೆಯಾಯಿತು.

ಬೆಂಗಳೂರಿನಲ್ಲಿ ಕಾಲೇಜ್‌ ಸೇರಿ ಡಿಗ್ರಿ ಪಡೆದೆ. ಬ್ಯೂಟಿಯೇ ನನ್ನ ಕೆರಿಯರ್‌ ಎಂದು ಹೆತ್ತವರಿಗೆ ಹೇಳಿದೆ. ಈ ಹುಚ್ಚುತನ ಬಿಟ್ಟು ಟೀಚರ್‌ ಆಗು ಎಂದು ಅವರು ಬೈದರು. ಆದರೆ ನಾನಂತೂ ಬ್ಯೂಟಿಯಲ್ಲೇ ಮುಂದುವರಿಯಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಕರ್ನಲ್ ಕೋಚರ್‌ ಜೊತೆ ನನ್ನ ಮದುವೆ ಆಯ್ತು. ಮುಂದೆ ಅವರು ನನ್ನ ಆಸೆಯನ್ನು ಅರಿತುಕೊಂಡು ಈ ಫೀಲ್ಡ್ ನಲ್ಲಿ ಮುಂದುವರಿಯಲು ಸಂಪೂರ್ಣ ಸಹಕರಿಸಿದರು. ನೀಲಗಿರಿ ಎಸ್ಟೇಟ್‌ನ ವೆಲ್ಲಿಂಗ್‌ಟನ್‌ನಲ್ಲಿ ನಾನು ಮೊದಲ ಪಾರ್ಲರ್‌ ತೆರೆದು ಮೇಕಪ್‌, ಹೇರ್‌ ಡ್ರೆಸ್ಸಿಂಗ್‌ ಕೆಲಸ ಶುರು ಮಾಡಿದೆ. ಆರಂಭದಲ್ಲಿ ಇದು ನನ್ನ ಹವ್ಯಾಸ ಆಗಿತ್ತು. ಹೆಚ್ಚಿನ ಆದಾಯ ಸಿಗಲಿಲ್ಲ.

ನಂತರ ನನ್ನ ಪತಿಗೆ ದೆಹಲಿಗೆ ವರ್ಗಾವಣೆ ಆದಾಗ ಇಲ್ಲಿಗೆ ಬಂದು ನಾನು `ಬ್ಲಾಸಮ್ ಬ್ಯೂಟಿ ಪಾರ್ಲರ್‌' ತೆರೆದೆ. ಹೀಗೆ ನಿಧಾನವಾಗಿ ಬ್ಯೂಟಿಯ ಇತರ ಕ್ಷೇತ್ರಗಳಿಗೂ ನಾನು ಕೆಲಸ ಮಾಡತೊಡಗಿದೆ.

ಇತ್ತೀಚೆಗೆ ಬಹಳಷ್ಟು ಮಹಿಳೆಯರು ಬ್ಯೂಟಿಯನ್ನೇ ಕೆರಿಯರ್‌ ಆಗಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದಕ್ಕೆ ನಿಮ್ಮ ಸಲಹೆ.....?

ಹೊಸದಾಗಿ ಈ ಕ್ಷೇತ್ರಕ್ಕೆ ಬರುವವರು ಸ್ಕಿಲ್ಸ್‌ ತಿಳಿದಿರಬೇಕು. ನನ್ನ ಪತಿ ನಾನು ಇದರಲ್ಲಿ ತೊಡಗಿಸಿಕೊಳ್ಳಲು ಬಹಳ ಸಹಕರಿಸಿದ್ದಾರೆ. ಆಗ ನನಗೆ ನನ್ನ ಪ್ರತಿಭೆ ತೋರಿಸುವ ಅವಕಾಶ ಸಿಕ್ಕಿತು. ನಾನು ಈ ಸ್ಕಿಲ್ಸ್ ನ್ನು ನಮ್ಮ ಪಾರ್ಲರ್‌ಗೆ ಬರುವ ಪ್ರತಿ ಮಹಿಳೆಗೂ ಕಲಿಸ ಬಯಸುವೆ. ಒಬ್ಬ ಗಂಡಸು ಸ್ಕಿಲ್ಸ್‌ ಕಲಿತರೆ ಅದು ಆತನಿಗೆ ಮಾತ್ರ ಉಪಯೋಗವಾಗುತ್ತದೆ. ಅದೇ ಒಬ್ಬ ಹೆಂಗಸು ಅದನ್ನು ಕಲಿತರೆ ಅದು ಅವಳ ಇಡೀ ಪರಿವಾರಕ್ಕಾಗುತ್ತದೆ. ಹೆಣ್ಣು ಮೊದಲಿನಿಂದಲೂ ಪ್ರತಿಭಾಸಂಪನ್ನ ಕಾರ್ಯಕುಶಲೆ. ಈ ರೀತಿ ಮುಂದುವರಿಯುವುದರಿಂದ ಅವಳ ಆತ್ಮವಿಶ್ವಾಸ ಹೆಚ್ಚುತ್ತದೆ. ಅವಳು ಕ್ರಮೇಣ ಆರ್ಥಿಕವಾಗಿ ಸುಧಾರಿಸಿದಂತೆ ಅವಳ ಗಂಡ, ಮನೆಮಂದಿಯೆಲ್ಲಾ ಅವಳ ಕುರಿತಾದ ತಮ್ಮ ಸಂಕುಚಿತ ದೃಷ್ಟಿ ಬದಲಾಯಿಸಿಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ