ತಾನ್ಯಾ ರಸ್ತೋಗಿ ಭಾರತದ ಸುಪ್ರಸಿದ್ಧ ಮಹಿಳಾ ಜ್ಯೂವೆಲರಿ ಎಕ್ಸ್ ಪರ್ಟ್ ಕ್ಯೂರೇಟರ್ ಎನಿಸಿದ್ದಾರೆ. ಇವರು ವಿನ್ಯಾಸ ಮಾಡಿದಂಥ ಅತ್ಯಂತ ಸುಂದರ ಹಾಗೂ ಆಕರ್ಷಕ ಒಡವೆಗಳು ಮಾಸ್ಟರ್‌ಪೀಸ್ ಎನಿಸಿವೆ. ಇವರು ನವಾಬ್ ಪರಿವಾರದ `ಲಾಲಾ ಜುಗ್ ಕಿಶೋರ್ ಜ್ಯೂವೆಲರ್ಸ್' ಜೊತೆ ನೇರ ಸಂಬಂಧ ಹೊಂದಿದವರು. ಅವರುಗಳು ಹಲವು ದಶಕಗಳಿಂದ ಅವಧ್‌ನ ನವಾಬರಿಗೆ ಜ್ಯೂವೆಲರ್ಸ್.
ತಾನ್ಯಾ ರಸ್ತೋಗಿಗೆ `ಲೈಫ್ ಟೈಂ ಅಚೀವ್‌ಮೆಂಟ್ ಅವಾರ್ಡ್' ಹಾಗೂ `ರೀಟೇಲ್ ಜ್ಯೂವೆಲರ್ ಇಂಡಿಯಾ ಅವಾರ್ಡ್'ಗಳು ಲಭಿಸಿವೆ. `ಗೋಲ್ಡ್ ಜ್ಯೂವೆಲರಿ ಆಫ್ ದಿ ಇಯರ್,'ನಲ್ಲಿ ನಾಮಿನೇಶನ್‌ಗಾಗಿಯೂ ಸಹ ಅವರ ಹೆಸರು ನಮೂದಿಸಲ್ಪಟ್ಟಿತ್ತು. ಆಕೆ ತಮ್ಮದೇ ಆದ ಇನ್‌ಹೌಸ್ ಪ್ರೊಡಕ್ಷನ್ಸ್ ಸಹ ಸ್ಥಾಪಿಸಿಕೊಂಡಿದ್ದಾರೆ, ಇದು ಡಿಸೈನ್ ಕಾನ್‌ಸೆಪ್ಟ್ ಆಧಾರಿತ. ತಾನ್ಯಾರ ಜೊತೆಗಿನ ಸಂಭಾಷಣೆಯ ಸಾರಾಂಶ :
ನೀವು ಈ ಫೀಲ್ಡ್ ಗೆ ಬರಬೇಕೆಂಬ ಪ್ರೇರಣೆ ಎಲ್ಲಿಂದ ದೊರಕಿತು?
ನನಗೆ ಮೊದಲಿನಿಂದಲೂ ಜ್ಯೂವೆಲರಿ ಆರ್ಟ್ ಡಿಸೈನಿಂಗ್ ಎಂದರೆ ಪ್ರಾಣ. ಒಡವೆ ಧರಿಸುವಿಕೆ ಎಂಬುದು ಕಲೆಯ ಒಂದು ರೂಪ, ಇದರ ಈ ವಿಷಯವೇ ನನ್ನನ್ನು ಬಹಳ ಆಕರ್ಷಿಸಿದ್ದು. ನಾನು ದೆಹಲಿಯ ಒಂದು ಸಂಸ್ಥೆಯಲ್ಲಿ ಜೆಮಾಲಜಿ ಡಿಸೈನಿಂಗ್ ಕೋರ್ಸ್ ಮಾಡಿದ್ದೇನೆ. ನನ್ನ ತಂದೆ ವಾರಾಣಸಿಯಲ್ಲಿ ಬೆನಾರಸ್ ಸಿಲ್ಕ್ ಸೀರೆಗಳ ವ್ಯಾಪಾರ ನಡೆಸುತ್ತಿದ್ದರು ಹಾಗೂ ಸಯೋಗವಶಾತ್ ನನ್ನ ಮದುವೆ ಜ್ಯೂವೆಲರ್ಸ್ ಮನೆತನದಲ್ಲೇ ಆಯ್ತು.
ಯಾವ ವಿಷಯ ಇದನ್ನೆಲ್ಲ ಮಾಡಲು ನಿಮಗೆ ಪ್ರೇರಣೆ ನೀಡುತ್ತಿದೆ?
ನಾನು ಕಿವಿಗಳ ಕರ್ಣಕುಂಡಲದ ಜ್ಯೂವೆಲರಿ ಡಿಸೈನಿನ ಎಗ್ಸಿಭಿಷನ್‌ಗಾಗಿ ಸಿದ್ಧಳಾಗುತ್ತಿದ್ದೆ. ನನಗೆ ಪ್ರತಿ ಸಲ ವಿಭಿನ್ನ ಡಿಸೈನಿಂಗ್ ಮಾಡುವ ಹುಚ್ಚು ಜಾಸ್ತಿ. ಈ ರೀತಿ ನನಗೆ 150 ವರ್ಷಗಳಷ್ಟು ಹಳೆಯದಾದ ನವಾಬ್ ಮನೆತನದ ವಿಂಟೇಜ್ ಜ್ಯೂವೆಲರಿ ಕುರಿತಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ನಾನು ಇದನ್ನೇ ಹೊಸತಾಗಿ ರೂಪಿಸಿದೆ, ಈ ರೀತಿ `ಜ್ಯೂವೆಲರ್ಸ್ ಆಫ್ ಅವಧ್'ನ ಮೊದಲ ಲಿಮಿಟೆಡ್ ಎಡಿಶನ್ ರೆಡಿ ಮಾಡಿದೆ. ಇದಕ್ಕೆ ದೊರಕಿದ ಪ್ರೋತ್ಸಾಹಪೂರ್ವಕ ಜನಪ್ರಿಯತೆಯಿಂದ 'ಜ್ಯೂವೆಲರ್ಸ್ ಆಫ್ ಅವಧ್'ನ ಹೆಸರು ಉಳಿದುಕೊಂಡಿತು. ಅದು ಈಗ ಲಖ್ನೋದಲ್ಲಿರುವ ಲಾಲಾ ಜುಗ್ ಕಿಶೋರ್ ಜ್ಯೂವೆಲರ್ಸ್‌ನ ಔಟ್‌ಲೆಟ್ಸ್ ನಲ್ಲಿ ಇಂದು ಲಾಂಜ್ ಆಗಿದೆ. ಇಲ್ಲಿ ನಾನು ನವ ವಧುಗಳಿಗಾಗಿ ಬೇಕಾದ ಒಡವೆ ಡಿಸೈನಿಂಗ್ ಮಾಡುತ್ತೇನೆ.
ಈ ಫೀಲ್ಡ್ ನಲ್ಲಿ ಹೆಂಗಸರಿಗೆ ಸ್ಕೋಪ್ ಇದೆ ಅಂತೀರಾ?
ಇದೊಂದು ಕಲಾತ್ಮಕ ಕ್ಷೇತ್ರ. ಆದರೂ ಕೆಲವು ಮೂಲಭೂತ ವಿಷಯಗಳು ತಿಳಿದಿರಲೇಬೇಕು. ಡಿಸೈನಿಂಗ್ ಕೆರಿಯರ್‌ನ ಒಂದು ಮುಖ್ಯ ಭಾಗ. ಆದರೆ ನಾವು ಬಳಸುವ ಲೋಹ ಮತ್ತು ರತ್ನಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಮಾತ್ರ, ಕ್ಯಾನ್ವಾಸ್‌ನ್ನು ವಾಸ್ತವವಾಗಿ ಬದಲಾಯಿಸಲು ಸುಲಭ ಸಾಧ್ಯ ಆಗುತ್ತದೆ. ಈ ಫೀಲ್ಡ್ ಗೆ ಬರಲು ಆಸಕ್ತಿ ಇರುವ ಮಹಿಳೆಯರಿಗೆ ನನ್ನ ಸಲಹೆ ಎಂದರೆ ಅವರು ಬೇಸಿಕ್ ವಿಷಯ ಕಲಿತಿರಲೇಬೇಕು. ಯಾರಾದರೂ ಮೆಂಟರ್ ಬಳಿ ಕೆಲಸ ಮಾಡುವುದರಿಂದ ನಿಮಗೆ ಕಲಾಭಿವ್ಯಕ್ತಿಯ ಉತ್ತಮ ವಿಧಾನಗಳನ್ನು ಕಲಿಯಲು ಸಾಧ್ಯವಾಗುತ್ತದೆ.